Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : SSLC ಹಿಂದಿ ಭಾಷಾ ಪರೀಕ್ಷೆಗೆ ಗ್ರೇಡ್ ಮಾರ್ಕ್ಸ್ ನೀಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆ ನೀಡಿದ್ದು, ಇದರಿಂದ ಏನು ಪ್ರಯೋಜನ ಅಂತ ಬಿಜೆಪಿಯವರು ಕೇಳುತ್ತಾರೆ. ಹಿಂದಿ ಭಾಷೆ ಹೇರಿಕೆಯಿಂದ ಏನು ಲಾಭ ಆಗುತ್ತೆ ಅಂತ ಬಿಜೆಪಿಯವರು ಹೇಳಲಿ. ಕೇಂದ್ರ ಸಚಿವ ಅಮಿತ್ ಶಾ ಮನವೊಲಿಸಲು ರಾಜ್ಯ ಬಿಜೆಪಿ ನಾಯಕರು ಮಾತನಾಡುತ್ತಾರೆ ಅಷ್ಟೇ. ಇವರು ಸಂಸ್ಕೃತಕ್ಕೆ ಸಾವಿರಾರು ಕೋಟಿ ಹಣ ಕೊಟ್ಟಿದ್ದಾರೆ. ಕನ್ನಡಕ್ಕೆ 10 ವರ್ಷದಿಂದ 20 ಕೋಟಿ ಕೂಡ ಕೊಟ್ಟಿಲ್ಲ ರಾಜ್ಯದ ಭಾಷೆ ಬೆಳೆಯಬೇಕು. ತುಳು ಭಾಷೆಗೂ ಸ್ನಾನಮಾನ ಸಿಗಬೇಕು ಎಂಬ ಬೇಡಿಕೆ ಇದೆ ಕೇಂದ್ರ ಸರ್ಕಾರಕ್ಕೆ ಈ ವಿಚಾರವಾಗಿ ನಾವು ಪ್ರಸ್ತಾವನೆ ಕಳಿಸಿದ್ದೇವೆ. ಕೇಂದ್ರದವರಿಗೆ ರಾಜ್ಯ ಭಾಷೆಯ ಮೇಲೆ ಜವಾಬ್ದಾರಿ ಇಲ್ವಾ? ನೆಲ ಜಲ ಭಾಷೆಗೆ ಎಂಪಿಗಳು ಹೋರಾಟ ಮಾಡಿದ್ದಾರ? ಎಂದು ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ ಖರ್ಗೆ ಪ್ರಶ್ನಿಸಿದರು.
ಯಾದಗಿರಿ : ರಾಜ್ಯದಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಕೃಷಿ ಹೊಂಡದಲ್ಲಿ ಈಜಲು ಹೋಗಿ ನಾಲ್ವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ಈ ಒಂದು ಘೋರ ಘಟನೆ ಸಂಭವಿಸಿದೆ. ಮೃತ ಮಕ್ಕಳನ್ನು ಕಿರಣ್ (6) ಬಸಮ್ಮ (11), ಶರತ್ (6) ಹಾಗೂ ಹನುಮೇಶ್ (7) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ. ಶಾಲೆಗೆ ರಜೆ ಇದ್ದಿದ್ದರಿಂದ ನಾಲ್ವರು ಮಕ್ಕಳು ಈಜಲು ಹೋಗಿದ್ದಾಗ ಈ ಒಂದು ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಬಂದು ಮೃತದೇಹಗಳನ್ನು ಮೇಲಕ್ಕೆ ಎತ್ತಿದ್ದಾರೆ. ಸ್ಥಳದಲ್ಲಿ ಮೃತ ಮಕ್ಕಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ನವದೆಹಲಿ : ದಕ್ಷಿಣ ಲೇಬನಾನ್ ಮೇಲೆ ಇಸ್ರೇಲ್ ಏರ್ ಸ್ಟ್ರೈಕ್ ನಡೆಸಿದ್ದು ಇದರಲ್ಲಿ ನಾಗರಿಕರು ಸೇರಿದಂತೆ ಮೂವರು ಪತ್ರಕರ್ತರು ಬಲಿಯಾಗಿದ್ದಾರೆ. ಯುದ್ಧದ ವರದಿ ಮಾಡಲು ಪತ್ರಕರ್ತರು ತೆರಳಿದ್ದರು ಇಸ್ರೇಲ್ ಏರ್ ಸ್ಟ್ರೈಕ್ ಹೊಡೆತಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಇಸ್ರೇಲ್ ಇರಾನ್ ಮೇಲೆ ತನ್ನ ದಾಳಿಯನ್ನು ಒಂದು ವರೆಸಿದೆ ದಕ್ಷಿಣ ಲೇಬನಾನ್ ಮೇಲೆ ಇಸ್ರೇಲ್ ಹೇರ್ ಸ್ಟೈಲ್ ಪರಿಣಾಮದಿಂದ ನಾಗರೀಕರು ಸೇರಿದಂತೆ ಮೂರು ಪತ್ರಕರ್ತರು ಬಲಿಯಾಗಿದ್ದಾರೆ. ಅಲಿ ಶೋಯೆಬ್ ಫಾತಿಮಾ ಮತ್ತು ಮೊಹಮ್ಮದ್ ಮೃತ ದುರ್ದೇವಿಗಳು ಎಂದು ತಿಳಿದುಬಂದಿದೆ.
ಮೈಸೂರು : ಕಳೆದ ಮೂರು ವರ್ಷಗಳಲ್ಲಿ 4,011 ಪಿಎಸ್ಐ ಹುದ್ದೆಗಳನ್ನು ಭರ್ತಿ ಮಾಡಿದ್ದೇವೆ ಈ ವರ್ಷ ಖಾಲಿ ಇರುವ 8000 ಪಿಎಸ್ಐ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡುತ್ತೇವೆ ಎಂದು ಪಿ ಎಸ್ ಐಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದರು. ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ಪಥಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೊಲೀಸರು ಕರ್ತವದಲ್ಲಿ ಇದ್ದಾಗ ನಿಮ್ಮ ಕುಟುಂಬದ ಬಗ್ಗೆ ಯೋಚಿಸಬೇಡಿ. ಮನೆಯ ಸದಸ್ಯರ ಬಗ್ಗೆ ಯೋಚಿಸಬೇಡಿ. ನಿಮ್ಮ ರಕ್ಷಣೆಗೆ ಸರ್ಕಾರ ಇರುತ್ತದೆ. ಮಾದಕ ವಸ್ತು ಮುಕ್ತ ಕರ್ನಾಟಕ ನಿರ್ಮಾಣ ನಮ್ಮ ಸರ್ಕಾರದ ಸಂಕಲ್ಪವಾಗಿದೆ. ಪೊಲೀಸರು ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಾರು ಡ್ರಗ್ಸ್ ತಯಾರಿಸುತ್ತಾರೆ, ಯಾರು ಡ್ರಗ್ಸ್ ಮಾರಾಟ ಮಾಡುತ್ತಾರೆ, ಎಂಬುವುದು ನಿಮಗೆ ಗೊತ್ತಿರುತ್ತದೆ. ಇನ್ಸ್ಪೆಕ್ಟರ್ ಹಾಗೂ ಸಬ್ ಇನ್ಸ್ಪೆಕ್ಟರ್ ಗಳಿಗೆ ಗೊತ್ತಿರುತ್ತದೆ. ಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಪೊಲೀಸರು ಸಜ್ಜಾಗಬೇಕು. ಪೊಲೀಸ್ ಅಧಿಕಾರಿಗಳು ಮಾನವೀಯತೆಯಿಂದ ಕೆಲಸ ಮಾಡಬೇಕು. ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡಬೇಕು…
ಮೈಸೂರು : ಪೊಲೀಸ್ ಎಂದರೆ ಶಿಸ್ತು ಧೈರ್ಯ ಮತ್ತು ಪ್ರಾಮಾಣಿಕತೆ ಇರುವ ಕೆಲಸ ಎಂದು ಪಿ ಎಸ್ ಐ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು. ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ಪಥಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಧ್ಯರಾತ್ರಿ 12 ಗಂಟೆಗೆ ಮಹಿಳೆಯರು ನಿರ್ಭಯವಾಗಿ ಹೋರಾಡಬೇಕು ಅಂತ ಸಮಾಜ ನಿರ್ಮಾಣ ಆಗಬೇಕು ಎಂಬುವುದು ಮಹಾತ್ಮ ಗಾಂಧೀಜಿ ಆಶಯ. ಎಷ್ಟೇ ಕಷ್ಟವಾದರೂ ಸಹ ಪೊಲೀಸರು ನ್ಯಾಯ ಎತ್ತಿ ಹಿಡಿಯಬೇಕು. ಬಲಾಡ್ಯರ ಅಧಿಕಾರ ಇರಬಾರದು. ಬಲಾಡ್ಯರ ಕೈಯಲ್ಲಿ ಅಧಿಕಾರ ಇದ್ದರೆ ಸಮಾ ಸಮಾಜ ನಿರ್ಮಾಣ ಅಸಾಧ್ಯ. ಪೊಲೀಸರು ಶ್ರೀಮಂತರ ಆಸೆಗೆ ಆಮಿಷಗಳಿಗೆ ಒಳಗಾಗಬಾರದು ಶ್ರೀಮಂತರು ಪೊಲೀಸರನ್ನು ದುರುಪಯೋಗಪಡಿಸಿಕೊಡಲು ಯತ್ನಿಸುತ್ತಾರೆ ಎಂದು ಪಿಎಸ್ಐ ಗಳ ನಿರ್ಗಮನ ಪದ ಸಂಚಲನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ನವದೆಹಲಿ : ಯುದ್ಧದಿಂದ ಹಲವು ಸಂಕಷ್ಟಗಳು ಎದುರಾಗಿವೆ. ಮಧ್ಯಪ್ರಾಚ್ಯ ದೇಶಗಳಲ್ಲಿರುವ ಭಾರತೀಯರ ರಕ್ಷಣೆಗೆ ಬದ್ದ ಅಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆತರಲಾಗಿದೆ ಭಾರತೀಯರ ರಕ್ಷಣೆಗೆ ಸಹಕಾರ ನೀಡಿದ ಕೊಲ್ಲಿ ದೇಶಗಳಿಗೆ ಧನ್ಯವಾದ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಮನೆ ತಿಳಿಸಿದರು. 132 ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದರು. ಅಮೆರಿಕ-ಇಸ್ರೇಲ್ ಮತ್ತು ಇರಾನ್ ಯುದ್ಧದ ಬಗ್ಗೆ ಪ್ರಸ್ತಾಪಿಸಿದರು. ಜಗತ್ತಿನಲ್ಲಿ ಯುದ್ಧ ನಡೆಯುತ್ತಿದೆ ಎಂದು ಪ್ರಧಾನಿ ಹೇಳಿದರು. ಪೆಟ್ರೋಲ್ ಮತ್ತು ಡೀಸೆಲ್ ಬಿಕ್ಕಟ್ಟು ಉದ್ಭವಿಸಿದೆ, ಆದರೆ ಭಾರತ ಈ ಸವಾಲನ್ನು ಎದುರಿಸುತ್ತಿದೆ. ಯಾವುದೇ ವದಂತಿಗಳನ್ನು ನಂಬಬೇಡಿ ಮತ್ತು ಸರ್ಕಾರ ಒದಗಿಸುವ ಮಾಹಿತಿಯನ್ನು ನಂಬುವಂತೆ ಸರ್ಕಾರ ಸಾರ್ವಜನಿಕರಿಗೆ ಮನವಿ ಮಾಡುತ್ತದೆ. ಕೆಲವರು ವಾತಾವರಣವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ಯುದ್ಧದಿಂದಾಗಿ ಇಂಧನ ಬಿಕ್ಕಟ್ಟು: ಸ್ನೇಹಿತರೇ, ಪ್ರಸ್ತುತ ಯುದ್ಧದಲ್ಲಿರುವ ಪ್ರದೇಶವು ನಮ್ಮ ಇಂಧನ ಅಗತ್ಯಗಳಿಗೆ ಪ್ರಮುಖ ಕೇಂದ್ರವಾಗಿದೆ. ಇದು ಪೆಟ್ರೋಲ್ ಮತ್ತು…
ಬೆಂಗಳೂರು : ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಡಿಐಜಿ ಅಲೋಕ್ ಕುಮಾರ್ ಹೆಸರಿಗೆ ಕಳಂಕ ತರಲು ಕೈದಿಗಳು ಸಂಚು ರೂಪಿಸಿದ್ದಾರೆ. ಜೈಲಿನ ಒಳಗಿನಿಂದಲೇ ಅಲೋಕ ಕುಮಾರ್ ವಿರುದ್ಧದ ವಿಡಿಯೋ ಮಾಡಿದ್ದಾರೆ. ಅಲೋಕ ಕುಮಾರ್ ಅವರೇ ಮೊಬೈಲ್ ಕೊಟ್ಟಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಘಟನೆ ಸಂಭಂದ ಮೂವರು ಜೈಲು ಸಿಬ್ಬಂದಿ ತೆಲದಂಡ ಆಗಿದ್ದು, ಮೂವರು ವಾರ್ಡರ್ ಗಳನ್ನು ಅಮಾನತು ಮಾಡಿ ಕಾರಾಗೃಹ ಡಿಜಿಪಿ ಆಲೋಕ ಕುಮಾರ್ ಆದೇಶ ಹೊರಡಿಸಿದ್ದಾರೆ. ಶಿವಾನಂದ ಕರ್ಲಬಟ್ಟಿ, ನಿರಂಜನ್ ಎ ಕಾಮತ್ ಹಾಗೂ ಹನುಮಂತಪ್ಪ ಹಡಪದ ಮೂವರನ್ನು ಅಮಾನತು ಮಾಡಿ ಅಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಜೈಲರ್ ವಿರುದ್ಧ ಕೂಡ ಶಿಸ್ತುಕ್ರಮಕ್ಕೆ ಅಲೋಕ್ ಕುಮಾರ್ ಮುಂದಾಗಿದ್ದಾರೆ.ಅಷ್ಟೇ ಅಲ್ಲದೆ ಜಲಿನ ಕೆಲವು ಕಡೆ ಏರ್ಟೆಲ್ ಸಿಗ್ನಲ್ ಸಿಕ್ಕಿರುವ ಹಿನ್ನೆಲೆ ತನಿಖೆ ಚುರುಕುಗೊಳಿಸಿದ್ದಾರೆ. ಘಟನೆ ಹಿನ್ನೆಲೆ? ಆರ್ಸಿಬಿ ಮ್ಯಾಚ್ ಇದೆ ಈ ಸಲ ಕಪ್ ನಮ್ದೇ ಎಂದು ಕೈದಿಗಳು ವಿಡಿಯೋ ಮಾಡಿದ್ದಾರೆ. ವಿಡಿಯೋ ಬಳಿಕ…
ಚಿಕ್ಕಮಗಳೂರು: ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಫರ್ನಿಚರ್ ಅಂಗಡಿ ಹೊತ್ತಿ ಉರಿದು ಲಕ್ಷಾಂತರ ಮೌಲ್ಯದ ಫನಿರ್ಚರ್ ಸುಟ್ಟು ಕರಕಲಾದ ಘಟನೆ ನಗರದ ಮುಖ್ಯ ರಸ್ತೆ ಐಜಿ ರಸ್ತೆಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಹಾಸಿಗೆ, ಬೀರು, ಕುಷನ್, ಸೋಫಾ ಸೆಟ್, ದಿವಾನ್ ಕಾಟ್ ಮುಂತಾದ ಫರ್ನಿಚರ್ ಅಂಗಡಿಯಲ್ಲಿದ್ದ ಬಹುತೇಕ ಎಲ್ಲಾ ವಸ್ತುಗಳು ಬೆಂಕಿಗಾಹುತಿಯಾಗಿವೆ. ಹಾಸಿಗೆ, ಕುಷನ್ ಇದ್ದ ಕಾರಣ ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಇನ್ನು ಮಾಹಿತಿ ತಿಳಿದ ಕ್ಷಣ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗಳು ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದಕ್ಕೂ ಮೊದಲು ಸಣ್ಣ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ.
ಬೆಂಗಳೂರು : ಮದ್ಯ ಪ್ರಿಯರೇ ಬಿಯರ್ ಕುಡಿಯುವ ಮುನ್ನ ಆದಷ್ಟು ಎಚ್ಚರವಾಗಿರಿ. ಏಕೆಂದರೆ ಇದೀಗ ಅಧಿಕಾರಿಗಳಿಂದಲೇ ಅವಧಿ ಮೀರಿದ ಮದ್ಯ ಮಾರಾಟ ಮಾಡಿರುವ ಘಟನೆ ವರದಿಯಾಗಿದೆ. ಹಣದ ಆಸೆಗೆ ಅಬಕಾರಿ ಅಧಿಕಾರಿಗಳು ಕಳ್ಳದಾರಿ ಹಿಡಿದಿದ್ದಾರೆ ನಿಗಮದ ಸೂಪರ್ವೈಸರ್ ಮನೆಯಲ್ಲಿ ಅವಧಿ ಮೀರಿದ ಮದ್ಯ ಪತ್ತೆಯಾಗಿದೆ. ವಿವಿಧ ಕಂಪನಿಗಳ 20 ಬಾಕ್ಸ್ ಗಳಲ್ಲಿ ಅವಧಿ ಮೀರಿದಂತಹ ಮಧ್ಯದ ಬಾಟಲಿಗಳು ಪತ್ತೆಯಾಗಿವೆ. ಗ್ರಾಮೀಣ ಭಾಗದಲ್ಲಿ ಅವಧಿ ಮೀರಿದ ಮದ್ಯಗಳನ್ನು ಮಾರಾಟಕ್ಕೆ ಪ್ಲಾನ್ ಮಾಡಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದ ಐಜೂರು ಪೊಲೀಸರು ಕಾರ್ಯಾಚರಣೆ ನಡೆಸಿದ ವೇಳೆ ಘಟನೆ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಸುರೇಶ್ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸಾಮಾನ್ಯವಾಗಿ ಮದ್ಯ ಹಾಗೂ ಬಿಯರ್ ಡೇಟ್ ಎಕ್ಸ್ಪೈರಿ ಆದ ನಂತರ ಅವುಗಳನ್ನು ನಾಶಮಾಡುವ ನಿಯಮವಿದೆ. ಆದರೆ ಈ ಕಳ್ಳ ಅಧಿಕಾರಿಗಳು ಅವುಗಳನ್ನು ಒಂದು ಗೋಧಾಮಿನಲ್ಲಿ ಶೇಖರಣೆ ಮಾಡಿ ಗ್ರಾಮೀಣ ಭಾಗದಲ್ಲಿ ಅವಧಿಮರಿದ ಮಧ್ಯ ಮಾರಾಟ ಮಾಡುತ್ತಿದ್ದರು. ಇದೀಗ ಪೊಲೀಸರು ಕಾರ್ಯಾಚರಣೆ ನಡೆಸಿ ಓರ್ವನನ್ನು…
ಬೆಂಗಳೂರು : ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಡಿಐಜಿ ಅಲೋಕ್ ಕುಮಾರ್ ಹೆಸರಿಗೆ ಕಳಂಕ ತರಲು ಕೈದಿಗಳು ಸಂಚು ರೂಪಿಸಿದ್ದಾರೆ. ಜೈಲಿನ ಒಳಗಿನಿಂದಲೇ ಅಲೋಕ ಕುಮಾರ್ ವಿರುದ್ಧದ ವಿಡಿಯೋ ಮಾಡಿದ್ದಾರೆ. ಅಲೋಕ ಕುಮಾರ್ ಅವರೇ ಮೊಬೈಲ್ ಕೊಟ್ಟಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಆರ್ಸಿಬಿ ಮ್ಯಾಚ್ ಇದೆ ಈ ಸಲ ಕಪ್ ನಮ್ದೇ ಎಂದು ಕೈದಿಗಳು ವಿಡಿಯೋ ಮಾಡಿದ್ದಾರೆ. ವಿಡಿಯೋ ಬಳಿಕ ಪೊಲೀಸರು ಅಲರ್ಟ್ ಆಗಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಧಿಕಾರಿಗಳು ಶೋಧ ನೆಡೆಸುತ್ತಿದ್ದಾರೆ ಜೈಲಿನೊಳಗೆ ವಿಡಿಯೋ ಮಾಡಿದ್ದ ವಿಚಾರಣಾನಾಧೀನ ಕೈದಿಗಳು ಪತ್ತೆಯಾಗಿದ್ದು ಕೈದಿಗಳನ್ನು ಅವರ ಹೆಸರಿನ ಆಧಾರದ ಬೇರೆ ಬೇರೆ ಬ್ಯಾರೆಕಗೆ ಶಿಫ್ಟ್ ಮಾಡಲಾಗಿದೆ. ಅಲೋಕ್ ಕುಮಾರ್ ವಿರುದ್ಧ ವಿಡಿಯೋ ಮಾಡಿದ್ದ ಕೈದಿಗಳು ಲಾಕ್ ಆಗಿದ್ದಾರೆ. ವಿಡಿಯೋ ಬಳಿಕ ಆದ ಅಧಿಕಾರಿಗಳು ಪರಪ್ಪನ ಅಗ್ರಹಾರ ಶೋಧ ನೆಡಿಸಲಾಗಿದೆ. ಇವಳೇ ಡ್ರೈನೇಜ್ ನೀರು ಹೋಗುವ ಸ್ಥಳದಲ್ಲಿ ಕೈದಿಗಳು ಬಟ್ಟೆಯಲ್ಲಿ ಮೊಬೈಲ್ ಸುದ್ದಿ ಇಟ್ಟಿದ್ದಾರೆ, ಕೊಡಲೇ ಪೊಲೀಸರು ಕೈದಿಗಳಿಂದಲೇ ಮೊಬೈಲ್ ಗಳನ್ನು ಹೊರಗಡೆ ತೆಗೆಸಿದ್ದು…













