Subscribe to Updates
Get the latest creative news from FooBar about art, design and business.
Author: kannadanewsnow05
ಉತ್ತರಪ್ರದೇಶ : ಉತ್ತರ ಪ್ರದೇಶದ ಆಯೋಧ್ಯೆಯಲ್ಲಿ ಇಂದು ರಾಮ ನವಮಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು. ಇದೇ ವೇಳೆ ಶ್ರೀ ರಾಮಲಲ್ಲ ಹಣೆಗೆ ಸೂರ್ಯ ರಶ್ಮಿ ತಿಲಕ ನೋಡಿ ಭಕ್ತರು ಪುನೀತರಾದರು. ಸೂರ್ಯ ರಶ್ಮಿ ನೇರವಾಗಿ ರಾಮಲಲ್ಲ ವಿಗ್ರಹದ ಹಣೆಗೆ ಸ್ಪರ್ಶಿಸಿದ್ದು ರಾಮಲಲ್ಲಾಗೆ ಸೂರ್ಯನ ತಿಲಕವಿಟ್ಟಂತೇ ಕಾಣಿಸಿತು. ಸುಮಾರು 4 ನಿಮಿಷಗಳ ಕಾಲ ರಾಮಲಲ್ಲ ಹಣೆಗೆ ಸೂರ್ಯ ರಶ್ಮಿ ತಿಲಕ ಇತ್ತು.ಅಯ್ಯೋಧ್ಯಯಲ್ಲಿ ರಾಮ ಲಾಲ ದರ್ಶನ ಪಡೆದ ಸಹಸ್ರಾರ ಭಕ್ತರು, ಕರ್ನಾಟಕದ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿದಂತಹ ಕಪ್ಪು ಶಿಲೆಯಲ್ಲಿ ಶ್ರೀ ರಾಮನ ಸುಮಾರು 15 ಅಡಿ ಎತ್ತರದ ಭವ್ಯ ಮೂರ್ತಿಗೆ ಇಂದು ವಿಶೇಷವಾದ ಪೂಜೆ ಪುನಸ್ಕಾರ ಹಾಗೂ ವಿಶಿಷ್ಟವಾದ ಅಲಂಕಾರ ನೆರವೇರಿಸಲಾಯಿತು.
ಬೆಂಗಳೂರು : ಬರ್ತಡೇ ಪಾರ್ಟಿ ಆಚರಣೆಗಾಗಿ ದರೋಡೆ ಮಾಡಿದ ಐವರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ದರೋಡೆ ಮಾಡಿದ್ದ ಐವರನ್ನು ಇದೀಗ ಬಂಧಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೋಲಿಸರಿಂದ ಕಾರ್ಯಾಚರಣೆ ನಡೆದಿದೆ. ಮುನೇಗೌಡ, ಆನಂದ, ಗಗನ, ತಿಲಕ್ ಮತ್ತು ಆಕಾಶ್ ಬಂದಿದ ಆರೋಪಿಗಳು ಎಂದು ತಿಳಿದುಬಂದಿದೆ. ನಾಗದೇವ ಹಳ್ಳಿಯ ಗೀತಂ ವಿಶ್ವವಿದ್ಯಾಲಯ ಬಳಿ ವಿದ್ಯಾರ್ಥಿಗಳನ್ನು ಬೆದರಿಸಿ ದರೋಡೆ ಮಾಡಿದ್ದರು. ದೊಡ್ಡಬಳ್ಳಾಪುರದ ಹರವಲಯದಲ್ಲಿರುವ ಗೀತಂ ವಿಶ್ವವಿದ್ಯಾಲಯದ ಬಳಿ ವಿದ್ಯಾರ್ಥಿಗಳನ್ನು ಬೆದರಿಸಿ ಸುಲಿಗೆ ಮಾಡಿದ್ದರು. ಆನಂದನ ಬರ್ತಡೆ ಪಾರ್ಟಿ ಮಾಡಲು ಈ ಒಂದು ಗ್ಯಾಂಗ್ ದರೋಡೆ ಮಾಡಿತ್ತು.ಪಿಜಿ ಮೇಲೆ ಹಲ್ಲೆ ನಡೆಸಿ ಫೋನ್ ಪೇ ಮೂಲಕ ಹಣ ಸುಲಿಗೆ ಮಾಡಿದ್ದಾರೆ. ಹಲ್ಲೆಗೆ ಒಳಗಾದ ಬಿಇ ವಿದ್ಯಾರ್ಥಿಗಳು ನೀಡಿದ ದೂರಿನ ಮೇರೆಗೆ ಕೇಸ್ ದಾಖಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಂತರ ಠಾಣೆ ಪೋಲಿಸರು ಪ್ರಕರಣದ ಕಲಿಸಿಕೊಂಡು ಐವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಹಾಸನ : ಹಾಸನದಲ್ಲಿ ಪ್ರಿವೆಡಿಂಗ್ ಶೂಟ್ ಗೆ ತೆರಳಿದ ಫೋಟೋಗ್ರಾಫರ್ಸ್ ಮೇಲೆ ಹಲ್ಲೆ ಮರಗುಂದ ಗ್ರಾಮದ ಬೆಟ್ಟದ ಬೈರವೇಶ್ವರ ದೇವಾಲಯ ಬಳಿ ಈ ಒಂದು ಘಟನೆ ನಡೆದಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮರಗುಂದ ಗ್ರಾಮದ ಬೆಟ್ಟದ ಬೈರವೇಶ್ವರ ದೇವಾಲಯದ ಬಳಿ ಪ್ರಿವೆಡ್ಡಿಂಗ್ ಶೂಟ್ ಮಾಡುತ್ತಿದ್ದ ವೇಳೆ ಕೆಲವು ಕಿಡಿಗೇಡಿಗಳು ಅಡ್ಡಿ ಮಾಡಿದ್ದಾರೆ. ದೇವಾಲಯ ಆವರಣದಲ್ಲಿ ಫೋಟೋಶೂಟ್ ಮಾಡುತ್ತಿದ್ದಕ್ಕೆ ಅಡ್ಡಿ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಫೋಟೋಗ್ರಾಫರ್ಸ್ ಮೇಲೆ ಹಲ್ಲೆ ಮಾಡಿದ್ದಾರೆ. ಫೋಟೋಗ್ರಾಫರ್ ಯಶ್ ಸೇರಿದಂತೆ ಹಲವರ ಮೇಲೆ ಹಲ್ಲಿ ನಡೆದಿದೆ ಸಕಲೇಶಪುರ ತಾಲೂಕು ಆಸ್ಪತ್ರೆಯಲ್ಲಿ ಫೋಟೋಗ್ರಾಫರ್ಸ್ ಗೆ ಚಿಕಿತ್ಸೆ ನೀಡಲಾಗುತ್ತಿದೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು : ಅರಣ್ಯ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ ಎಸಲಾಗಿದೆ. ಬರೋಬ್ಬರಿ 15 ಯುವಕರಿಂದ ಮೂರರಿಂದ ಐದು ಲಕ್ಷ ಪಡೆದು ವಂಚನೆ ಎಸಗಲಾಗಿದೆ. ಮೈಸೂರಿನ ಅರಣ್ಯ ಪ್ರದೇಶದಲ್ಲಿ ಹುದ್ದೆ ಕೊಡಿಸುತ್ತೇನೆ ಎಂದು ಆಮಿಷ ಒಡ್ಡಲಾಗಿದೆ. ಯುವಕರಿಗೆ ನಕಲಿ ನೇಮಕಾತಿ ಆದೇಶ ಪ್ರತಿನಿಧಿ ಕಳುಹಿಸಿ ವಂಚನೆ ಎಸಲಾಗಿದೆ. ಇನ್ನು ತರಬೇತಿ ನೆಪದಲ್ಲಿ ತೋಟದ ಮನೆಯಲ್ಲಿ ಯುವಕರಿಗೆ ಟ್ರೇನಿಂಗ್ ಕೂಡ ಕೊಟ್ಟಿದ್ದಾರೆ. ಅರಣ್ಯ ಇಲಾಖೆಯ ಮೇಲಾಧಿಕಾರಿಗಳ ನಕಲಿ ಲೆಟರ್ ಹೆಡ್ ಬಳಸಿ ಯುವಕರಿಗೆ ನಕಲಿ ಆದೇಶ ಪತ್ರ ಕೂಡ ನೀಡಿದ್ದಾರೆ. ತರಬೇತಿ ನೆಪದಲ್ಲಿ ತೋಟದ ಮನೆಯಲ್ಲಿ ಯುವಕರಿಗೆ ಟ್ರೇನಿಂಗ ನೀಡಿದ್ದು, ತುಮಕೂರು ತಾಲೂಕಿನ ವಡ್ಡರಹಳ್ಳಿಯಲ್ಲಿ ನಕಲಿ ತರಬೇತಿ ಕೂಡ ಕೊಟ್ಟಿದ್ದಾರೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಇದೀಗ ಯುವಕರು ದೂರು ನೀಡಿದ್ದಾರೆ.ಪ್ರಕರಣಕ್ಕೆ ಸಂಬಂಧಪಟ್ಟಂತೆ ಪವನ್ ಮತ್ತು ಕಿರಣ್ ಎಂಬ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.
ಬೆಂಗಳೂರು, ಮಾ.27: * ಬೆಂಗಳೂರು ಉತ್ತರ ತಾಲೂಕು ಜಾರಕಬಂಡೆ ಶ್ರೀಗಂಧದ ಕಾವಲ್ ನಲ್ಲಿ ವಾಯುಪಡೆಯ ವಶದಲ್ಲಿರುವ 444 ಎಕರೆ ಅರಣ್ಯಭೂಮಿಯ ಮರು ವಶಕ್ಕೆ ಕೂಡಲೇ ಕರ್ನಾಟಕ ಅರಣ್ಯ ಕಾಯಿದೆ 1963ರ ಸೆಕ್ಷನ್ 64 ಎ ಅಡಿ ಪ್ರಕ್ರಿಯೆ ಆರಂಭಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಲಿಖಿತ ಸೂಚನೆ ನೀಡಿದ್ದಾರೆ. ಈ ಸಂಬಂಧ ಅಪರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಎರಡು ಪ್ರತ್ಯೇಕ ಸೂಚನೆ ನೀಡಿರುವ ಅವರು, ಜಾರಕಬಂಡೆ ಕಾವಲ್ ಅರಣ್ಯ ಪ್ರದೇಶದಲ್ಲಿ ವಾಯುಪಡೆಗೆ ನೀಡಲಾಗಿದ್ದ 452ಎಕರೆ 4½ಗಂಟೆ ಭೂ ಮಂಜೂರಾತಿಯನ್ನು ರಾಜ್ಯ ಸರ್ಕಾರ 2017ರ ಅಕ್ಟೋಬರ್ 09ರಂದು ರದ್ದುಗೊಳಿಸಿದ್ದು, ಇದನ್ನು ಅತ್ಯಗತ್ಯವಾದ ಶ್ವಾಸತಾಣವಾಗಿ ಉಳಿಸಲು ತೀರ್ಮಾನಿಸಲಾಗಿದ್ದು, ಕೂಡಲೇ ತೆರವಿಗೆ ಕ್ರಮ ವಹಿಸುವಂತೆ ಸೂಚಿಸಿದ್ದಾರೆ. ರಾಷ್ಟ್ರೀಯ ಹಿತದ ದೃಷ್ಟಿಯಿಂದ ಭೂಮಂಜೂರಾತಿ ರದ್ದು ಪಡಿಸಿದ ಬಳಿಕವೂ ಭಾರತೀಯ ವಾಯುಪಡೆ ಸದರಿ ಭೂಮಿಯನ್ನು ಬಳಸಲು, ಅರಣ್ಯ (ಸಂರಕ್ಷಣಾ) ಕಾಯ್ದೆ-1980 ರಡಿಯಲ್ಲಿ ನಿಯಮಾನುಸಾರ ಅರ್ಜಿ ಸಲ್ಲಿಸಿ ಪರ್ಯಾಯ ಭೂಮಿ ನೀಡುವಂತೆ ತಿಳಿಸಿದ್ದರೂ ವಾಯುಪಡೆ…
ಬೆಂಗಳೂರು : ದೇಶಾದ್ಯಂತ 20,911 ಆರೋಗ್ಯ ವೃತ್ತಿಪರರನ್ನು ಕಬ್ಬಿಣದ ಕೊರತೆಯ ರಕ್ತಹೀನತೆಯ ವಿರುದ್ಧ ಹೋರಾಡಲು ಪ್ರತಿಜ್ಞೆ ಮಾಡಿಸುವ ಮೂಲಕ ಡ್ಯಾನೋನ್ ಇಂಡಿಯಾ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆಯನ್ನು ಸ್ಥಾಪಿಸಿದೆ. ಈ ಸಾಧನೆಯು ಜಾಗೃತಿ ಮೂಡಿಸಲು, ಆರಂಭಿಕ ರೋಗನಿರ್ಣಯವನ್ನು ಉತ್ತೇಜಿಸಲು ಮತ್ತು ರಕ್ತಹೀನತೆಯನ್ನು ನಿಭಾಯಿಸಲು ಸರಿಯಾದ ಪೋಷಣೆಯನ್ನು ಉತ್ತೇಜಿಸಲು ಅವರ ಬಲವಾದ ಪ್ರಯತ್ನವನ್ನು ತೋರಿಸುತ್ತದೆ. ಇದು ಸಾರ್ವಜನಿಕ ಆರೋಗ್ಯವನ್ನು ಸುಧಾರಿಸಲು ಮತ್ತು ಪೋಷಕಾಂಶಗಳ ಕೊರತೆಯನ್ನು ಕಡಿಮೆ ಮಾಡಲು ಒಟ್ಟಾಗಿ ಕೆಲಸ ಮಾಡುವ ಮಹತ್ವವನ್ನು ಎತ್ತಿ ತೋರಿಸುತ್ತದೆ. ಡ್ಯಾನೋನ್ ಇಂಡಿಯಾ ನವೆಂಬರ್ 2025 ರಲ್ಲಿ ‘IRON UP!’ ಉಪಕ್ರಮವನ್ನು ಪ್ರಾರಂಭಿಸಿತು, ಇದು ಕಬ್ಬಿಣದ ಕೊರತೆಯ ರಕ್ತಹೀನತೆ (IDA) ಪತ್ತೆ ಮತ್ತು ತಡೆಗಟ್ಟುವಿಕೆಯನ್ನು ವೇಗಗೊಳಿಸುವತ್ತ ಗಮನಹರಿಸಿದ ರಾಷ್ಟ್ರವ್ಯಾಪಿ ಪ್ರಯತ್ನವಾಗಿದೆ. ಈ ಉಪಕ್ರಮದ ಭಾಗವಾಗಿ, IDA ಪ್ರತಿಜ್ಞೆ ಅಭಿಯಾನವನ್ನು ಪರಿಚಯಿಸಲಾಯಿತು, ಇದು ಭಾರತದಾದ್ಯಂತ ಆರೋಗ್ಯ ವೃತ್ತಿಪರರು ಜಾಗೃತಿ ಮೂಡಿಸಲು, ಸಕಾಲಿಕ ರೋಗನಿರ್ಣಯವನ್ನು ಖಚಿತಪಡಿಸಿಕೊಳ್ಳಲು ಮತ್ತು ತಡೆಗಟ್ಟುವ ಪೋಷಣೆಯನ್ನು ಉತ್ತೇಜಿಸಲು ಬದ್ಧರಾಗಲು ಪ್ರೋತ್ಸಾಹಿಸುತ್ತದೆ. ಈ ಸಾಮೂಹಿಕ ಪ್ರಯತ್ನವು…
ಬೆಂಗಳೂರು : ಕೇಂದ್ರ ಸರ್ಕಾರ ಡೀಸೆಲ್ ಮತ್ತು ಪೆಟ್ರೋಲ್ ಮೇಲಿನ ಅಬಕಾರಿ ಸಂಘ ಇಳಿಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯದಿಂದಲೂ ಅಬಕಾರಿ ಸುಂಕ ಇಳಿಸುತ್ತೀರಾ ಅಂದ್ರೆ ಪ್ರಶ್ನೆಗೆ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಸಂಪುಟದಲ್ಲಿ ಚರ್ಚೆಗೆ ಬಂದರೆ ಚರ್ಚೆ ಮಾಡುತ್ತೇವೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು. ಹೌದು ಗಲ್ಫ್ ಯುದ್ಧದ ಮಧ್ಯೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಅಬಕಾರಿ ಸುಂಕ ಇಳಿಕೆ ಮಾಡಿದೆ. ಪೆಟ್ರೋಲ್ ಅಬಕಾರಿ ಸುಂಕ 13 ರೂ. ಇಂದ ರೂ.3 ಗೆ ಇಳಿಕೆ ಮಾಡಿದರೆ ಇನ್ನು ಡೀಸೆಲ್ ಮೇಲಿನ ಅಬಕಾರಿ ಸುಂಕ 10 ರೂಪಾಯಿಗೆ ಇಳಿಕೆ ಮಾಡಲಾಗಿದೆ. ಡೀಸೆಲ್ ಮೇಲೆ 10 ರೂಪಾಯಿ ಅಬಕಾರಿ ಸುಂಕ ಹಾಕಲಾಗುತ್ತಿತ್ತು. ಈಗ ಡೀಸೆಲ್ ಮೇಲಿನ ಅಬಕಾರಿ ಸುಂಕ ಶೂನ್ಯಕ್ಕೆ ಇಳಿಸಲಾಗಿದೆ. ಇದೀಗ ಸಂಪುಟದಲ್ಲೂ ಕೂಡ ಅಬಕಾರಿ ಸುಖವಿಲ್ಲ ಕುರಿತು ವಿಷಯ ಬಂದರೆ ಚರ್ಚೆ ಮಾಡುತ್ತೇವೆ ಎಂದು ಗೃಹ ಸಚಿವ ಜಿ.…
ಕಲಬುರ್ಗಿ : ನಿಧಿಯಾಸೆಗೆ ದುಷ್ಕರ್ಮಿಗಳು ಪುರಾತನ ದೇಗುಲ ಧ್ವಂಸ ಮಾಡಿದ್ದಾರೆ. ಈ ಒಂದು ಘಟನೆ ಕಲ್ಬುರ್ಗಿ ಜಿಲ್ಲೆಯ ಅಫ್ಜಲಪುರ ತಾಲೂಕಿನ ಬಡದಾಳ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಬಡದಾಳ ಗ್ರಾಮದ ಬಸವಣ್ಣ ದೇವಸ್ಥಾನದಲ್ಲಿ ನಿಧಿಗಾಗಿ ದುಷ್ಕರ್ಮಿಗಳು ಶೋಧ ನಡೆಸಿದ್ದು ರಾತ್ರಿ ವೇಳೆ ಗ್ರಾಮದ ಬಸವಣ್ಣ ದೇಗುಲಕ್ಕೆ ನುಗ್ಗಿದ್ದಾರೆ ಶಿವಲಿಂಗ ವರಮಾನ ಮೂರ್ತಿಗಳನ್ನು ಭಗ್ನಗೊಳಿಸಿದ್ದಾರೆ. ಕೂಡಲೇ ಆರೋಪಿಗಳನ್ನು ಬಂಧಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬೆಂಗಳೂರು : ಬೆಂಗಳೂರಿನಲ್ಲಿ ಗೂಗಲ್ ಮ್ಯಾಪ್ ನಿಂದ ದೊಡ್ಡ ಅನಾಹುತವೇ ನಡೆದಿದೆ. ಗೋಡೌನ್ ಗೆ ಟ್ರಕ್ ಡಿಕ್ಕಿ ಆಗಿ ಕಾರಿನಲ್ಲಿ ಮಲಗಿದ್ದ ವ್ಯಕ್ತಿ ಸಾವನಪ್ಪಿದ್ದಾನೆ. ಕುರುಬರಹಳ್ಳಿ ಬಳಿ ರಾಜಕಾಲುವೆಗೆ ಟ್ರಕ್ ನುಗ್ಗಿ ಈ ಒಂದು ಘಟನೆ ನಡೆದಿದೆ. ಆಂಧ್ರ ಪ್ರದೇಶದಿಂದ ಕಬ್ಬಿಣದ ಸರಳುಗಳನ್ನು ಹೊತ್ತು ಲಾರಿ ಬಂದಿದೆ. ಸುಂಕದ ಕಟ್ಟಿದ ಕಡೆಗೆ ಲಾರಿ ಸಾಗುತ್ತಿತ್ತು. ಗೂಗಲ್ ಮ್ಯಾಪ್ ನೋಡಿಕೊಂಡು ಚಾಲಕ ಲಾರಿ ಓಡಿಸುತ್ತಿದ್ದ ಕುರುಬರಹಳ್ಳಿ ಮೂಲಕ ದಾರಿ ತೋರಿಸುತ್ತಿತ್ತು. ಆದರೆ ಕುರುಬರಹಳ್ಳಿ ಬಳಿ ಬಹುತೇಕ ಇಳಿಜಾರು ಪ್ರದೇಶ ಇದೆ ಹಾಗಾಗಿ ಲಾರಿ ನಿಯಂತ್ರಣಕ್ಕೆ ಸಿಕ್ಕಿಲ್ಲ ರಾಜಕಾಲುವೆಗೆ ಲಾರಿ ಗುದ್ದಿದೆ ಡಿಕ್ಕಿ ಆದ ರಭಸಕ್ಕೆ ಕಾರಿನಲ್ಲಿ ಮಲಗಿದ್ದ ವ್ಯಕ್ತಿ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಲಾರಿ ಡಿಕ್ಕಿಯಾದ ಪರಿಣಾಮ ಕಾರೊಳಗೆ ಮಲಗಿದ್ದ ಯುವಕ ಅಂಬದಾಸ್ (22) ಸಾವನ್ನಪ್ಪಿದ್ದಾನೆ. ಲಾರಿ ಚಾಲಕ ಶರ್ಮಾಗೆ ಸಣ್ಣಪುಟ್ಟು ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಕುರುಬರಹಳ್ಳಿ ಬಳಿ ರಸ್ತೆ ಬಹುತೇಕವಾಗಿ ಇಳಿಜಾರಾಗಿತ್ತು. ಲಾರಿ ಓವರ್ ಲೋಡ್ ಆಗಿದ್ದರಿಂದ…
ಪಾದಚಾರಿ ಮಾರ್ಗದಲ್ಲಿ ವಾಸಿಸುವ ವ್ಯಕ್ತಿಯಿಂದ ಹಿಡಿದು ಬಂಗಲೆಯಲ್ಲಿ ವಾಸಿಸುವ ಶ್ರೀಮಂತ ಉದ್ಯಮಿಯವರೆಗೆ ಎಲ್ಲರಿಗೂ ಸಾಲದ ಸಮಸ್ಯೆ ಇದೆ. ಆ ಸಾಲದ ಸಮಸ್ಯೆಯು ಪ್ರಮಾಣದಲ್ಲಿ ಬದಲಾಗುತ್ತದೆ ಆದರೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೂಪದಲ್ಲಿ ಉಳಿಯುತ್ತದೆ. ಕೆಲವು ಜನರು ಪಾವತಿಸದ ಸಾಲಕ್ಕೆ ಬಡ್ಡಿಯನ್ನು ಪಾವತಿಸುವ ಮೂಲಕ ಬಳಲುತ್ತಿದ್ದಾರೆ. ಈ ಸಂಧರ್ಭದಲ್ಲಿ ಎಂತಹ ಸಾಲದ ಹೊರೆಯಿದ್ದರೂ ಆ ಋಣ ತೀರಿಸಲು ನಾವು ಮಾಡಬಹುದಾದ ಉಪಾಯವೇ ಇಳನೇರ್ ದೀಪಂ. ಈ ಆಧ್ಯಾತ್ಮಿಕ ಪೋಸ್ಟ್‌ನಲ್ಲಿ, ಎಳನೀರನ್ನು ಬಳಸಿ ದೀಪವನ್ನು ಹೇಗೆ ಬೆಳಗಿಸಬೇಕು ಎಂದು ನಾವು ನೋಡಲಿದ್ದೇವೆ . ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564 ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ,…














