ಬೆಂಗಳೂರು : ಬೆಂಗಳೂರಿನ IPL ಫೈನಲ್ ಪಂದ್ಯವನ್ನು ಅಹ್ಮದಾಬಾದ್ ಗೆ ಶಿಫ್ಟ್ ಮಾಡಿದ್ದ ವಿಚಾರಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಜಿ.ಪರಮೇಶ್ವರ್ ಅವರು, ಭದ್ರತೆ ವಿಚಾರವಾಗಿ ಯಾವುದೇ ದೂರು ಬಂದಿಲ್ಲ ಬೆಂಗಳೂರಲ್ಲಿ 5 ಪಂದ್ಯ ನಡೆದಿದೆ. ಭದ್ರತೆ ವಿಚಾರ ಕಾರಣ ಅಲ್ಲ. RCB ಅಥವಾ ಪೊಲೀಸರಿಂದ ಯಾವುದೇ ದೂರು ಬಂದಿಲ್ಲ ಎಂದು ತಿಳಿಸಿದರು.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ 33 ಸಾವಿರ ಆಸನಗಳಿವೆ. ಸ್ಪಾನ್ಸರ್ ಗಳಿಗೆ 7 ರಿಂದ 8 ಸಾವಿರ ಪಾಸ್ ಕೊಡಬೇಕಾಗುತ್ತದೆ. ಹೀಗಾಗಿ ಅವರೇ 7 ರಿಂದ 8 ಸಾವಿರ ಸೀಟ್ ಬ್ಲಾಕ್ ಮಾಡುತ್ತಾರೆ. ಉಳಿಯೋದು 25 ಸಾವಿರ ಸೀಟ್ ಹೀಗಾಗಿ ವರ್ಕೌಟ್ ಆಗಲ್ಲ. ಮೊದ್ಲೇ ಇದೆಲ್ಲವನ್ನು ವರದಿ ಮಾಡಿ ನಿರ್ಧಾರಿಸಿದ್ದಾರೆ ಅನಿಸುತ್ತೆ. ಶಾಸಕರ ಟಿಕೆಟ್ ದುರ್ಬಳಕೆಯಿಂದ ಕೈತಪ್ಪಿದೆಯಾ ಎಂಬ ವಿಚಾರವಾಗಿ ಶಾಸಕರ ಪಾಸ್ ಗು ಪಂದ್ಯ ಸ್ಥಳತಂರಕ್ಕೂ ಸಂಬಂಧ ಇಲ್ಲ ಎಂದು ತಿಳಿಸಿದರು.








