ಶಿವಮೊಗ್ಗ: ಜಿಲ್ಲೆಯ ಸೊರಬದ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ಮೇ 30, 2026ರ ಶನಿವಾರದಂದು ಬೆಳಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ವಿವಿಧ ಫೀಡರ್‌ಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಮೆಸ್ಕಾಂ) ಪ್ರಕಟಣೆಯಲ್ಲಿ ತಿಳಿಸಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:
ಸೊರಬ ವಿದ್ಯುತ್ ಕೇಂದ್ರದಿಂದ ಸರಬರಾಜಾಗುವ ಈ ಕೆಳಗಿನ ಫೀಡರ್‌ಗಳ ವ್ಯಾಪ್ತಿಯ ಗ್ರಾಮಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ:
- ಎಫ್-21: ಸೊರಬ ಪಟ್ಟಣ
- ಎಫ್-2: ಸಾರೆಕೊಪ್ಪ
- ಎಫ್-3: ಬಳ್ಳೀಬೈಲು
- ಎಫ್-4: ಓಟೂರು
- ಎಫ್-5: ಚಿಕ್ಕಾವಲಿ
- ಎಫ್-15: ಕಲ್ಲಂಬಿ ಎನ್‌ಜೆವೈ
- ಎಫ್-16: ಕಡಸೂರು ಎನ್‌ಜೆವೈ
- ಎಫ್-17: ಯಲವಳ್ಳ
- ಎಫ್-6: ಹಾಲಗಳಲೆ
- ಎಫ್-7: ತಲಚೆಬೈಲು
- ಎಫ್-8: ಕುಪ್ಪೆ
- ಎಫ್-9: ಬಿಳಾಗಿ
- ಎಫ್-10: ಮರ
- ಎಫ್-11: ಮಂಚಿ
- ಎಫ್-12: ಉರಗನಹಳ್ಳಿ
- ಎಫ್-13: ಆಂದಿಗೆ
- ಎಫ್-14: ಕೊಡಕಣಿ
- ಎಫ್-18: ನಿಸ್ರಾಣಿ
- ಎಫ್-20: ಹೆಗ್ಗೋಡು ಎನ್‌ಜೆವೈ
- ಎಫ್-23: ತಾವರೆಹಳ್ಳಿ
- ಎಫ್-24: ಕಕ್ಕರಸಿ
- ಎಫ್-25: ನಡಹಳ್ಳಿ
- ಎಫ್-26: ಸೊರಬ ಇಂಡಸ್ಟ್ರಿಯಲ್ ಫೀಡರ್
ಮೇಲೆ ನಮೂದಿಸಲಾದ ಫೀಡರ್‌ಗಳ ವ್ಯಾಪ್ತಿಗೆ ಒಳಪಡುವ ಎಲ್ಲಾ ಗ್ರಾಮಗಳ ಸಾರ್ವಜನಿಕರು ಹಾಗೂ ಗ್ರಾಹಕರು ಎಂದಿನಂತೆ ಮೆಸ್ಕಾಂ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಸೊರಬ ಕಾರ್ಯ ಮತ್ತು ಪಾಲನೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸತ್ಯಪ್ರಕಾಶ್ ಪ್ರಕಟಣೆಯ ಮೂಲಕ ಕೋರಿದ್ದಾರೆ.








