Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

`FIR’ ದಾಖಲಾಗಿದ್ದರೆ ಸರ್ಕಾರಿ ಕೆಲಸ ಸಿಗಲ್ವಾ? ಅಭ್ಯರ್ಥಿಗಳು ತಿಳಿಯಲೇಬೇಕಾದ ಸತ್ಯವಿದು.!

07/05/2026 10:10 AM

ಆಪರೇಷನ್ ಸಿಂದೂರ್‌ನಲ್ಲಿ ಹತರಾದ ಹಫೀಜ್ ಸಯೀದ್, ಮಸೂದ್ ಅಜರ್ ಗೆ ‘ಸೇನಾ ಗೌರವ’ದ ಅಂತ್ಯಕ್ರಿಯೆ! ಸತ್ಯ ಒಪ್ಪಿಕೊಂಡ ಪಾಕ್ ನಾಯಕ | Watch video

07/05/2026 10:00 AM

ALERT : ಕೊರೊನಾಗಿಂತಲೂ ಡೇಂಜರ್ ‘ಹಂತಾ ವೈರಸ್’? ಭಾರತಕ್ಕೆ ಇದೆಯೇ ಅಪಾಯ?

07/05/2026 9:55 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ALERT : ಕೊರೊನಾಗಿಂತಲೂ ಡೇಂಜರ್ ‘ಹಂತಾ ವೈರಸ್’? ಭಾರತಕ್ಕೆ ಇದೆಯೇ ಅಪಾಯ?
INDIA

ALERT : ಕೊರೊನಾಗಿಂತಲೂ ಡೇಂಜರ್ ‘ಹಂತಾ ವೈರಸ್’? ಭಾರತಕ್ಕೆ ಇದೆಯೇ ಅಪಾಯ?

By kannadanewsnow5707/05/2026 9:55 AM

ನವದೆಹಲಿ: ಜಗತ್ತು ಕೊರೊನಾ ಮಹಾಮಾರಿಯಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಬೆನ್ನಲ್ಲೇ, ಇದೀಗ ‘ಹಂತಾವೈರಸ್’ (Hantavirus) ಭೀತಿ ವಿಶ್ವದಾದ್ಯಂತ ಸಂಚಲನ ಮೂಡಿಸಿದೆ. ಡಚ್ ಕ್ರೂಸ್ ಶಿಪ್‌ವೊಂದರಲ್ಲಿ ಪ್ರಯಾಣಿಸುತ್ತಿದ್ದ ಮೂವರು ಈ ವೈರಸ್‌ಗೆ ಬಲಿಯಾದ ಬೆನ್ನಲ್ಲೇ, ಜಗತ್ತಿಗೆ ಮತ್ತೊಂದು ಗಂಡಾಂತರ ಎದುರಾಗಿದೆಯೇ ಎಂಬ ಆತಂಕ ಶುರುವಾಗಿದೆ.

ಡಚ್ ಕ್ರೂಸ್ ಶಿಪ್‌ನಲ್ಲಿ ನಡೆದಿದ್ದೇನು?
ಇತ್ತೀಚೆಗೆ ಡಚ್ ಕ್ರೂಸ್ ಶಿಪ್‌ವೊಂದರಲ್ಲಿ 23 ದೇಶಗಳಿಗೆ ಸೇರಿದ ಸುಮಾರು 149 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ಹಡಗು ಬ್ರೆಜಿಲ್, ಅಂಗೋಲಾ ಮತ್ತು ಸ್ಪೇನ್ ದೇಶಗಳ ಮೂಲಕ ಸಂಚರಿಸಿತ್ತು. ಈ ವೇಳೆ ಹಡಗಿನಲ್ಲಿದ್ದ ಮೂವರು ಪ್ರಯಾಣಿಕರು ಹಂತಾವೈರಸ್ ಲಕ್ಷಣಗಳಿಂದ ಸಾವನ್ನಪ್ಪಿದ್ದಾರೆ. 23 ದೇಶಗಳ ಪ್ರಯಾಣಿಕರು ಈ ಹಡಗಿನಲ್ಲಿದ್ದ ಕಾರಣ, ವೈರಸ್ ಅಂತರಾಷ್ಟ್ರೀಯ ಮಟ್ಟದಲ್ಲಿ ಹರಡುವ ಸಾಧ್ಯತೆ ಇದೆಯೇ ಎಂಬ ಚರ್ಚೆ ಆರಂಭವಾಗಿದೆ.

ಏನಿದು ಹಂತಾವೈರಸ್?
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಹಂತಾವೈರಸ್ ಎಂಬುದು ‘ಹಂಟಾವಿರಿಡೆ’ ಕುಟುಂಬಕ್ಕೆ ಸೇರಿದ ವೈರಸ್‌ಗಳ ಗುಂಪಾಗಿದೆ. ಇದು ಮುಖ್ಯವಾಗಿ ಇಲಿ ಮತ್ತು ಹೆಗ್ಗಣಗಳ ಮೂಲಕ ಹರಡುತ್ತದೆ.

ಹರಡುವಿಕೆ: ಸೋಂಕಿತ ಇಲಿಗಳ ಮೂತ್ರ, ಲಾಲಾರಸ ಅಥವಾ ಮಲದೊಂದಿಗೆ ಮನುಷ್ಯರು ನೇರ ಸಂಪರ್ಕಕ್ಕೆ ಬಂದಾಗ ಈ ಸೋಂಕು ತಗುಲುತ್ತದೆ.

ಪ್ರಭಾವ: ಈ ವೈರಸ್ ನೇರವಾಗಿ ಮನುಷ್ಯನ ಶ್ವಾಸಕೋಶ ಮತ್ತು ಹೃದಯದ ಮೇಲೆ ಪರಿಣಾಮ ಬೀರುವುದರಿಂದ ಇದನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ.

ವಿಶೇಷವೆಂದರೆ, ದಕ್ಷಿಣ ಅಮೆರಿಕಾದಲ್ಲಿ ಕಂಡುಬರುವ ‘ಆಂಡಿಸ್ ವೈರಸ್’ ಎಂಬ ಹಂತಾವೈರಸ್ ತಳಿ ಮನುಷ್ಯನಿಂದ ಮನುಷ್ಯನಿಗೂ ಹರಡಬಲ್ಲದು ಎಂಬುದು ತಜ್ಞರ ಆತಂಕಕ್ಕೆ ಕಾರಣವಾಗಿದೆ.

ವೈರಸ್‌ನ ಲಕ್ಷಣಗಳೇನು?
ವೈರಸ್ ದೇಹವನ್ನು ಪ್ರವೇಶಿಸಿದ ಒಂದರಿಂದ ಎಂಟು ವಾರಗಳ ನಂತರ ಲಕ್ಷಣಗಳು ಗೋಚರಿಸುತ್ತವೆ. ಆರಂಭದಲ್ಲಿ ಇದು ಸಾಮಾನ್ಯ ಜ್ವರದಂತೆ ಕಂಡರೂ, ನಂತರ ತೀವ್ರ ಸ್ವರೂಪ ಪಡೆಯುತ್ತದೆ.

ತೀವ್ರ ಜ್ವರ ಮತ್ತು ತಲೆನೋವು.

ನಡುವು, ತೊಡೆ ಮತ್ತು ಬೆನ್ನು ಭಾಗದಲ್ಲಿ ತೀವ್ರ ಸ್ನಾಯು ನೋವು.

ವಾಕರಿಕೆ, ವಾಂತಿ ಮತ್ತು ಹೊಟ್ಟೆ ನೋವು.

ರೋಗ ಉಲ್ಬಣಗೊಂಡರೆ ಉಸಿರಾಟದ ತೊಂದರೆ.

ಭಾರತಕ್ಕೆ ಇದೆಯೇ ಅಪಾಯ?
ಸದ್ಯಕ್ಕೆ ಭಾರತೀಯರು ಹಂತಾವೈರಸ್ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ತಜ್ಞರು ಸಮಾಧಾನಪಡಿಸಿದ್ದಾರೆ. ಅದಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ:

ಭೌಗೋಳಿಕ ದೂರ: ಸೋಂಕು ಕಾಣಿಸಿಕೊಂಡ ಕ್ರೂಸ್ ಶಿಪ್ ಸಂಚರಿಸಿದ ಮಾರ್ಗಕ್ಕೂ ಭಾರತಕ್ಕೂ ಯಾವುದೇ ಸಂಬಂಧವಿಲ್ಲ.

ಹರಡುವಿಕೆ: ಏಷ್ಯಾ ಖಂಡದಲ್ಲಿ ಕಂಡುಬರುವ ಹಂತಾವೈರಸ್ ತಳಿಗಳು ಮನುಷ್ಯನಿಂದ ಮನುಷ್ಯನಿಗೆ ಹರಡುವುದಿಲ್ಲ. ಇವು ಕೇವಲ ಇಲಿಗಳ ಮೂಲಕ ಅತಿ ವಿರಳವಾಗಿ ಹರಡುತ್ತವೆ.

ಮುನ್ನೆಚ್ಚರಿಕಾ ಕ್ರಮಗಳು:
ವೈರಸ್ ಅಪಾಯ ಕಡಿಮೆ ಇದ್ದರೂ, ಶುಚಿತ್ವ ಕಾಪಾಡುವುದು ಅವಶ್ಯಕ.

ಮನೆಯ ಸುತ್ತಮುತ್ತ ಇಲಿಗಳು ಬರದಂತೆ ಜಾಗ್ರತೆ ವಹಿಸಿ.

ಇಲಿಗಳ ತ್ಯಾಜ್ಯವಿರುವ ಜಾಗವನ್ನು ಸ್ವಚ್ಛಗೊಳಿಸುವಾಗ ಕಡ್ಡಾಯವಾಗಿ ಮಾಸ್ಕ್ ಮತ್ತು ಗ್ಲೌಸ್ ಧರಿಸಿ.

ಆಹಾರ ಪದಾರ್ಥಗಳ ಮೇಲೆ ಇಲಿಗಳು ಓಡಾಡದಂತೆ ಎಚ್ಚರಿಕೆ ವಹಿಸಿ.

ಯಾವುದೇ ಸಂಶಯಾಸ್ಪದ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

ALERT: Is 'Hanta Virus' more dangerous than Corona? Is there a danger to India?
Share. Facebook Twitter LinkedIn WhatsApp Email

Related Posts

ಆಪರೇಷನ್ ಸಿಂದೂರ್‌ನಲ್ಲಿ ಹತರಾದ ಹಫೀಜ್ ಸಯೀದ್, ಮಸೂದ್ ಅಜರ್ ಗೆ ‘ಸೇನಾ ಗೌರವ’ದ ಅಂತ್ಯಕ್ರಿಯೆ! ಸತ್ಯ ಒಪ್ಪಿಕೊಂಡ ಪಾಕ್ ನಾಯಕ | Watch video

07/05/2026 10:00 AM1 Min Read

ತಮಿಳುನಾಡು ರಾಜಕೀಯದಲ್ಲಿ ಸಂಚಲನ: ವಿಜಯ್ ಬೆಂಬಲಕ್ಕೆ ನಿಂತ AIADMK ಶಾಸಕರು, ರೆಸಾರ್ಟ್ ರಾಜಕೀಯ ಆರಂಭ

07/05/2026 9:50 AM2 Mins Read

Fact Check : ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವಿನ ಬೆನ್ನಲ್ಲೇ ಗಂಟು-ಮೂಟೆ ಕಟ್ಟಿ ಹೊರಟ ಬಾಂಗ್ಲಾದೇಶಿಗರು : ಇಲ್ಲಿದೆ ವೈರಲ್ ವಿಡಿಯೋದ ಅಸಲಿಯತ್ತು.!

07/05/2026 9:45 AM1 Min Read
Recent News

`FIR’ ದಾಖಲಾಗಿದ್ದರೆ ಸರ್ಕಾರಿ ಕೆಲಸ ಸಿಗಲ್ವಾ? ಅಭ್ಯರ್ಥಿಗಳು ತಿಳಿಯಲೇಬೇಕಾದ ಸತ್ಯವಿದು.!

07/05/2026 10:10 AM

ಆಪರೇಷನ್ ಸಿಂದೂರ್‌ನಲ್ಲಿ ಹತರಾದ ಹಫೀಜ್ ಸಯೀದ್, ಮಸೂದ್ ಅಜರ್ ಗೆ ‘ಸೇನಾ ಗೌರವ’ದ ಅಂತ್ಯಕ್ರಿಯೆ! ಸತ್ಯ ಒಪ್ಪಿಕೊಂಡ ಪಾಕ್ ನಾಯಕ | Watch video

07/05/2026 10:00 AM

ALERT : ಕೊರೊನಾಗಿಂತಲೂ ಡೇಂಜರ್ ‘ಹಂತಾ ವೈರಸ್’? ಭಾರತಕ್ಕೆ ಇದೆಯೇ ಅಪಾಯ?

07/05/2026 9:55 AM

ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಸು ಫ್ರಮ್ ಸೊ’ ಖ್ಯಾತಿಯ ಜೆ.ಪಿ. ತುಮಿನಾಡು: ಹಸೆಮಣೆ ಏರಿದ ಪ್ರತಿಭಾನ್ವಿತ ಕಲಾವಿದ!

07/05/2026 9:53 AM
State News
KARNATAKA

`FIR’ ದಾಖಲಾಗಿದ್ದರೆ ಸರ್ಕಾರಿ ಕೆಲಸ ಸಿಗಲ್ವಾ? ಅಭ್ಯರ್ಥಿಗಳು ತಿಳಿಯಲೇಬೇಕಾದ ಸತ್ಯವಿದು.!

By kannadanewsnow5707/05/2026 10:10 AM KARNATAKA 2 Mins Read

ಬೆಂಗಳೂರು: ಸರ್ಕಾರಿ ಉದ್ಯೋಗ ಪಡೆಯುವುದು ಇಂದಿನ ಯುವಜನತೆಯ ಬಹುದೊಡ್ಡ ಕನಸು. ಲಕ್ಷಾಂತರ ಅಭ್ಯರ್ಥಿಗಳು ಹಗಲಿರುಳು ಇದಕ್ಕಾಗಿ ಶ್ರಮಿಸುತ್ತಾರೆ. ಆದರೆ, ಅಚಾತುರ್ಯದಿಂದಲೋ…

ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಸು ಫ್ರಮ್ ಸೊ’ ಖ್ಯಾತಿಯ ಜೆ.ಪಿ. ತುಮಿನಾಡು: ಹಸೆಮಣೆ ಏರಿದ ಪ್ರತಿಭಾನ್ವಿತ ಕಲಾವಿದ!

07/05/2026 9:53 AM

BREAKING : ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ: 10ಕ್ಕೂ ಹೆಚ್ಚು ಮಂದಿಗೆ ಗಾಯ

07/05/2026 9:46 AM

SHOCKING : ಪ್ರೀತಿಸಿ ಮದುವೆಯಾದ ಪತ್ನಿಯನ್ನು ನಡುರಸ್ತೆಯಲ್ಲೇ ಕೊಚ್ಚಿ ಕೊಂದ ಪಾಪಿ ಪತಿ.!

07/05/2026 9:30 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.