Author: ಗೋಪಾಲ್‌ ಎನ್‌

ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 08 ವರ್ಷಗಳ ಅನುಭವವಿದ್ದು, ಹಲವು ಕಿರುಚಿತ್ರಗಳಿಗೆ ಬರಹಗಳನ್ನು ಬರೆದಿದ್ದಾರೆ. ಮೂಲತಃ ಉಡುಪಿಯವರಾದ ಇವರು ಸದ್ಯ ಈಗ ಕನ್ನಡನಾಡು.ಕಾಂ ಹಾಗೂ ಕನ್ನಡ ನ್ಯೂಸ್‌ ನೌ.ವೆಬ್‌ಸೈಟ್‌ನಲ್ಲಿ ಡೆಸ್ಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮಿತಿಮೀರಿರುವ ಬೆನ್ನಲ್ಲೇ, ಪಾಕಿಸ್ತಾನ ಮತ್ತು ಇರಾನ್ ನಡುವಿನ ರಕ್ಷಣಾತ್ಮಕ ಸಂಬಂಧ ಹೊಸ ತಿರುವು ಪಡೆದಿದೆ. ಅಮೆರಿಕ ತನ್ನ ಮೇಲೆ ಯಾವುದೇ ಕ್ಷಣದಲ್ಲಿ ವೈಮಾನಿಕ ದಾಳಿ ನಡೆಸಬಹುದು ಎಂಬ ಭೀತಿಯಲ್ಲಿರುವ ಇರಾನ್, ತನ್ನ ಯುದ್ಧ ವಿಮಾನಗಳನ್ನು ಸುರಕ್ಷಿತವಾಗಿರಿಸಲು ಪಾಕಿಸ್ತಾನದ ವಾಯುನೆಲೆಗಳನ್ನು ಬಳಸಿಕೊಳ್ಳುತ್ತಿದೆ ಎಂಬ ಆಘಾತಕಾರಿ ವರದಿ ಹೊರಬಿದ್ದಿದೆ. ಇರಾನ್ ತನ್ನ ಪ್ರಮುಖ ವಾಯುಪಡೆಯ ವಿಮಾನಗಳು ಮತ್ತು ಡ್ರೋನ್‌ಗಳನ್ನು ಅಮೆರಿಕದ ಕ್ಷಿಪಣಿ ವ್ಯಾಪ್ತಿಯಿಂದ ದೂರವಿಡಲು ಪಾಕಿಸ್ತಾನದ ಬಲೂಚಿಸ್ತಾನ್ ಮತ್ತು ಸಿಂಧ್ ಪ್ರಾಂತ್ಯದ ವಾಯುನೆಲೆಗಳಲ್ಲಿ ನಿಲುಗಡೆ ಮಾಡಲು ಪಾಕ್ ಸೇನೆ ಅನುಮತಿ ನೀಡಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ​ರಹಸ್ಯ ಕಾರ್ಯಾಚರಣೆ: ಕಳೆದ 48 ಗಂಟೆಗಳಲ್ಲಿ ಇರಾನ್‌ನ ಹಲವಾರು ಸರಕು ಸಾಗಣೆ ಮತ್ತು ಯುದ್ಧ ವಿಮಾನಗಳು ಪಾಕಿಸ್ತಾನದ ಗಡಿ ದಾಟಿರುವ ದೃಶ್ಯಗಳು ಉಪಗ್ರಹ ಚಿತ್ರಗಳಲ್ಲಿ ಸೆರೆಯಾಗಿವೆ ಎನ್ನಲಾಗಿದೆ. ಪಾಕಿಸ್ತಾನದ ಈ ಕ್ರಮವು ಅಮೆರಿಕದ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಯಿದೆ. ಅಮೆರಿಕದ ಮಿತ್ರರಾಷ್ಟ್ರವೆಂದು ಕರೆಸಿಕೊಳ್ಳುವ ಪಾಕಿಸ್ತಾನ, ಈಗ ಇರಾನ್‌ಗೆ ಈ ರೀತಿ…

Read More

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಮತ್ತೊಂದು ಸಂಚಲನ ಉಂಟಾಗಿದೆ. ಮುನ್ಸಿಪಾಲಿಟಿ (ನಗರಸಭೆ) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಮನಿ ಲಾಂಡರಿಂಗ್ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು (ED), ತೃಣಮೂಲ ಕಾಂಗ್ರೆಸ್‌ನ ಪ್ರಭಾವಿ ನಾಯಕ ಮತ್ತು ಮಾಜಿ ಸಚಿವ ಸುಜಿತ್ ಬೋಸ್ ಅವರನ್ನು ಸೋಮವಾರ (ಮೇ 11, 2026) ರಾತ್ರಿ ಬಂಧಿಸಿದೆ. ​ಬಂಧನಕ್ಕೆ ಕಾರಣವೇನು? ​ನಗರಸಭೆಗಳಲ್ಲಿ ನಡೆದ ಅಕ್ರಮ ನೇಮಕಾತಿ ಹಗರಣದಲ್ಲಿ ಸುಜಿತ್ ಬೋಸ್ ಅವರ ಪಾತ್ರವಿದೆ ಎಂದು ಇಡಿ ಆರೋಪಿಸಿದೆ. ಸುಮಾರು 10 ಗಂಟೆಗಳ ಸುದೀರ್ಘ ವಿಚಾರಣೆಯ ನಂತರ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ. ದಕ್ಷಿಣ ದಮ್ ದಮ್ ನಗರಸಭೆಯಲ್ಲಿ ಸುಮಾರು 150 ಅಭ್ಯರ್ಥಿಗಳನ್ನು ಕಾನೂನುಬಾಹಿರವಾಗಿ ನೇಮಕ ಮಾಡುವಂತೆ ಸುಜಿತ್ ಬೋಸ್ ಶಿಫಾರಸು ಮಾಡಿದ್ದರು ಎಂಬ ಗಂಭೀರ ಆರೋಪವಿದೆ.ಈ ಅಕ್ರಮ ನೇಮಕಾತಿಗಳ ಬದಲಾಗಿ ಬೋಸ್ ಅವರು ಭಾರಿ ಪ್ರಮಾಣದ ನಗದು ಮತ್ತು ಫ್ಲಾಟ್‌ಗಳನ್ನು ಉಡುಗೊರೆಯಾಗಿ ಪಡೆದಿದ್ದಾರೆ ಎಂದು ತನಿಖಾ ಸಂಸ್ಥೆ ಮಾಹಿತಿ ನೀಡಿದೆ.  ಬೋಸ್ ಅವರ ನಿಯಂತ್ರಣದಲ್ಲಿರುವ ಬ್ಯಾಂಕ್ ಖಾತೆಗಳಲ್ಲಿ ಭಾರಿ ಪ್ರಮಾಣದ…

Read More

ನವದೆಹಲಿ: ಭಾರತೀಯರು ಇಂಧನ ಉಳಿಸಬೇಕು, ಚಿನ್ನದ ಖರೀದಿಯನ್ನು ತಪ್ಪಿಸಬೇಕು ಮತ್ತು ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ (Work from Home) ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ ಮರುದಿನವೇ, ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಕುರಿತು ಸರ್ಕಾರ ಸಚಿವರ ಮಟ್ಟದ ಔಪಚಾರಿಕ ಸಭೆ ನಡೆಸಿದೆ. ದೇಶದಲ್ಲಿ ಯಾವುದೇ ಪೆಟ್ರೋಲಿಯಂ ಉತ್ಪನ್ನಗಳ ಕೊರತೆಯಿಲ್ಲ ಎಂದು ಸರ್ಕಾರ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ. ​ಆದರೆ, ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಗಗನಕ್ಕೇರುತ್ತಿದ್ದರೂ ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗದಂತೆ ತಡೆಯಲು ಸಾರ್ವಜನಿಕ ವಲಯದ ತೈಲ ಕಂಪನಿಗಳು ಪ್ರತಿದಿನ ಸುಮಾರು 1,000 ಕೋಟಿ ರೂಪಾಯಿಗಳಷ್ಟು ನಷ್ಟವನ್ನು ಭರಿಸುತ್ತಿವೆ ಎಂದು ಸರ್ಕಾರ ತಿಳಿಸಿದೆ. ​ಸರ್ಕಾರದ ಸ್ಪಷ್ಟನೆ ಮತ್ತು ಪ್ರಧಾನಿಯವರ ಪುನರುಚ್ಚಾರ ​ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವರ ಗುಂಪಿನ (IGoM) ಸಭೆಯಲ್ಲಿ ಮಹತ್ವದ ಮಾಹಿತಿಗಳನ್ನು ಹಂಚಿಕೊಳ್ಳಲಾಗಿದೆ: ​ಭಾರತದ ಬಳಿಕ ಸದ್ಯಕ್ಕೆ 60 ದಿನಗಳಿಗೆ ಆಗುವಷ್ಟು ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ದಾಸ್ತಾನು ಇದೆ. ​45…

Read More

1971ರ ಯುದ್ಧದಲ್ಲಿ ತನ್ನ ದೇಶ ಎರಡು ಹೋಳಾಗುವುದನ್ನು ಕಣ್ಣಾರೆ ಕಂಡಿದ್ದರೂ, ಇಸ್ಲಾಮಿಕ್ ರಾಷ್ಟ್ರ ಪಾಕಿಸ್ತಾನ ಇಂದಿಗೂ ತಾನೇ ವಿಜಯಶಾಲಿ ಎಂದು ಸುಳ್ಳು ಪ್ರತಿಪಾದನೆ ಮಾಡುತ್ತಲೇ ಬಂದಿದೆ. ಇದೇ ಕಾರಣಕ್ಕೆ ಪಾಕಿಸ್ತಾನದಿಂದ ಸತ್ಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಭಾರತದ ವಿರುದ್ಧ ಸದಾ ವಿಷ ಕಾರುವ ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ಈಗ ಕದನ ವಿರಾಮದ (Ceasefire) ಕುರಿತು ಹಸಿ ಸುಳ್ಳನ್ನು ಹೇಳಿದ್ದಾರೆ. ಆದರೆ, ಅಮೆರಿಕದ ವಿದೇಶಿ ಏಜೆಂಟ್ ನೋಂದಣಿ ಕಾಯ್ದೆ (FARA) ಅಡಿಯಲ್ಲಿ ಬಹಿರಂಗವಾಗಿರುವ ದಾಖಲೆಗಳು ಮುನೀರ್ ವಾದಕ್ಕೆ ತದ್ವಿರುದ್ಧವಾದ ಸತ್ಯವನ್ನು ಬಿಚ್ಚಿಟ್ಟಿವೆ. ​ದಾಖಲೆಗಳ ಪ್ರಕಾರ, 2025ರ ಮೇ 6 ಮತ್ತು ಮೇ 9 ರ ನಡುವೆ ಭಾರತದ ‘ಆಪರೇಷನ್ ಸಿಂದೂರ್’ ನಡೆಯುತ್ತಿದ್ದಾಗ, ಪಾಕಿಸ್ತಾನವು ವಾಷಿಂಗ್ಟನ್‌ನಲ್ಲಿ ರಾಜಕಾರಣಿಗಳು, ರಕ್ಷಣಾ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವ್ಯಕ್ತಿಗಳೊಂದಿಗೆ ತೀವ್ರವಾದ ಸಂಪರ್ಕದಲ್ಲಿತ್ತು. ಈ ಅವಧಿಯಲ್ಲಿ ಪಾಕಿಸ್ತಾನವು ವಾಷಿಂಗ್ಟನ್‌ನಿಂದ 60ಕ್ಕೂ ಹೆಚ್ಚು ದೂರವಾಣಿ ಕರೆಗಳನ್ನು ಮಾಡಿತ್ತು ಎಂಬುದು ಸಾಬೀತಾಗಿದೆ. ​ಅಸಿಮ್ ಮುನೀರ್ ನಾಚಿಕೆಯಿಲ್ಲದೆ ಸುಳ್ಳು ಹೇಳಿದ್ದೇಕೆ? ​ಸುದ್ದಿ…

Read More

ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ತಾಯಿ ಎಂದರೆ ತ್ಯಾಗದ ಪ್ರತೀಕ. ಮನೆಯವರೆಲ್ಲರಿಗೂ ಬಡಿಸಿ, ಎಲ್ಲರ ಹೊಟ್ಟೆ ತುಂಬಿದ ಮೇಲೆ, ಉಳಿದ ಅಲ್ಪಸ್ವಲ್ಪ ಆಹಾರವನ್ನು ಸೇವಿಸುವ ಅಭ್ಯಾಸ ಬಹುತೇಕ ತಾಯಂದಿರಲ್ಲಿದೆ. ಇದನ್ನು ವೈದ್ಯಕೀಯ ಲೋಕದಲ್ಲಿ ‘ಲಾಸ್ಟ್ ಪ್ಲೇಟ್ ಸಿಂಡ್ರೋಮ್’ (Last Plate Syndrome) ಎಂದು ಕರೆಯಲಾಗುತ್ತದೆ. ಮೇಲ್ನೋಟಕ್ಕೆ ಇದು ಪ್ರೀತಿ ಅಥವಾ ಕಾಳಜಿಯಂತೆ ಕಂಡರೂ, ಇದು ಮಹಿಳೆಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಇತ್ತೀಚಿನ ಸಂಶೋಧನೆಗಳು ಎಚ್ಚರಿಸಿವೆ. ​ಏನಿದು ‘ಲಾಸ್ಟ್ ಪ್ಲೇಟ್ ಸಿಂಡ್ರೋಮ್’? ​ಮನೆಗೆಲಸ, ಅಡುಗೆ ಮತ್ತು ಮಕ್ಕಳ ಜವಾಬ್ದಾರಿಯ ನಡುವೆ ಮಹಿಳೆಯರು ತಮ್ಮ ಊಟದ ಸಮಯವನ್ನು ಸದಾ ಮುಂದೂಡುತ್ತಾರೆ. ಎಲ್ಲರೂ ತಿಂದ ನಂತರ ತಟ್ಟೆಯಲ್ಲಿ ಉಳಿದಿದ್ದನ್ನು ತಿನ್ನುವುದು ಅಥವಾ ಅಡುಗೆ ಮನೆಯಲ್ಲಿ ನಿಂತೇ ಗಡಿಬಿಡಿಯಲ್ಲಿ ಊಟ ಮುಗಿಸುವುದನ್ನು ಈ ಸಿಂಡ್ರೋಮ್ ಸೂಚಿಸುತ್ತದೆ. ​ಆರೋಗ್ಯದ ಮೇಲಾಗುವ ಪ್ರಮುಖ ಪರಿಣಾಮಗಳು: ​ಪೌಷ್ಟಿಕಾಂಶದ ಕೊರತೆ: ಎಲ್ಲರಿಗೂ ಬಡಿಸಿದ ನಂತರ ತಟ್ಟೆಯಲ್ಲಿ ಪೌಷ್ಟಿಕಯುಕ್ತ ಪದಾರ್ಥಗಳು (ತರಕಾರಿ, ಪ್ರೊಟೀನ್) ಉಳಿಯದಿದ್ದಾಗ, ತಾಯಂದಿರು ಕೇವಲ ಅನ್ನ ಅಥವಾ ರೊಟ್ಟಿಯನ್ನು…

Read More

ನವದೆಹಲಿ: ವಿದೇಶಿ ವಿನಿಮಯ ಉಳಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ನೀಡಿದ ಕರೆಯ ಬೆನ್ನಲ್ಲೇ ದೇಶಾದ್ಯಂತ ಸೃಷ್ಟಿಯಾಗಿರುವ ಆತಂಕಕ್ಕೆ ಕೇಂದ್ರ ಸರ್ಕಾರ ತೆರೆ ಎಳೆದಿದೆ. “ದೇಶದಲ್ಲಿ ಇಂಧನ ಕೊರತೆಯಿಲ್ಲ, ಸಾರ್ವಜನಿಕರು ಭಯಭೀತರಾಗುವ ಅಗತ್ಯವಿಲ್ಲ” ಎಂದು ಸರ್ಕಾರ ಅಧಿಕೃತ ಸ್ಪಷ್ಟನೆ ನೀಡಿದೆ. ಪ್ರಧಾನಿಯವರ ಕರೆ ಕೇವಲ ಜನರ ಸಂಘಟಿತ ಪಾಲ್ಗೊಳ್ಳುವಿಕೆಗಾಗಿ ನೀಡಿದ್ದೇ ಹೊರತು, ದೇಶದಲ್ಲಿ ಇಂಧನದ ತುರ್ತು ಪರಿಸ್ಥಿತಿ ಇದೆ ಎಂದಲ್ಲ. ರಾಷ್ಟ್ರೀಯ ಹಿತದೃಷ್ಟಿಯಿಂದ ಸಂಪನ್ಮೂಲಗಳ ಮಿತಬಳಕೆ ಮಾಡುವುದು ಇದರ ಉದ್ದೇಶ ಎಂದು ಸರ್ಕಾರ ವಿವರಿಸಿದೆ. ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ನಡುವೆಯೂ ಭಾರತದ ಬಳಿ ಕನಿಷ್ಠ 60 ದಿನಗಳಿಗೆ ಸಾಕಾಗುವಷ್ಟು ಕಚ್ಚಾ ತೈಲ ಮತ್ತು ಇಂಧನ ಸಂಗ್ರಹವಿದೆ. ಹೀಗಾಗಿ ಪೆಟ್ರೋಲ್ ಬಂಕ್‌ಗಳ ಮುಂದೆ ಸಾಲು ನಿಲ್ಲುವ ಅವಶ್ಯಕತೆಯಿಲ್ಲ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಇಂಧನ ಕೊರತೆಯ ಸುಳ್ಳು ಸುದ್ದಿಗಳ ಬಗ್ಗೆ ನಿಗಾ ಇರಿಸಲಾಗಿದ್ದು, ಅಂತಹ ವದಂತಿಗಳಿಗೆ ಕಿವಿಗೊಡದಂತೆ ನಾಗರಿಕರಲ್ಲಿ ಮನವಿ ಮಾಡಲಾಗಿದೆ.

Read More

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ಇರಾನ್‌ನಲ್ಲಿರುವ ತನ್ನ ಪ್ರಜೆಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವ ಬೃಹತ್ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ. ಈವರೆಗೆ ಸುಮಾರು 2,500ಕ್ಕೂ ಹೆಚ್ಚು ಭಾರತೀಯರನ್ನು ಅಲ್ಲಿಂದ ಯಶಸ್ವಿಯಾಗಿ ಸ್ಥಳಾಂತರಿಸಲಾಗಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ವಿಶೇಷ ‘ವಾರ್ ರೂಮ್’ ಅನ್ನು ಸಕ್ರಿಯಗೊಳಿಸಿದೆ. ಇರಾನ್‌ನಲ್ಲಿ ವಾಸಿಸುತ್ತಿರುವ ಭಾರತೀಯರು, ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳನ್ನು ಏರ್ ಇಂಡಿಯಾ ಮತ್ತು ವಿಶೇಷ ವಿಮಾನಗಳ ಮೂಲಕ ತುರ್ತಾಗಿ ಭಾರತಕ್ಕೆ ಕರೆತರಲಾಗುತ್ತಿದೆ. ನವದೆಹಲಿಯಲ್ಲಿ ವಿದೇಶಾಂಗ ಇಲಾಖೆಯು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ವಿಶೇಷ ನಿಯಂತ್ರಣ ಕೊಠಡಿಯನ್ನು (War Room) ಸ್ಥಾಪಿಸಿದೆ. ಇರಾನ್‌ನಲ್ಲಿರುವ ಭಾರತೀಯರು ಅಥವಾ ಅವರ ಸಂಬಂಧಿಕರು ಯಾವುದೇ ನೆರವಿಗಾಗಿ ಇಲ್ಲಿಗೆ ಸಂಪರ್ಕಿಸಬಹುದಾಗಿದೆ. ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಲ್ಲಿನ ಪ್ರತಿ ಪ್ರಜೆಯೊಂದಿಗೆ ನಿರಂತರ ಸಂಪರ್ಕದಲ್ಲಿದೆ. ರಸ್ತೆ ಮಾರ್ಗ ಅಥವಾ ವಾಯು ಮಾರ್ಗದ ಮೂಲಕ ಸುರಕ್ಷಿತವಾಗಿ ದೇಶ ಬಿಡಲು ಬೇಕಾದ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.

Read More

ನಾಸಿಕ್‌ನ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಮತಾಂತರ ಪ್ರಕರಣದ ಪ್ರಮುಖ ಆರೋಪಿ ನಿದಾ ಖಾನ್ ಅವರನ್ನು ಸೋಮವಾರ ನಾಸಿಕ್ ರೋಡ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ​ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ನಿದಾ ಖಾನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ರವಾನಿಸಿದ ಬೆನ್ನಲ್ಲೇ, ಅವರನ್ನು ನಾಸಿಕ್ ರೋಡ್ ಸೆಂಟ್ರಲ್ ಜೈಲಿಗೆ ಕರೆದೊಯ್ಯಲಾಯಿತು. ನಾಸಿಕ್‌ನ ಟಿಸಿಎಸ್ ಕಚೇರಿಯಲ್ಲಿ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಇವರ ವಿರುದ್ಧ ಪ್ರಕರಣ ದಾಖಲಾಗಿತ್ತು. ​ಮುಂಬೈ ನಾಕಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪರವಾಗಿ ಜಾಮೀನು ಅರ್ಜಿ ಸಲ್ಲಿಸಲಾಗಿದೆ. ಆರೋಪಿಗಳ ಪರ ವಕೀಲ ಮಿಲಿಂದ್ ಕುರ್ಕುಟೆ ಅವರು ಜಾಮೀನು ಅರ್ಜಿಯ ವಿಚಾರಣೆಯು ನಾಳೆ ನಡೆಯಲಿದೆ ಎಂದು ಖಚಿತಪಡಿಸಿದ್ದಾರೆ. ​ತನಿಖೆಯ ವಿವರಗಳು: ನಾಸಿಕ್ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ನಿದಾ ಖಾನ್ ಈ ಹಿಂದೆ ಪೊಲೀಸ್ ಕಸ್ಟಡಿಯಲ್ಲಿದ್ದರು ಮತ್ತು…

Read More

ವಾಷಿಂಗ್ಟನ್: ಚೀನಾ ಅಧ್ಯಕ್ಷ ಶೀ ಜಿನ್‌ಪಿಂಗ್ ಅವರೊಂದಿಗಿನ ಮಹತ್ವದ ಶೃಂಗಸಭೆಗೆ ಕೆಲವೇ ದಿನಗಳು ಬಾಕಿ ಇರುವಂತೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಮತ್ತಷ್ಟು ಕಠಿಣ ನಿಲುವು ತಳೆದ್ದಾರೆ. ಸಂಘರ್ಷ ತಣಿಸಲು ಇರಾನ್ ಕಳುಹಿಸಿದ್ದ ಕದನ ವಿರಾಮದ (Ceasefire) ಪ್ರಸ್ತಾವನೆಯನ್ನು ಟ್ರಂಪ್ ಸಾರಾಸಗಟಾಗಿ ತಳ್ಳಿಹಾಕಿದ್ದು, ಜಾಗತಿಕ ಮಟ್ಟದಲ್ಲಿ ಯುದ್ಧದ ಭೀತಿ ಹೆಚ್ಚಾಗುವಂತೆ ಮಾಡಿದ್ದಾರೆ. ಇರಾನ್ ತನ್ನ ಪರಮಾಣು ಕಾರ್ಯಕ್ರಮ ಮತ್ತು ಪ್ರಾದೇಶಿಕ ಚಟುವಟಿಕೆಗಳ ಕುರಿತು ಶಾಂತಿ ಮಾತುಕತೆಗೆ ಮುಂದಾಗಿತ್ತು. ಆದರೆ, “ಇರಾನ್ ತನ್ನ ನಡವಳಿಕೆಯನ್ನು ಸಂಪೂರ್ಣವಾಗಿ ಬದಲಾಯಿಸದ ಹೊರತು ಯಾವುದೇ ಒಪ್ಪಂದವಿಲ್ಲ” ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಮೇ 13 ರಿಂದ ಟ್ರಂಪ್ ಚೀನಾ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಭೇಟಿಯಲ್ಲಿ ಇರಾನ್ ವಿಚಾರವೇ ಪ್ರಮುಖ ಚರ್ಚೆಯಾಗಲಿದ್ದು, ಅದಕ್ಕೂ ಮುನ್ನವೇ ಇರಾನ್ ಪ್ರಸ್ತಾವನೆಯನ್ನು ತಿರಸ್ಕರಿಸುವ ಮೂಲಕ ಟ್ರಂಪ್ ತಾವು ಯಾರಿಗೂ ಬಗ್ಗುವುದಿಲ್ಲ ಎಂಬ ಸಂದೇಶವನ್ನು ಬೀಜಿಂಗ್‌ಗೆ ರವಾನಿಸಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಅಮೆರಿಕದ ನೌಕಾಪಡೆಗಳು ಈಗಾಗಲೇ ಸನ್ನದ್ಧ ಸ್ಥಿತಿಯಲ್ಲಿದ್ದು, ಟ್ರಂಪ್ ಅವರ ಈ ಇತ್ತೀಚಿನ…

Read More

ನವದೆಹಲಿ: ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ಇರಾನ್ ಸಂಪರ್ಕ ಹೊಂದಿರುವ ಬೃಹತ್ ಎಲ್‌ಪಿಜಿ (LPG) ಟ್ಯಾಂಕರ್ ಹಡಗೊಂದು ತಾನು ‘ಭಾರತೀಯ ಮಾಲೀಕತ್ವ’ಕ್ಕೆ ಸೇರಿದ್ದು ಎಂಬ ಸಂಕೇತವನ್ನು ರವಾನಿಸಿರುವುದು ಸಂಚಲನ ಮೂಡಿಸಿದೆ. ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧದ ಭೀತಿಯ ನಡುವೆ ಹಡಗುಗಳ ಮೇಲೆ ನಡೆಯುತ್ತಿರುವ ದಾಳಿಯಿಂದ ತಪ್ಪಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ. ​ಜಾಗತಿಕ ಹಡಗುಗಳ ಸಂಚಾರವನ್ನು ಗಮನಿಸುವ ‘ಮರೈನ್ ಟ್ರಾಫಿಕ್’ ದತ್ತಾಂಶದ ಪ್ರಕಾರ, ಇರಾನ್‌ನ ಇಂಧನ ಸಾಗಾಟಕ್ಕೆ ಬಳಸಲಾಗುವ ಹಡಗು ಹಾರ್ಮುಜ್ ಜಲಸಂಧಿಯನ್ನು ದಾಟುವಾಗ ತನ್ನ ಐಡೆಂಟಿಫಿಕೇಶನ್ ಸಿಸ್ಟಮ್ (AIS) ನಲ್ಲಿ ತನ್ನ ಮಾಲೀಕತ್ವದ ವಿವರವನ್ನು ಬದಲಾಯಿಸಿದೆ.  ಈ ಜಲಸಂಧಿಯಲ್ಲಿ ಇರಾನ್ ಮೇಲೆ ನಿಗಾ ಇಟ್ಟಿರುವ ಅಮೆರಿಕ ಮತ್ತು ಬ್ರಿಟನ್ ನೌಕಾಪಡೆಗಳಿಂದ ತಪ್ಪಿಸಿಕೊಳ್ಳಲು ಅಥವಾ ಯಾವುದೇ ಸಂಭವನೀಯ ದಾಳಿಯನ್ನು ತಡೆಯಲು ಭಾರತದ ಹೆಸರನ್ನು ಬಳಸಿಕೊಳ್ಳಲಾಗಿದೆ ಎನ್ನಲಾಗಿದೆ. ಜಾಗತಿಕವಾಗಿ ಭಾರತವು ಎಲ್ಲಾ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದರಿಂದ, ‘ಭಾರತದ ಹಡಗು’…

Read More