Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಅಂಚೆ ಕಚೇರಿಯ ಹಣಕಾಸು ವಹಿವಾಟುಗಳಿಗೆ ಇನ್ಮುಂದೆ ‘ಪಾನ್ ಕಾರ್ಡ್’ ಕಡ್ಡಾಯ : ಕೇಂದ್ರ ಸರ್ಕಾರ ಆದೇಶ

07/05/2026 7:33 AM

BIG NEWS : ರಾಜ್ಯದ ಪ್ರವಾಸಿ ತಾಣಗಳಲ್ಲಿ ಮಕ್ಕಳ ಸುರಕ್ಷತೆಗೆ ಈ ನಿಯಮಗಳ ಪಾಲನೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

07/05/2026 7:23 AM

ಕಾರ್ಮಿಕರಿಗೆ ಕೇಂದ್ರದ ‘ಆರೋಗ್ಯ’ ಭಾಗ್ಯ: ಹೊಸ ಲೇಬರ್ ಕೋಡ್ ಅಡಿ ಉಚಿತ ವಾರ್ಷಿಕ ತಪಾಸಣೆ; 40 ದಾಟಿದವರಿಗೆ ಸಿಗಲಿದೆ ಈ ಸೌಲಭ್ಯ!

07/05/2026 7:16 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಪ್ರವಾಸಿ ತಾಣಗಳಲ್ಲಿ ಮಕ್ಕಳ ಸುರಕ್ಷತೆಗೆ ಈ ನಿಯಮಗಳ ಪಾಲನೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ
KARNATAKA

BIG NEWS : ರಾಜ್ಯದ ಪ್ರವಾಸಿ ತಾಣಗಳಲ್ಲಿ ಮಕ್ಕಳ ಸುರಕ್ಷತೆಗೆ ಈ ನಿಯಮಗಳ ಪಾಲನೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

By kannadanewsnow5707/05/2026 7:23 AM

ಬೆಂಗಳೂರು: ರಾಜ್ಯದ ಪ್ರವಾಸಿ ತಾಣಗಳಲ್ಲಿ ಶಾಲಾ ಮಕ್ಕಳು ಹಾಗೂ ಪ್ರವಾಸಿ ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯು ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಶಿಫಾರಸಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

ಪ್ರವಾಸಿ ತಾಣಗಳಲ್ಲಿ ಮಕ್ಕಳ ರಕ್ಷಣೆಗಾಗಿ ಸಂಸ್ಥೆಯು ಪ್ರಮುಖ 12 ಅಂಶಗಳ ಮಾರ್ಗಸೂಚಿಯನ್ನು ಪಾಲಿಸಲು ಸೂಚಿಸಿದೆ. ಅವುಗಳ ವಿವರ ಇಲ್ಲಿದೆ:

ಪ್ರಮುಖ ಮಾರ್ಗಸೂಚಿಗಳು:

ಹೆಲ್ಪ್‌ ಲೈನ್ ಸಂಖ್ಯೆ: ಎಲ್ಲಾ ಪ್ರವಾಸಿ ತಾಣಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಅನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು.

ಎಚ್ಚರಿಕೆ ಫಲಕಗಳು: ಅಪಾಯಕಾರಿ ಪ್ರದೇಶಗಳಲ್ಲಿ ಸ್ಪಷ್ಟವಾದ ಎಚ್ಚರಿಕೆ ಮತ್ತು ಸೂಚನಾ ಫಲಕಗಳನ್ನು ಅಳವಡಿಸಬೇಕು.

ಸಿಬ್ಬಂದಿಗೆ ತರಬೇತಿ: ಪ್ರವಾಸೋದ್ಯಮ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗೆ ಮಕ್ಕಳ ಹಕ್ಕುಗಳ ಬಗ್ಗೆ ವಿಶೇಷ ತರಬೇತಿ ನೀಡಲಾಗುವುದು.

ಸುರಕ್ಷತಾ ವಲಯ: ಬೀಚ್ ಮತ್ತು ಜಲಪಾತಗಳ ಬಳಿ ಮಕ್ಕಳಿಗಾಗಿ ಪ್ರತ್ಯೇಕ ಸುರಕ್ಷತಾ ವಲಯಗಳನ್ನು ಗುರುತಿಸಬೇಕು.

ನಿರ್ಬಂಧಗಳು: ಪ್ರವಾಸಿ ತಾಣಗಳಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಲ್ಲದೆ, 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು, ಬೀಡಿ, ಸಿಗರೇಟ್ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ತಡೆಗಟ್ಟಬೇಕು.

ದೂರು ಮತ್ತು ರಕ್ಷಣೆ: ಲೈಂಗಿಕ ದೌರ್ಜನ್ಯ ತಡೆಗೆ ಕ್ರಮ, ದೂರು ನೀಡಲು ರಹಸ್ಯ ವ್ಯವಸ್ಥೆ ಹಾಗೂ ‘ಚೈಲ್ಡ್ ಸೇಫ್ಟಿ ರೆಸ್ಪಾನ್ಸ್’ ತಂಡಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.

ಸುರಕ್ಷತಾ ಆಡಿಟ್: ಕಾಲಕಾಲಕ್ಕೆ ಮಕ್ಕಳ ಸುರಕ್ಷತೆಯ ಬಗ್ಗೆ ಆಡಿಟ್ (ತಪಾಸಣೆ) ನಡೆಸಲು ಸೂಚಿಸಲಾಗಿದೆ.

ನೋಡಲ್ ಅಧಿಕಾರಿಗಳ ನೇಮಕ:

ಈ ಮಾರ್ಗಸೂಚಿಗಳ ಅನುಷ್ಠಾನಕ್ಕಾಗಿ ಜಂಗಲ್ ಲಾಡ್ಜಸ್ ಸಂಸ್ಥೆಯು ಪ್ರತ್ಯೇಕ ನೋಡಲ್ ಅಧಿಕಾರಿಗಳನ್ನು ನೇಮಿಸಿದೆ.

ಸಿಬ್ಬಂದಿ ತರಬೇತಿಗೆ ಸಂಬಂಧಿಸಿದಂತೆ ನಿರ್ದೇಶಕರು (ಆಪರೇಷನ್ಸ್) ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ.

ಮಕ್ಕಳ ಸುರಕ್ಷತಾ ಆಡಿಟ್ ಜವಾಬ್ದಾರಿಯನ್ನು ಉಪ ಪ್ರಧಾನ ವ್ಯವಸ್ಥಾಪಕರಾದ ಕು. ಸಲ್ಮಾ ನಹೀದ್ ಮತ್ತು ಮುಖ್ಯ ನಿಸರ್ಗತಜ್ಞರಾದ ಶ್ರೀ ಸಿ. ಅನಿಕೇತನ್ ಅವರಿಗೆ ವಹಿಸಲಾಗಿದೆ.

ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕೇಂದ್ರ ಕಚೇರಿಗೆ ವರದಿ ನೀಡುವಂತೆ ಎಲ್ಲಾ ಘಟಕಗಳ ವ್ಯವಸ್ಥಾಪಕರಿಗೆ ವ್ಯವಸ್ಥಾಪಕ ನಿರ್ದೇಶಕರು ಸೂಚನೆ ನೀಡಿದ್ದಾರೆ.

BIG NEWS: Compliance with these rules is mandatory for the safety of children at tourist destinations in the state: Important order from the government
Share. Facebook Twitter LinkedIn WhatsApp Email

Related Posts

BIG NEWS : ಅಂಚೆ ಕಚೇರಿಯ ಹಣಕಾಸು ವಹಿವಾಟುಗಳಿಗೆ ಇನ್ಮುಂದೆ ‘ಪಾನ್ ಕಾರ್ಡ್’ ಕಡ್ಡಾಯ : ಕೇಂದ್ರ ಸರ್ಕಾರ ಆದೇಶ

07/05/2026 7:33 AM1 Min Read

ALERT : ರಾಜ್ಯಾದ್ಯಂತ ಬಿಸಿಲಿನ ತಾಪಮಾನ ಹೆಚ್ಚಳ : ಸಾರ್ವಜನಿಕರು ತಪ್ಪದೇ ಈ ನಿಯಮಗಳನ್ನು ಪಾಲಿಸಿ

07/05/2026 7:11 AM2 Mins Read

ಬೆಂಗಳೂರಲ್ಲಿ ಅಕ್ರಮ ಗೋವು ಸಾಗಣೆ / ಹತ್ಯೆ ಮಾಡಿದರೆ 7 ವರ್ಷ ಜೈಲು, 10 ಲಕ್ಷ ರೂ. ದಂಡ ಫಿಕ್ಸ್.!

07/05/2026 7:00 AM2 Mins Read
Recent News

BIG NEWS : ಅಂಚೆ ಕಚೇರಿಯ ಹಣಕಾಸು ವಹಿವಾಟುಗಳಿಗೆ ಇನ್ಮುಂದೆ ‘ಪಾನ್ ಕಾರ್ಡ್’ ಕಡ್ಡಾಯ : ಕೇಂದ್ರ ಸರ್ಕಾರ ಆದೇಶ

07/05/2026 7:33 AM

BIG NEWS : ರಾಜ್ಯದ ಪ್ರವಾಸಿ ತಾಣಗಳಲ್ಲಿ ಮಕ್ಕಳ ಸುರಕ್ಷತೆಗೆ ಈ ನಿಯಮಗಳ ಪಾಲನೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

07/05/2026 7:23 AM

ಕಾರ್ಮಿಕರಿಗೆ ಕೇಂದ್ರದ ‘ಆರೋಗ್ಯ’ ಭಾಗ್ಯ: ಹೊಸ ಲೇಬರ್ ಕೋಡ್ ಅಡಿ ಉಚಿತ ವಾರ್ಷಿಕ ತಪಾಸಣೆ; 40 ದಾಟಿದವರಿಗೆ ಸಿಗಲಿದೆ ಈ ಸೌಲಭ್ಯ!

07/05/2026 7:16 AM

ALERT : ರಾಜ್ಯಾದ್ಯಂತ ಬಿಸಿಲಿನ ತಾಪಮಾನ ಹೆಚ್ಚಳ : ಸಾರ್ವಜನಿಕರು ತಪ್ಪದೇ ಈ ನಿಯಮಗಳನ್ನು ಪಾಲಿಸಿ

07/05/2026 7:11 AM
State News
KARNATAKA

BIG NEWS : ಅಂಚೆ ಕಚೇರಿಯ ಹಣಕಾಸು ವಹಿವಾಟುಗಳಿಗೆ ಇನ್ಮುಂದೆ ‘ಪಾನ್ ಕಾರ್ಡ್’ ಕಡ್ಡಾಯ : ಕೇಂದ್ರ ಸರ್ಕಾರ ಆದೇಶ

By kannadanewsnow5707/05/2026 7:33 AM KARNATAKA 1 Min Read

ನವದೆಹಲಿ: ದೇಶಾದ್ಯಂತ ಇರುವ ಅಂಚೆ ಕಚೇರಿಗಳಲ್ಲಿ (Post Offices) ಉಳಿತಾಯ ಖಾತೆ ಹಾಗೂ ಹೂಡಿಕೆ ಹೊಂದಿರುವ ಗ್ರಾಹಕರಿಗೆ ಕೇಂದ್ರ ಸರ್ಕಾರ…

BIG NEWS : ರಾಜ್ಯದ ಪ್ರವಾಸಿ ತಾಣಗಳಲ್ಲಿ ಮಕ್ಕಳ ಸುರಕ್ಷತೆಗೆ ಈ ನಿಯಮಗಳ ಪಾಲನೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

07/05/2026 7:23 AM

ALERT : ರಾಜ್ಯಾದ್ಯಂತ ಬಿಸಿಲಿನ ತಾಪಮಾನ ಹೆಚ್ಚಳ : ಸಾರ್ವಜನಿಕರು ತಪ್ಪದೇ ಈ ನಿಯಮಗಳನ್ನು ಪಾಲಿಸಿ

07/05/2026 7:11 AM

ಬೆಂಗಳೂರಲ್ಲಿ ಅಕ್ರಮ ಗೋವು ಸಾಗಣೆ / ಹತ್ಯೆ ಮಾಡಿದರೆ 7 ವರ್ಷ ಜೈಲು, 10 ಲಕ್ಷ ರೂ. ದಂಡ ಫಿಕ್ಸ್.!

07/05/2026 7:00 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.