Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ರಾಜ್ಯ ಸರ್ಕಾರ ಕಳೆದ 3 ವರ್ಷದಲ್ಲಿ 196 ಬಾಂಗ್ಲಾದೇಶಿಗರನ್ನು ಗಡೀಪಾರು ಮಾಡಿದೆ. ಇಡೀ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶದ ಜನರನ್ನು ಗುರುತಿಸಿ ಗಡೀಪಾರು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಪರಮೇಶ್ವರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಇಂದು ರಾಜ್ಯದ ಕಾನೂನು ಸುವ್ಯವಸ್ಥೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಬಾಂಗ್ಲಾದವರು ಇಡೀ ದೇಶದಲ್ಲಿ ಇದ್ದಾರೆ. ಅವರು ಎಲ್ಲಿಂದ ಬರುತ್ತಾರೆ?, ಅವರು ಬರದಂತೆ ಬಿಎಸ್ಎಫ್ ತಡೆಯಬೇಕು. ಅವರು ಕೇವಲ ಕರ್ನಾಟಕಕ್ಕೆ ಮಾತ್ರ ಬರುವುದಿಲ್ಲ. ದೇಶದಾದ್ಯಂತ ಬೇರೆ ಬೇರೆ ಕಡೆ ಹೋಗಿ ವಾಸವಾಗಿದ್ದಾರೆ. ಲಕ್ಷಾಂತರ ಸಂಖ್ಯೆಯಲ್ಲಿ ಬಾಂಗ್ಲಾದವರು ಬಂದಿದ್ದಾರೆ ಅನ್ನೋದು ಸತ್ಯಕ್ಕೆ ದೂರವಾದ ಮಾತು. 2021ರಲ್ಲಿ 15 ಜನರನ್ನು ಗಡೀಪಾರು ಮಾಡಲಾಗಿದೆ. 2022ರಲ್ಲಿ 21 ಅಕ್ರಮ ಬಾಂಗ್ಲಾದವರನ್ನು ಗಡೀಪಾರು ಮಾಡಲಾಗಿದೆ ಎಂದರು. ನಮ್ಮ ಸರ್ಕಾರ ಬಂದ ಬಳಿಕ 2023ರಲ್ಲಿ 47 ಜನ, 2024ರಲ್ಲಿ 64 ಜನ, 2025ರಲ್ಲಿ 87 ಜನ ಸೇರಿ ಒಟ್ಟು 196 ಜನರನ್ನು ಗಡೀಪಾರು ಮಾಡಿದ್ದೇವೆ. ಇನ್ನು…
ಬೆಂಗಳೂರು : ಸರ್ಕಾರ, ಸಚಿವರ ವಿರುದ್ಧ ಗುತ್ತಿಗೆದಾರರಿಂದ ಕಮಿಷನ್ ಆರೋಪ ವಿಚಾರವಾಗಿ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದಿಂದಲೇ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಲಾಗಿದೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೆಂದಲೇ ಭ್ರಷ್ಟಾಚಾರದ ಡಿಲ್ ನಡೆಸಲಾಗಿದೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಭ್ರಷ್ಟಾಚಾರದ ಡೀಲ್ ಗೆ ಸಂಬಂಧಿಸಿದ ಆಡಿಯೋ ಈಗ ವೈರಲಾಗಿದ್ದು, ಆಡಿಯೋದಲ್ಲಿ ಗುತ್ತಿಗೆದಾರರ ಸಂಘದ ಪದಾಧಿಕಾರಿಯ ಡೀಲ್ ಕುರಿತು ಮಾಹಿತಿ ಇದೆ. ಗುತ್ತಿಗೆದಾರರ ಹೊಟ್ಟೆಯ ಮೇಲೆ ಹೊಡೆಯುತ್ತಿರುವ ಸಂಘದ ಪದಾಧಿಕಾರಿಗಳು ಅಂತ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಇದೀಗ ರಾಜ್ಯ ಗುತ್ತಿಗೆದಾರರ ಸಂಘದ ಬಗ್ಗೆಯೇ ಅನುಮಾನ ಶುರುವಾಗಿದೆ. ಬಡ ಗುತ್ತಿಗೆದಾರರಿಂದ ಕಮಿಷನ್ ಗೌರವಾಧ್ಯಕ್ಷ ಮತ್ತು ನಿರ್ದೇಶಕ ಸರ್ಕಾರಿ ಯೋಜನೆಗಳ ಕಾಮಗಾರಿಗೆ ಬಿಡ್ ಮಾಡುವ ಗುತ್ತಿಗೆದಾರರ ಜೊತೆಗೆ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಮತ್ತು ಸಂಘಟನೆಗಳಿಂದಲೂ ಬಿಡ್ ಮಾಡಲಾಗಿದ್ದು ಲೋಕೋಪಯೋಗಿ, ಇಂಧನ ಇಲಾಖೆ, ನಗರಾಭಿವೃದ್ಧಿ, ನೀರಾವರಿ ಸೇರಿದಂತೆ ಇಲ್ಲ ಇಲಾಖೆಗಳ ಟೆಂಡರ್ ನಲ್ಲಿ ಭಾರಿ ಗೋಲ್ಮಾಲ್ ನಡೆದಿದೆ. ಬಿಡ್…
ಬೆಂಗಳೂರು : ಕರ್ನಾಟಕ ಸರ್ಕಾರ ರಂಜಾನ್ ತಿಂಗಳಲ್ಲಿ ಉರ್ದು ಮಾಧ್ಯಮ ಕಿರಿಯ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಶಾಲಾ ಸಮಯವನ್ನು ಪರಿಷ್ಕರಿಸಿದ್ದು, ಬೆಳಿಗ್ಗೆ 8 ರಿಂದ ಮಧ್ಯಾಹ್ನ 12.45 ರವರೆಗೆ ಮಾತ್ರ ತರಗತಿ ನಡೆಸಲು ಆದೇಶಿಸಲಾಗಿದೆ. ಕರ್ನಾಟಕ ಸರ್ಕಾರ ರಂಜಾನ್ ತಿಂಗಳಲ್ಲಿ ಉರ್ದು ಮಾಧ್ಯಮ ಕಿರಿಯ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಶಾಲಾ ಸಮಯವನ್ನು ಪರಿಷ್ಕರಿಸಿದೆ.ರಾಜ್ಯದ ಉರ್ದು ಮತ್ತು ಇತರ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯದ ನಿರ್ದೇಶನದ ಪ್ರಕಾರ, ಶಾಲೆಗಳು ಈಗ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12:45 ರವರೆಗೆ ಕಾರ್ಯನಿರ್ವಹಿಸುತ್ತವೆ. ಇದು ರಂಜಾನ್ ಆರಂಭದಿಂದ ಮಾರ್ಚ್ 20 ರವರೆಗೆ ಜಾರಿಯಲ್ಲಿರುತ್ತದೆ ಎನ್ನಲಾಗಿದೆ. 2002ರಲ್ಲಿ ಹೊರಡಿಸಲಾದ ಹಿಂದಿನ ಸರ್ಕಾರಿ ಆದೇಶವನ್ನು ಪರಿಶೀಲಿಸಿದ ನಂತರ ಮತ್ತು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಾತಿನಿಧ್ಯಗಳನ್ನು ಅನುಸರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ನಿಗದಿತ ಪಠ್ಯಕ್ರಮ ಪೂರ್ಣಗೊಳಿಸಲು ಇತರ ಕೆಲಸದ ದಿನಗಳು ಅಥವಾ ರಜಾದಿನಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅವಕಾಶವಿದೆ ಎಂದು…
ಬೆಂಗಳೂರು : ಗೃಹಲಕ್ಷ್ಮೀ ಯೋಜನೆ ಸಂಬಂಧ ರೂಪಿಸಿರುವ ಸಾಫ್ಟ್‌ವೇರ್‌ನಲ್ಲಿ ಜಿಎಸ್‌ಟಿ, ಆದಾಯ ತೆರಿಗೆ ಅಂತ ತೋರಿಸಿದರೆ ಬದಲಾವಣೆ ಮಾಡಲು ಸಾಧ್ಯವಿಲ್ಲ. ಇದರಲ್ಲಿ ಸರ್ಕಾರ ಅಥವಾ ಇಲಾಖೆಯ ಯಾವುದೇ ತಪ್ಪಿಲ್ಲ. ಗೃಹಲಕ್ಷ್ಮೀ ಯೋಜನೆ ನಿರಂತರ ಪ್ರಕ್ರಿಯೆ, ಈಗಲೂ ಅರ್ಜಿ ಸಲ್ಲಿಸಿದವರಿಗೆ ಹಣ ನೀಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು. ವಿಧಾನ ಪರಿಷತ್ ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಕಟ್ಟುತ್ತಿದ್ದಾರೆ ಎಂಬ ಕಾರಣದಿಂದ ಸುಮಾರು 52 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಸಿಗುತ್ತಿಲ್ಲ. ಈ ಪೈಕಿ ಸುಮಾರು 20 ಸಾವಿರ ಫಲಾನುಭವಿಗಳ ಸಮಸ್ಯೆಯನ್ನು ಇತ್ಯರ್ಥ ಪಡಿಸಲಾಗಿದ್ದು, ಉಳಿದವರ ಸಮಸ್ಯೆ ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಹೇಳಿದರು. ಬಿಜೆಪಿಯ ಪಿ.ಎಚ್.ಪೂಜಾರ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಸುಮಾರು 1.26 ಕೋಟಿ ಗೃಹಲಕ್ಷ್ಮೀ ಫಲಾನುಭವಿಗಳಿದ್ದು, ಕೆಲ ಫಲಾನುಭವಿಗಳು ಕೆಲ ವೊಂದುವ್ಯವಹಾರನಡೆಸುವಾಗಜಿಎಸ್‌ಟಿ, ಆದಾಯತೆರಿಗೆವ್ಯಾಪ್ತಿಗೆ ಒಳಪಟ್ಟಿರುತ್ತಾರೆ. ಗೃಹಲಕ್ಷ್ಮೀ ಯೋಜನೆ ಸಂಬಂಧ ರೂಪಿಸಿರುವ ಸಾಫ್ಟ್‌ವೇರ್‌ನಲ್ಲಿ ಜಿಎಸ್‌ಟಿ, ಆದಾಯ…
ಬೆಂಗಳೂರು : ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆಯನ್ನು ಇಟ್ಟಿದ್ದು ಸ್ಮಾರ್ಟ್ ಕ್ಲಾಸ್ ರೂಂ ಸ್ಥಾಪಿಸಲು ರಾಜ್ಯ ಸರ್ಕಾರ ಇದೀಗ ಆಡಳಿತಾತ್ಮಕ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರ ಪುರಸ್ಕೃತ ಕಾರ್ಯಕ್ರಮ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಅನುಮೋದನೆ ದೊರಕಿರುವ ರಾಜ್ಯದ 3862 ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಕೆಜಿಬಿವಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ರೂಂ ಸ್ಥಾಪಿಸಲು ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಸಮಗ್ರ ಶಿಕ್ಷಣ ಕರ್ನಾಟಕದಲ್ಲಿ 2022-23ನೇಸಾಲಿನಲ್ಲಿ 1631 ಹಿರಿಯ ಪ್ರಾಥಮಿಕ ಶಾಲೆ, 2024-25ರಲ್ಲಿ 95 ಶಾಲೆ, 2025-26 1326 & 2, 810 ಪ್ರೌಢ ಶಾಲೆ ಸೇರಿ ಒಟ್ಟಾರೆ 3,862 ಶಾಲೆಗಳಲ್ಲಿ ಪ್ರತಿ ತರ ಗತಿಗೆ 2.4 ಲಕ್ಷ ರು. ಘಟಕ ವೆಚ್ಚದಂತೆ ಒಟ್ಟು 91.54 ಕೋಟಿ ರು. ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್‌ರೂಂ ಅನ್ನು ಸ್ಥಾಪಿಸಲು ಸಮಗ್ರ ಶಿಕ್ಷಣ ಇಲಾಖೆ ನಿರ್ದೇಶಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಕೋರಿದ್ದರು.
ಬೆಂಗಳೂರು : ಈಗಾಗಲೇ ಹಲವು ರಾಜ್ಯಗಳಲ್ಲಿ ನಿಫಾ ವೈರಸ್ ಮತ್ತೆ ಕಾಣಿಸಿಕೊಂಡಿದ್ದು, ಕರ್ನಾಟಕದಲ್ಲಿ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಬಾವಲಿಗಳು, ಹಂದಿಗಳು ಮತ್ತು ಮನುಷ್ಯರಿಂದ ಮನುಷ್ಯರಿಗೆ ಹರಡುವ ಈ ವೈರಸ್‌ನಿಂದ ಮರಣ ಪ್ರಮಾಣ ಹೆಚ್ಚಿರುವ ಕಾರಣ, ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಹೌದು ಮನುಷ್ಯರಿಂದ ಮನುಷ್ಯರಿಗೂ ಕೆಲವವೊಮ್ಮೆ ಇದು ವರ್ಗಾವಣೆ ಆಗಬಹುದು ಎನ್ನಲಾಗಿದೆ. ಅತ್ಯಂತ ಭಯಾನಕ ಅಂಶವೆಂದರೆ ನಿಫಾ ವೈರಸ್ ಸೋಂಕಿತರ ಮರಣ ಪ್ರಮಾಣ ಶೇ. 60-75 ರಷ್ಟಿರುವ ಕಾರಣ, ಈ ವೈರಸ್ ರಾಜ್ಯದಲ್ಲಿ ಕಾಲಿಡದಂತೆ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಶಂಕಿತ ಪ್ರಕರಣಗಳ ಬಗ್ಗೆ ನಿಗಾ ವಹಿಸಲು ಆರೋಗ್ಯಾಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ಇನ್ನು ನಿಫಾ ವೈರಸ್ನ ರೋಗ ಲಕ್ಷಣಗಲು ತಕ್ಷಣಕ್ಕೆ ಗೋಚರಿಸುವುದಿಲ್ಲ. ಸಾಮಾನ್ಯವಾಗಿ 4 ರಿಂದ 14 ದಿನಗಳಲ್ಲಿ ಇವು ಗಮನಕ್ಕೆ ಬರಲಿದ್ದು, ಆರೋಗ್ಯ ಇಲಾಖೆಯ ಸಲಹೆ ಮತ್ತು ಸೂಚನೆಗಳನ್ನು ಪಾಲಿಸುವಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ. ಸೋಂಕಿತರು ಕಂಡುಬಂದಲ್ಲಿ ಅಂತವರ ಚಿಕಿತ್ಸೆಗೂ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನಿಫಾ ವೈರಸ್…
ಬೆಂಗಳೂರು : ಕರ್ನಾಟಕ ತಮಿಳುನಾಡು ನಡುವಿನ ಪೆನ್ನಾರ್ ನದಿ ನೀರು ವಿವಾದಕ್ಕೆ ಸಂಬಂಧಪಟ್ಟಂತೆ ವಿವಾದ ಬಗೆಹರಿಸಲು ನ್ಯಾಯಾಧೀಕರಣ ರಚನೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ನ್ಯಾಯಮೂರ್ತಿಗಳಾದ ವಿಕ್ರಮನಾಥ ಹಾಗೂ ನ್ಯಾಯಮೂರ್ತಿ ಎನ್. ವಿ ಅಂಜಾರಿಯ ಪೀಠ ತೀರ್ಪು ನೀಡಿತ್ತು. ಒಂದು ತಿಂಗಳ ಒಳಗೆ ನ್ಯಾಯಾಧೀಕರಣ ರಚನೆ ಮಾಡುವಂತೆ ಕೇಂದ್ರಕ್ಕೆ ಸೂಚನೆ ನೀಡಿದೆ. ಕರ್ನಾಟಕ ಸರ್ಕಾರದ ವಾದವನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿಲ್ಲ. ವಾದ ಮಂಡನೆ ವೇಳೆ ಕರ್ನಾಟಕ ಸರ್ಕಾರ ನ್ಯಾಯಾಧಿಕರಣ ರಚನೆ ಬೇಡ ಅಂತ ಹೇಳಿದ್ದು, ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುತ್ತೇವೆ ಅಂತ ಹೇಳಿತ್ತು. ಆದರೆ ತಮಿಳುನಾಡು ಸರ್ಕಾರ ನ್ಯಾಯಾಧೀಕರಣ ರಚಿಸುವಂತೆ ವಾದಿಸಿತ್ತು. ಆಗ ಸುಪ್ರೀಂ ಕೋರ್ಟ್ ತಮಿಳುನಾಡು ಸರ್ಕಾರದ ವಾದವನ್ನು ಪುರಸ್ಕರಿಸಿತ್ತು. ಕಳೆದ ಡಿಸೆಂಬರ್ ನಲ್ಲಿ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿತ್ತು. ಪೆನ್ನರ್ ನದಿಯ ಉಪನದಿಯಾದ ಮಾರ್ಕಂಡೇಯ ನದಿ, ಕೋಲಾರ ಜಿಲ್ಲೆಯ ಯರಗೋಳ ಬಳಿ ಡ್ಯಾಮ್ ನಿರ್ಮಿಸುತ್ತಿರುವುದನ್ನು ತಮಿಳುನಾಡು ಆಕ್ಷೇಪಿಸಿತ್ತು. ಡ್ಯಾಮ್ ನಿಂದ ನೀರಿನ ಕೊರತೆ ಆಗುತ್ತೆ ಎಂದು ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿತ್ತು.
ಆಂಧ್ರಪ್ರದೇಶ : ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಅವಹೇಳನಕಾರಿ ಹೇಳಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವೈಎಸ್ ಆರ್‌ಪಿಸಿ ನಾಯಕ ಅಂಬಟಿ ರಾಮಬಾಬುಗೆ ಇದೀಗ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಸಿಎಂ ವಿರುದ್ಧ ಅವಹೇಳನಕಾರಿ ಹೇಳಿಕೆ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ ಕೇಳಿ ಬಂದಿದ್ದು ಶನಿವಾರ ತಡರಾತ್ರಿ ಗುಂಟೂರು ಪೊಲೀಸರು ಬಂಧಿಸಿದ ಮಾಜಿ ಸಚಿವ ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕ ಅಂಬಟಿ ರಾಂಬಾಬು ಅವರನ್ನು ಭಾನುವಾರ ಸಂಜೆಯವರೆಗೆ ನಲ್ಲಪಾಡು ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು. ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ರಾಂಬಾಬು ಅವರನ್ನು ಅವರ ನಿವಾಸದಿಂದ ಪೊಲೀಸರು ಬಂಧಿಸಿದರು. ಮಾಜಿ ಸಚಿವರು ಮಾಡಿದ್ದ ಹೇಳಿಕೆಗಳಿಂದ ಕೋಪಗೊಂಡ ಟಿಡಿಪಿ ನಾಯಕರು ಮತ್ತು ಕಾರ್ಯಕರ್ತರು ರಾಂಬಾಬು ಅವರ ಮನೆಯನ್ನು ಮುತ್ತಿಗೆ ಹಾಕಿ, ಕಲ್ಲು…
ಬೆಳಗಾವಿ : ಬೆಳಗಾವಿಯಲ್ಲಿ ಮಹಿಳಾ ಅಧಿಕಾರಿ ಒಬ್ಬರು ಅಕ್ರಮ ಗಣಿಗಾರಿಕೆ ವಿರುದ್ಧ ಸಿಡಿದೆದ್ದಿದು, ಗಣಿಗಾರಿಕೆ ಮಾಡುತ್ತಿದ್ದ ಸ್ಥಳಕ್ಕೆ ತೆರಳಿ ಜೆಸಿಬಿಗೆ ಕಲ್ಲು ಹೊಡೆದು ಆಕ್ರೋಶ ಹೊರಹಾಕಿದ್ದಾರೆ. ಅಕ್ರಮ ಗಣಿಗಾರಿಕೆ ನಿಲ್ಲಿಸಲಿದ್ದಕ್ಕೆ ಮಹಿಳಾ ಅಧಿಕಾರಿ ಆಕ್ರೋಶ ಹೊರಹಾಕಿದ್ದು ಜೆಸಿಬಿ ಕ್ಲಾಸಿಗೆ ಕಲ್ಲು ಎಸೆದು ಆಕ್ರೋಶ ಹೊರಹಾಕಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಕ್ರಮ ಗಣಿಗಾರಿಕೆ ನಡೀತಾ ಇತ್ತು. ಲ್ಯಾಟರೇಟ್ ಮಣ್ಣು ಗಣಿಗಾರಿಕೆ ಮಾಡುತ್ತಿದ್ದ ವೇಳೆ ರೆಡ್ ಮಾಡಿದ್ದಾರೆ. ಸಿಮೆಂಟ್ ಕಾರ್ಖಾನೆಗೆ ಲಾಟರಿಟ್ ಖನಿಜ ಬಳಕೆ ಮಾಡುತ್ತಿದ್ದರು. ಈ ಒಂದು ಅಕ್ರಮವಾಗಿ ನಡೆಯುತ್ತಿದ್ದ ಲಾಟರಿ ಖನಿಜ ಗಣಿಗಾರಿಕೆ ಮೇಲೆ ಮಹಿಳಾ ಅಧಿಕಾರಿ ರೆಡ್ ಮಾಡಿ ಗಣಿಗಾರಿಕೆ ನಿಲ್ಲಿಸಿದ್ದಕ್ಕೆ ಆಕ್ರೋಶ ಹೊರಹಾಕಿ ಜೆಸಿಬಿ ಗ್ಲಾಸ್ ಗೆ ಕಲ್ಲು ಎಸೆದು ಕಿಡಿ ಕರೆದಿದ್ದಾರೆ. ಅಕ್ರಮ ಗಣಿಗಾರಿಕೆ ನಡೆಸಿದಂತೆ ಹೇಳಿದರು ಕೂಡ ಮಹಿಳಾ ಅಧಿಕಾರಿ ಮನವಿಗೆ ಸ್ಪಂದಿಸದೆ ಗಣಿಗಾರಿಕೆ ಮುಂದುವರಿಸಿದ್ದರು ಈ ಹಿನ್ನೆಲೆ ಆಕ್ರೋಶಗೊಂಡು ಮಹಿಳಾ ಅಧಿಕಾರಿ ಜೆಸಿಬಿಗೆ ಕಲ್ಲು ಹೊಡೆದಿದ್ದಾರೆ.
ಗದಗ : ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಉತ್ಖನ ಬೆಳೆ ಇದುವರೆಗೂ ಹಲವಾರು ಪುರಾತನ ವಸ್ತುಗಳು ಶಿಲೆಗಳು ಪತ್ತೆಯಾಗಿದ್ದು ಇದೀಗ ರಾಜ್ಯ ಸರ್ಕಾರ ಚಿನ್ನ ಮತ್ತು ನಿಧಿ ಪತ್ತೆಗಾಗಿ ಹೆಲಿಕ್ಯಾಪ್ಟರ್ ಮೂಲಕ ಶೋಧಕ್ಕೆ ಮುಂದಾಗಿದೆ. ಹೌದು ಕಳೆದ 15 ದಿನಗಳಿಂದ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಪುರಾತತ್ವ ಇಲಾಖೆ ಅಧಿಕಾರಿಗಳು ಬಿಡು ಬಿಟ್ಟು ನಿರಂತರವಾಗಿ ಚಿನ್ನ ನಿಧಿ ಶೋಧ ಕಾರ್ಯಕ್ಕೆ ತೊಡಗಿದೆ ಈ ವೇಳೆ ಗ್ರಾಮದಲ್ಲಿ ಹಲವಾರು ಪುರಾತನ ಕಾಲದ ವಸ್ತುಗಳು ಶಿಲೆಗಳು, ಈಶ್ವರ ದೇವಸ್ಥಾನ ಸೇರಿದಂತೆ ಕೆತ್ತನೆಗಳು ಸಹ ಪತ್ತೆಯಾಗಿವೆ. ಇದೀಗ ಸರ್ಕಾರ ಹೆಲಿಕ್ಯಾಪ್ಟರ್ ಮುಖಾಂತರ ಚಿನ್ನ, ನಿಧಿ ಪತ್ತೆಗೆ ಮುಂದಾಗಿದ್ದು ಗ್ರಾಮಸ್ಥರು ಹೆಲಿಕ್ಯಾಪ್ಟರ್ ನೋಡಲು ಮುಗಿಬಿದ್ದಿದ್ದಾರೆ.














