Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ರಾಜ್ಯಪಾಲರ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಅವರು ಮೇಲ್ಮನವಿ ಸಲ್ಲಿಸಿದ್ದರು. ಹೀಗಾಗಿ ನಾಳೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ ಮೇಲ್ಮನವಿ ವಿಚಾರಣೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ನಾಳೆ ಮಹತ್ವದ ದಿನವಾಗಿದೆ. ಈ ಮಧ್ಯೆ ಇಡಿಯಿಂದ ಲೋಕಾಯುಕ್ತ ಪೊಲೀಸ್ ಎಡಿಜಿಪಿಗೆ ಪತ್ರ ಬರೆದಿದ್ದು ಪಿಎಂಎಲ್ಐ ಕಾಯ್ದೆಯ ಸೆಕ್ಷನ್ 66 (2) ಅಡಿ ಮಾಹಿತಿ ಹಂಚಿಕೆಯಾಗಿದೆ. ಇಡಿಗೆ ಮಾಹಿತಿ ಹಂಚಿಕೊಳ್ಳುವ ಕಾನೂನಾತ್ಮಕ ಅಧಿಕಾರವಿದೆ. ತನಿಖೆಯ ವೇಳೆ ಇತರ ಕಾಯ್ದೆಗಳ ಉಲ್ಲಂಘನೆಯಾಗಿದ್ದರೆ ಮಾಹಿತಿ ಹಂಚಿಕೊಳ್ಳುವ ಅಧಿಕಾರವಿದೆ. ಸಂಬಂಧಪಟ್ಟಂತಹ ತನಿಖಾ ಸಂಸ್ಥೆಗಳೊಂದಿಗೆ ಇಡಿ ಮಾಹಿತಿ ಹಂಚಿಕೊಳ್ಳಬಹುದು. ಸದ್ಯ ಲೋಕಾಯುಕ್ತ ಪೊಲೀಸರು ಮುಡಾ ಹಗರಣದ ತನಿಖೆ ನಡೆಸುತ್ತಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆಯ ಅಡಿ ತನಿಖೆ ನಡೆಸುತ್ತಿದ್ದಾರೆ. ಹೀಗಾಗಿ ಮುಡಾ ಪ್ರಕರಣದ ಮಾಹಿತಿ ಇಡಿ ಹಂಚಿಕೊಂಡಿದೆ. ನಾಳೆ ಹೈ ಕೋರ್ಟ್ ವಿಭಾಗೀಯ ಪೀಠದಲ್ಲಿ ಇಡಿಗೆ ಸಂಬಂಧಿಸಿದ ವಿಚಾರಣೆ ಇಲ್ಲ. ಆದರೆ ಇಡಿಯ ಪತ್ರವನ್ನು ಸಿಎಂ…
ಬೆಂಗಳೂರು : ಮುಡಾ ಹಗರಣಕ್ಕೆ ಸಬಂಧಿಸಿದಂತೆ ಇಡಿ ಲೋಕಾಯುಕ್ತ ಎಡಿಜಿಪಿಗೆ ಪತ್ರ ಬರೆದಿರುವ ವಿಚಾರವಾಗಿ, ಬಿಜೆಪಿಯವರ ಹಗರಣಗಳನ್ನು ಮುಚ್ಚಿ ಹಾಕಲು ಪತ್ರ ಸೋರಿಕೆ ಮಾಡಿದ್ದಾರೆ. ಇವರು ದೆಹಲಿಗೆ ಹೋಗಿದ್ದು ಭಿನ್ನಮತ ಸೆಟಲ್ ಮಾಡಲು ಅಲ್ಲ. ಹೈಕಮಾಂಡ್ ಕೈಕಾಲು ಹಿಡಿದು ಈ ಪತ್ರ ಲೀಕ್ ಮಾಡಿಸಿದ್ದಾರೆ. ಇಡಿ ಪತ್ರವನ್ನು ನಾವು ಒಪ್ಪುವುದಿಲ್ಲ. ಈ ಪತ್ರದ ಬಗ್ಗೆಯೂ ಒಂದು ತನಿಖೆ ಆಗಬೇಕು. ಏನೇ ತಿಪ್ಪರಲಾಗ ಹಾಕಿದರೂ 2028ಕ್ಕೆ ಬಿಜೆಪಿ ಅಧಿಕಾರಕ್ಕೆ ಬರಲ್ಲ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ ಕಾರಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇಡಿ ಸಿಬಿಐ ಐಟಿ ಕೇಂದ್ರ ಸರ್ಕಾರದ ಕೈಗಾಂಬೆಗಳಾಗಿವೆ. ಬಿಜೆಪಿ ದುರ್ಬಲ ಇರುವ ರಾಜ್ಯಗಳಲ್ಲಿ, ಛೂ ಬಿಡುತ್ತಾರೆ ಸಿಬಿಐ, ಐಟಿ, ಇಡಿ ಅಧಿಕಾರಿಗಳನ್ನು ಛೂ ಬಿಡುತ್ತಾರೆ. ಕೇಂದ್ರದವರು ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿದ್ದಾರೆ. ಇಡಿ ಕೇಂದ್ರ ಸರ್ಕಾರದ ಪಾಲಿಟಿಕಲ್ ಟೂಲ್ ಆಗಿದೆ. ಇಡಿ ಹಣದ ವ್ಯವಹಾರದ ಬಗ್ಗೆ ಮಾತ್ರ ತನಿಖೆ ಮಾಡುತ್ತದೆ. ಆದರೆ ಮುಡಾ ಕೇಸ್ನಲ್ಲಿ ತುರ್ತಾಗಿ ಇಡಿ…
ಗದಗ : ಮುಡಾ ಹಗರಣಕ್ಕೆ ಸಂಬಂಧ ಪಟ್ಟಂತೆ ಇಡಿ ಅಧಿಕಾರಿಗಳು ಲೋಕಾಯುಕ್ತಕ್ಕೆ ಪತ್ರ ಬರೆದಿರುವ ವಿಚಾರವಾಗಿ ಇದೀಗ ಕಾಂಗ್ರೆಸ್ ನಾಯಕರು, ಆಕ್ರೋಶ ಹೊರ ಹಾಕಿದ್ದು, ಸಚಿವ ಕೃಷ್ಣ ಭೈರೇಗೌಡ ಅವರು ಇಡಿ ಎನ್ನುವ ಸೀಳು ನಾಯಿಯನ್ನು ನಮ್ಮ ಮೇಲೆ ಬಿಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ. ಗದಗದಲ್ಲಿ ಮಾತನಾಡಿದ ಅವರು, ರಾಜಕೀಯ ವಿರೋಧಿಗಳಿಗೆ ಹಿಟ್ ಅಂಡ್ ರನ್ ಮಾಡುವುದು ಅಷ್ಟೆ ಗೊತ್ತಿದೆ. ಕರ್ನಾಟಕದ ಉಪಚುನಾವಣೆಯಲ್ಲಿ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದ ಮೇಲೆ ಇವತ್ತು ಬಿಜೆಪಿಯವರಿಗೆ ಸಹಿಸೋಕೆ ಆಗುತ್ತಿಲ್ಲ. ಚುನಾವಣೆಯಲ್ಲಿ ನಮ್ಮನ್ನು ಸೋಲಿಸೋಕೆ ಆಗಲಿಲ್ಲ. ಅದು ಅಸೆಂಬ್ಲಿ ಎಲೆಕ್ಷನ್ ಆಗ್ಲಿಲ್ಲ, ಬೈ ಎಲೆಕ್ಷನಲ್ಲೂ ಆಗಲಿಲ್ಲ ಅದಕ್ಕೆ ಇಡಿ ಎನ್ನುವ ಸೀಳು ನಾಯಿಯನ್ನು ನಮ್ಮ ಮೇಲೆ ಬಿಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರು : ಬೆಂಗಳೂರಿನಲ್ಲಿ ಎಷ್ಟೇ ಕಠಿಣವಾದ ಅಂತಹ ಸಂಚಾರ ನಿಯಮಗಳನ್ನು ತಂದರು ಕೂಡ ಆಗಾಗ ಅಪಘಾತಗಳು ಸಂಭವಿಸುತ್ತವೆ. ಇದೀಗ ಬೆಂಗಳೂರಿನಲ್ಲಿ ಮತ್ತೊಂದು ಹಿಟ್ ಅಂಡ್ ರನ್ ಪ್ರಕರಣ ನಡೆದಿದ್ದು, ಅಪಘಾತದಲ್ಲಿ ತಾಯಿ ಸಾವನ್ನಪ್ಪಿದ್ದು ಮಗುವಿನ ಸ್ಥಿತಿ ಗಂಭೀರವಾಗಿದೆ. ಘಟನೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಹೊರವಲಯದ ನಂದಿಮೋರಿ ಬಳಿ ನಡೆದಿದ್ದು, ನಗರದ ಪಾಲನಜೋಗಹಳ್ಳಿ ನಿವಾಸಿ ಭಾನುಪ್ರಿಯ (25) ಮೃತ ದುರ್ದೈವಿ. ಮನೋಜ್ (4) ಗಂಭೀರವಾಗಿ ಗಾಯಗೊಂಡ ಮಗು ಎಂದು ತಿಳಿದುಬಂದಿದೆ. ಶಾಲೆಯಿಂದ ಮಗುವನ್ನು ಕರೆದುಕೊಂಡು ಬರುವಾಗ ಈ ಒಂದು ಅಪಘಾತ ಸಂಭವಿಸಿದೆ ಎನ್ನಲಾಗಿದೆ. ತಾಯಿ ಭಾನುಪ್ರಿಯ ತಲೆಗೆ ತೀವ್ರ ಪೆಟ್ಟಾಗಿ ರಕ್ತ ಸಾವ್ರದಿಂದಾಗಿ ಸಾವನ್ನಪ್ಪಿದ್ದಾರೆ. ಮಗುವಿನ ತಲೆಗೆ ಗಂಭೀರ ಗಾಯವಾಗಿದ್ದು, ಬೆಂಗಳೂರಿನ ಆಸ್ವತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ. ದೊಡ್ಡಬಳ್ಳಾಪುರ ಸರ್ಕಾರಿ ಆಸ್ವತ್ರೆಯ ಶವಾಗಾರಕ್ಕೆ ಮೃತ ದೇಹ ರವಾನಿಸಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಘಟನೆ ಕುರಿತಂತೆ ಪ್ರಕರಣ ದಾಖಲಾಗಿದೆ.ಘಟನೆಯ ಬಳಿಕ ಚಾಲಕ ಪರಾರಿಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು : ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಂತಹ ಅಕ್ರಮ ಪ್ರಕರಣಕ್ಕೆ ಸಂಬಂಧಪಟ್ಟಂತೆ, ವಿಚಾರಣೆಯನ್ನು ಎದುರಿಸಿದ್ದ ವಕೀಲೆ ಜೀವ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಈ ಒಂದು ಪ್ರಕರಣದ ತನಿಖೆಗೆ ಹೈಕೋರ್ಟ್ ಎಸ್ಐಟಿ ರಚನೆ ಮಾಡಿ ಆದೇಶ ಹೊರಡಿಸಿದೆ. ಪ್ರಕರಣದ ಕುರಿತಂತೆ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠವು, ಸಿಬಿಐ ತನಿಖೆಗೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ, ಎಸ್ಐಟಿ ರಚಿಸಿ ಆದೇಶ ಹೊರಡಿಸಿದ್ದಾರೆ. SIT ತಂಡದಲ್ಲಿ ಸಿಬಿಐ ಎಸ್ಪಿ ವಿನಾಯಕ್ ವರ್ಮ, ಐಪಿಎಸ್ ಅಕ್ಷಯ್ ಮಜ್ಲಿ, ಎಸ್ಪಿ ನಿಶಾ ಜೇಮ್ಸ್ ಎಸ್ಐಟಿ ಹೊಂದಿರಲಿದೆ. ಅಲ್ಲದೇ ಈ ಪೈಕಿ ಇಬ್ಬರು ಎಸ್ಪಿಗಳಿದ್ದಾರೆ. ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಕೀಲರ ಸಂಘವು ಈ ಒಂದು ಪ್ರಕರಣವನ್ನು ಸಿಬಿಐಗೆ ತನಿಖೆ ವಹಿಸುವಂತೆ ಕೋರಿ ಅರ್ಜಿ ಸಲ್ಲಿಸಿತ್ತು. ವಿಚಾರಣೆಯ ವೇಳೆ ಹೈ ಕೋರ್ಟ್ ಸಿಬಿಐ ತನಿಖೆ ಕೋರಿದ ಅರ್ಜಿಯನ್ನು ವಜಾಗೊಳಿಸಿ ಎಸ್ಐಟಿ ತನಿಖೆ ರಚಿಸಿ ಆದೇಶಿಸಿದೆ.
ನವದೆಹಲಿ : ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ವಿಚಾರವಾಗಿ ಶಾಸಕ ಯತ್ನಾಳ್ಗೆ ಬಿಜೆಪಿಯ ಕೇಂದ್ರ ಶಿಸ್ತು ಸಮಿತಿ ನೋಟಿಸ್ ನೀಡಿತ್ತು. ಇಂದು ನವದೆಹಲಿಯಲ್ಲಿ ಕೇಂದ್ರ ಶಿಸ್ತು ಸಮಿತಿಯ ಅಧ್ಯಕ್ಷ ಓಂ ಪಾಟಕ್ ಅವರನ್ನು ಭೇಟಿಯಾದ ಯತ್ನಾಳ್ ಅವರು ಸುಮಾರು 6 ಪುಟಗಳಷ್ಟು ಉತ್ತರವನ್ನು ನೀಡಿದ್ದಾರೆ.ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ಪಕ್ಷದ ಆಂತರಿಕ ವಿಚಾರದಲ್ಲಿ ಗಮನ ಕೊಡಬೇಡಿ ಅಂತ ಹೇಳಿದ್ದಾರೆ ಎಂದು ತಿಳಿಸಿದರು. ಆಂತರಿಕ ವಿಚಾರ ಹೊರಗೆ ಮಾತನಾಡಬೇಡಿ ಎಂದಿದ್ದಾರೆ. ದೆಹಲಿಯಲ್ಲಿ ನಾನು ಅಧ್ಯಕ್ಷರನ್ನ ಭೇಟಿ ಮಾಡಿದ್ದೆ. ಅಧ್ಯಕ್ಷರಿಗೆ ಒಂದು ಗಂಟೆ ಕಾಲ ವಿವರಣೆ ಕೊಟ್ಟಿದ್ದೇನೆ. ಪಕ್ಷದ ಆಂತರಿಕ ವಿಚಾರದಲ್ಲಿ ಗಮನ ಕೊಡಬೇಡಿ. ಕಾಂಗ್ರೆಸ್ ವಿರುದ್ಧದ ಹೋರಾಟಕ್ಕೆ ಗಮನ ಕೊಡಿ. ವರಿಷ್ಠರು ಹೀಗೆ ಅಂತ ನಮಗೆ ಹೇಳಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು. 1 ಗಂಟೆ 15 ನಿಮಿಷ ಕಾಲ ಎಲ್ಲ ಸವಿಸ್ತಾರವಾಗಿ ಹೇಳಿದ್ದೇನೆ ನಾನು ಹೇಳಿರುವ ಎಲ್ಲವನ್ನು ಸ್ವೀಕರಿಸಿದ್ದಾರೆ. ಪಕ್ಷದ ಹಿತದ ದೃಷ್ಟಿಯಿಂದ ಎಲ್ಲಾ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ ವಕ್ಫ್ ವಿರುದ್ಧದ ಹೋರಾಟಕ್ಕೆ…
ಬೆಂಗಳೂರು : ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿ ನಮ್ಮ ನಡುವೆ ಒಪ್ಪಂದವಾಗಿರುವುದು ನಿಜ, ಸಮಯ ಬಂದಾಗ ಆ ಬಗ್ಗೆ ಮಾತನಾಡುವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಟಕ್ಕರ್ ಕೊಟ್ಟಿದ್ದಾರೆ. ನಮ್ಮ ನಡುವೆ ಯಾವ ಒಪ್ಪಂದವೂ ಆಗಿಲ್ಲ. ಹೈಕಮಾಂಡ್ ಮಾತಿನಂತೆ ನಡೆದುಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ. ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅವರು ನಮ್ಮ ಚೀಫ್ ಮಿನಿಸ್ಟರ್ ಏನು ಹೇಳಿದ್ದಾರೋ ಅದೇ ಫೈನಲ್ ಎಂದು ಸ್ಪಷ್ಟನೆ ನೀಡಿದರು. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಮುಖ್ಯಮಂತ್ರಿಗಳು ಹೇಳಿದ ಮೇಲೆ ಅದೇ ಫೈನಲ್. ಸಿಎಂ ಹೇಳಿದ ಮೇಲೆ ನನಗೆ ಯಾವುದೇ ತಕರಾರು ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏನು ಹೇಳುತ್ತಾರೋ ಅದೇ ಫೈನಲ್. ನಾನು ಕುರ್ಚಿಗೆ ನಿಷ್ಠನಾಗಿಲ್ಲ ಪಕ್ಷಕ್ಕೆ ನಿಷ್ಠನಾಗಿದ್ದೇನೆ. ಸಿಎಂ ಹೇಳಿದ ಮೇಲೆ ಪ್ರಶ್ನೆ ಇಲ್ಲ ಆ ಕುರಿತು ಚರ್ಚೆ ಮಾಡುವುದಿಲ್ಲ ಎಂದು ತಿಳಿಸಿದರು. ಇಂದು ಅಧಿಕಾರ ಹಂಚಿಕೆಯ ಕುರಿತು ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಬಂಡಬೋಯಿನಹಳ್ಳಿಯಲ್ಲಿ…
ಬೆಂಗಳೂರು : ಇತ್ತೀಚಿಗೆ ಈ ಆನ್ಲೈನ್ ಗೇಮ್ ಗಳಿಂದ ಯುವಕರು ತಮ್ಮ ಮುಂದಿನ ಜೀವನವನ್ನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಕೆಲವರು ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಆನ್ಲೈನ್ ಗೇಮ್ ಆಡೋದಕ್ಕೆ ಸಾಲ ಮಾಡಿಕೊಂಡಿದ್ದ ಪ್ರವೀಣ್ ಎನ್ನುವ ಯುವಕನೊಬ್ಬ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹೌದು ಆನ್ಲೈನ್ ಗೇಮ್ ಹುಚ್ಚಿಗೆ ಪ್ರವೀಣ್ ಕಾಲೇಜಿಗೂ ಹೋಗುತ್ತಿರಲಿಲ್ಲ. ಆನ್ಲೈನ್ ಗೇಮ್ ಆಡಲು ಪ್ರವೀಣ್ ಸಾಲ ಕೂಡ ಮಾಡಿಕೊಂಡಿದ್ದ. ಇತ್ತೀಚಿಗೆ ಪ್ರವೀಣ್ ಗೆ ಸಾಲಗಾರರ ಕಾಟ ಕೂಡ ಜಾಸ್ತಿ ಆಗಿತ್ತು. ಸಾಲ ನೀಡಿದವರು ಬ್ಲಾಕ್ ಮೇಲ್ ಮಾಡಿದ ಆರೋಪ ಕೂಡ ಕೇಳಿಬಂದಿದೆ.ಆನ್ಲೈನ್ ಗೇಮ್ ನಿಂದ ಗೆದ್ದ ಹಣವನ್ನು ತೆಗೆದುಕೊಳ್ಳುತ್ತಿದ್ದರಂತೆ. ಇದೇ ಕಾರಣಕ್ಕೆ ಬೇಸತ್ತು ಯುವಕ ಪ್ರವೀಣ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತಂತೆ ಮೂರು ದಿನದ ಹಿಂದೆ ಕೆ.ಆರ್.ಪುರಂ ಠಾಣೆಯಲ್ಲಿ ಈ ಕುರಿತು ಎಫ್ಐಆರ್ ದಾಖಲಾಗಿತ್ತು.
ನವದೆಹಲಿ : ದೆಹಲಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ಭೀಕರವಾದಂತಹ ಕೊಲೆ ನಡೆದಿದ್ದು, ಒಂದೇ ಕುಟುಂಬದ ಮೂವರನ್ನು ಚೂರಿಯಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ದೆಹಲಿಯ ನೆಬ್ ಸರಾಯ್ನಲ್ಲಿ ನಡೆದಿದೆ. ಕೊಲೆಯಾದವರನ್ನು ರಾಜೇಶ್ (53), ಅವರ ಪತ್ನಿ ಕೋಮಲ್ (47) ಮತ್ತು ಅವರ ಮಗಳು ಕವಿತಾ (23) ಎಂದು ಗುರುತಿಸಲಾಗಿದೆ. ಇನ್ನು ಮಗ ಬೆಳಗ್ಗೆ 5 ಗಂಟೆ ಸುಮಾರಿಗೆ ಜಾಗಿಂಗ್ಗೆಂದು ಹೊರಗೆ ಹೋಗಿದ್ದ ಮನೆಗೆ ಹಿಂದಿರುಗಿದಾಗ ಹೆತ್ತವರು ಹಾಗೂ ಸಹೋದರಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾನೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ತಕ್ಷಣವೇ ಪೊಲೀಸರು ದೌಡಾಯಿಸಿ ತನಿಖೆ ಆರಂಭಿಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪರಿಶೀಲನೆ ನಡೆಸಿದರು. ಈ ವೇಳೆ ಮನೆಯಲ್ಲಿ ಇರುವಂತಹ ಯಾವುದೇ ವಸ್ತು ಕಳುವಾಗಿಲ್ಲ ಎಂಬುದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ.ಇಂದು ತಂದೆ-ತಾಯಿಯ ಮದುವೆ ವಾರ್ಷಿಕೋತ್ಸವವಿತ್ತು ಎಲ್ಲರೂ ಸಂತೋಷದಿಂದಿದ್ದರು ಎಂದು ಮಗ ಹೇಳಿದ್ದಾನೆ. ಮದುವೆಯ ವಾರ್ಷಿಕೋತ್ಸವ ಕೊಲೆ ನಡೆದಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಬೆಂಗಳೂರು : ಖಾಲಿ ನಿವೇಶನ ಒಂದಕ್ಕೆ ಇ ಖಾತಾ ಮಾಡಿಸಿಕೊಡಲು ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಒಬ್ಬ ವ್ಯಕ್ತಿಯ ಬಳಿ 13,000 ಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ. 13,000 ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರಿನ ಯಲಹಂಕ ತಾಲೂಕಿನ ಹೆಸರುಗಟ್ಟ ಹೋಬಳಿಯ ಶಿವಕೋಟಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ. ಹೌದು ಯಲಹಂಕ ತಾಲ್ಲೂಕಿನ ಹೆಸರಘಟ್ಟ ಹೋಬಳಿಯ ಶಿವಕೋಟೆ ಗ್ರಾಪಂ ಬಿಲ್ ಕಲೆಕ್ಟರ್ ಪ್ರದೀಪ್ ಅವರನ್ನು ಲೋಕಾಯುಕ್ತ ಪೊಲೀಸರು ಇದೀಗೇ ಅರೆಸ್ಟ್ ಮಾಡಿದ್ದಾರೆ. ಶಿವಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಕ್ಷಾ.ವಿ ರವರ ತಂದೆಯವರ ಹೆಸರಿನಲ್ಲಿ ಖಾಲಿ ನಿವೇಶನವಿದ್ದು, ನಿವೇಶನಕ್ಕೆ ಈ-ಖಾತಾ ಮತ್ತು ಮ್ಯೂಟೇಷನ್ ವರ್ಗಾವಣೆ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದರು. ಕೆಲಸವನ್ನು ಮಾಡಿಕೊಡಲು ಶಿವಕೋಟಿ ಗ್ರಾಮ ಪಂಚಾಯ್ತಿಯ ಬಿಲ್ ಕಲಕ್ಟರ್ ಆದ ಪ್ರದೀಪ್ ರವರು 13 ಸಾವಿರ ರೂಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು, ಲಂಚದ ಹಣವನ್ನು ಕೊಡುವಾಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ…