Subscribe to Updates
Get the latest creative news from FooBar about art, design and business.
Author: kannadanewsnow05
ಕಾಸರಗೋಡು : ಕೌಟುಂಬಿಕ ಕಲಹದಿಂದ ತಂದೆ ಒಬ್ಬ ಮಗಳನ್ನೆ ಭೀಕರವಾಗಿ ಕೊಲೆ ಮಾಡಿದ್ದಾನೆ. ಕಾಸರಗೋಡಿನ ಮಂಜೇಶ್ವರದ ತೂಮೀನಾಡಿನಲ್ಲಿ ಒಂದು ಘಟನೆ ಸಂಭವಿಸಿದೆ. 18 ವರ್ಷದ ಮಗಳು ಜುಮ್ಮೈಲ ಕೊಲೆಯಾದ ದುರ್ದೈವಿಯಾಗಿದ್ದು, ಜುಮ್ಮೈಲಾ ತಂದೆ ಉಮ್ಮರ್ ಫಾರೂಕ್ ಕೊಲೆ ಆರೋಪಿಯಾಗಿದ್ದಾನೆ. ಆರೋಪಿ ಫಾರೂಕ್ ಪತ್ನಿಯ ಸಹೋದರಿ ಮನೆಯಲ್ಲಿ ಈ ಒಂದು ಘಟನೆ ನಡೆದಿದ್ದು, ಅದೇ ಮನೆಯಲ್ಲಿ ವಾಸವಿದ್ದ ಫಾರೂಕ್ ಪತ್ನಿ ಹಾಗೂ ಮಗಳು. ಫಾರೂಕ್ ಮತ್ತು ಪತ್ನಿ ತಾಹಿರ ನಡುವೆ ಆಸ್ತಿ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು. ಗಲಾಟೆ ತಾರಕಕ್ಕೆ ಏರಿ ವಿಚ್ಚೆದನದ ಮಾತುಕತೆಯು ನಡೆದಿತ್ತು. ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ಫಾರೂಕ್ ಬೇಡಿಕೆ ಇಟ್ಟಿದ್ದಾನೆ. ಇದೆ ವೇಳೆ ಜಗಳ ಬಿಡಿಸಲು ಜುಮೈಲ ಬಂದಿದ್ದಾಳೆ. ಉಮರ್ ಮತ್ತು ಜುಮೈಲ ಚಿಕ್ಕಪ್ಪ ಶೇಕುಂ ನಡುವೆ ಜಗಳ ಆಗುತ್ತಿದೆ.ಈ ವೇಳೆ ಅಪ್ಪನಿಂದಲೇ ಕತ್ತಿ ಏಟು ತಗುಲಿ ಜುಮೈಲ ಸಾವನಪ್ಪಿದ್ದಾಳೆ. ಆರೋಪಿ ಉಮರ್ ಫಾರೂಕ್ ನನ್ನ ಮಂಜೇಶ್ವರ ಠಾಣೆ ಪೋಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರು : ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬೀದಿನಳಿಗಳ ಹಾವಳಿ ಹೆಚ್ಚಾಗಿದ್ದು, ಇದೀಗ ಬೀದಿ ನಾಯಿಗಳು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ನಲ್ಲಿ ನುಗ್ಗಿದ್ದು, ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಮತ್ತೊಂದು ಭಾರಿ ಅನಾಹುತ ಒಂದು ತಪ್ಪಿದೆ. ಏರ್ಪೋರ್ಟ್ ರನ್ವೇನಲ್ಲಿ ಬೀದಿ ನಾಯಿಗಳು ಏಕಾಏಕಿ ನುಗ್ಗಿವೆ. ರನ್ ವೇ ನಲ್ಲಿ ದಿಕ್ಕಾಪಾಲಾಗಿ ಬೀದಿನಾಯಿಗಳು ಓಡಿವೆ. ಇದರಿಂದ ಸಿಬ್ಬಂದಿಗಳು ಕಕ್ಕಾಬಿಕ್ಕಿ ಯಾಗಿದ್ದಾರೆ. ನಾಯಿಗಳನ್ನು ಓಡಿಸಲು ಹರಸಾಹಸ ಪಟ್ಟಿದ್ದಾರೆ. ರನ್ ವೇ ನಲ್ಲಿ ನಾಯಿಗಳು ಓಡಾಡುತ್ತಿರುವುದರಿಂದ ಯಾವ ವಿಮಾನಗಳು ಲ್ಯಾಂಡ್ ಆಗಿಲ್ಲ ಆದ್ದರಿಂದ ಭಾರಿ ಅನಾಹುತ ತಪ್ಪಿದೆ.
ಈ ಬೇವಿನ ಮರದಲ್ಲಿ ಜಿನುಗುತ್ತಿದೆ, ಸಕ್ಕರೆ ಜೇನುತುಪ್ಪದಂತಹ ಸಿಹಿ ದ್ರಾವಣ : ಚಾಮರಾಜನಗರದಲ್ಲಿ ವಿಸ್ಮಯಕಾರಿ ಮರ ಪತ್ತೆ!
ಚಾಮರಾಜನಗರ : ಚಾಮರಾಜನಗರದಲ್ಲಿ ಬೇವಿನ ಮರ ಒಂದು ವಿಸ್ಮಯಕ್ಕೆ ಕಾರಣವಾಗಿದೆ. ಬೇವಿನ ಮರದಿಂದ ಬಿಳಿ ಬಣ್ಣದ ದ್ರಾವಣ ನಿರಂತರವಾಗಿ ಜಿನುಗುತ್ತಿದೆ. ಬೇವಿನ ಮರದ ಮೂರರಿಂದ ನಾಲ್ಕು ಕಡೆಯಿಂದ ದ್ರಾವಣ ಹರಿಯುತ್ತಿದೆ. ಚಾಮರಾಜನಗರ ಜಿಲ್ಲೆಯ ಕೊರಟ್ಟಿ ಹೊಸೂರು ಗ್ರಾಮದಲ್ಲಿ ಬೇವಿನ ಮರದಲ್ಲಿ ಈ ಒಂದು ವಿಸ್ಮಯ ಕಾರಿ ಘಟನೆ ನಡೆದಿದೆ. ಮರಕಹಿ ಆದರೆ ಆ ಮರದಿಂದ ಬರುತ್ತಿರುವ ದ್ರಾವಣ ಮಾತ್ರ ಸಿಹಿಯಾಗಿದೆ. ಸಕ್ಕರೆ ಅಷ್ಟೇ ಬಿಳಿ ಬಣ್ಣದ ದ್ರಾವಣ ಸಿಹಿಯಾಗಿದೆ ಅಂತ ಗ್ರಾಮಸ್ಥರು ಹೇಳುತ್ತಿದ್ದಾರೆ. ಮರದಿಂದ ಬರುತ್ತಿರುವ ದ್ರಾವಣವನ್ನು ಗ್ರಾಮಸ್ಥರು ಸೇವಿಸಿದ್ದು, ಬರದಿಂದ ಬರುತ್ತಿರುವ ಬಿಳಿ ದ್ರಾವಣ ಸಕ್ಕರೆ ಹಾಗೂ ಜೇನುತುಪ್ಪದ ರುಚಿಯಂತೆ ಇದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಮುಂಬೈ : ದೇಶದಲ್ಲಿ ಬೆಚ್ಚಿ ಬೆಳಿಸುವಂತಹ ಘಟನೆ ಒಂದು ನಡೆದಿದ್ದು, ಎರಡಕ್ಕಿಂತ ಹೆಚ್ಚು ಮಕ್ಕಳಿದ್ರೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇಲ್ಲ ಎಂಬ ಕಾರಣಕ್ಕೆ ಮಹಾರಾಷ್ಟ್ರದ ವ್ಯಕ್ತಿಯೊಬ್ಬ ತನ್ನ 6 ವರ್ಷದ ಮಗಳನ್ನು ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಬೋಧನ್ ಕಾಲುವೆಗೆ ನೂಕಿ ಹತ್ಯೆ ಮಾಡಿದ್ದಾನೆ.ಕೊಲೆಯಾದ ಬಾಲಕಿಯನ್ನು ಪ್ರಾಚಿ (6), ಹತ್ಯೆಗೈದ ಆರೋಪಿಯನ್ನು ಪಾಂಡುರಂಗ ಕೊಂಡ್ಮಂಗಳೆ (28) ಎಂದು ಗುರುತಿಸಲಾಗಿದೆ. ನಿಜಾಮಾಬಾದ್ ಪೊಲೀಸರು ಪ್ರಕರಣದ ಆರೋಪಿ ಪಾಂಡುರಂಗ ಮತ್ತು ಗ್ರಾಮದ ಸರಪಂಚ್ ಗಣೇಶ್ ರಾಮಚಂದ್ರ ಶಿಂಧೆಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಿಜಾಮಾಬಾದ್ ಪೊಲೀಸ್ ಆಯುಕ್ತ ಪಿ. ಸಾಯಿ ಚೈತನ್ಯ, ಕೆಲವು ದಿನಗಳ ಹಿಂದೆ ಯೆಡಪಲ್ಲಿಯ ನಿಜಾಮ ಸಾಗರ್ ಕಾಲುವೆಯಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ಪೊಲೀಸರು ಆಕೆಯ ತಂದೆಯನ್ನು ವಿಚಾರಣೆ ನಡೆಸಿದ್ದರು. ಈ ವೇಳೆ ಆಕೆ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿ ಪೊಲೀಸರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ್ದ. ತನಿಖಾಧಿಕಾರಿ ವಿಚಾರಣೆ ನಡೆಸಿದಾಗ, ಮಗಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. ಈತ ನಾಂದೇಡ್ ಜಿಲ್ಲೆಯ…
ದಶಾವತಾರದ ಸಂಕ್ಷಿಪ್ತ ಪರಿಚಯ ಬ್ರಹ್ಮದೇವ ಸೃಷ್ಟಿಕರ್ತನಾದರೆ, ವಿಷ್ಣು ಸ್ಥಿತಿ ಸ್ಥಾಪಕ, ಶಿವಲಯಕರ್ತ. ತ್ರಿಮೂರ್ತಿಗಳಲ್ಲಿ ಸ್ಥಿತಿ ಸ್ಥಾಪಕನಾದ ಶ್ರೀಮನ್ನಾರಾಯಣ ದುಷ್ಟರನ್ನು ಸಂಹರಿಸಲು ಮತ್ತು ಶಿಷ್ಟರನ್ನು ಸಂರಕ್ಷಿಸುವ ಸಲುವಾಗಿ ಈ ಧರೆಯಲ್ಲಿ ಹತ್ತು ಅವತಾರಗಳನ್ನೆತ್ತಿಹನು. ಲೋಕಕಲ್ಯಾಣಾರ್ಥವಾಗಿ ವಿಷ್ಣು ಎತ್ತಿದ ಈ ಎಲ್ಲ ಅವತಾರಗಳ ಹಾಗೂ ವಿಷ್ಣುವಿನ ಮೂರು ಅವತಾರಕ್ಕೆ ಕಾರಣವಾದ ಜಯವಿಜಯರ ಶಾಪವೃತ್ತಾಂತದ ಕಿರುಪರಿಚಯ ಇಲ್ಲಿದೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ…
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಅನ್ಯ ಕೋಮಿನ ಅಪ್ರಾಪ್ತ ಬಾಲಕರಿಂದ ನೈತಿಕ ಪೊಲೀಸ್ ಗಿರಿ ನಡೆದಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರ ವಿಡಿಯೋ ಮಾಡಿಕೊಂಡು ಪ್ರಶ್ನೆ ಮಾಡಿದ್ದಾರೆ. ಯುವಕ ಯುವತಿಯನ್ನು ಅಪ್ರಾಪ್ತ ಪುಂಡರು ಪ್ರಶ್ನೆ ಮಾಡಿದ್ದಾರೆ. ಶಿಡ್ಲಘಟ್ಟ ಮೂಲದ ವಿದ್ಯಾರ್ಥಿಗಳಿಬ್ಬರನ್ನು ಅಡ್ಡಗಟ್ಟಿ ಪುಂಡರು ಕಿರಿಕ್ ಮಾಡಿದ್ದಾರೆ. ತಾವಿಬ್ಬರು ಪರಸ್ಪರ ಸ್ನೇಹಿತರು, ಒಂದೇ ಊರಿನವರು ಹಾಗು ಕುಟುಂಬದ ಸ್ನೇಹಿತರು ಎಂದರು ಕೂಡ ನೈತಿಕ ಪೊಲೀಸ್ ಗಿರಿ ಮಾಡಿದ್ದಾರೆ. ರಸ್ತೆಯಲ್ಲಿ ಅಡ್ಡಗಟ್ಟಿ ಯುವಕ ಯುವತಿಗೆ ಕಿರುಕುಳ ನೀಡಿದ್ದಾರೆ. ಅಪ್ರಾಪ್ತ ಪುಂಡರ ನೈತಿಕ ಪೊಲೀಸ್ ಗಿರಿಗೆ ಸಾರ್ವಜನಿಕರು ಅಕ್ರೋಶ ಹೊರಹಾಕಿದ್ದಾರೆ. ಅನ್ಯಕೋಮಿನ ಇಬ್ಬರು ಅಪ್ರಾಪ್ತ ಪುನರನ್ನು ಪೊಲೀಸರು ಇದೀಗ ವಶಕ್ಕೆ ಪಡೆದುಕೊಂಡಿದ್ದಾರೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ರಂಜಾನ್ ತಿಂಗಳಿನಲ್ಲಿ ಉರ್ದು ಶಾಲಾ ಸಮಯ ಬದಲಾವಣೆ ಮಾಡಿದ ವಿಚಾರವಾಗಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅವರು ಏನು ಶಾಲೆ ಕಲಿಯುವುದು ಬೇಡ ಭಯೋತ್ಪಾದಕರು, ದೇಶ ವಿರೋಧಿ ಚಟುವಟಿಕೆಗೆ ಬಳಸಿದರೆ ಒಳ್ಳೆಯದು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲಿ ಅವಕಾಶ ಸಿಗುತ್ತೋ ಅಲ್ಲಿ ಮುಸ್ಲಿಂ ತುಷ್ಟಿಕರಣ ಮಾಡುತ್ತಿದ್ದಾರೆ. ಸಮಾನತೆ ಶುದ್ಧಕ್ಕೆ ಅರ್ಥವಿಲ್ಲದ ರೀತಿಯಲ್ಲಿ ಸುತ್ತೋಲೆ ಹೊರಡಿಸಿದ್ದಾರೆ ಎಂದು ಕಿಡಿ ಕಾರಿದರು. ಇದು ಅತ್ಯಂತ ಹೇಯವಾದ ಕೆಲಸ ಹಿಂದೂ ಹಬ್ಬಗಳಲ್ಲೂ ಮಕ್ಕಳಿಗೆ ರಜೆ ಕೊಡಬೇಕು ಎಂದು ಅಗ್ರಹಿಸಿದರು. ದ್ವೇಷ ಭಾಷಣ ಪ್ರತಿಬಂಧಕ ವಿದೇಯಕ ರಾಷ್ಟ್ರಪತಿಗೆ ರವಾನಿಸಿದ ವಿಚಾರವಾಗಿ ಕಾಂಗ್ರೆಸ್ ದ್ವೇಷ ಭಾಷಣ ಬಿಲ್ ತರುವುದು ಸಂವಿಧಾನ ವಿರೋಧವಾಗಿದೆ ಎಂದರು.
ಬೆಳಗಾವಿ : ಕಳೆದ 2023 ಡಿಸೆಂಬರ್ 10 ರಂದು ಬೆಳಗಾವಿ ತಾಲೂಕಿನ ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು 12 ಆರೋಪಿಗಳಿಗೆ ಬೆಳಗಾವಿ ಕೋರ್ಟ್ ಶಿಕ್ಷೆ ಪ್ರಕಟಿಸಲಿದೆ. ಹೌದು 2023 ಡಿಸೆಂಬರ್ 10ರಂದು ಬೆಳಗಾವಿ ತಾಲೂಕಿನ ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿಲಾಗಿತ್ತು. ಒಟ್ಟು 13 ಆರೋಪಿಗಳ ವಿರುದ್ಧ ಪೊಲೀಸರು ಜಾರ್ಜ್ ಫಿಟ್ ಸಲ್ಲಿಸಿದರು. ಓರ್ವ ಬಾಲಾಪರಾಧಿಗೆ ಸೇರಿದಂತೆ 13 ಆರೋಪಿಗಳ ವಿರುದ್ಧ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ಎರಡು ವರ್ಷಗಳ ವಿಚಾರಣೆ ಬಳಿಕ 12 ಜನ ತಪ್ಪಿತಸ್ಥರು ಎಂದು ಇದೀಗ ಸಾಬೀತು ಆಗಿದ್ದು, ಇಂದು 12 ಆರೋಪಿಗಳಿಗೆ ಬೆಳಗಾವಿ ಕೋರ್ಟ್ ಶಿಕ್ಷೆ ಪ್ರಕಟಿಸಲಿದೆ. ಶನಿವಾರ 12 ಮಂದಿ ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಪು ನೀಡಿತ್ತು. ಬೆಳಗಾವಿ 10ನೇ ಹೆಚ್ಚುವರಿ ಜಿಲ್ಲಾಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿತು.
ಹುಬ್ಬಳ್ಳಿ : ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಘಟನೆ ಒಂದು ನಡೆದಿದ್ದು, ಹುಬ್ಬಳ್ಳಿಯಲ್ಲಿ ಪತಿಯೊಬ್ಬ ಪತ್ನಿಯ ಕತ್ತು ಸೀಳಿ ಠಾಣೆಗೆ ಬಂದು ಶರಣಾಗಿದ್ದಾನೆ. ಕೊಲೆಗೆ ಕಾರಣ ಎಂದರೆ ಪತಿ ಸಾಲ ಮಾಡಿದ್ದನ್ನು ಪ್ರಶ್ನಿಸಿದಕ್ಕೆ ಪತ್ನಿಯ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹತ್ಯೆಯಾದ ಮಹಿಳೆಯನ್ನು ತೈಸೀನ್ ಶಿಗ್ಗಾವಿ (27) ಎಂದು ತಿಳಿದುಬಂದಿದ್ದು, ಪತಿ ಇರ್ಫಾನ್ ಕೊಲೆ ಆರೋಪಿಯಾಗಿದ್ದಾನೆ. ಆರೋಪಿ ಇರ್ಫಾನ್ ಕೆಲಸಕ್ಕೆ ಹೋಗಿದೆ ಮೈತುಂಬ ಸಾಲ ಮಾಡಿಕೊಂಡಿದ್ದ ಈ ವಿಚಾರ ಪತ್ನಿಗೆ ಗೊತ್ತಾಗಿದ್ದು ನೀ ಮಾಡಿರುವ ಸಾಲ ನೀನೆ ತೀರಿಸು ಸಾಲ ಯಾಕೆ ಮಾಡಿದೆ ಎಂದು ಪ್ರಶ್ನೆ ಮಾಡಿದ್ದಾಳೆ. ಇದಕ್ಕೆ ಕುಪಿತಗೊಂಡ ಇರ್ಫಾನ್ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಬಳಿಕ ಹುಬ್ಬಳ್ಳಿಯ ಕೇಶ್ವಪುರ ಠಾಣೆಗೆ ಬಂದು ಶರಣಾಗಿದ್ದಾನೆ. ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಕೈಗೊಂಡಿದ್ದು ಘಟನಾ ಸ್ಥಳಕ್ಕೆ ಪೊಲೀಸ್ರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಕೊಲೆಯಾದ ಇರ್ಫಾನ್ ಪತ್ನಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ…
ಬೆಂಗಳೂರು : ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳಲಿದೆ. ಹೀಗಾಗಿ ಇದೇ ಫೆಬ್ರವರಿ 5 ಮತ್ತು 6ರಂದು ಬೆಂಗಳೂರು ನಗರದ ವಿವಿಧೆಡೆ ಕಾವೇರಿ ನೀರು ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ. ಈ ಬಗ್ಗೆ ಜಲಮಂಡಳಿ ಅಧ್ಯಕ್ಷರಾದ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಮಾಹಿತಿ ನೀಡಿದ್ದು, ನಾಗರಿಕರು ಮುಂಜಾಗ್ರತೆಯಾಗಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಸೂಚಿಸಿದ್ದಾರೆ. ಬೆಂಗಳೂರು ನೀರು ಸರಬರಾಜು ಮತ್ತು ಮಂಡಳಿಯ ವತಿಯಿಂದ ಸರಬರಾಜು ವತಿಯಿಂದ ನಿರ್ಮಾಣ 1200ಎಂಎಂ, 900 ಎಂಎಂ ಹಾಗೂ 700ಎಂಎಂ ವ್ಯಾಸದ ನೀರು ಸರಬರಾಜು ಪೈಪ್ ಲೈನ್ ಅಳವಡಿಕೆ ಕಾಮಗಾರಿ ನಡೆಯಲಿದೆ. ಈ ಕಾರಣದಿಂದ ಕಾವೇರಿ ನೀರು ಸರಬರಾಜು ಯೋಜನೆಯ ಮೊದಲನೇ ಮತ್ತು ಎರಡನೇ ಹಂತಗಳ ಜಲರೇಚಕ ಯಂತ್ರಗಾರಗಳನ್ನು ಫೆಬ್ರವರಿ 5 ಗುರುವಾರದಂದು ಬೆಳಗ್ಗೆ 6ರಿಂದ ಫೆಬ್ರವರಿ 6 ಶುಕ್ರವಾರ ಬೆಳಗ್ಗೆ 6 ಗಂಟೆವರೆಗೆ ರವರೆಗೆ ಒಟ್ಟು 24 ಗಂಟೆ ಸ್ಥಗಿತಗೊಳಿಸಲಾಗುತ್ತಿದೆ. ಯಾವ ಪ್ರದೇಶದಲ್ಲಿ? ಬೆಂಗಳೂರು ನಗರದ ಎ.ಜಿ.ಎಸ್ ಬಡಾವಣೆ, ಸಾರ್ವಭೌಮನಗರ ಸುಬ್ರಮಣ್ಯಪುರ, ಬಿ.ಹೆಚ್.ಸಿ.ಎಸ್ ಬಡಾವಣೆ,…













