ನವದೆಹಲಿ:ಭಾರತದ ಇತಿಹಾಸದ ಅತ್ಯಂತ ಧೈರ್ಯಶಾಲಿ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಒಂದಾದ ‘ಆಪರೇಷನ್ ಸಿಂದೂರ್’ ನಡೆದು ಇಂದಿಗೆ (ಮೇ 7, 2026) ಸರಿಯಾಗಿ ಒಂದು ವರ್ಷ. ಈ ಸಂಭ್ರಮದ ಅಂಗವಾಗಿ ಭಾರತೀಯ ವಾಯುಪಡೆಯು ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಪ್ರಭಾವಶಾಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿರುವ “ಭಾರತ ಯಾವುದನ್ನೂ ಕ್ಷಮಿಸುವುದಿಲ್ಲ” (India Forgives Nothing) ಎಂಬ ಸಂದೇಶ ಈಗ ಶತ್ರು ರಾಷ್ಟ್ರಗಳ ನಿದ್ದೆಗೆಡಿಸಿದೆ.
ವಾಯುಪಡೆ ಬಿಡುಗಡೆ ಮಾಡಿರುವ ಈ ವಿಡಿಯೋದಲ್ಲಿ ರಫೇಲ್ ಯುದ್ಧ ವಿಮಾನಗಳು ಮತ್ತು ಬ್ರಹ್ಮೋಸ್ ಕ್ಷಿಪಣಿಗಳು ಪಾಕಿಸ್ತಾನದ ಒಳಗಿರುವ ಉಗ್ರರ ನೆಲೆಗಳನ್ನು ಧ್ವಂಸಗೊಳಿಸುತ್ತಿರುವ ನೈಜ ಮತ್ತು ರೋಚಕ ದೃಶ್ಯಗಳಿವೆ.
ಮೊದಲ ಬಾರಿಗೆ ಈ ವಿಡಿಯೋದಲ್ಲಿ ಭಾರತೀಯ ನೌಕಾಸೇನೆಯು ಸಮುದ್ರದ ಮೂಲಕ ಕ್ಷಿಪಣಿಗಳನ್ನು ಉಡಾಯಿಸಿ ಕಾರ್ಯಾಚರಣೆಗೆ ಬೆಂಬಲ ನೀಡಿದ ದೃಶ್ಯಗಳನ್ನು ತೋರಿಸಲಾಗಿದೆ. ವಾಯುಪಡೆ ಮತ್ತು ನೌಕಾಸೇನೆಯ ಈ ಸಮನ್ವಯವು ಭಾರತದ ರಕ್ಷಣಾ ಶಕ್ತಿಯನ್ನು ಸಾಬೀತುಪಡಿಸಿದೆ.
“ಭಾರತವು ಪ್ರತಿಯೊಬ್ಬ ಭಯೋತ್ಪಾದಕ ಮತ್ತು ಅವರ ಹಿಂದಿರುವ ಶಕ್ತಿಗಳನ್ನು ಗುರುತಿಸುತ್ತದೆ, ಪತ್ತೆಹಚ್ಚುತ್ತದೆ ಮತ್ತು ಶಿಕ್ಷಿಸುತ್ತದೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋದ ಹಿನ್ನೆಲೆಯಲ್ಲಿ ನೀಡಿದ ಹೇಳಿಕೆಯು ಭಾರತದ ಕಠಿಣ ನಿಲುವನ್ನು ಪ್ರತಿಬಿಂಬಿಸಿದೆ.
Operation Sindoor
Justice served.
Precise in action, eternal in memory—Operation Sindoor continues.
India forgets nothing-India forgives nothing.#operation #Sindoor #operationsindoor #IAF @PMOIndia@rajnathsingh@DefenceMinIndia@SpokespersonMoD@HQ_IDS_India@adgpi… pic.twitter.com/GWvnY9Udjl— Indian Air Force (@IAF_MCC) May 6, 2026








