Subscribe to Updates
Get the latest creative news from FooBar about art, design and business.
Author: kannadanewsnow05
ರಾಯಚೂರು : ಸರ್ಕಾರಿ ಶಾಲೆಯಲ್ಲಿ ವಿದ್ಯುತ್ ಶಾಕ್ ನಿಂದ ಬಾಲಗೆ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಹೆಚ್ಚುವರಿ ಮುಖ್ಯ ಶಿಕ್ಷಕ ಪರಸಪ್ಪ ಮೈಲಾರಪ್ಪ ಚಲವಾದಿ ಅಮಾನತು ಮಾಡಲಾಗಿದೆ ಕರ್ತವ್ಯ ಲೋಪ ಹಾಗೂ ಬೇಜವಾಬ್ದಾರಿ ತೋರಿದ ಆರೋಪದ ಅಡಿ ಮುಖ್ಯ ಶಿಕ್ಷಕನನ್ನು ಸಸ್ಪೆಂಡ್ ಮಾಡಲಾಗಿದೆ. ಪರಸಪ್ಪ ಮೈಲಾರಪ್ಪನನ್ನು ಅಮಾನತುಗೊಳಿಸಿ ರಾಯಚೂರು ಡಿಡಿಪಿಐ ಕೇಡಿ ಬಡಿಗೇರ್ ಆದೇಶ ಹೊರಡಿಸಿದ್ದಾರೆ ಕುರಕುಂದ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಒಂದು ಘಟನೆ ನಡೆದಿತ್ತು ಅವರ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕುರಕುಂದ ಗ್ರಾಮದ ಶಾಲೆಯಲ್ಲಿ ವಿದ್ಯುತ್ ಶಾಕ್ ನಿಂದ 5 ನೇ ತರಗತಿಯ ತನುಶ್ರೀ ಮೃತಪಟ್ಟಿದ್ದಳು. ಘಟನೆ ಸಂಭಂದ ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬೆಂಗಳೂರು : “ರಾಜ್ಯದಲ್ಲಿ ಉನ್ನತ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳು ಸೇರಿ ಅಂದಾಜು 2 ಸಾವಿರ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡುವುದಾಗಿ” ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು. ವಿಟಿಯು ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ – 186, ಪಾಲಿಟೆಕ್ನಿಕ್‍ನಲ್ಲಿ 941, ಕಾಲೇಜು ಶಿಕ್ಷಣ ಇಲಾಖೆಯಲ್ಲಿ 826, ಯುವಿಸಿಇನಲ್ಲಿ 79 ಸೇರಿದಂತೆ ಅಂದಾಜು 2 ಸಾವಿರ ಹುದ್ದೆಗಳ ಭರ್ತಿ ಮಾಡಲಾಗುವುದು. ಆ ಮೂಲಕ ಉನ್ನತ ಶಿಕ್ಷಣ ಇಲಾಖೆಯಲ್ಲಿರುವ ನೌಕರರ ಕೊರತೆಯನ್ನು ನೀಗಿಸಲಾಗುವುದು ಎಂದರು. ವಿಟಿಯು ಉತ್ತಮ ಕೆಲಸಗಳನ್ನು ಮಾಡುತ್ತಿದೆ. ಇದಕ್ಕಾಗಿ ಏಷ್ಯನ್ ಡೆವಲೆಪ್‍ಮೆಂಟ್ ಬ್ಯಾಂಕ್‍ನಿಂದಾಗಿ ಸೆಂಟರ್ ಆಪ್ ಎಕ್ಸಲೆನ್ಸ್ ಆರಂಭಿಸುತ್ತಿದ್ದೇವೆ. ಇಂದು ಪದವಿ ಪಡೆದ ವಿದ್ಯಾರ್ಥಿಗಳ ಜೀವನ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಎಸ್. ವಿದ್ಯಾಶಂಕರ್ ಅವರು ಮಾತನಾಡಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ತಂತ್ರಜ್ಞಾನ ಅಳವಡಿಕೊಳ್ಳುವಲ್ಲಿ ಮುಂದಿದೆ. ಇದಕ್ಕಾಗಿ ಹಲವು ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಂಡಿದೆ.…
ಬಾಗಲಕೋಟೆ : ಪತ್ನಿಯ ಜೊತೆಗೆ ಸಲುಗೆಯಿಂದ ಇದ್ದಿದ್ದಕ್ಕೆ ಸ್ನೇಹಿತನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಅನೈತಿಕ ಸಂಬಂಧ ಎಂದು ಅನುಮಾನ ಬಂದು ಮಹಿಳೆಯ ಪತಿ ತನ್ನ ಸ್ನೇಹಿತನನ್ನು ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಖಾನಾಪುರ ಎಸ್ ಕೆ ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಸೋಮಶೇಖರ ಎಂದು ತಿಳಿದುಬಂದಿದೆ. ಮಹಿಳೆಯ ಪತಿ ಹಾಗು ಸೋಮಶೇಖರ್ ಸ್ನೇಹಿತರಗಿದ್ದರು. ಇಂದು ಕಂಠಪೂರ್ತಿ ಕುಡಿಸಿ ಕಲ್ಲಿನಿಂದ ತಲೆ ಮತ್ತು ಮುಖ ಜಜ್ಜಿ ಕೊಲೆ ಮಾಡಿದ್ದಾನೆ. ಖಾನಾಪುರ ಎಸ್ಕೆ ಗ್ರಾಮದ ಮಾವಿನ ತೋಟದಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸ್ರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಈ ಕುರಿತು ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದ ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರು : ಬೆಂಗಳೂರಿನಲ್ಲಿ ಒಂದೇ ಹುಡುಗಿಗಾಗಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಬೆಂಗಳೂರಿನ ದೇವಸಂದ್ರದಲ್ಲಿ ಒಂದೇ ಹುಡುಗಿಗೆ ಗಲಾಟೆ ನಡೆದಿದೆ. ಈ ವೇಳೆ ಓರ್ವ ಯುವಕನಿಗೆ ಚಾಕು ಇರಿಯಲಾಗಿದೆ. ನೇಪಾಳ ಮೂಲದ ಯುವತಿಯನ್ನು ಮಾಮು ಮತ್ತು ರೋಷನ್ ಇಬ್ಬರು ಪ್ರೀತಿಸುತ್ತಿದ್ದರು. ಫೆಬ್ರವರಿ 2ರಂದು ದೇವಸಂದ್ರದಲ್ಲಿ ಮಾತನಾಡೋಕೆ ಇಬ್ಬರು ಸೇರಿದ್ದಾರೆ ಎಂಟ್ರಿ ಕೊಟ್ಟಿದ್ದಾರೆ. ಮಾತಿಗೆ ಮಾತು ಬೆಳೆದು ಜಗಳ ನಡೆದು ಜಗಳ ವಿಕೋಪಕ್ಕೆ ತಿರುಗಿ ರೋಷನ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ರೋಷನಗೆ ಚಾಕು ಇರಿಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ರೋಷನಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೆ ಚಿರತೆ ಓಡಾಟ ಕಂಡು ಬಂದಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ ಬೆಂಗಳೂರಿನ ಅಂಜನಾಪುರದ 7ನೇ ಬ್ಲಾಕ್ ರಸ್ತೆಯಲ್ಲಿ ಚಿರತೆ ಓಡಾಡಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೌದು ಬೆಂಗಳೂರಿನಲ್ಲಿ ಮನೆಯ ಮುಂದೆ ಚಿರತೆ ಬಿಂದಾಸ್ ಆಗಿ ಓಡಾಡಿರುವ ದೃಶ್ಯ ಸೆರೆಯಾಗಿದೆ. ಚಿರತೆ ಹೆಜ್ಜೆ ಹಾಕುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಚಿರತೆ ಪ್ರತ್ಯಕ್ಷವಾಗಿದೆ. ತುರಹಳ್ಳಿ ಅರಣ್ಯ ಪ್ರದೇಶದಿಂದ ಚಿರತೆ ಬಂದಿರುವಂತಹ ಶಂಕೆ ವ್ಯಕ್ತವಾಗಿದ್ದು ಜನರು ಹೊರಗಡೆ ಬರಲು ಭಯ ಭೀತರಾಗಿದ್ದಾರೆ.
ಬೆಂಗಳೂರು : ಬೆಂಗಳೂರಿನ ಐತಿಹಾಸಿಕ ದೇವಸ್ಥಾನದಲ್ಲಿ ಚಿನ್ನಾಭರಣ ಕಳ್ಳತನವಾಗಿದೆ. ಬೆಂಗಳೂರಿನ ಧರ್ಮರಾಯಸ್ವಾಮಿ ದೇಗುಲದಲ್ಲಿ ಚಿನ್ನಾಭರಣ ಕಳ್ಳತನವಾಗಿದೆ. ಸುಮಾರು 100ಕ್ಕೂ ಹೆಚ್ಚು ಗ್ರಾಮಗಳನ್ನು ಕದ್ದಿರುವ ಆರೋಪ ಕೇಳಿ ಬರುತ್ತಿದೆ. ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ಧವೇ ಈ ಒಂದು ಗಂಭೀರವಾದ ಆರೋಪ ಕೇಳಿ ಬರುತ್ತಿದೆ. ಬೆಂಗಳೂರು ಕರಗ ನಡೆಯುವಂತಹ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಈ ಕಳ್ಳತನ ನಡೆದಿದೆ. ಈ ಕುರಿತು ಕೆಲವೇ ಕ್ಷಣಗಳಲ್ಲಿ ದೇಗುಲದ ಆಡಳಿತ ಮಂಡಳಿ ಸುದ್ದಿಗೋಷ್ಠಿ ಕೂಡ ನಡೆಸಲಿದೆ.ಆಡಳಿತ ಮಂಡಳಿಯಿಂದ ಕಳ್ಳತನದ ಬಗ್ಗೆ ದಾಖಲೆ ಬಿಡುಗಡೆ ಮಾಡಲಿದೆ. ಕಾಣಿಕೆ ರೂಪದಲ್ಲಿ ಬಂದಿದ್ದ ನೆಕ್ಲೆಸ್ ಬದಲಾವಣೆ ಮಾಡಿದ ಆರೋಪ ಸಹ ಕೇಳಿ ಬಂದಿದೆ. ಧರ್ಮರಾಯಸ್ವಾಮಿ ದೇಗುಲಕ್ಕೆ ಕಾಣಿಕೆ ರೂಪದಲ್ಲಿ ನೆಕ್ಲೆಸ್ ಬಂದಿತ್ತು. ಆ ಒಂದು ನೆಕ್ಲೇಸ್ ತೂಕದಲ್ಲಿ ಬದಲಾವಣೆ ಕಂಡು ಬಂದಿದೆ ಎಂದು ಇಒ ನಾಗರಾಜ್ ಅವರ ಮೇಲೆ ಆರೋಪ ಹೊರಿಸಲಾಗಿದ್ದು, ಈ ಒಂದು ಆರೋಪವನ್ನು ಇದೀಗ ಮಜರಾಯಿ ಇಲಾಖೆ ಇಒ ನಾಗರಾಜ್ ತಳ್ಳಿ ಹಾಕಿದ್ದಾರೆ. ತೂಕದಲ್ಲಿ ಬದಲಾವಣೆ ಆಗಿದೆ ಅನ್ನೋ ಆರೋಪ ಸುಳ್ಳು…
ದಾವಣಗೆರೆ : ಆಸ್ತಿಗಾಗಿ ಕಲಹ ಉಂಟಾಗಿ ತಮ್ಮನೊಬ್ಬ ಅಣ್ಣನನ್ನೇ ಬೀಕರವಾಗಿ ಕೊಲೆ ಮಾಡಿದ್ದಾನೆ. ಮಾರಕಾಸ್ತ್ರಗಳಿಂದ ಕೊಚ್ಚಿ ಸಿ.ಕೆ ನೀಲಪ್ಪ (62) ಎಂಬುವವರನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ದಾವಣಗೆರೆ ತಾಲೂಕಿನ ಮಾಯಕೊಂಡ ಗ್ರಾಮದಲ್ಲಿ ನಡೆದಿದೆ. ಜಮೀನು ಒತ್ತುವರಿ ವಿಚಾರವಾಗಿ ಸಹೋದರರ ನಡುವೆ ಗಲಾಟೆಯಾಗಿದೆ ಜಗಳ ವಿಕೋಪಕ್ಕೆ ತಿರುಗಿ ನೀಲಪ್ಪನನ್ನ ತಮ್ಮ ಚಂದ್ರಪ್ಪ ಕೊಲೆ ಮಾಡಿದ್ದಾನೆ. ಚಂದ್ರಪ್ಪ ಹಾಗೂ ಆತನ ಕುಟುಂಬ ಸದಸ್ಯರಿಂದ ಈ ಒಂದು ಕೊಲೆ ನಡೆದಿದೆ ಎಂದು ಆರೋಪ ಕೇಳಿ ಬಂದಿದೆ. ಕೇವಲ ಚಂದ್ರಪ್ಪನನ್ನು ಮಾತ್ರ ಪೊಲೀಸರು ಆರೋಪಿ ಮಾಡಿದ್ದು, ಚಂದ್ರಪ್ಪ ಕುಟುಂಬ ಸದಸ್ಯರನ್ನೆಲ್ಲಾ ಆರೋಪಿಗಳಾಗಿ ಮಾಡುವಂತೆ ಆಗ್ರಹಿಸಲಾಗಿದೆ ಮಾಯ
ಕಾಸರಗೋಡು : ಕೌಟುಂಬಿಕ ಕಲಹದಿಂದ ತಂದೆ ಒಬ್ಬ ಮಗಳನ್ನೆ ಭೀಕರವಾಗಿ ಕೊಲೆ ಮಾಡಿದ್ದಾನೆ. ಕಾಸರಗೋಡಿನ ಮಂಜೇಶ್ವರದ ತೂಮೀನಾಡಿನಲ್ಲಿ ಒಂದು ಘಟನೆ ಸಂಭವಿಸಿದೆ. 18 ವರ್ಷದ ಮಗಳು ಜುಮ್ಮೈಲ ಕೊಲೆಯಾದ ದುರ್ದೈವಿಯಾಗಿದ್ದು, ಜುಮ್ಮೈಲಾ ತಂದೆ ಉಮ್ಮರ್ ಫಾರೂಕ್ ಕೊಲೆ ಆರೋಪಿಯಾಗಿದ್ದಾನೆ. ಆರೋಪಿ ಫಾರೂಕ್ ಪತ್ನಿಯ ಸಹೋದರಿ ಮನೆಯಲ್ಲಿ ಈ ಒಂದು ಘಟನೆ ನಡೆದಿದ್ದು, ಅದೇ ಮನೆಯಲ್ಲಿ ವಾಸವಿದ್ದ ಫಾರೂಕ್ ಪತ್ನಿ ಹಾಗೂ ಮಗಳು. ಫಾರೂಕ್ ಮತ್ತು ಪತ್ನಿ ತಾಹಿರ ನಡುವೆ ಆಸ್ತಿ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು. ಗಲಾಟೆ ತಾರಕಕ್ಕೆ ಏರಿ ವಿಚ್ಚೆದನದ ಮಾತುಕತೆಯು ನಡೆದಿತ್ತು. ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ಫಾರೂಕ್ ಬೇಡಿಕೆ ಇಟ್ಟಿದ್ದಾನೆ. ಇದೆ ವೇಳೆ ಜಗಳ ಬಿಡಿಸಲು ಜುಮೈಲ ಬಂದಿದ್ದಾಳೆ. ಉಮರ್ ಮತ್ತು ಜುಮೈಲ ಚಿಕ್ಕಪ್ಪ ಶೇಕುಂ ನಡುವೆ ಜಗಳ ಆಗುತ್ತಿದೆ.ಈ ವೇಳೆ ಅಪ್ಪನಿಂದಲೇ ಕತ್ತಿ ಏಟು ತಗುಲಿ ಜುಮೈಲ ಸಾವನಪ್ಪಿದ್ದಾಳೆ. ಆರೋಪಿ ಉಮರ್ ಫಾರೂಕ್ ನನ್ನ ಮಂಜೇಶ್ವರ ಠಾಣೆ ಪೋಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರು : ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬೀದಿನಳಿಗಳ ಹಾವಳಿ ಹೆಚ್ಚಾಗಿದ್ದು, ಇದೀಗ ಬೀದಿ ನಾಯಿಗಳು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ನಲ್ಲಿ ನುಗ್ಗಿದ್ದು, ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಮತ್ತೊಂದು ಭಾರಿ ಅನಾಹುತ ಒಂದು ತಪ್ಪಿದೆ. ಏರ್ಪೋರ್ಟ್ ರನ್ವೇನಲ್ಲಿ ಬೀದಿ ನಾಯಿಗಳು ಏಕಾಏಕಿ ನುಗ್ಗಿವೆ. ರನ್ ವೇ ನಲ್ಲಿ ದಿಕ್ಕಾಪಾಲಾಗಿ ಬೀದಿನಾಯಿಗಳು ಓಡಿವೆ. ಇದರಿಂದ ಸಿಬ್ಬಂದಿಗಳು ಕಕ್ಕಾಬಿಕ್ಕಿ ಯಾಗಿದ್ದಾರೆ. ನಾಯಿಗಳನ್ನು ಓಡಿಸಲು ಹರಸಾಹಸ ಪಟ್ಟಿದ್ದಾರೆ. ರನ್ ವೇ ನಲ್ಲಿ ನಾಯಿಗಳು ಓಡಾಡುತ್ತಿರುವುದರಿಂದ ಯಾವ ವಿಮಾನಗಳು ಲ್ಯಾಂಡ್ ಆಗಿಲ್ಲ ಆದ್ದರಿಂದ ಭಾರಿ ಅನಾಹುತ ತಪ್ಪಿದೆ.
ಈ ಬೇವಿನ ಮರದಲ್ಲಿ ಜಿನುಗುತ್ತಿದೆ, ಸಕ್ಕರೆ ಜೇನುತುಪ್ಪದಂತಹ ಸಿಹಿ ದ್ರಾವಣ : ಚಾಮರಾಜನಗರದಲ್ಲಿ ವಿಸ್ಮಯಕಾರಿ ಮರ ಪತ್ತೆ!
ಚಾಮರಾಜನಗರ : ಚಾಮರಾಜನಗರದಲ್ಲಿ ಬೇವಿನ ಮರ ಒಂದು ವಿಸ್ಮಯಕ್ಕೆ ಕಾರಣವಾಗಿದೆ. ಬೇವಿನ ಮರದಿಂದ ಬಿಳಿ ಬಣ್ಣದ ದ್ರಾವಣ ನಿರಂತರವಾಗಿ ಜಿನುಗುತ್ತಿದೆ. ಬೇವಿನ ಮರದ ಮೂರರಿಂದ ನಾಲ್ಕು ಕಡೆಯಿಂದ ದ್ರಾವಣ ಹರಿಯುತ್ತಿದೆ. ಚಾಮರಾಜನಗರ ಜಿಲ್ಲೆಯ ಕೊರಟ್ಟಿ ಹೊಸೂರು ಗ್ರಾಮದಲ್ಲಿ ಬೇವಿನ ಮರದಲ್ಲಿ ಈ ಒಂದು ವಿಸ್ಮಯ ಕಾರಿ ಘಟನೆ ನಡೆದಿದೆ. ಮರಕಹಿ ಆದರೆ ಆ ಮರದಿಂದ ಬರುತ್ತಿರುವ ದ್ರಾವಣ ಮಾತ್ರ ಸಿಹಿಯಾಗಿದೆ. ಸಕ್ಕರೆ ಅಷ್ಟೇ ಬಿಳಿ ಬಣ್ಣದ ದ್ರಾವಣ ಸಿಹಿಯಾಗಿದೆ ಅಂತ ಗ್ರಾಮಸ್ಥರು ಹೇಳುತ್ತಿದ್ದಾರೆ. ಮರದಿಂದ ಬರುತ್ತಿರುವ ದ್ರಾವಣವನ್ನು ಗ್ರಾಮಸ್ಥರು ಸೇವಿಸಿದ್ದು, ಬರದಿಂದ ಬರುತ್ತಿರುವ ಬಿಳಿ ದ್ರಾವಣ ಸಕ್ಕರೆ ಹಾಗೂ ಜೇನುತುಪ್ಪದ ರುಚಿಯಂತೆ ಇದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.














