Author: kannadanewsnow05

ಶಿವಮೊಗ್ಗ : ರಾಜ್ಯದಲ್ಲಿ ಹೃದಯವಿದ್ರಾವಕ ಒಂದು ನಡೆದಿದ್ದು ಶಿವಮೊಗ್ಗದಲ್ಲಿ ವಿದ್ಯಾರ್ಥಿ ಒಬ್ಬ ತಂದೆಯ ಸಾವಿನ ದುಃಖದಲ್ಲಿಯೇ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿದ್ದಾನೆ ಇಂದು ಎಸ್ ಎಸ್ ಎಲ್ ಸಿ ಗಣಿತ ಪರೀಕ್ಷೆ ನಡೆಯುತ್ತಿದ್ದು, ವಿದ್ಯಾರ್ಥಿ ಪ್ರೀತಮ್ ತಂದೆ ಸಾವಿನ ದುಃಖದಲ್ಲೂ ಕೂಡ ಪರೀಕ್ಷೆ ಬರೆಯುತ್ತಿದ್ದಾನೆ. ಶಿವಮೊಗ್ಗ ತಾಲೂಕಿನ ಮಂಡಘಟ್ಟ ಪ್ರೌಢಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಆಗಿರುವ ಪ್ರೀತಂ ಎಣ್ಣೆ ಅವರ ತಂದೆ ಸಾವನಪ್ಪಿದ್ದರು. ತಂದೆಯಾಸ್ ಸಾವಿನ ಹಿನ್ನೆಲೆಯಲ್ಲಿ ಪ್ರೀತಮ್ ಪರೀಕ್ಷೆಗೆ ಗೈರಾಗಲು ಮುಂದಾಗಿದ್ದ. ವಿಷಯ ತಿಳಿದ ತಕ್ಷಣ ಶಿವಮೊಗ್ಗದ ಬಿಇಓ ರಮೇಶ್ ವಿದ್ಯಾರ್ಥಿ ಪ್ರೀತಮ್ ಅವರ ಮನೆಗೆ ತೆರಳಿದ್ದಾರೆ. ಗಣಿತ ಪರೀಕ್ಷ ಇದೆ ವರ್ಷ ಪೂರ್ತಿ ಕಷ್ಟಪಟ್ಟು ಓದಿದ್ದೀರಿ ತಂದೆ ಸಾವನಪ್ಪಿದ್ದಾರೆ ದುಃಖವಿದೆ ಎಂದು ವಿದ್ಯಾರ್ಥಿ ಪ್ರೀತಂ ಹಾಗೂ ಕುಟುಂಬಸ್ಥರಿಗೆ ಧೈರ್ಯ ಹೇಳಿ ಅವರ ಮನವೊಲಿಸಿದ್ದಾರೆ. ಬಳಿಕ ಪ್ರೀತಂ ನನ್ನ ತಮ್ಮ ವಾಹನದಲ್ಲಿಯೇ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ.

Read More

ಬೆಂಗಳೂರು : ರವಿಶಂಕರ್ ವಿರುದ್ಧ ಯಾವುದೇ ಸ್ಪಷ್ಟ ಆರೋಪಗಳಿಲ್ಲದೆ ಪ್ರಕರಣ ಮುಂದುವರಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ರವಿಶಂಕರ್ ವಿರುದ್ಧದ ಭೂ ಕಬಳಿಕೆ ಪ್ರಕರಣವನ್ನು ರದ್ದುಪಡಿಸಿದೆ. ನ್ಯಾ. ಎಂ ನಾಗಪ್ರಸನ್ನ ಅವರಿದ್ದ ಪೀಠ ಆದೇಶ ಹೊರಡಿಸಿದೆ. ಬೆಂಗಳೂರು ಮಹಾನಗರ ಟಾಸ್ಕ್ ಫೋರ್ಸ್ 19 ಸೆಪ್ಟೆಂಬರ್ 2025ರಂದು ಕರ್ನಾಟಕ ಭೂ ಆದಾಯ ಕಾಯ್ದೆ 1964 ಅಡಿಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿತ್ತು. ಕಾಗ್ಗಳಿಪುರ ಗ್ರಾಮದ ವಿವಿಧ ಸರ್ವೇ ಸಂಖ್ಯೆಗಳಲ್ಲಿನ ಸರ್ಕಾರಿ ಭೂಮಿ, ಕೆರೆ ಮತ್ತು ರಾಜಕಾಲುವೆ ಅಕ್ರಮವಾಗಿ ಕಬಳಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆ ಪಿಐಎಲ್, ಲ್ಯಾಂಡ್ ಗ್ರಾಬಿಂಗ್ ವಿಶೇಷ ನ್ಯಾಯಾಲಯದ ವಿಚಾರಣೆ ಮತ್ತು ತಹಶೀಲ್ದಾರ್ ವರದಿ ಆಧರಿಸಿ ದೂರು ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶ್ರೀ ಶ್ರೀ ರವಿಶಂಕರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣ ಪರಿಶೀಲಿಸಿದ ಕರ್ನಾಟಕ ಹೈಕೋರ್ಟ್ ದೂರುದಲ್ಲಿ ಅರ್ಜಿದಾರರ ವಿರುದ್ಧ ಯಾವುದೇ ಸ್ಪಷ್ಟ ಆರೋಪಗಳಿಲ್ಲವೆಂದು ಗಮನಿಸಿದೆ. ಹೀಗಾಗಿ ಕೇವಲ ಪ್ರತಿವಾದಿಯಾಗಿ ಹೆಸರು ಸೇರಿಸಿರುವುದನ್ನು ಆಧಾರವನ್ನಾಗಿಟ್ಟುಕೊಂಡು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.…

Read More

ಬೆಂಗಳೂರು : ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್‌ನಲ್ಲಿ ಲೋಕಾಯುಕ್ತ ಭೇಟಿ ವೇಳೆ ಅವಧಿ ಮೀರಿದ ಔಷಧಿಗಳು, ರೋಗಿಗಳಿಗೆ ದಾಖಲಾತಿಗೆ ನಿರಾಕರಿಸಿರುವುದು ಹಾಗೂ ಖಾಸಗಿ ಆಂಬ್ಯುಲೆನ್ಸ್ ಮಾಫಿಯಾ ಹಾವಳಿ ಬೆಳಕಿಗೆ ಬಂದಿದೆ. ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಆಸ್ಪತ್ರೆಯ ನಿರ್ಲಕ್ಷ್ಯವನ್ನು ಖಂಡಿಸಿದ್ದು, ಪ್ರೀಪೇಯ್ಡ್ ಆಂಬ್ಯುಲೆನ್ಸ್ ವ್ಯವಸ್ಥೆ ಜಾರಿಗೆ ತರಲು ಸೂಚಿಸಿದ್ದಾರೆ. ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ , ವೆಂಟಿಲೇಟರ್ ದೋಷದಿಂದ ಹಾಸಿಗೆಗಳು ಬಳಸಿಲ್ಲ ಎಂದು ಹೇಳಿರುವುದು ಆಸ್ಪತ್ರೆಯ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದಿದ್ದಾರೆ. ಪ್ರಕರಣದ ವರದಿಯನ್ನು ಮುಖ್ಯ ಕಾರ್ಯದರ್ಶಿ ಸೇರಿದಂತೆ ಸಂಬಂಧಿತ ಅಧಿಕಾರಿಗಳಿಗೆ ಕಳುಹಿಸಲು ಸೂಚಿಸಲಾಗಿದ್ದು, ವಿಚಾರಣೆಯನ್ನು ಏಪ್ರಿಲ್ 27ಕ್ಕೆ ಮುಂದೂಡಲಾಗಿದೆ. ಆಸ್ಪತ್ರೆ ಆವರಣದಲ್ಲಿ ಖಾಸಗಿ ಆಂಬ್ಯುಲೆನ್ಸ್ ಚಾಲಕರು ಮತ್ತು ಮಧ್ಯವರ್ತಿಗಳು ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ. ಅವರು ವೈದ್ಯರನ್ನು ಸಂಪರ್ಕಿಸಿ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲು ಒತ್ತಾಯಿಸುತ್ತಿದ್ದರೆಂಬ ಆರೋಪವೂ ಕೇಳಿಬಂದಿದೆ. ಕೆಲವು ಸಿಬ್ಬಂದಿ ಖಾಸಗಿ ಆಂಬ್ಯುಲೆನ್ಸ್ ಬಳಸುವಂತೆ ರೋಗಿಗಳ ಬಂಧುಗಳ ಮೇಲೆ ಒತ್ತಡ ಹೇರಿರುವುದು ತಿಳಿದುಬಂದಿದೆ

Read More

ತುಮಕೂರು : ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೆಂಗಳೂರು ಹೈದ್ರಾಬಾದ್ ನಡುವೆ ಮೊದಲ ಪಂದ್ಯ ನಡೆಯುತ್ತಿದ್ದು, ಈಗಾಗಲೇ ಸ್ಟೇಡಿಯಂ ಸುತ್ತಲು ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ. ಕಳೆದ ವರ್ಷ ನಡೆದ ಘಟನೆ ಇನ್ನು ಮಾಸಿಲ್ಲ ಹಾಗಾಗಿ ಎಲ್ಲ ಕಡೆಗೂ ಸುರಕ್ಷಿತ ಕ್ರಮ ಕೈಗೊಳ್ಳಲಾಗಿದೆ. ಇನ್ನು ಈ ವಿಚಾರವಾಗಿ ತುಮಕೂರಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಮಾತನಾಡಿದ್ದು, ಯುವಕರಿಗೆ ನಿರಾಸೆ ಮಾಡೋದು ಬೇಡವೆಂದು ಅನುಮತಿ ನೀಡಿದ್ದೇವೆ. ಅನುಮತಿ ಕೊಡದಿದ್ರೆ ಬೆಂಗಳೂರು ಹಾಗು ಸರಕಾರಕ್ಕೆ ಕೆಟ್ಟ ಹೆಸರು ಬರುತ್ತೆ. ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಂಡು ಪಂದ್ಯಕ್ಕೆ ಅನುಮತಿ ಕೊಡಲಾಗಿದೆ. ಕಳೆದ ವರ್ಷ RCB ಕಪ್ ಗೆದ್ದಾಗ ಅಹಿತಕರ ಘಟನೆಯಿಂದ 11 ಜನ ಮೃತಪಟ್ಟಿದ್ದರು. ಆ ಘಟನೆ ಆಗಬಾರದಿತ್ತು. ಅನಿರೀಕ್ಷಿತವಾಗಿ ನಡೆದುಹೋಗಿದೆ. ಬೆಂಗಳೂರು ಸ್ಟೇಡಿಯಂ ನಲ್ಲಿ ಈ ಹಿಂದೆ ನೂರಾರು ಪಂದ್ಯಗಳು ನಡೆದಿವೆ. ಆಗ ಇಂತಹ ಘಟನೆ ಸಂಭವಿಸಿರಲಿಲ್ಲ. ಬೆಂಗಳೂರಲ್ಲಿ ಕ್ರಿಕೆಟ್ ನಿಲ್ಲಿಸಿದರೆ ರಾಜ್ಯಕ್ಕೆ ಅಪಕೀರ್ತಿ ಬರುತ್ತೆ. ಕ್ಯಾಮರಾ ಹೆಚ್ಚಳ ಆಗಿವೆ. ಸ್ಟೇಡಿಯಂ ಗೇಟ್…

Read More

ಮೈಸೂರು : ದೇಶ ಸೇರಿದ ರಾಜ್ಯದ ಸರ್ಕಾರಿ ಕಚೇರಿಗಳು ಹಾಗೂ ಕೋರ್ಟ್ ಗಳಿಗೆ ಶಾಲಾ ಕಾಲೇಜುಗಳಿಗೆ ಇಮೇಲ್ ಮುಖಾಂತರ ಬಾಂಬ್ ಬೆದರಿಕೆ ಸಂದೇಶ ಕಳುಹಿಸುತ್ತಿದ್ದ ಪ್ರಕರಣಗಳ ಸಂಖ್ಯೆ ಇತ್ತೀಚಿಗೆ ಹೆಚ್ಚಿತ್ತು. ಇದೀಗ ಹುಸಿ ಬಾಂಬ್ ಸಂದೇಶ ಕಳುಹಿಸುತ್ತಿದ್ದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ಮೈಸೂರಲ್ಲಿ ದೆಹಲಿ ಪೊಲೀಸರಿಂದ ಆರೋಪಿ ಶ್ರೀನಿವಾಸ್ ನನ್ನ ಅರೆಸ್ಟ್ ಮಾಡಲಾಗಿದೆ. ಮೈಸೂರಿನಲ್ಲಿ ಶ್ರೀನಿವಾಸ ಗಾಗಿ ಪೊಲೀಸರು ಖೆಡ್ಡಾ ತೋಡಿದ್ದಾರೆ. ಬಾಂಬ್ ಸ್ಪೋಟಿಸುವ ಸಂದೇಶ ಕಳುಹಿಸಿ ಬೆದರಿಕೆ ಹಾಕುತ್ತಿದ್ದ ಶ್ರೀನಿವಾಸ್ ಬೃಂದಾವನ ಬಡಾವಣೆಯ ಎರಡನೇ ಹಂತದ ಮನೆಯಲ್ಲಿ ವಾಸವಾಗಿದ್ದ. ಆರನೇ ಕ್ರಾಸ್ ಮನೆಯಲ್ಲಿದ್ದ ಆತನನ್ನ ಸದ್ಯ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಇತ್ತೀಚಿಗೆ ಸರ್ಕಾರಿ ಕಚೇರಿಗಳು ಶಾಲಾ ಕಟ್ಟಡಗಳಿಗೆ ಬೆದರಿಕೆ ಬಂದಿತ್ತು. ರಾಜ್ಯದ ಹಲವು ಜಿಲ್ಲೆಗಳ ಜಿಲ್ಲಾ ನ್ಯಾಯಾಲಯಗಳಲ್ಲಿ ಬಾಂಬ್ ಇಟ್ಟು ಸ್ಪೋಟಿಸುವುದಾಗಿ ಬೆದರಿಕೆ ಸಂದೇಶ ರವಾನೆಯಾಗಿತ್ತು. ಇಮೇಲ್ ಮುಖಾಂತರವಾಗಿ ಬೆದರಿಕೆ ಸಂದೇಶ ಕಳುಹಿಸುತ್ತಿದ್ದ. ಸದ್ಯ ಶ್ರೀನಿವಾಸನು ದೆಹಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Read More

ಬೆಂಗಳೂರು : ಇಸ್ರೇಲ್ ಇರಾನ್ ಯುದ್ಧದ ಪರಿಣಾಮದಿಂದಾಗಿ ದೇಶಾದ್ಯಂತ ಗ್ಯಾಸ್ ಸಿಲಿಂಡರ್ ಅಭಾವ ಹೆಚ್ಚಾಗಿದ್ದು ಇದೀಗ ಬೆಂಗಳೂರಿನಲ್ಲಿ ಗ್ಯಾಸ್ ಸಿಲಿಂಡರ್ ಲಾರಿ ಪಲ್ಟಿ ಆಗಿದೆ ಘಟನೆಯಲ್ಲಿ ಇಬ್ಬರು ಬಚಾವ್ ಆಗಿದ್ದಾರೆ. ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿ ಇದೀಗ ಗ್ಯಾಸ್ ಸೋರಿಕೆಯಾಗದಂತೆ ಕ್ರಮ ವಹಿಸಲಾಗಿದ್ದು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ. ಸಿಸಿ ಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೇರಿಯಾಗಿದ್ದು, ಸಿಲೆಂಡರ್ ಗಳನ್ನು ತುಂಬಿದ ಲಾರಿ ತೆರಳುವಾಗ ಕಾರಿಗೆ ಡಿಕ್ಕಿಯಾಗಿ ಲಾರಿ ಪಲ್ಟಿಯಾಗಿದೆ. ಲಾರಿ ಚಾಲಕನಿಗೆ ಗಂಭೀರವಾದ ಗಾಯವಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ. ರಾಜಾಜಿನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

Read More

“ರಾಮ” ಎಂದರೆ ರಮಿಸುವುದು, ಹೃದಯದಲ್ಲಿ ವಾಸಿಸುವುದು ಎಂಬ ಅರ್ಥ. ಆದ್ದರಿಂದ ನಮ್ಮ ಹೃದಯಗಳಲ್ಲಿ ಪ್ರಕಾಶಿಸುತ್ತಿರುವ ಶ್ರೀರಾಮನನ್ನು ಅರಿತುಕೊಳ್ಳಬೇಕು. ಒಮ್ಮೆ ಪಾರ್ವತಿ ದೇವಿ ಪರಮಶಿವನನ್ನು “ಕೇನೋಪಾಯೇನ ಲಘುನಾ ವಿಷ್ಣೋರ್ ನಾಮ ಸಹಸ್ರಕಂ” ಎಂದು ಕೇಳಿ, ವಿಷ್ಣು ಸಹಸ್ರನಾಮಕ್ಕೆ ಸರಳವಾದ ಮಾರ್ಗವನ್ನು ತಿಳಿಸಬೇಕೆಂದು ಕೇಳುತ್ತಾಳೆ. ಅದಕ್ಕೆ ಪರಮೇಶ್ವರನು, “ಓ ಪಾರ್ವತಿ! ನಾನು ಸದಾ ಜಪಿಸುವುದು ಇದೇ” ಎಂದು ಈ ಕೆಳಗಿನ ಶ್ಲೋಕವನ್ನು ಹೇಳುತ್ತಾನೆ: ಶ್ಲೋಕ: ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ | ಸಹಸ್ರನಾಮ ತತ್ತೂಲ್ಯಂ ರಾಮನಾಮ ವರಾನನೆ || ಈ ಶ್ಲೋಕವನ್ನು ಮೂರು ಬಾರಿ ಜಪಿಸಿದರೆ, ಒಂದು ವಿಷ್ಣು ಸಹಸ್ರನಾಮ ಪಾರಾಯಣದ ಫಲ ಮಾತ್ರವಲ್ಲ, ಭಕ್ತರಿಗೆ ಶಿವ ಸಹಸ್ರನಾಮದ ಫಲವೂ ದೊರೆಯುತ್ತದೆ. ದುಷ್ಟರ ಶಿಕ್ಷೆ ಮತ್ತು ಶಿಷ್ಟರ ರಕ್ಷಣೆಗಾಗಿ, ಚೈತ್ರ ಶುದ್ಧ ನವಮಿಯಂದು ಐದು ಗ್ರಹಗಳು ಉಚ್ಚ ಸ್ಥಿತಿಯಲ್ಲಿ ಇದ್ದ ಸಮಯದಲ್ಲಿ, ಪುನರ್ವಸು ನಕ್ಷತ್ರ ಮತ್ತು ಕರ್ಕಾಟಕ ಲಗ್ನದಲ್ಲಿ, ಪಗಲಿನಲ್ಲಿ ಸ್ವಯಂ ಶ್ರೀಹರಿಯೇ ಕೌಸಲ್ಯೆಯ ಪುತ್ರನಾಗಿ ಭೂಮಿಯಲ್ಲಿ ಅವತಾರ ಪಡೆದ…

Read More

ಶಿವಮೊಗ್ಗ : ಶಿವಮೊಗ್ಗದಲ್ಲಿ ಘೋರ ಘಟನೆ ನಡೆದಿದ್ದು, ಜಿಲ್ಲೆಯ ಹೊಸನಗರ ತಾಲೂಕಿನ ಬರುವೆ ಗ್ರಾಮದ ಕೃಷಿ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಸ್ನೇಹಿತರೊಂದಿಗೆ ಈಜಲು ಹೋಗಿದ್ದಾಗ ಕಾಲುಜಾರಿ ಬಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಆತ ಮೃತಪಟ್ಟಿದ್ದ. ಮೃತ ವಿದ್ಯಾರ್ಥಿಯನ್ನು ಮದೀನಾ ಕಾಲೋನಿಯ ನಿವಾಸಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಮಹಮ್ಮದ್ ತಮಿಮ್ (16) ಕೃಷಿ ಹೊಂಡದಲ್ಲಿ ಈಜು ಹೊಡೆಯಲು ಹೋಗಿ ನೀರು ಪಾಲಾಗಿರುವುದಾಗಿ ಎಂದು ತಿಳಿದುಬಂದಿದೆ. ಹೊಸನಗರ ತಾಲೂಕಿನ ಬರುವೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಚೌಡೇಶ್ವರಿ ಬೀದಿಯಲ್ಲಿ ಟ್ಯೂಷನ್‌ಗೆ ತೆರಳಿದ್ದ ಆತ, ಬಳಿಕ ಸ್ನೇಹಿತರೊಂದಿಗೆ ಬರುವೆ ಗ್ರಾಮದ ದಿಬ್ಬದತ್ತ ತೆರಳಿದ್ದಾನೆ. ಈ ವೇಳೆ ಗದ್ದೆಯೊಳಗಿನ ಕೆರೆಯ ಮೇಲೆ ನಡೆಯುತ್ತಿದ್ದಾಗ ಕಾಲುಜಾರಿ ನೀರಿಗೆ ಬಿದ್ದಿದ್ದಾನೆ ಎಂದೂ ಹೇಳಲಾಗುತ್ತಿದೆ. ನಂತರ ಸ್ಥಳೀಯರು ಯುವಕನನ್ನು ರಿಪ್ಪನ್ ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ದಾಖಲಿಸಿದ್ದಾರೆ ಅಷ್ಟರಲ್ಲಾಗಲೇ ಮೃತಪಟ್ಟಿದ್ದಾನೆಂದು ವೈದ್ಯರು ಧೃಡಪಡಿಸಿದ್ದಾರೆ. ಮೃತ ವಿದ್ಯಾರ್ಥಿ ಪಟ್ಟಣದ ರಾಮಕೃಷ್ಣ ವಿದ್ಯಾಲಯದಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದು, ಮೂರು ಪಬ್ಲಿಕ್ ಪರೀಕ್ಷೆಗಳನ್ನು ಬರೆದಿದ್ದ.…

Read More

ರಾಯಚೂರು : ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕು ಪಕ್ಕದ ಆಂಧ್ರಪ್ರದೇಶದ ಗಡಿ ಭಾಗವಾದ ಕೊಸಗಿ ಮಂಡಲ ವ್ಯಾಪ್ತಿಯ ಕಂದಕೂರ ಗ್ರಾಮದಲ್ಲಿರುವ ರಾಜಲಾಬಂಡ ಅಣೆಕಟ್ಟಿನಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ತುಂಗಾಭದ್ರಾ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈಜಾಡಲು ಹೋದ 20 ಜನರ ಪೈಕಿ 4 ಜನ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತದುರ್ದೈವಿಗಳು ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದವರಾಗಿದ್ದು, ಗ್ರಾಮದ ಉಮಾವತಿ ಗೋವಿಂದ (35) ರತ್ನ ಮಹಾಂತೇಶ್ (28) ಮಹಾಂತೇಶ್ ಪೀತಾಂಬರ್ (24) ಸುಂಕೇಶ್ವರ ಗ್ರಾಮದ ಶಿವಾನಂದ ಹನುಮಂತರಾಯ (24) ಮೃತಪಟ್ಟಿದ್ದಾರೆ. ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಕೊಸಗಿಗೆ ಹೋಗಿದ್ದರು. ನದಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಕೆರೆಗಳನ್ನ ತುಂಬಲು ತುಂಗಭದ್ರ ನದಿಗೆ ಹೆಚ್ಚಿನ ನೀರು ಹರಿಯುತ್ತಿದೆ. ಈಜಾಡಲು ಇಳಿದಿದ್ದ ಇಪ್ಪತ್ತು ಜನರಲ್ಲಿ ನಾಲ್ವರು ಒಂದೇ ಕುಟುಂಬದವರು ಈ ದುರ್ಘಟನೆಯಲ್ಲಿ ಸಾವನಪ್ಪಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಕೊಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಐಪಿಎಲ್ 2026ರ ಸೀಸನ್ ಇಂದಿನಿಂದ (ಮಾರ್ಚ್ 28) ಆರಂಭವಾಗುತ್ತಿದ್ದು, ಬಿಸಿಸಿಐ (BCCI) ಫೀಲ್ಡಿಂಗ್ ಮತ್ತು ಕ್ಯಾಚ್ ಪಡೆಯುವ ನಿಯಮಗಳಲ್ಲಿ ಹೆಚ್ಚಿನ ಶಿಸ್ತು ತರಲು ‘ಬಾಡಿ ಕಂಟ್ರೋಲ್’ (Body Control) ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದೆ. ಕ್ರಿಕೆಟ್‌ನಲ್ಲಿ ಕ್ಯಾಚ್ ಹಿಡಿಯುವುದು ಕೇವಲ ಚೆಂಡನ್ನು ಕೈಯಲ್ಲಿ ಹಿಡಿಯುವುದಕ್ಕೆ ಸೀಮಿತವಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ಬೌಂಡರಿ ಲೈನ್‌ ಹತ್ತಿರ ಕ್ಯಾಚ್ ಹಿಡಿಯುವಾಗ ಆಟಗಾರರು ಸಮತೋಲನ ಕಳೆದುಕೊಂಡು ಬೌಂಡರಿ ಲೈನ್ ಸ್ಪರ್ಶಿಸುವ ಅಥವಾ ಚೆಂಡು ಕೈಯಿಂದ ಜಾರುವ ಘಟನೆಗಳು ಹೆಚ್ಚಾಗುತ್ತಿವೆ. ಈ ಗೊಂದಲ ನಿವಾರಿಸಲು ಬಿಸಿಸಿಐ ಐಸಿಸಿ (ICC) ನಿಯಮ 33.3 ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದೆ. ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್ ರೈಸರ್ಸ್ ಹೈದರಾಬಾದ್ (SRH) ಮುಖಾಮುಖಿಯಾಗುತ್ತಿದ್ದು, ಈ ಹೊಸ ನಿಯಮದ ಅಡಿ ಆಟಗಾರರ ಶಿಸ್ತು ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ. 1. ನಿಯಮದ ಮುಖ್ಯ ಉದ್ದೇಶ: ಕ್ಯಾಚ್ ಹಿಡಿದ ಆಟಗಾರನು ಕೇವಲ ಚೆಂಡಿನ…

Read More