Subscribe to Updates
Get the latest creative news from FooBar about art, design and business.
Author: kannadanewsnow05
ಉತ್ತರಕನ್ನಡ : ಅನೈತಿಕ ಸಂಬಂಧ ಬಯಲು ಮಾಡಿದ್ದಕ್ಕೆ ಭೀಕರವಾಗಿ ಕೊಲೆ ಮಾಡಲಾಗಿದೆ. ಈ ನೆಲೆಯಲ್ಲಿ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅನೈತಿಕ ಸಂಬಂಧವನ್ನು ಮಹಿಳೆಯ ಮಗಳು ಬಯಲು ಮಾಡಿದ್ದಕ್ಕೆ ಓರ್ವನ ಕೊಲೆಯಾಗಿರುವ ಘಟನೆ ಉತ್ತರ ಕನ್ನಡದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ 7 ಜನರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಂತಹ ವಸಂತ ನಾಯಕ್ ಎನ್ನುವ ವ್ಯಕ್ತಿ ಇದೀಗ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ವಸಂತ ನಾಯಕ್ ಸಾವನ್ನಪ್ಪಿದ್ದಾರೆ. ತಾಯಿಯ ಅನೈತಿಕ ಸಂಬಂಧವನ್ನು ಮಗಳು ಬಯಲು ಮಾಡಿದ್ದಳು. ಜ್ಯೋತಿಷಿ ಕಮಲಾಕರ ಭಟ್ ಜೊತೆ ಸುಚಿತ್ರ ಅನೈತಿಕ ಸಂಬಂಧ ಹೊಂದಿದ್ದಳು. ಮಗಳಿಗೆ ತಾಯಿ ಸುಚಿತ್ರ ಚಿತ್ರ ಹಿಂಸೆ ನೀಡುತ್ತಿದ್ದಳು. ಆಗ ಮಗಳಿಗೆ ತಂದೆ ಮಹೇಶ್ ನಾಯಕ್ ನೆರವಿಗೆ ನಿಲ್ಲುತ್ತಾರೆ. ಸುಚಿತ್ರ ಪತಿ ಕುಮಾರ್ ಹಾಗೂ ವಸಂತ ಮೇಲೆ ಮಾರಣಾಂತಿಕ ಹಲ್ಲೆ ನಡೆಯುತ್ತದೆ. ಪೊಲೀಸ್ ಠಾಣೆಗೆ ದೂರು ಕೊಟ್ಟು ಮರಳಿದಾಗ ಗಂಭೀರವಾಗಿ ಹಲ್ಲೆ…
ಬೆಂಗಳೂರು : ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವ ಆರ್ ಬಿ ತಿಮ್ಮಾಪುರ ಹೇಳಿಕೆಯನ್ನು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಪ್ರಸ್ತಾಪಿಸಿದರು. ಆರ್ ಬಿ ತಿಮ್ಮಾಪುರ ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ಆಗಿದೆ ಅಂತ ಹೇಳಿದ್ದಾರೆ. ತಿಮ್ಮಾಪುರಗೆ ಪಾಲು ಕೊಡಬೇಕು ಎಂಬ ಆಡಿಯೋ ವೈರಲ್ ಆಯ್ತು. ನನ್ನ ಬಳಿ ಆಡಿಯೋ ಪೆನ್ ಡ್ರೈವ್ ಇದೆ ಎಂದು ಇದೆ ವೇಳೆ ಅಶೋಕ್ ಪೆನ್ ಡ್ರೈವ್ ಅನ್ನು ಸದನದಲ್ಲಿ ಪ್ರದರ್ಶನ ಮಾಡಿದರು. ಜಂಟಿ ಆಯುಕ್ತ ನಾಗರಾಜಪ್ಪ ವಕೀಲ ರಮೇಶ ಸಂಭಾಷಣೆ ಮಾಡಿರುವ ಆಡಿಯೋ ಇದಾಗಿದ್ದು, ನಾಗರಾಜಪ್ಪ 18 ಲಕ್ಷಕ್ಕೆ ಬೇಡಿಕೆ ಇಟ್ಟ ಆಡಿಯೋ ಇದೆ. ಸಚಿವರಿಂದ ಅಥವಾ ಅವರ ಮಗನ ಕಡೆಯಿಂದ ಮೆಸೇಜ್ ಬರಬೇಕು ಹೀಗೆ ವಕೀಲ ರಮೇಶ್ಗೆ ಹೇಳಿದ್ದಾನೆ ಎಂದು ಆಡಿಯೋ ಸಂಭಾಷಣೆಯ ವಿವರವನ್ನು ಆರ್ ಅಶೋಕ್ ಇದೆ ವೇಳೆ ಓದಿದರು. ಪ್ರತಿ ಅಂಗಡಿಯಲ್ಲೂ ತಿಂಗಳಿಗೆ 10 ರಿಂದ 15 ಸಾವಿರ ರೂಪಾಯಿ ಕಲೆಕ್ಷನ್ ಆಗುತ್ತಿದ್ದು, ಒಟ್ಟು ಒಂದು ತಿಂಗಳಿಗೆ…
ಚಿತ್ರದುರ್ಗ : ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಖಾಸಗಿ ಶಾಲಾ ಶಿಕ್ಷಕರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿರುವ ಘಟನೆ ಚಿತ್ರದುರ್ಗ ತಾಲೂಕಿನ ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಖಾಸಗಿ ಶಾಲೆಯ ಶಿಕ್ಷಕ ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಆರು ವಿದ್ಯಾರ್ಥಿನಿಯರನ್ನು ಕೋಣೆಗೆ ಕಿರುಕುಳ ನೀಡಿದ್ದಾನೆ ಎನ್ನುವ ಆರೋಪ ಬಂದಿದೆ. ಶಾಲಾ ಆಡಳಿತ ಸಮಿತಿಯಿಂದ ಈ ಕುರಿತು ಭರ್ಮಸಾಗರ ಠಾಣೆಗೆ ದೂರು ನೀಡಲಾಗಿದ್ದು, ಆರೋಪಿ ಶಿಕ್ಷಕ ರಂಗಣ್ಣನನ್ನು ಪೊಲೀಸರು ಇದೀಗ ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರು : ಸಾಮಾಜಿಕ ಅಸಮಾನತೆ ಮತ್ತು ಜಾತಿಯಾಧಾರಿತ ಶೋಷಣೆ ವಿಷಯಾಧಾರಿತ ದುನಿಯಾ ವಿಜಯ್ ನಾಯಕತ್ವದ “ಲ್ಯಾಂಡ್ ಲಾರ್ಡ್” ಚಲನಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮೌಲ್ಯಯುತ ಸಂದೇಶವನ್ನು ಜನರಿಗೆ ತಲುಪಿಸಿ, ಸಾರ್ವತ್ರಿಕ ಅಭಿಪ್ರಾಯ ರೂಪಿಸಲು ಹಾಗೂ ಸಾಮಾಜಿಕ ಪರಿವರ್ತನೆಯನ್ನು ಸಾಧಿಸಲು ಸಿನೆಮಾಗಳು ಅತ್ಯಂತ ಪರಿಣಾಮಕಾರಿ ಮಾಧ್ಯಮ ಎನ್ನುವುದು ನನ್ನ ಭಾವನೆ. ಸಾಮಾಜಿಕ ಕಳಕಳಿಯ ಸಿನೆಮಾವನ್ನು ಮಾಡಿದಾಗ ಅಂಥವರ ಜೊತೆ ನಿಂತು ಬೆನ್ನು ತಟ್ಟಬೇಕಿರುವುದು ಕೂಡ ಸರ್ಕಾರವಾಗಿ ನಮ್ಮ ನೈತಿಕ ಹೊಣೆ. ಮುಂದಿನ ದಿನಗಳಲ್ಲಿ ಸಾಮಾಜಿಕ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ಲ್ಯಾಂಡ್ ಲಾರ್ಡ್ ನಂತಹ ಇನ್ನಷ್ಟು ಚಿತ್ರಗಳು ಮೂಡಿಬರಲು ನಮ್ಮ ಈ ನಿರ್ಧಾರ ಸ್ಪೂರ್ತಿಯಾಗಲಿದೆ ಎಂದು ನಂಬಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಟ್ವೀಟ್ ಖಾತೆಯಲ್ಲಿ ತಿಳಿಸಿದ್ದಾರೆ. https://twitter.com/siddaramaiah/status/2018587201177624843?t=1kT07PyrwqGi2VnHYm_3qA&s=19
ಉತ್ತರಕನ್ನಡ : ಅನೈತಿಕ ಸಂಬಂಧ ಬಯಲು ಮಾಡಿದ್ದಕ್ಕೆ ಭೀಕರವಾಗಿ ಕೊಲೆ ಮಾಡಲಾಗಿದೆ. ಈ ನೆಲೆಯಲ್ಲಿ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅನೈತಿಕ ಸಂಬಂಧವನ್ನು ಮಹಿಳೆಯ ಮಗಳು ಬಯಲು ಮಾಡಿದ್ದಕ್ಕೆ ಓರ್ವನ ಕೊಲೆಯಾಗಿರುವ ಘಟನೆ ಉತ್ತರ ಕನ್ನಡದಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಂತಹ ವಸಂತ ನಾಯಕ್ ಎನ್ನುವ ವ್ಯಕ್ತಿ ಇದೀಗ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ವಸಂತ ನಾಯಕ್ ಸಾವನ್ನಪ್ಪಿದ್ದಾರೆ. ತಾಯಿಯ ಅನೈತಿಕ ಸಂಬಂಧವನ್ನು ಮಗಳು ಬಯಲು ಮಾಡಿದ್ದಳು. ಜ್ಯೋತಿಷಿ ಕಮಲಾಕರ ಭಟ್ ಜೊತೆ ಸುಚಿತ್ರ ಅನೈತಿಕ ಸಂಬಂಧ ಹೊಂದಿದ್ದಳು. ಮಗಳಿಗೆ ತಾಯಿ ಸುಚಿತ್ರ ಚಿತ್ರ ಹಿಂಸೆ ನೀಡುತ್ತಿದ್ದಳು. ಆಗ ಮಗಳಿಗೆ ತಂದೆ ಮಹೇಶ್ ನಾಯಕ್ ನೆರವಿಗೆ ನಿಲ್ಲುತ್ತಾರೆ. ಸುಚಿತ್ರ ಪತಿ ಕುಮಾರ್ ಹಾಗೂ ವಸಂತ ಮೇಲೆ ಮಾರಣಾಂತಿಕ ಹಲ್ಲೆ ನಡೆಯುತ್ತದೆ. ಪೊಲೀಸ್ ಠಾಣೆಗೆ ದೂರು ಕೊಟ್ಟು ಮರಳಿದಾಗ ಗಂಭೀರವಾಗಿ ಹಲ್ಲೆ ನಡೆದಿದೆ. ಸುಚಿತ್ರ ತಂದೆ ಲೋಕನಾಥ, ಜ್ಯೋತಿಷಿ ಕಮಲಾಕರ್ ಭಟ್, ಸುಚಿತ್ರ ಹಾಗೂ ಮತ್ತೊಬ್ಬ ವ್ಯಕ್ತಿಯಿಂದ ಹಲ್ಲೆ…
ಬೆಂಗಳೂರು : ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವ ಆರ್ ಬಿ ತಿಮ್ಮಾಪುರ ಹೇಳಿಕೆಯನ್ನು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಪ್ರಸ್ತಾಪಿಸಿದರು. ಆರ್ ಬಿ ತಿಮ್ಮಾಪುರ ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ಆಗಿದೆ ಅಂತ ಹೇಳಿದ್ದಾರೆ. ತಿಮ್ಮಾಪುರಗೆ ಪಾಲು ಕೊಡಬೇಕು ಎಂಬ ಆಡಿಯೋ ವೈರಲ್ ಆಯ್ತು. ನನ್ನ ಬಳಿ ಆಡಿಯೋ ಪೆನ್ ಡ್ರೈವ್ ಇದೆ ಎಂದು ಇದೆ ವೇಳೆ ಅಶೋಕ್ ಪೆನ್ ಡ್ರೈವ್ ಅನ್ನು ಸದನದಲ್ಲಿ ಪ್ರದರ್ಶನ ಮಾಡಿದರು. ಜಂಟಿ ಆಯುಕ್ತ ನಾಗರಾಜಪ್ಪ ವಕೀಲ ರಮೇಶ ಸಂಭಾಷಣೆ ಮಾಡಿರುವ ಆಡಿಯೋ ಇದಾಗಿದ್ದು, ನಾಗರಾಜಪ್ಪ 18 ಲಕ್ಷಕ್ಕೆ ಬೇಡಿಕೆ ಇಟ್ಟ ಆಡಿಯೋ ಇದೆ. ಸಚಿವರಿಂದ ಅಥವಾ ಅವರ ಮಗನ ಕಡೆಯಿಂದ ಮೆಸೇಜ್ ಬರಬೇಕು ಹೀಗೆ ವಕೀಲ ರಮೇಶ್ಗೆ ಹೇಳಿದ್ದಾನೆ ಎಂದು ಆಡಿಯೋ ಸಂಭಾಷಣೆಯ ವಿವರವನ್ನು ಆರ್ ಅಶೋಕ್ ಇದೆ ವೇಳೆ ಓದಿದರು. ಪ್ರತಿ ಅಂಗಡಿಯಲ್ಲೂ ತಿಂಗಳಿಗೆ 10 ರಿಂದ 15 ಸಾವಿರ ರೂಪಾಯಿ ಕಲೆಕ್ಷನ್ ಆಗುತ್ತಿದ್ದು, ಒಟ್ಟು ಒಂದು ತಿಂಗಳಿಗೆ…
ನವದೆಹಲಿ : ಭಾರತ ಅಂಚೆ ಇಲಾಖೆ ಗ್ರಾಮೀಣ ಡಾಕ್ ಸೇವಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಭಾರತ ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್ indiapost.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಡ್ರೈವ್ ಶಾಖೆ ಪೋಸ್ಟ್‌ಮಾಸ್ಟರ್ (BPM)/ಸಹಾಯಕ ಶಾಖೆ ಪೋಸ್ಟ್‌ಮಾಸ್ಟರ್ (ABPM)/ಡಾಕ್ ಸೇವಕ್ ಹುದ್ದೆಗಳನ್ನು ಭರ್ತಿ ಮಾಡುತ್ತದೆ. ನೋಂದಣಿ ಪ್ರಕ್ರಿಯೆಯು ಜನವರಿ 30 ರಂದು ಪ್ರಾರಂಭವಾಯಿತು ಮತ್ತು ಫೆಬ್ರವರಿ 14, 2026 ರಂದು ಮುಕ್ತಾಯಗೊಳ್ಳುತ್ತದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಫೆಬ್ರವರಿ 1 ರಂದು ಪ್ರಾರಂಭವಾಗಿ ಫೆಬ್ರವರಿ 16, 2026 ರಂದು ಕೊನೆಗೊಂಡಿತು. ತಿದ್ದುಪಡಿ ವಿಂಡೋ ಫೆಬ್ರವರಿ 17 ರಂದು ತೆರೆದು ಫೆಬ್ರವರಿ 18, 2026 ರಂದು ಮುಕ್ತಾಯಗೊಳ್ಳುತ್ತದೆ. ಅರ್ಹತೆ, ಆಯ್ಕೆ ಪ್ರಕ್ರಿಯೆ ಮತ್ತು ಇತರ ವಿವರಗಳಿಗಾಗಿ ಕೆಳಗೆ ಓದಿ. ಅರ್ಹತಾ ಮಾನದಂಡಗಳು ವಯಸ್ಸಿನ ಮಿತಿ 18 ರಿಂದ 40 ವರ್ಷಗಳ ನಡುವೆ ಇರಬೇಕು. ಜಿಡಿಎಸ್‌ಗೆ ಸೇರಲು ಶೈಕ್ಷಣಿಕ ಅರ್ಹತೆಯೆಂದರೆ ಭಾರತ ಸರ್ಕಾರ/ರಾಜ್ಯ ಸರ್ಕಾರಗಳು/ಭಾರತದ ಯಾವುದೇ ಮಾನ್ಯತೆ ಪಡೆದ ಶಾಲಾ…
ಮುಂಬೈ : ಇತ್ತೀಚಿಗೆ ತಾನೇ ವಿಮಾನ ದುರಂತದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಾವನಪ್ಪಿದ್ದರು. ಈ ಒಂದು ಘಟನೆ ಮಾಸುವ ಮುನ್ನವೇ ಸಚಿವೆ ಪಂಕಜಾ ಪ್ರಯಾಣಿಸಬೇಕಿದ್ದ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ಹೌದು ಮಹಾರಾಷ್ಟ್ರದ ಸಂಭಾಜಿ ನಗರದಲ್ಲಿ ಈ ಒಂದು ಘಟನೆಯ ಸಂಭವಿಸಿದ್ದು, ಹೆಲಿಕಾಪ್ಟರ್ ನಲ್ಲಿ ಸಚಿವೆ ಪಂಕಜ ಮುಂಡೆ ಲಾತೂರ್ ಗೆ ತೆರಳಬೇಕಿತ್ತು. ಜಿಲ್ಲಾ ಪರಿಷತ್ ಚುನಾವಣಾ ಪ್ರಚಾರಕ್ಕಾಗಿ ಪಂಕಜಾ ತೆರಳಬೇಕಿತ್ತು. ಆದರೆ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ಸಮಸ್ಯೆ ಬಗ್ಗೆ ಪೈಲಟ್ ವರದಿ ನೀಡಿದ್ದಾರೆ. ಹಾಗಾಗಿ ಲಾತೂರ್ ಪ್ರಯಾಣವನ್ನು ಬಿಜೆಪಿ ನಾಯಕಿ ಪಂಕಜಾ ಮುಂದೂಡಿದ್ದಾರೆ. ವಿಮಾನ ದುರಂತದಲ್ಲಿ ಡಿಸಿಎಂ ಅಜಿತ್ ಪವರ್ ಸಾವನಪ್ಪಿದ ಬಳಿಕ ವಿಮಾನದಲ್ಲಿ ತೆರಳಲು ನಾಯಕರು ಇದೀಗ ಎಚ್ಚರವಹಿಸುತ್ತಿದ್ದಾರೆ.
ಬೆಳಗಾವಿ : ಬೆಳಗಾವಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ ಒಂದು ನಡೆದಿದ್ದು ವ್ಯಕ್ತಿಯನ್ನು ಕೊಂದು ಶವದ ಮೇಲೆ ಕಾಲಿಟ್ಟು ಪೋಸ್ ಕೊಟ್ಟಿದ್ದಾನೆ 16 ಬಾರಿ ಮಚ್ಚಿನಿಂದ ಕೊಚ್ಚಿ ಕ್ರೌರ್ಯ ಮೆರೆದಿದ್ದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ಈ ಒಂದು ಭೀಕರ ಹತ್ಯೆ ನಡೆದಿದೆ. ಹೌದು ಸೌದತ್ತಿ ತಾಲೂಕಿನ ಬಸಡೋಣಿ ಗ್ರಾಮದ ಬಸಪ್ಪ (56) ಎಂಬಾತನನ್ನು ನಡುವಿನ ರಸ್ತೆಯಲ್ಲಿಯೇ ಈರಪ್ಪ ಎಂಬಾತ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಹತ್ಯೆಯ ಬಳಿಕ ಸಿನಿಮಾ ಸ್ಟೈಲ್ ನಲ್ಲಿ ಶವದ ಮೇಲೆ ಕಾಲಿಟ್ಟು ಪೋಸ್ ಕೊಟ್ಟಿದ್ದಾನೆ. ನಿನ್ನೆ ಸಂಜೆ ಬಸಪ್ಪನ ಬೈಕ್ ಅಡಗಟ್ಟಿ ಈರಯ್ಯ ಎಂಬಾತ ಕೊಲೆ ಮಾಡಿದ್ದಾನೆ. ಪೊಲೀಸರಿಗೆ ಕರೆ ಮಾಡಿ ಕೊಲೆ ಮಾಡಿದ್ದಾಗಿ ಮಾಹಿತಿ ನೀಡಿದ್ದಾನೆ. ಅಲ್ಲದೇ ಶವದ ಮೇಲೆ ಕಾಲಿಟ್ಟು ಪೋಸ್ ಕೊಟ್ಟಿದ್ದಾನೆ. 2015ರಲ್ಲಿ ಈರಯ್ಯ ಎಂಬಾತನ ತಾಯಿಯ ಕೊಲೆಯಾದ ವ್ಯಕ್ತಿ ಓಡಿ ಹೋಗಿದ್ದ ಎನ್ನುವಂತ ಮಾಹಿತಿ ತಿಳಿದು ಬಂದಿದೆ. 2015ರಲ್ಲಿ ಓಡಿ ಹೋದಂತವರು ವಾಪಸ್ ಊರಿಗೆ ಬಂದಿರಲಿಲ್ಲ ಇನ್ನೊಂದು ಕಡೆ ಆರೋಪಿ…
ಬೆಂಗಳೂರು: ಮಾಜಿ ಸ್ಪೀಕರ್, ಹಿರಿಯ ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಾಗರದ ಮಾರಿಕಾಂಬ ದೇವಿ ದರ್ಶನದ ವೇಳೆ ಕುಸಿದು ಬಿದ್ದ ಮಾಜಿ ಸ್ಪೀಕರ್ ಕಾಡೋಡು ತಿಮ್ಮಪ್ಪ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಅಂತ ತಿಳಿದು ಬಂದಿದೆ. ಕಾಗೋಡು ತಿಮ್ಮಪ್ಪ ಒಬ್ಬ ಭಾರತೀಯ ನಿವೃತ್ತ ರಾಜಕಾರಣಿ, ಅವರು ಕರ್ನಾಟಕ ವಿಧಾನಸಭೆಯ 21 ನೇ ಸ್ಪೀಕರ್ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರಾಗಿದ್ದರು ಮತ್ತು ಸಾಗರದಿಂದ ಆಯ್ಕೆಯಾದ ಕರ್ನಾಟಕ ವಿಧಾನಸಭೆಯ ಮಾಜಿ ಸದಸ್ಯರಾಗಿದ್ದರು. ಅವರು ಮೇ 2013 ರಲ್ಲಿ 14 ನೇ ವಿಧಾನಸಭೆಯ ಸ್ಪೀಕರ್ ಆಗಿ ಕೆಲಸ ಮಾಡಿದ್ದರು.












