ಹುಬ್ಬಳ್ಳಿ : ರಾಜ್ಯದಲ್ಲಿ ಮತ್ತೊಂದು ಬೃಹತ್ ದರೋಡೆ ನಡೆದಿದ್ದು, ಹುಬ್ಬಳ್ಳಿಯ ಜೈನ ಮಂದಿರದಲ್ಲಿ ತಡರಾತ್ರಿ ಕಳ್ಳರು ನುಗ್ಗಿ ಸುಮಾರು 3 ಕೆಜಿ ಬೆಳ್ಳಿ ಮತ್ತು ಚಿನ್ನಾಭರಣ ಕದ್ದು ಪರಾರಿ ಆಗಿರುವ ಘಟನೆ ಇದೀಗ ವರದಿಯಾಗಿದೆ. ಘಟನೆ ಕೋರಿದಂತೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಹೌದು ಹುಬ್ಬಳ್ಳಿಯ ಹೊಸೂರು ಪ್ರದೇಶದಲ್ಲಿ ಮಧ್ಯರಾತ್ರಿ ಸಿನಿಮೀಯ ಶೈಲಿಯಲ್ಲಿ ಜೈನ ಮಂದಿರ ಕಳ್ಳತನವಾಗಿದ್ದು, ಭಕ್ತರಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ. ದೇವರಿಗೆ ಅಲಂಕರಿಸಿದ್ದ ಭಾರೀ ಪ್ರಮಾಣದ ಬೆಳ್ಳಿ ಬೆಳ್ಳಿ ಹಾಗೂ ಚಿನ್ನದ ಆಭರಣಗಳನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಮಧ್ಯರಾತ್ರಿ ಸುಮಾರು 1 ಗಂಟೆ ವೇಳೆಗೆ ಮೂವರು ದುಷ್ಕರ್ಮಿಗಳು ಜೈನ ಮಂದಿರಕ್ಕೆ ನುಗ್ಗಿದ್ದಾರೆ ಎನ್ನಲಾಗಿದೆ.
ಮಂದಿರಕ್ಕೆ ನುಗ್ಗುವ ಮೊದಲ ಖದೀಮರು ಎಲ್ಲ ತಯಾರಿ ಮಾಡಿಕೊಂಡೇ ಬಂದಿದ್ದಾರೆ. ಮೊದಲು ದೇವಸ್ಥಾನದ ಸೈರನ್ ವ್ಯವಸ್ಥೆಯನ್ನು ಬಂದ್ ಮಾಡಿರುವ ಕಳ್ಳರು, ಬಳಿಕ ಸಿಸಿ ಕ್ಯಾಮೆರಾ ಕೇಬಲ್ ಕಟ್ ಮಾಡಿ ಒಳನುಗ್ಗಿದ್ದಾರೆ. ಮಂದಿರದ ಕೀಲಿ ಒಡೆದು ಒಳಗೆ ಪ್ರವೇಶಿಸಿದ ಕಳ್ಳರು, ಸುಮಾರು 3 ಕೆಜಿ ಬೆಳ್ಳಿ ಆಭರಣಗಳ ಜೊತೆಗೆ ಚಿನ್ನದ ಆಭರಣ ಮತ್ತು ಹುಂಡಿಯ ಹಣ ಸೇರಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ದೋಚಿದ್ದಾರೆ.
ಎಂದಿನಂತೆ ಇಂದು ಬೆಳಿಗ್ಗೆ ಮಂದಿರದ ಬಾಗಿಲು ತೆರೆದ ವೇಳೆ ಘಟನೆ ಬೆಳಕಿಗೆ ಬಂದಿದೆ. ಒಳಗೆ ಅಸ್ತವ್ಯಸ್ತವಾಗಿ ಚೆಲ್ಲಾಪಿಲ್ಲಿಯಾಗಿದ್ದ ಬಿದ್ದ ದೃಶ್ಯ ನೋಡಿ ಭಕ್ತರು ಬೆಚ್ಚಿಬಿದ್ದಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸಿಪಿ ಶಿವಾನಂದ ಚಲವಾದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಗ ಬೆರಳಚ್ಚು ತಜ್ಞರ ತಂಡವೂ ಸ್ಥಳ ಪರಿಶೀಲನೆ ಮಾಡಿದೆ.







