Author: kannadanewsnow05

ಬೆಳಗಾವಿ : ಬೆಳಗಾವಿಯಲ್ಲಿ ಮಹಿಳಾ ಅಧಿಕಾರಿ ಒಬ್ಬರು ಅಕ್ರಮ ಗಣಿಗಾರಿಕೆ ವಿರುದ್ಧ ಸಿಡಿದೆದ್ದಿದು, ಗಣಿಗಾರಿಕೆ ಮಾಡುತ್ತಿದ್ದ ಸ್ಥಳಕ್ಕೆ ತೆರಳಿ ಜೆಸಿಬಿಗೆ ಕಲ್ಲು ಹೊಡೆದು ಆಕ್ರೋಶ ಹೊರಹಾಕಿದ್ದಾರೆ. ಅಕ್ರಮ ಗಣಿಗಾರಿಕೆ ನಿಲ್ಲಿಸಲಿದ್ದಕ್ಕೆ ಮಹಿಳಾ ಅಧಿಕಾರಿ ಆಕ್ರೋಶ ಹೊರಹಾಕಿದ್ದು ಜೆಸಿಬಿ ಕ್ಲಾಸಿಗೆ ಕಲ್ಲು ಎಸೆದು ಆಕ್ರೋಶ ಹೊರಹಾಕಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಕ್ರಮ ಗಣಿಗಾರಿಕೆ ನಡೀತಾ ಇತ್ತು. ಲ್ಯಾಟರೇಟ್ ಮಣ್ಣು ಗಣಿಗಾರಿಕೆ ಮಾಡುತ್ತಿದ್ದ ವೇಳೆ ರೆಡ್ ಮಾಡಿದ್ದಾರೆ. ಸಿಮೆಂಟ್ ಕಾರ್ಖಾನೆಗೆ ಲಾಟರಿಟ್ ಖನಿಜ ಬಳಕೆ ಮಾಡುತ್ತಿದ್ದರು. ಈ ಒಂದು ಅಕ್ರಮವಾಗಿ ನಡೆಯುತ್ತಿದ್ದ ಲಾಟರಿ ಖನಿಜ ಗಣಿಗಾರಿಕೆ ಮೇಲೆ ಮಹಿಳಾ ಅಧಿಕಾರಿ ರೆಡ್ ಮಾಡಿ ಗಣಿಗಾರಿಕೆ ನಿಲ್ಲಿಸಿದ್ದಕ್ಕೆ ಆಕ್ರೋಶ ಹೊರಹಾಕಿ ಜೆಸಿಬಿ ಗ್ಲಾಸ್ ಗೆ ಕಲ್ಲು ಎಸೆದು ಕಿಡಿ ಕರೆದಿದ್ದಾರೆ. ಅಕ್ರಮ ಗಣಿಗಾರಿಕೆ ನಡೆಸಿದಂತೆ ಹೇಳಿದರು ಕೂಡ ಮಹಿಳಾ ಅಧಿಕಾರಿ ಮನವಿಗೆ ಸ್ಪಂದಿಸದೆ ಗಣಿಗಾರಿಕೆ ಮುಂದುವರಿಸಿದ್ದರು ಈ ಹಿನ್ನೆಲೆ ಆಕ್ರೋಶಗೊಂಡು ಮಹಿಳಾ ಅಧಿಕಾರಿ ಜೆಸಿಬಿಗೆ ಕಲ್ಲು ಹೊಡೆದಿದ್ದಾರೆ.

Read More

ಗದಗ : ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಉತ್ಖನ ಬೆಳೆ ಇದುವರೆಗೂ ಹಲವಾರು ಪುರಾತನ ವಸ್ತುಗಳು ಶಿಲೆಗಳು ಪತ್ತೆಯಾಗಿದ್ದು ಇದೀಗ ರಾಜ್ಯ ಸರ್ಕಾರ ಚಿನ್ನ ಮತ್ತು ನಿಧಿ ಪತ್ತೆಗಾಗಿ ಹೆಲಿಕ್ಯಾಪ್ಟರ್ ಮೂಲಕ ಶೋಧಕ್ಕೆ ಮುಂದಾಗಿದೆ. ಹೌದು ಕಳೆದ 15 ದಿನಗಳಿಂದ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಪುರಾತತ್ವ ಇಲಾಖೆ ಅಧಿಕಾರಿಗಳು ಬಿಡು ಬಿಟ್ಟು ನಿರಂತರವಾಗಿ ಚಿನ್ನ ನಿಧಿ ಶೋಧ ಕಾರ್ಯಕ್ಕೆ ತೊಡಗಿದೆ ಈ ವೇಳೆ ಗ್ರಾಮದಲ್ಲಿ ಹಲವಾರು ಪುರಾತನ ಕಾಲದ ವಸ್ತುಗಳು ಶಿಲೆಗಳು, ಈಶ್ವರ ದೇವಸ್ಥಾನ ಸೇರಿದಂತೆ ಕೆತ್ತನೆಗಳು ಸಹ ಪತ್ತೆಯಾಗಿವೆ. ಇದೀಗ ಸರ್ಕಾರ ಹೆಲಿಕ್ಯಾಪ್ಟರ್ ಮುಖಾಂತರ ಚಿನ್ನ, ನಿಧಿ ಪತ್ತೆಗೆ ಮುಂದಾಗಿದ್ದು ಗ್ರಾಮಸ್ಥರು ಹೆಲಿಕ್ಯಾಪ್ಟರ್ ನೋಡಲು ಮುಗಿಬಿದ್ದಿದ್ದಾರೆ.

Read More

ಚಾಮರಾಜನಗರ : ಫ್ಲೋರೈಡ್ ಮಿಶ್ರಿತ ನೀರು ಕುಡಿದು ಕಿಡ್ನಿ ಡ್ಯಾಮೇಜ್ ಆಗಿದ್ದು, ಚಾಮರಾಜನಗರದಲ್ಲಿ 47 ಜನರು ಕಿಡ್ನಿ ಕಳೆದುಕೊಂಡಿದ್ದಾರೆ. ಕಿಡ್ನಿ ವೈಫಲ್ಯ, ಥೈರಾಯ್ಡ್ ಹೈಪರ್ ಟೆನ್ಷನ್ ಚಿಂತೆ ಕಾಡುತ್ತಿದ್ದು, ಫ್ಲೋರೈಡ್ ಮಿಶ್ರಿ ನೀರಿನಿಂದ ಹಲ್ಲುಗಳೆಲ್ಲ ಹಳದಿ ಬಣ್ಣಕ್ಕೆ ತಿರುಗಿದೆ. ಮಾರ್ಟಳ್ಳಿ, ಸುಳ್ವಾಡಿ ಗ್ರಾಮಸ್ಥರ ಗೋಳು ಹೇಳ ತೀರದಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಈ ಹಳ್ಳಿಗಳ 47 ಜನ ಇದೀಗ ಕಿಡ್ನಿ ಕಳೆದುಕೊಂಡಿದ್ದಾರೆ. ಕಳೆದ 30 ವರ್ಷಗಳಿಂದ ನಿರಂತರವಾಗಿ ಫ್ಲೋರೈಡ್ ನಿಶ್ಚಿತ ನೀರನ್ನೆ ಸೇವನೆ ಮಾಡುತ್ತಿದ್ದಾರೆ ಪಂಚಾಯಿತಿ ಪೂರೈಸುವ ನೀರು ಗ್ರಾಮಾಂತರ ಸೇವಿಸುತ್ತಿದ್ದು ಶುದ್ಧ ನೀರಿಗಾಗಿ ಮನವಿ ಮಾಡಿದರು ಕೂಡ ಜಿಲ್ಲಾಡಳಿತ ನಿರ್ಲಕ್ಷ ವಹಿಸಿದೆ ಎಂದು ಆರೋಪ ಕೇಳಿ ಬಂದಿದೆ.

Read More

ಉಡುಪಿ : ಉಡುಪಿಯಲ್ಲಿ ಕಾಂಗ್ರೆಸ್ ಯುವ ಮುಖಂಡನ ಮೇಲೆ ದುಷ್ಕರ್ಮಿಗಳು ತಲ್ವಾರ್ ನಿಂದ ದಾಳಿ ಭೀಕರ ಮಾಡಿದ್ದಾರೆ. ತಲ್ವಾರ್ ಹಾಗೂ ಕಬ್ಬಿಣದ ಚೇರ್ನಿಂದ ಕಾಂಗ್ರೆಸ್ ಯುವ ಮುಖಂಡ ಶರತ್ ಕುಂದರ್ ಮೇಲೆ ಹಲ್ಲೆ ಮಾಡಿದ್ದಾರೆ. ಎನ್‌ಎಸ್‌ಯುಐ ಉಪಾಧ್ಯಕ್ಷ ಶರತ್ ಕುಂದರಿಗೆ ಗಂಭೀರವಾದ ಗಾಯಗಳಾಗಿದ್ದು, ಮಾತುಕತೆಗೆ ಎಂದು ಕರೆಸಿ ಉಡುಪಿ ನಗರದ ಪಿಪಿಸಿ ಕ್ರಾಸ್ ಬಳಿ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಶರತ್ ಕುಂದರ ಮೇಲೆ ಆರರಿಂದ ಏಳು ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಘಟನೆ ಸಂಭಂದ ಉಡುಪಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಘೋರ ದುರಂತ ಸಂಭವಿಸಿದ್ದು,ಜಲಮಂಡಳಿ ಪೈಪ್ ಲೈನ್ ಸಂಪ್ ಗೆ ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಂಗಳೂರು ದಕ್ಷಿಣ ತಾಲೂಕಿನ ತಾತಗುಣಿ ಬಳಿ ಜಲಮಂಡಳಿ ಪೈಪ್ ಲೈನ್ ಸಂಪ್ ಗೆ ಬಿದ್ದು ಪ್ರೀತಂ (14) ಸಾವನ್ನಪ್ಪಿದ್ದಾನೆ. ಬೆಂಗಳೂರಿನ ದಕ್ಷಿಣ ತಾಲ್ಲೂಕಿನ ತಾತಂಗುಡಿ ಬಳಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ (ಬಿಡಬ್ಲ್ಯೂಎಸ್ಎಸ್ಬಿ) ಸೇರಿದ ತೆರೆದ ಕಾಂಕ್ರೀಟ್ ಕೋಣೆಗೆ ಬಿದ್ದು 14 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಈ ಘಟನೆ ಸ್ಥಳೀಯರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ ಹೊರಿಸಿದ್ದಾರೆ. ಘಟನೆ ಹಿನ್ನೆಲೆ ಮೃತ ಪ್ರೀತಮ್ ಎಂದು ಗುರುತಿಸಲ್ಪಟ್ಟ ಮೃತ ವಿದ್ಯಾರ್ಥಿ 9 ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ. ಜನವರಿ 29 ರಂದು ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು. ಕಳೆದ ಮೂರು ದಿನಗಳಿಂದ ಬಾಲಕನಿಗಾಗಿ ದಣಿವರಿಯಿಲ್ಲದೆ ಹುಡುಕಾಟ ನಡೆಸಿದ್ದೇವೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

Read More

ಬೆಂಗಳೂರು : ದ್ವೇಷ ಭಾಷಣ ತಡೆ ಬಿಲ್ ಗೆ ರಾಜ್ಯಪಾಲರು ಅಂಕಿತ ಹಾಕದ ವಿಚಾರವಾಗಿ 28 ಅಂಶಗಳನ್ನು ಪ್ರಶ್ನೆ ಮಾಡಿ ಅದನ್ನು ರಾಷ್ಟ್ರಪತಿಗೆ ಕಳುಹಿಸಿದ್ದಾರೆ. ರಾಷ್ಟ್ರಪತಿಗಳು ಅಬ್ಸರ್ವೇಷನ್ ಗೆ ವಾಪಸ್ ಕಳುಹಿಸಿದರ ನೋಡಬೇಕು ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು. ಬೆಂಗಳೂರಲ್ಲಿ ಮಾತನಾಡಿದ ಅವರು, ವಾಕ್ ಸ್ವಾತಂತ್ರ್ಯ ಎಲ್ಲರಿಗೂ ಇದೆ ಹಾಗಂತ ಏನು ಬೇಕಾದರೂ ಮಾತನಾಡುವುದು ತಪ್ಪು. ಸಮಾಜದ ಮೇಲೆ ಅದು ಯಾವ ರೀತಿಯ ಪರಿಮಾಣ ಬೀರುತ್ತೆ ವ್ಯಕ್ತಿ ಮತ್ತು ಸಮುದಾಯದ ಬಗ್ಗೆ ಮಾತನಾಡುವುದು ಎಷ್ಟು ಪರಿಣಾಮ ಬೀರುತ್ತೆ ಇದೆಲ್ಲಾ ಯೋಚನೆ ಮಾಡಿ ದ್ವೇಷ ಭಾಷಣ ತಡೆ ಬಿಲ್ ಮಾಡಿದ್ದು ಎಂದರು. ರಾಜ್ಯದ ಹಲವು ಭಾಗಗಳಲ್ಲಿ ಕೆಲವರು ಭಾಷಣವನ್ನು ಮಾಡಿದ್ದರು ಭಾಷಣ ಮಾಡಿದ ಮೇಲೆ ಏನಾಗಿದೆ ಅಂತ ನಾವು ಗಮನಿಸಿದ್ದೇವೆ ಇದಕ್ಕೆ ಕಡಿವಾಣ ಹಾಕುವುದಕ್ಕೆ ಆ ಬಿಲ್ ಅನ್ನು ನಾವು ತಂದಿದ್ದು ನಿಮ್ಮ ಉದ್ದೇಶ ಏನಿದೆ? ಯಾರು ಏನಾದರೂ ಮಾಡಬಹುದಾ? ಎಂದು ಪರಮೇಶ್ವರ್ ಪ್ರಶ್ನೆ ಮಾಡಿದರು. ಉದ್ದೇಶಪೂರ್ವಕವಾಗಿ ಈ ಕಾಯಿದೆ…

Read More

ವಿಜಯನಗರ : ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ತ್ರಿಬಲ್ ಮರ್ಡರ್ ಪ್ರಕರಣಕ್ಕೆ ದಿನವೊಂದು ಟ್ವಿಸ್ಟ್ ಸಿಗುತ್ತಿದೆ. ಇದೀಗ ಈ ಒಂದು ಪ್ರಕರಣದ ಆರೋಪಿಯಾಗಿರುವ ಅಕ್ಷಯನನ್ನು ಹೆಚ್ಚಿನ ವಿಚಾರಣೆ ನಡೆಸಿದ ಪೊಲೀಸರಿಗೆ ಶಾಕ್ ಆಗಿದೆ. ತನಿಖೆಯ ವೇಳೆ ಹಣ ಕೊಡದಿದ್ದಕ್ಕೆ ತಂದೆ ತಾಯಿ ತಂಗಿಯ ಕೊಲೆ ಮಾಡಿದ್ದಾನೆ ಎಂದು ಶಂಕೆ ವ್ಯಕ್ತವಾಗಿದೆ. ತನಿಖೆ ವೇಳೆ ತಂಗಿ ಗರ್ಭಿಣಿ ಎಂದು ಅಕ್ಷಯ್ ಕಥೆ ಕಟ್ಟಿರುವ ಶಂಕೆ ವ್ಯಕ್ತವಾಗಿದೆ. ಆರೋಪಿ ಅಕ್ಷಯ್ ಬೆಟ್ಟಿಂಗ್ ಮತ್ತು ಜೂಜಿನ ಚಟಕ್ಕೆ ಬಿದ್ದಿದ್ದ. ಹಣದ ವಿಚಾರವಾಗಿ ಮನೆಯವರನ್ನು ಕೊಲೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಹಗರಿಬೊಮ್ಮನಹಳ್ಳಿಯಲ್ಲಿ ಅಕ್ಷಯ್ ಕುಟುಂಬ ಒಂದು ಮನೆ ಹೊಂದಿತ್ತು. ಆ ಮನೆ ಮಾರಾಟದಿಂದ ಒಂದೂವರೆ ಕೋಟಿ ಹಣ ಬರುತ್ತಿತ್ತು. ಈ ಹಣವನ್ನು ತಂದೆ ಮದುವೆಗೆ ಇಟ್ಟುಕೊಂಡಿದ್ದರು. ಆದರೆ ಬೆಟ್ಟಿನಿಂದ ಅಕ್ಷಯ ಸಾಲ ಮಾಡಿಕೊಂಡಿದ್ದ ಮನೆ ಮಾರಾಟದ ಹಣ ಕೊಡುವಂತೆ ಆತ ಬಲವಂತ ಮಾಡಿದ್ದಾನೆ. ಆದರೆ ಮನೆಯವರು ಈತನಿಗೆ ಹಣ ಕೊಟ್ಟಿರಲಿಲ್ಲ ಆ ಹಣಕ್ಕಾಗಿ ಅಕ್ಷೆ ಕೊಲೆ ಮಾಡಿರುವ…

Read More

ಬೆಂಗಳೂರು : ಗಾಳಿಪಟದ ದಾರ ಕಾಲಿಗೆ ಸಿಲುಕಿ ವ್ಯಕ್ತಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಆರ್ ಟಿ ನಗರದಲ್ಲಿ ಈ ಒಂದು ಘಟನೆ ನಡೆದಿದೆ. ಜನವರಿ 31 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಗಾಯಗೊಂಡ ವ್ಯಕ್ತಿ ಜಿವಿಎ ಕಸದ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದು ಕಾಲಿನ ನರ ಕಟ್ ಆಗಿವೆ. ಮೊದಲಿಗೆ ಬೈಕ್ ಸವಾರನಿಗೆ ಗಾಳಿಪಟದ ದಾರ ಕಾಣಿಸಿದೆ. ಆತ ದಾರ ಬಿಡಿಸಿಕೊಂಡು ಮುಂದಕ್ಕೆ ಸಾಗಿದ್ದಾನೆ. ಈ ವೇಳೆ ಹಿಂದೆ ನಡೆದುಕೊಂಡು ಬರುತ್ತಿದ್ದ ನಾಗಾರ್ಜುನನಿಗೆ ಗಾಳಿಪಟದ ದಾರ ಸಿಲುಕಿಕೊಂಡಿದೆ. ಬೈಕ್ ಸವಾರ ಮುಂದೆ ಹೋದಾಗ ಹಿಂದೆ ಇದ್ದ ನಾಗಾರ್ಜುನ ಕಾಲಿಗೆ ಸುತ್ತಿಕೊಂಡು ಗಂಭೀರವಾದ ಗಾಯಗಳಾಗಿದ್ದು, ಇದೀಗ ನಾಗಾರ್ಜುನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾಗಾರ್ಜುನ ಕಾಲಿನ ನರಗಳು ಕಟ್ ಆಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

Read More

ಚಾಮರಾಜನಗರ : ಕಳೆದ ಕೆಲವು ದಿನಗಳ ಹಿಂದೆ ಆರತಕ್ಷತೆಗೆ ತೆರಳುತ್ತಿದ್ದ ವೇಳೆ ವರನಿಗೆ ವಧುವಿನ ಮಾಜಿ ಪ್ರಿಯಕರ ಚಾಕು ಇರಿದಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಇದೀಗ ಪೊಲೀಸರು ವಧು ಹಾಗೂ ಆಕೆಯ ಪ್ರಿಯಕರ ಸೇರಿದಂತೆ ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿರನ್ನ ನಯನಾ ಹಾಗೂ ಈಕೆಯ ಬಾಯ್ ಫ್ರೆಂಡ್ ದರ್ಶನ್ ಮತ್ತು ಅಪ್ರಾಪ್ತನನ್ನು ಬಂಧಿಸಲಾಗಿದ್ದು, ಗೋಕುಲ್ ಹಾಗೂ ಇನ್ನೋರ್ವ ತಲೆ ಮರೆಸಿಕೊಂಡಿದ್ದಾರೆ.ಚಾಕು ಇರಿದ ದರ್ಶನ್ ತಮಟೆ ಬಾರಿಸುವ ಕೆಲಸ ಹಾಗೂ ಪುಸ್ತಕಗಳನ್ನು ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದನು. ಈ ವೇಳೆ ರವೀಶ್ ನನ್ನ ಮದುವೆ ಆಗಲು ಸೂಚಿಸಿದ್ದ ನಯನಾ ಬಳಿಕ ರವೀಶ್​ನ ಫೋನ್ ಅನ್ನು ದರ್ಶನ್​​ಗೆ ಕೊಟ್ಟು ಬೆದರಿಸುವಂತೆ ಹೇಳಿದ್ದ ನಯನಾ ಮದುವೆ ನಿಲ್ಲಿಸುವಂತೆ ದುಂಬಾಲು ಬಿದ್ದಿದ್ದಳು. ನಯನಾಳ ಮಾತು ಕೇಳಿದ ದರ್ಶನ್ ತನ್ನ ಮೂವರು ಸ್ನೇಹಿತರ ಜೊತೆ ಕಾರಿನಲ್ಲಿ ಬಂದು ವರನನ್ನು ಅಡ್ಡಹಾಕಿ ಚಾಕು ಇರಿದಿದ್ದ. ಅದೃಷ್ಟವಶಾತ್ ತೋಳಿಗಷ್ಟೇ ಗಾಯವಾಗಿ ಪ್ರಾಣಾಪಾಯದಿಂದ ಪಾರಾಗಿದ್ದನು. ವರನಿಗೆ ಚಾಕು ಇರಿದ ಕೇಸ್ ಪತ್ತೆಗೆ ಚಾಮರಾಜನಗರ ಎಸ್ಪಿ…

Read More

ಬೆಂಗಳೂರು : ರಾಜ್ಯದಲ್ಲಿ ಮತ್ತೊಂದು ದರೋಡೆ ಪ್ರಕರಣ ಬೆಳಕಿಗೆ ಬಂದಿದ್ದು, ಬೆಂಗಳೂರಿನ ಬನ್ನೇರುಘಟ್ಟ ಸಮೀಪ ಹಾಡಹಗಲೇ ಸಿನಿಮೀಯ ರೀತಿಯಲ್ಲಿ 31 ಲಕ್ಷದ 38 ಸಾವಿರ ರೂ. ನಗದು ದೋಚಿ ದರೋಡೆಕೋರರು ಪರಾರಿಯಾಗಿದ್ದಾರೆ.  ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಸಕಲವಾರ ರಸ್ತೆಯಲ್ಲಿ  ಬೈಕ್ ನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ಗ್ಯಾಂಗ್, ಬರೋಬ್ಬರಿ 31 ಲಕ್ಷದ 38 ಸಾವಿರ ರೂಪಾಯಿ ನಗದನ್ನು ದೋಚಿ ಪರಾರಿಯಾಗಿದೆ. ಸಿನಿಮಾ ಸ್ಟೈಲ್ ನಲ್ಲಿ ದರೋಡೆರ ಹಾಡಹಗಲೇ ರಸ್ತೆ ಮಧ್ಯೆ ಬೈಕ್ ನಿಲ್ಲಿಸಿದ ಖದೀಮರು, ಸಿನಿಮಾ ಸ್ಟೈಲ್ನಲ್ಲಿ ಲಾಂಗ್ ಮತ್ತು ಮಚ್ಚುಗಳನ್ನು ತೋರಿಸಿ ವ್ಯಕ್ತಿಯನ್ನು ಬೆದರಿಸಿ ಹಣವಿದ್ದ ಬ್ಯಾಗ್ ಹಾಗೂ ಅವರ ಬೈಕನ್ನು ಸಹ ಕಿತ್ತುಕೊಂಡು ಪರಾರಿಯಾಗಿದ್ದಾರೆ. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಈ ಘಟನೆಯಿಂದಾಗಿ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.

Read More