Subscribe to Updates
Get the latest creative news from FooBar about art, design and business.
Author: kannadanewsnow05
ಉತ್ತರಪ್ರದೇಶ : ಆನ್ಲೈನ್ ಗೇಮ್ ಗೀಳಿಗೆ ಮೂವರು ಬಾಲಕಿಯರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಒಬ್ಬ ಸಹೋದರಿಯನ್ನು ಉಳಿಸಲು ಹೋಗಿ ಇಬ್ಬರು ಸಹೋದರಿಯರು ಬಲಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಅರುಣ್ ಕುಮಾರ್ ಎಂಬಾತ ಸ್ಪೋಟಕವಾದ ಸಂಗತಿ ಬಿಚ್ಚಿಟ್ಟಿದ್ದಾರೆ. ಹೌದು ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ ಆನ್ಲೈನ್ ಗೇಮ್ ಗಿಳಿಗೆ ಮೂವರು ಬಾಲಕಿಯರು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಆದರೆ ಇದೀಗ ಈ ಒಂದು ಪ್ರಕರಣಕ್ಕೆ ಪ್ರತ್ಯಕ್ಷದರ್ಶಿ ಹೇಳಿಕೆ ನೀಡಿದ್ದು ಒಬ್ಬ ಸಹೋದರಿಯನ್ನು ಉಳಿಸಲು ಹೋಗಿ ಮತ್ತಿಬ್ಬರು ಬಲಿಯಾಗಿದ್ದಾರೆ ಎಂದು ಅರುಣ್ ಕುಮಾರ್ ತಿಳಿಸಿದ್ದಾರೆ. ಪ್ರತ್ಯಕ್ಷ ದರ್ಶಿ ಅರುಣ್ ಕುಮಾರ್ ಅವರು ಹೇಳಿರುವ ಪ್ರಕಾರ ರಾತ್ರಿ 2ರ ಸುಮಾರಿಗೆ ಮನೆಯಲ್ಲಿ ಲೈಟ್ ಹಾಕಿದ್ದರು ನಾನು ಮಲಗುವ ಮುನ್ನ ಹೊರಗಡೆ ಬಂದು ಗಮನಿಸಿದೆ. ಬಾಲಕಿ ರೈಲಿಂಗ್ ಮೇಲೆ ಕುಳಿತು ಬೀಳಲು ಯತ್ನಿಸುತ್ತಿದ್ದಳು. ಆದರೆ ಮತ್ತೊಬ್ಬರು ಆಕೆಯನ್ನು ಹಿಂದಕ್ಕೆ ಎಳೆಯಲು ಯತ್ನಿಸುತ್ತಿದ್ದರು. ನಾನು ನನ್ನ ಪತ್ನಿ ಕರೆದು ಏನಾಗುತ್ತಿದೆ ಎಂದು ತೋರಿಸಿದೆ. ಸ್ಪಷ್ಟವಾಗಿ ಕಾಣಿಸದೆ ಇದಿದ್ದರಿಂದ ದಂಪತಿ…
ಬೆಳಗಾವಿ : ಸಿಗರೇಟ್ ಹಣ ಕೇಳಿದ್ದಕ್ಕೆ ಪಾನ್ ಶಾಪ್ ಮಾಲೀಕನ ಭೀಕರ ಕೊಲೆಯಾಗಿದೆ. ಬೆಳಗಾವಿ ತಾಲೂಕಿನ ಘೋಡಕೆನಟ್ಟಿ ಗ್ರಾಮದಲ್ಲಿ ಕೊಲೆ ನಡೆದಿದ್ದು, ಪಾನ್ ಶಾಪ್ ಮಾಲೀಕ ಯಲ್ಲಪ್ಪ ನಾಯಕ್ (48) ಭೀಕರವಾಗಿ ಕೊಲೆಯಾಗಿದ್ದಾರೆ. ಎರಡು ಸಿಗರೇಟ್ ಮತ್ತು ನೀರಿನ ಬಾಟಲಿ ತೆಗೆದುಕೊಂಡಿದ್ದ ನಾಲ್ವರು, ಹಣ ಕೊಡದೆ ಹೋಗುತ್ತಿದ್ದರು. ಈ ವೇಳೆ ಪಾನ್ ಶಾಪ್ ಮಾಲೀಕ ಯಲ್ಲಪ್ಪ ನಾಯಕ್ ದುಡ್ಡು ಯಾಕೆ ಕೊಡಲ್ಲ ದುಡ್ಡು ಕೊಡಿ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ನಾಲ್ವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಯಲ್ಲಪ್ಪ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದಾರೆ. ಮನೆ ಯಜಮಾನನನ್ನು ಕಳೆದುಕೊಂಡು ಕುಟುಂಬದ ಸದಸ್ಯರ ಆಕ್ರಂದನ ಇದೀಗ ಮುಗಿಲುಮುಟ್ಟಿದ್ದು, ಘಟನೆ ಸಂಬಂಧ ಪ್ರಜ್ವಲ್ ಪಾಟೀಲ್, ನಿಖಿಲ್ ಚೌಗಲೆ, ವಿವೇಕ ಚೌಗಲೆ ಹಾಗೂ ಶ್ರೀಧರ್ ಪಾಟೀಲ್ ಯನ್ನು ಕಾಕತಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಬೆಂಗಳೂರು : ಸಾಕು ನಾಯಿಗಳ ಕಾರಣಕ್ಕೆ ಪ್ರಕರಣಗಳು ಕೋರ್ಟ್ ಮೆಟ್ಟಿಲು ಏರುತ್ತಿದ್ದು ಸಾಕು ನಾಯಿಗಳನ್ನು ನಿಯಂತ್ರಿಸದ ಮಾಲಿಕರಿಂದಾಗಿ ಕೇಸುಗಳು ಹೆಚ್ಚುತ್ತಿವೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ನಾಗ ಪ್ರಸನ್ನ ಅವರಿದ್ದ ಪೀಠ ಅಸಮಾಧಾನ ಹೊರಹಾಕಿದೆ. ಸಾಕು ನಾಯಿ ಕರೆದು ಇದು ಬೇರೆ ಮನೆಯ ಮುಂದೆ ಮಲ-ಮೂತ್ರ ವಿಸರ್ಜನೆ ಪ್ರಶ್ನಿಸಿದ್ದ ಮನೆಯ ಮಾಲೀಕ ಸಾಕು ನಾಯಿ ಮಾಲೀಕರ ನಡುವೆ ಗಲಾಟೆ ಆಗಿದೆ. ದೂರು ಪ್ರತಿಧೂರು ದಾಖಲಾಗಿ ಅಮೃತಹಳ್ಳಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ ನಾಯಿ ಮಾಲಿಕ ದಾಖಲಿಸಿದ ಎಫ್ಐಆರ್ ಗೆ ಹೈಕೋರ್ಟ್ ಇದೀಗ ತಡೆಯಾಜ್ಞೆ ನೀಡಿದೆ.
ಶಿವಮೊಗ್ಗ : ನಿನ್ನೆ ಜಿಲ್ಲೆಯ ಭದ್ರಾವತಿ ತಾಲ್ಲೂಕು ಕಚೇರಿಯ ಮಾನ್ಯ ತಹಶೀಲ್ದಾರ್ ಪರಸಪ್ಪ ವಿರುದ್ಧ ಮಾನಸಿಕ ಕಿರುಕುಳ ಆರೋಪಿಸಿ, ಡೆತ್ ನೋಟ್ ಬರೆದಿಟ್ಟು ವಾಟ್ಸಪ್ ಮೂಲಕ ಸಂದೇಶ ಕಳುಹಿಸಿ ನದಿಗೆ ಹಾರಿದ್ದ ಘಟನೆ ಇಂದು ಭದ್ರಾವತಿ ತಾಲ್ಲೂಕಿನಲ್ಲಿ ಆತಂಕ ಮೂಡಿಸಿದೆ. ಅದೃಷ್ಟವಶಾತ್, ಸ್ಥಳೀಯ ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಆ ವ್ಯಕ್ತಿಯ ಜೀವ ಉಳಿಯಿತು. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಅಜ್ಜಿಹಳ್ಳಿ ಗ್ರಾಮದ ನಿವಾಸಿ ಆರ್.ಜಿ. ಅಭಿಷೇಕ್ (ಪುತ್ರ: ಆರ್.ಎಂ. ಗಂಗಾಧರಪ್ಪ) ಅವರು ಈ ಗಂಭೀರ ಹೆಜ್ಜೆ ಇಟ್ಟಿದ್ದು ಭದ್ರಾವತಿ ತಹಶೀಲ್ದಾರ್ ಅವರಿಂದ ನಿರಂತರ ಮಾನಸಿಕ ಒತ್ತಡ ಹಾಗೂ ಕಿರುಕುಳ ಎದುರಿಸುತ್ತಿದ್ದೇನೆ ಎಂದು ಹೇಳಿಕೊಂಡು, ಡೆತ್ ನೋಟ್ ಬರೆದು ವಾಟ್ಸಪ್‌ನಲ್ಲಿ ಸಂದೇಶ ಕಳುಹಿಸಿದ್ದಾಗಿ ತಿಳಿದುಬಂದಿದೆ. ಅಭಿಷೇಕ್ ತಮ್ಮ ನೋಟ್‌ನಲ್ಲಿ, 01-02-2026, 02-02-2026 ಹಾಗೂ 03-02-2026ರಂದು ಇ-ಪೌತಿ ಖಾತೆ ಪ್ರಕ್ರಿಯೆ ಹಾಗೂ ಆಗರದಹಳ್ಳಿ ಗ್ರಾಮದ ಸರ್ವೆ ನಂ.56, 49 ಮತ್ತು 50 ಸಂಬಂಧಿಸಿದ ವಿಚಾರಗಳಲ್ಲಿ ಅತಿಯಾದ ಒತ್ತಡ ಹೇರಲಾಗಿದೆ ಎಂದು ಆರೋಪಿಸಿದ್ದಾರೆ. ಪಿಟಿಸಿಎಲ್ ಕಾಯ್ದೆಯಡಿ ತಡಸ…
ಬೆಂಗಳೂರು : ಬೆಂಗಳೂರಲ್ಲಿ ಹೆದ್ದಾರಿ ಕಾಮಗಾರಿಯ ವೇಳೆ ರಸ್ತೆ ಕುಸಿದು ಬಿದ್ದು ಫುಲ್ ಟ್ರಾಫಿಕ್ ಜಾಮ್ ಆಗಿರುವ ಘಟನೆ ಬೆಂಗಳೂರು ಹೊಸೂರು ಮುಖ್ಯ ರಸ್ತೆಯಲ್ಲಿ ನಡೆದಿದ್ದು, ಈ ವೇಳೆ ತೀವ್ರವಾದ ಸಂಚಾರ ದಟ್ಟಣೆ ಉಂಟಾಯಿತು. ಸರ್ವಿಸ್ ರಸ್ತೆ ಕಾಮಗಾರಿ ವೇಳೆ ರಸ್ತೆ ಕುಸಿದು ಬಿದ್ದು ಅವಘಡ ಸಂಭವಿಸಿದೆ. ಟ್ರಾಫಿಕ್ ನಲ್ಲಿ ಸಿಲುಕಿ ಅಂಬುಲೆನ್ಸ್ ಮತ್ತು ಬಸ್ ಚಾಲಕರು ಪರದಾಟ ನಡೆಸುತ್ತಿದ್ದಾರೆ. ಹೆದ್ದಾರಿ ಪ್ರಾದಿಕಾರ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಇದೀಗ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಂದಗತಿ ಮತ್ತು ಅವೈಜ್ಞಾನಿಕ ಕಾಮಗಾರಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
BREAKING : ವಂಟಮೂರಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಕೇಸ್ : 12 ಆರೋಪಿಗಳಿಗೆ 5 ವರ್ಷ ಶಿಕ್ಷೆ ವಿಧಿಸಿದ ಕೋರ್ಟ್
ಬೆಳಗಾವಿ : ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಮಹಿಳೆಯನ್ನು ವಿವಸ್ತ್ರಗೊಳಿಸಿ, ಆಕೆಯ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಪ್ರಕರಣದ 12 ಆರೋಪಿಗಳು ತಪ್ಪಿತಸ್ಥರು ಅಂತಾ ತೀರ್ಪು ಪ್ರಕಟವಾಗಿತ್ತು. ಇದೀಗ ಬೆಳಗಾವಿ ಹೆಚ್ಚುವರಿ 10ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 12 ಅಪರಾಧಿಗಳಿಗೆ 5 ವರ್ಷ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಪ್ರತಿ ಶಿಕ್ಷೆಗು ಒಂದೊಂದು ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಲಾಗಿದ್ದು, ಐದು ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಮೂರ್ತಿ ಎಚ್.ಎಸ್ ಮಂಜುನಾಥ್ ಆದೇಶ ಹೊರಡಿಸಿದ್ದಾರೆ. ದೋಷಿಗಳಾದ ಬಸಪ್ಪ ನಾಯಕ, ರಾಜು ನಾಯಕ, ಕೆಂಪಣ್ಣ ನಾಯಕ, ಪಾರ್ವತಿ ನಾಯಕ, ಯಲ್ಲವ ನಾಯಕ, ಲಕ್ಕಪ್ಪ ನಾಯಕ, ಗಂಗವ್ವ, ಸಂಗೀತ ಹೆಗ್ಗನಾಯಕ, ಸಂತೋಷ್ ನಾಯಕ, ಶೋಭಾ ನಾಯಕ, ಲಕ್ಕವ್ವ ನಾಯಕ ಹಾಗೂ ಶಿವಪ್ಪ ವನ್ನೂರಿಗೆ 5 ವರ್ಷ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ. ಹೊಸ ವಂಟಮೂರಿಯಲ್ಲಿ 2023 ಡಿಸೆಂಬರ್ 11 ರಂದು ಈ ಅಮಾನವೀಯ ಘಟನೆ…
ಬೆಂಗಳೂರು : ಕರ್ನಾಟಕದಲ್ಲಿ ನಿರಂತರವಾಗಿ ನಡೆಯುತ್ತಿರುವ ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತವಾಗಿ ತಡೆಯೊಡ್ಡಿ, ಜನರ ಜೇವ ರಕ್ಷಣೆ ಮಾಡುವ ಬಗ್ಗೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವರಾದ ಭೂಪೇಂದ್ರ ಯಾದವ್ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದರು. ಈ ಕುರಿತು ಟ್ವೀಟ್ ನಲ್ಲಿ ಮಾಹಿತಿ ಹಂಚಿಕೊಂಡಿರುವ HD ಕುಮಾರಸ್ವಾಮಿ, ನನ್ನ ಸಂಪುಟ ಸಹೋದ್ಯೋಗಿ, ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವರಾದ ಶ್ರೀ @byadavbjp ಅವರನ್ನು ಭೇಟಿಯಾಗಿ ಅಂತರ ಸಚಿವಾಲಯ ಸಂಬಂಧಿತ ವಿಷಯಗಳು ಹಾಗೂ ಅಭಿವೃದ್ಧಿ ಕುರಿತಂತೆ ರಚನಾತ್ಮಕ ಚರ್ಚೆ ನಡೆಸಲಾಯಿತು. ಬಹು ಮುಖ್ಯವಾಗಿ ಕರ್ನಾಟಕದಲ್ಲಿ ಮಾನವ- ವನ್ಯಜೀವಿ ಸಂಘರ್ಷ, ನಿರಂತರವಾಗಿ ನಡೆಯುತ್ತಿರುವ ಆನೆ ದಾಳಿಯನ್ನು ತಡೆಗಟ್ಟುವ ಕ್ರಮಗಳ ಕುರಿತಂತೆ ಮಾತುಕತೆ ನಡೆಸಲಾಯಿತು. ಮಾನವ-ವನ್ಯಜೀವಿ ಸಂಘರ್ಷವನ್ನು ಶಾಶ್ವತವಾಗಿ ತಡೆಗಟ್ಟುವ ನಿಟ್ಟಿನಲ್ಲಿ ತ್ವರಿತ ಕ್ರಮ ವಹಿಸುವ ಬಗ್ಗೆ ಅರಣ್ಯ ಸಚಿವರು ಭರವಸೆ ನೀಡಿದರು.…
ಬೆಂಗಳೂರು : ಪೋಷಕರು ಬೈದಿದ್ದಕ್ಕೆ ಬೆಂಗಳೂರಿನ ಅಕ್ಕ-ತಮ್ಮಂದಿರು ಮನೆ ಬಿಟ್ಟು ಹೋಗಿ ಊರೂರು ಸುತ್ತಿರುವ ಅಘಾತಕಾರಿ ಘಟನೆ ಬೆಂಗಳೂರಲ್ಲಿ ನಡೆದಿದೆ. 13 ವರ್ಷದ ಬಾಲಕಿ ಮಹಿಳೆಯರ ಉಚಿತ ಬಸ್ ಯೋಜನೆ ಬಳಸಿಕೊಂಡು ತಮ್ಮನೊಂದಿಗೆ ರಾಜ್ಯದ ಹಲವೆಡೆ ಸುತ್ತಾಡಿದ್ದಾಳೆ. ಮಕ್ಕಳು ಕಾಣೆಯಾಗಿದ್ದಾರೆ ಎಂದು ಪೋಷಕರು ದೂರು ನೀಡಿದ ನಂತರ ಪೊಲೀಸರು ಶೋಧ ಕಾರ್ಯ ನಡೆಸಿದ್ದು, ಸಿಸಿಟಿವಿ ಮತ್ತು ಸಾರ್ವಜನಿಕರ ಮಾಹಿತಿ ಆಧರಿಸಿ ಮಕ್ಕಳನ್ನು ಪತ್ತೆ ಹಚ್ಚಿ ಪೋಷಕರ ಮಡಿಲಿಗೆ ಸೇರಿಸಿದ್ದಾರೆ. 13 ವರ್ಷದ ಬಾಲಕಿ, 9 ವರ್ಷದ ಬಾಲಕನನ್ನು ಪೋಷಕರು ಟ್ಯೂಷನ್‌ಗೆ ಹಾಕಿದ್ದರು. ಆದರೆ ಮಕ್ಕಳು ಟ್ಯೂಷನ್‌ಗೆ ಹೋಗುವುದಿಲ್ಲ ಎಂದು ಹಠ ಹಿಡಿದಿದ್ದರು. ಮಕ್ಕಳ ಹಠ ಮಾಡಿದ್ದಕ್ಕೆ ಸಿಟ್ಟಾದ ಪೋಷಕರು ಅವರಿಗೆ ಬೈದಿದ್ದರು. ಪೋಷಕರು ಬೈದಿದ್ದಕ್ಕೆ ನೊಂದು ಫೆ.1ರ ಮಧ್ಯಾಹ್ನ 3 ಗಂಟೆಗೆ ಮಾರತ್ತಹಳ್ಳಿಯ ಅಶ್ವತ್ಥನಗರದಿಂದ ಅಕ್ಕ ಮತ್ತು ತಮ್ಮ ಮನೆ ಬಿಟ್ಟು ತೆರಳಿದ್ದಾರೆ. ಬಾಲಕಿ ಮನೆಯಿಂದ ತೆರಳುವಾಗ ಆಧಾರ್ ಕಾರ್ಡ್ ಹಿಡಿದುಕೊಂಡಿದ್ದಳು. ಆಧಾರ್ ಕಾರ್ಡ್ ಇರೋದ್ರಿಂದ ಸರ್ಕಾರಿ ಬಸ್ಗಳಲ್ಲಿ ಬಾಲಕಿಗೆ ಉಚಿತವಾಗಿ…
ಉತ್ತರಕನ್ನಡ : ಅನೈತಿಕ ಸಂಬಂಧ ಬಯಲು ಮಾಡಿದ್ದಕ್ಕೆ ಭೀಕರವಾಗಿ ಕೊಲೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ವಸಂತ ನಾಯಕ ಕೊಲೆಗೈದ ನಾಲ್ವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. A1 ಸುಚಿತ್ರ, A2 ಲೋಕನಾಥ್, A3 ಕಮಲಾಕಾರ್ ಭಟ್ ಹಾಗು A4 ಆಕಾಶ್ ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣ ಹಿನ್ನೆಲೆ? ಶಿವಮೊಗ್ಗದ ಖ್ಯಾತ ಜ್ಯೋತಿಷ್ಯ ಆದಂತಹ ಕಮಲಾಕಾರ್ ಭಟ್ ಜೊತೆಗೆ ಸುಚಿತ್ರ ಅನೈತಿಕ ಸಂಬಂಧ ಹೊಂದಿದಳು. ಈ ವಿಚಾರವನ್ನು ಸುಚಿತ್ರ ಹಿರಿಯ ಮಗಳು ತಂದೆ ಮಹೇಶ್ ನಾಯಕಗೆ ಹೇಳಿದ್ದಾಳೆ. ಈ ಕುರಿತು ಮಹೇಶ್ ನಾಯಕ್ ಮಗಳನ್ನ ಕರೆದುಕೊಂಡು ಠಾಣೆಗೆ ದೂರು ನೀಡಿದ್ದಾರೆ. ಈ ವೇಳೆ ವಾಪಸ್ ಮನೆಗೆ ಬಂದಾಗ ಸುಚಿತ್ರ ಅವರ ತಂದೆ ಲೋಕನಾಥ್ ಸೇರಿದಂತೆ ಒಟ್ಟು ನಾಲ್ವರು ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಂತಹ ವಸಂತ ನಾಯಕ್ ಎನ್ನುವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ವಸಂತ ನಾಯಕ್ ಸಾವನ್ನಪ್ಪಿದ್ದಾರೆ. ತಾಯಿಯ ಅನೈತಿಕ ಸಂಬಂಧವನ್ನು ಮಗಳು ಬಯಲು ಮಾಡಿದ್ದಳು. ಜ್ಯೋತಿಷಿ ಕಮಲಾಕರ ಭಟ್…
ಚಿತ್ರದುರ್ಗ : ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಖಾಸಗಿ ಶಾಲಾ ಶಿಕ್ಷಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿರುವ ಘಟನೆ ಚಿತ್ರದುರ್ಗ ತಾಲೂಕಿನ ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಖಾಸಗಿ ಶಾಲೆಯ ಶಿಕ್ಷಕ ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಶಾಲೆಯ 6 ವಿದ್ಯಾರ್ಥಿನಿಯರನ್ನು ಕೋಣೆಗೆ ಕಿರುಕುಳ ನೀಡಿದ್ದಾನೆ ಎನ್ನುವ ಆರೋಪ ಬಂದಿದೆ. ಶಾಲಾ ಆಡಳಿತ ಸಮಿತಿಯಿಂದ ಈ ಕುರಿತು ಭರ್ಮಸಾಗರ ಠಾಣೆಗೆ ದೂರು ನೀಡಲಾಗಿದ್ದು, ಆರೋಪಿ ಶಿಕ್ಷಕ ರಂಗಣ್ಣನನ್ನು ಪೊಲೀಸರು ಇದೀಗ ವಶಕ್ಕೆ ಪಡೆದುಕೊಂಡಿದ್ದಾರೆ.














