Author: kannadanewsnow05

ವಿಜಯನಗರ : ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಐತಿಹಾಸಿಕ ಕ್ಷೇತ್ರವಾದ ಶ್ರೀ ಕ್ಷೇತ್ರ ದೊಡ್ಡ ಮೈಲಾರಲಿಂಗೇಶ್ವರ ನ ಜಾತ್ರೆಯಲ್ಲಿ ಇಂದು ಕಾರ್ಣಿಕ ನುಡಿಯಲಾಯಿತು. ಬಿತ್ತಿ ಬೆಳೆದ ಕೈ ಬಂಗಾರದ ಖಡ್ಗ ತೊಟ್ಟಿತಲೆ ಪರಾಕ್ ಎಂದು ಕಾರ್ಣಿಕ ನುಡಿದ ಗೊರವಯ್ಯ. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ಈ ಒಂದು ಕಾರ್ಣಿಕ ನೋಡಿದಿದ್ದು, ರಾಜ್ಯ ದೇಶದಲ್ಲಿ ಉತ್ತಮ ಮಳೆ ಬೆಳೆ ಎಂದು ವಿಶ್ಲೇಷಣೆ ಮಾಡಲಾಯಿತು.

Read More

ನವದೆಹಲಿ : ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ, ಮೂರು ವರ್ಷದ ಬಾಲಕಿಯ ಬಾಯಿಯಲ್ಲಿ ಕ್ಯಾಂಡಿಯನ್ನು ಹೋಲುವ ವಸ್ತುವೊಂದು ಸ್ಫೋಟಗೊಂಡು ಜೀವಕ್ಕೆ ಅಪಾಯಕಾರಿಯಾದ ಗಾಯಗಳಾಗಿವೆ. ರಾಮಗಢ ಪೊಲೀಸ್ ಠಾಣೆ ವ್ಯಾಪ್ತಿಯ ಚೌಕಿಬಾಸ್ ಗ್ರಾಮದಿಂದ ವರದಿಯಾದ ಈ ಪ್ರಕರಣವು ಮಕ್ಕಳ ಸುರಕ್ಷತೆ ಮತ್ತು ಕ್ರಿಮಿನಲ್ ನಿರ್ಲಕ್ಷ್ಯದ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ಅಕ್ಷು ಎಂದು ಗುರುತಿಸಲಾದ ಮಗು ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದು, ಪೊಲೀಸರು ಅಂಗಡಿಯ ಮಾಲೀಕನನ್ನು ವಶಕ್ಕೆ ತೆಗೆದುಕೊಂಡು ವಿವರವಾದ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಫೆಬ್ರವರಿ 3 ರ ಮಂಗಳವಾರ ಬೆಳಿಗ್ಗೆ ಅಕ್ಷು ತನ್ನ ಆರು ವರ್ಷದ ಸಹೋದರಿ ಅಹಾನಾಳೊಂದಿಗೆ ಸಿಹಿತಿಂಡಿಗಳನ್ನು ಖರೀದಿಸಲು ಹತ್ತಿರದ ದಿನಸಿ ಅಂಗಡಿಗೆ ಹೋದಾಗ ಈ ಘಟನೆ ಸಂಭವಿಸಿದೆ. ದೂರಿನ ಪ್ರಕಾರ, ಅಂಗಡಿಯವ, ನಾಥೋ ಅವರ ಮಗ ಸುದಿಲ್ ಅಲಿಯಾಸ್ ಕಲಾ, ಮಗುವಿಗೆ ಕ್ಯಾಂಡಿಯಂತೆ ಕಾಣುವ ಆದರೆ ವಾಸ್ತವವಾಗಿ ಪಟಾಕಿಯನ್ನು ಹೋಲುವ ಸ್ಫೋಟಕ ವಸ್ತುವನ್ನು ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಕೆಲವು ಕ್ಷಣಗಳ ನಂತರ, ಮಗು ಆ ವಸ್ತುವನ್ನು ತನ್ನ…

Read More

ಬೆಂಗಳೂರು : ಬೆಂಗಳೂರಿನ ಜನತೆಗೆ ಬಿಗ್ ಶಾಕ್, ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಇದೀಗ ರಾಜ್ಯ ಸರ್ಕಾರ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶಾಕ್ ನೀಡಿದ್ದು ಟಿಕೆಟ್ ದರ ಏರಿಕೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.ಬಿಎಂಆರ್‌ಸಿಎಲ್ ಇಂದ ಅಧಿಕೃತ ಘೋಷಣೆಯ ಒಂದೇ ಬಾಕಿ ಇದೆ. ಹೌದು ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ BMRCL ಬೋರ್ಡ್ ಮೀಟಿಂಗ್ ನಲ್ಲಿ ಟಿಕೆಟ್ ದರ ಏರಿಕೆಗೆ ಒಪ್ಪಿಗೆ ನೀಡಲಾಗಿದ್ದು, ರಾಜ್ಯ ಸರ್ಕಾರದ ಅನುಮತಿಗಾಗಿ ನಮ್ಮ ಮೆಟ್ರೋ ಕಾಯುತ್ತಿದತ್ತು. ಇದೀಗ ರಾಜ್ಯ ಸರ್ಕಾರ ಸಹ ದರ ಏರಿಕೆಗೆ ಗ್ರೀನ್ ಸಿಗ್ನಲ್ ನೀಡಿದ್ದು, ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಶಾಕ್ ಎದುರಾಗಿದೆ. ನಮ್ಮ ಮೆಟ್ರೋ ಟಿಕೆಟ್ ದರ ಶೇ.5 ರಷ್ಟು ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ಕಳೆದ ವರ್ಷ ಫೆ.9ರಂದು ಶೇ. 101.5 ರಷ್ಟು ಟಿಕೆಟ್ ದರ ಏರಿಕೆ ಮಾಡಲಾಗಿತ್ತು. ಪ್ರಯಾಣಿಕರ ಆಕ್ರೋಶದಿಂದ 3 ದಿನದ ಬಳಿಕ ಶೇ. 71.5ಕ್ಕೆ ಇಳಿಸಲಾಗಿತ್ತು. ಇದೀಗ…

Read More

ಅವಿನಾಶ್‌ ಆರ್‌ ಭೀಮಸಂದ್ರ ಭಾರತೀಯ ಅಂಚೆ ಇಲಾಖೆಯು ಸ್ಪೀಡ್ ಪೋಸ್ಟ್, ಇತರೆ ಪತ್ರ ಹಾಗೂ ಪಾರ್ಸೆಲ್‌ಗಳ ಬುಕ್ಕಿಂಗ್ ಸೇವಾ ಅವಧಿಯನ್ನು ಸಾರ್ವಜನಿಕರ ಅನುಕೂಲಕ್ಕಾಗಿ ವಿಸ್ತರಿಸಲಾಗಿದೆ ಜಿಲ್ಲಾ ಅಂಚೆ ಕಚೇರಿಗಳಲ್ಲಿ ಕಚೇರಿ ಕಾರ್ಯ ಸಮಯ ಮುಕ್ತಾಯವಾಗುವ ಮೊದಲು ಕೊನೆಯ 30 ನಿಮಿಷಗಳವರೆಗೆ ಅಂಚೆ ವಸ್ತುಗಳನ್ನು ಬುಕ್ ಮಾಡುವ ಸೌಲಭ್ಯ ಒದಗಿಸಲಾಗುತ್ತಿದೆ. ಈ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುವ ದಿನಗಳಲ್ಲಿ ಇಲಾಖಾ ಅಂಚೆ ಕಚೇರಿಗಳ ನಿಗದಿತ ಕಾರ್ಯಾವಧಿ ಮುಕ್ತಾಯಕ್ಕೆ 30 ನಿಮಿಷಗಳವರೆಗೆ ಮುಂಚಿತವಾಗಿ ಸ್ಪೀಡ್ ಪೋಸ್ಟ್, ಪಾರ್ಸೆಲ್ ಹಾಗೂ ಅಂತರಾಷ್ಟಿçÃಯ ಸ್ಪೀಡ್ ಪೋಸ್ಟ್, ಪಾರ್ಸೆಲ್‌ಗಳನ್ನು ಬುಕ್ ಮಾಡಬಹುದಾಗಿದೆ. ಇದರಿಂದ ಕಚೇರಿ ಸಮಯದ ಅಂತ್ಯದಲ್ಲಿ ಅಂಚೆ ಕಚೇರಿಗೆ ಬರುವ ಗ್ರಾಹಕರಿಗೂ ತಮ್ಮ ಅಂಚೆ ವಸ್ತುಗಳನ್ನು ಸುಲಭವಾಗಿ ಬುಕ್ ಮಾಡುವ ಅವಕಾಶ ದೊರೆಯುತ್ತದೆ. ಸೋಮವಾರದಿಂದ ಶುಕ್ರವಾರ ದವರೆಗೆ ಕೆಲಸದ ದಿನಗಳಿಗೆ ಮಾತ್ರ ಈ ಬುಕ್ಕಿಂಗ್ ಸಮಯದ ವಿಸ್ತರಣೆ ಅನ್ವಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಮನೆಯಲ್ಲಿಯೇ ಬುಕ್ಕಿಂಗ್ ಸೌಲಭ್ಯ : ಸಾರ್ವಜನಿಕರ ಅನುಕೂಲಕ್ಕಾಗಿ ಭಾರತೀಯ ಅಂಚೆ ಇಲಾಖೆಯ ಗ್ರಾಹಕ ಸ್ವಯಂ…

Read More

ವಿಜಯಪುರ : ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಾವಿನಾಳ ಗ್ರಾಮದಲ್ಲಿ ಇರುವ ದತ್ತ ಸಕ್ಕರೆ ಕಾರ್ಖಾನೆಯಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದೆ. ದತ್ತ ಸಕ್ಕರೆ ಕಾರ್ಖಾನೆಯ ಗ್ಯಾಸ್ ಗೆ ಬೆಂಕಿ ಹೊತ್ತಿಕೊಂಡಿದ್ದು ಕಾರ್ಖಾನೆಯ ಯಂತ್ರೋಪಕರಣಗಳಿಗೂ ಕೂಡ ಬೆಂಕಿ ವ್ಯಾಪಿಸಿದೆ. ಕಾರ್ಖಾನೆಯಲ್ಲಿ ಇದ್ದಂತಹ ಯಂತ್ರೋಪಕರಣಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಬಂದು ಬೆಂಕಿ ನಂದಿಸುತ್ತಿದ್ದಾರೆ ಈ ಕುರಿತು ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಇತ್ತೀಚಿಗೆ ಬಿಎಂಟಿಸಿ ಕಂಡಕ್ಟರ್ ಗಳು ಸಂಸ್ಥೆಯ ಸ್ಕ್ಯಾನರ್ ಬದಲು ತಮ್ಮ ಸ್ಕ್ಯಾನರ್ ಹಾಕಿ ಲಕ್ಷಾಂತರ ರೂಪಾಯಿ ವಂಚನೆ  ಎಸಗಿದ್ದ ಪ್ರಕರಣದ ಬೆನ್ನೆಲೆ ಇದೀಗ ಬೆಂಗಳೂರಿನ ವಿಕ್ಟೊರಿಯಾ ಆಸ್ಪತ್ರೆಯಲ್ಲಿ ಕೂಡ ಸಿಬ್ಬಂದಿಗಳು ಯುಪಿಐ ಸ್ಕ್ಯಾನರ್ ಮೂಲಕ 23 ಲಕ್ಷಕ್ಕೂ ಹೆಚ್ಚು ಹಣ ವಂಚನೆ ಎಸಗಿದ್ದು ಬೆಳಕಿಗೆ ಬಂದಿದೆ. ಹೌದು ರೋಗಿಗಳ ಅನುಕೂಲಕ್ಕಾಗಿ ಪರಿಚಯಿಸಲಾಗಿದ್ದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನೇ ದುರುಪಯೋಗಪಡಿಸಿಕೊಂಡು, ಆಸ್ಪತ್ರೆಯ ಕೆಲ ಕಳ್ಳ ಸಿಬ್ಬಂದಿಗಳು ಸುಮಾರು 23 ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನು ಅಕ್ರಮವಾಗಿ ದೋಚಿರುವುದು ಬಹಿರಂಗವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದೀಪಕ್ ಅವರು ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇತ್ತೀಚಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಗೂ ಶುಲ್ಕ ಪಾವತಿಸಲು ಅನುಕೂಲ ಆಗಲಿ ಎಂದು ಯುಪಿಐ ವ್ಯವಸ್ಥೆ ಅಳವಡಿಸಲಾಗಿತ್ತು. ಸ್ಕ್ಯಾನರ್ ಲ್ಯಾಬ್ ಟೆಸ್ಟಿಂಗ್ ಸೇರಿದಂತೆ ಆಸ್ಪತ್ರೆಯ ಎಲ್ಲಾ ವೈದ್ಯಕೀಯ ಸೇವೆಗಳಿಗೆ ಶುಲ್ಕ ಪಾವತಿಸಲು ಯುಪಿಐ ವ್ಯವಸ್ಥೆ…

Read More

ಕೊಲ್ಕತ್ತಾ : ಕೊಲ್ಕತ್ತಾ ಏರ್ಪೋರ್ಟ್ ನಲ್ಲಿ ವಿಮಾನ ಒಂದು ತುರ್ತು ಭೂಸ್ಪರ್ಶ ಮಾಡಿದೆ. ಪಶ್ಚಿಮ ಬಂಗಾಳದ ಕೊಲ್ಕತ್ತಾ ಏರ್ಪೋರ್ಟ್ ನಲ್ಲಿ ಈ ಒಂದು ಘಟನೆ ನಡೆದಿದ್ದು, ನೇಪಾಳದಿಂದ ವಿಮಾನ ಹೊರಟಿತು ಟರ್ಕಿ ಏರ್ಲೈನ್ಸ್ ನ TK-727 ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದ ಇಂಜಿನ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಕೋಲ್ಕತ್ತಾ ವಾಯು ಪ್ರದೇಶ ಮೂಲಕ ಈ ಒಂದು ವಿಮಾನ ಇಸ್ತಾನ್ ಬುಲ್ ಗೆ ಹೊರಟಿತ್ತು. ಇಂಜಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಪೈಲಟ್ ಎಟಿಸಿ ಸಂಪರ್ಕ ಮಾಡಿದ್ದಾರೆ. ಕೊಲ್ಕತ್ತಾ ಏರ್ ಟ್ರಾಫಿಕ್ ಕಂಟ್ರೋಲ್ ಅನ್ನು ಪೈಲೆಟ್ ಸಂಪರ್ಕಿಸಿದ್ದಾರೆ ಎಟಿಸಿ ಗ್ರೀನ್ ಸಿಗ್ನಲ್ ಕೊಟ್ಟ ಬಳಿಕ ಫ್ಲೈಟ್ ಲ್ಯಾಂಡಿಂಗ್ ಆಗಿದೆ ವಿಮಾನದಲ್ಲಿ ಇದ್ದಂತಹ 236 ಪ್ರಯಾಣಿಕರು ಕೂಡ ಸೇಫ್ ಆಗಿದ್ದಾರೆ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Read More

ಬೆಂಗಳೂರು : ಶಾಸಕರು ಇದೀಗ ಫಾರಿನ್ ಟೂರ್ ಹೊರಟಿದ್ದು ಅಧ್ಯಯನ ಹೆಸರಿನಲ್ಲಿ ರಾಜ್ಯದ ಶಾಸಕರು ವಿದೇಶಿ ಪ್ರವಾಸ ಕೈಗೊಳ್ಳಲಿದ್ದಾರೆ. ಫೆಬ್ರುವರಿ 16 ರಿಂದ ಮಾರ್ಚ್ 3 ರವರೆಗೆ ವಿದೇಶಿ ಪ್ರವಾಸ ಕೈಗೊಳ್ಳಲಿದ್ದಾರೆ. ಪಶು ಸಂಗೋಪನ ಇಲಾಖೆಯಿಂದ ಅಧ್ಯಯನ ಪ್ರವಾಸ ಇದ್ದು ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಗೆ ಶಾಸಕರು ಪ್ರವಾಸ ಕೈಗೊಳ್ಳಲಿದ್ದಾರೆ. ಸುಮಾರು 15ಕ್ಕೂ ಹೆಚ್ಚು ಶಾಸಕರಿಂದ ವಿದೇಶ ಪ್ರವಾಸಕ್ಕೆ ತಯಾರಿ ನಡೆದಿದೆ. ಯಾವುದೇ ಸರ್ಕಾರ ಇರಲಿ ಶಾಸಕರನ್ನ ಆಗಾಗ ಅಧ್ಯಯನದ ಪ್ರವಾಸ ನಡೆಯುತ್ತದೆ.

Read More

ಬೆಂಗಳೂರು : ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ, ಲಂಚ ಆರೋಪ ಪ್ರಕರಣ ಸಂಬಂಧ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದು, ಸಚಿವ ತಿಮ್ಮಾಪುರ ರಾಜೀನಾಮೆ ನೀಡಬೇಕೆಂದು ಧರಣಿ ನಡೆಸಿವೆ. ನಿನ್ನೆ ಅಹೋರಾತ್ರಿ ಧರಣಿ ನಡೆಸಿ ತಿಮ್ಮಾಪುರ ರಾಜೀನಾಮೆಗೆ ಪಟ್ಟು ಹಿಡಿದಿವೆ. ಈ ವೇಳೆ ಬಸವಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗರ್ ಹಾಗೂ ಅರಸೀಕರೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ವೈಯಕ್ತಿಕವಾಗಿ ಬೈದಾಡಿಕೊಂಡಿಕೊಂಡಿರುವ ಪ್ರಸಂಗ ನಡೆದಿದೆ. ದೇವೇಗೌಡ್ರಿಗೆ ದೋಖಾ ಮಾಡಿದ ಶಿವಲಿಂಗೇಗೌಡಗೆ ಧಿಕ್ಕಾರ ಎಂದು ಎಂದು ಶರಣು ಸಲಗರ್ ಘೋಷಣೆ ಕೂಗಿದರು. ಇದರಿಂದ ಕೆರಳಿದ ಶಿವಲಿಂಗೇಗೌಡ, ಚಿಂಚೋಳಿಯಲ್ಲಿ ನಿನ್ನ ಹೆಂಡತಿಯನ್ನು ತಹಶೀಲ್ದಾರ್ ಬಿಟ್ಟುಕೊಂಡು ಎಷ್ಟು ದುಡ್ಡು ಹೊಡೆದಿದ್ದೀಯಾ ಎಂದು ಗೊತ್ತಿದೆ. ಆರ್ಎಸ್ಎಸ್ ನವರೇ ನಿಮ್ಮ ಯೋಗ್ಯತೆಗೆ ಬೆಂಕಿ ಹಾಕ. ನಿಮಗೆ ಮಾನ ಮರ್ಯಾದೆ ಏನಾದರೂ ಇದೆಯಾ? ಸದನದಲ್ಲಿ ನಾವು ಕೂಡ ಈ ಹಿಂದೆ ಅನೇಕ ಧರಣಿ ಮಾಡಿದ್ದೇವೆ ಆದರೆ ನಿಮ್ಮ ತರಹ ಈ ರೀತಿ ಅಸಹ್ಯವಾಗಿ ಧರಣಿ ಮಾಡಿಲ್ಲ. ನಾಚಿಕೆ ಮಾನ…

Read More

ಮಂಡ್ಯ : ಸಿಎಲ್ 7 ಬಾರ್ ತೆರೆಯಲು ಲೈಸೆನ್ಸ್ ‌ನೀಡಲು‌ ಸುಂದರ್ ಎಂಬುವರಿಂದ 60 ಲಕ್ಷ ಬೇಡಿಕೆ ಆರೋಪದ ಹಿನ್ನೆಲೆಯಲ್ಲಿ ಆಡಿಯೋ‌ ಸಹಿತ ಸುಂದರ್ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಸೋಮನಹಳ್ಳಿ ಗ್ರಾಮದಲ್ಲಿ ಹೊಸದಾಗಿ ಸಿಎಲ್ 7 ಬಾರ್ ತೆರೆಯಲು ಲೈಸೆನ್ಸ್ ನೀಡಲು ಅರ್ಜಿ ಸಲ್ಲಿಸಿದ್ದ ಸುಂದರ್. ಮಂಡ್ಯದ ಕೆ.ಆರ್.ಪೇಟೆಯ ಸೋಮನಹಳ್ಳಿಯ ಸುಂದರ್ ಗೆ ಲೈಸೆನ್ಸ್ ನೀಡದೇ ಪದೇ ಪದೇ ಅರ್ಜಿ ವಜಾ ಮಾಡುತ್ತಿದ್ದ ಅಬಕಾರಿ ಅಧಿಕಾರಿಗಳು. ಸಣ್ಣ ಪುಟ್ಟ ನೆಪ ಹೇಳಿಕೊಂಡು ಅರ್ಜಿ ವಜಾ ಮಾಡುತ್ತಿದ್ದರು. ನ್ಯಾಯಾಲಯ ಆದೇಶ ನೀಡಿದ್ದರೂ ಲೈಸೆನ್ಸ್ ನೀಡಿರಲಿಲ್ಲ. ಲೈಸೆನ್ಸ್ ನೀಡಲು 60 ಲಕ್ಷ ‌ಲಂಚಕ್ಕೆ ನಾಗಶಯನ ಬೇಡಿಕೆ ಆಡಿಯೋ ಸಹಿತ ದೂರು ನೀಡಿ‌ ನ್ಯಾಯಕ್ಕಾಗಿ ನಿರಂತರ ಹೋರಾಟ ನಡೆಸಿದ್ದು, ಕಳೆದ ಒಂದು ವರ್ಷದಿಂದಲೂ ಹೋರಾಟ ಮಾಡುತ್ತಿದ್ದ ಸುಂದರ್. ಇದೇ ವಿಚಾರ ಸದನದಲ್ಲೂ ಚರ್ಚೆಯಾಗಿತ್ತು. ಕೊನೆಗೂ ಎಚ್ಚೆತ್ತುಕೊಂಡು‌ ನಾಗಶಯನರ ಇದೀಗ ಅಮಾನತುಗೊಂಡಿದ್ದಾನೆ ಸರ್ಕಾರ ಅಮಾನತ್ತು ಆದೇಶ ಪ್ರಕಟಿಸಿದೆ.

Read More