Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ದೆಹಲಿಯಲ್ಲಿ ಮತ್ತೆ ನಿರ್ಭಯಾ ಮಾದರಿ ಕೃತ್ಯ: ಚಲಿಸುವ ಬಸ್ಸಿನಲ್ಲಿ ಮಹಿಳೆಯ ಮೇಲೆ 2 ಗಂಟೆಗಳ ಕಾಲ ಗ್ಯಾಂಗ್ ರೇಪ್!

BIG NEWS : ಪತ್ನಿಗೆ ಜೀವನಾಂಶ ನೀಡದ ಪತಿಗೆ ಬಂಧನ ವಾರೆಂಟ್ ಜಾರಿ ಮಾಡಬಹುದು : ಹೈಕೋರ್ಟ್ ಮಹತ್ವದ ಆದೇಶ

BREAKING : ವಚನಾನಂದ ಸ್ವಾಮೀಜಿಗೆ ಮತ್ತೊಂದು ಸಂಕಷ್ಟ : ಪೋಕ್ಸೋ ಕೇಸ್ ನಲ್ಲಿ ‘FIR’ ದಾಖಲು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಪತ್ನಿಗೆ ಜೀವನಾಂಶ ನೀಡದ ಪತಿಗೆ ಬಂಧನ ವಾರೆಂಟ್ ಜಾರಿ ಮಾಡಬಹುದು : ಹೈಕೋರ್ಟ್ ಮಹತ್ವದ ಆದೇಶ
KARNATAKA

BIG NEWS : ಪತ್ನಿಗೆ ಜೀವನಾಂಶ ನೀಡದ ಪತಿಗೆ ಬಂಧನ ವಾರೆಂಟ್ ಜಾರಿ ಮಾಡಬಹುದು : ಹೈಕೋರ್ಟ್ ಮಹತ್ವದ ಆದೇಶ

By ಸುರೇಶ್‌

ಬೆಂಗಳೂರು : ಪತ್ನಿಗೆ ನ್ಯಾಯಾಲಯ ನಿಗದಿಪಡಿಸಿದ ಜೀವನಾಂಶ ಪಾವತಿಸದ ಪತಿಯ ವಿರುದ್ಧ ಬಂಧನ ವಾರೆಂಟ್ ಜಾರಿ ಮಾಡಬಹುದು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ನ್ಯಾಯಾಲಯದ ಆದೇಶ ಉಲ್ಲಂಘಿಸಿ ಪತ್ನಿಗೆ ಜೀವನಾಂಶ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಬಂಧನ ವಾರಂಟ್ ಜಾರಿ ಮಾಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸೈಲೇಶ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ.ಕೆ.ಮನ್ಮಥ ರಾವ್ ಅವರ ನ್ಯಾಯಪೀಠ ಈ ಆದೇಶ ನೀಡಿದೆ.

ಪ್ರಕರಣದಲ್ಲಿ‌ ನ್ಯಾಯಾಲಯ ನಿಗದಿಪಡಿಸಿದ ಜೀವನಾಂಶದ ಹಣವನ್ನು‌ ಪತ್ನಿಗೆ ಪಾವತಿಸಲು ವಿನಾಕಾರಣ ವಿಳಂಬ ಮಾಡುತ್ತಿದ್ದ ಅರ್ಜಿದಾರರ ನಡೆಗೆ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ನ್ಯಾಯಾಲಯದ ಆದೇಶ ಪಾಲಿಸದೆ ಇರುವ ಪತಿಯ ವರ್ತನೆ ಉದ್ದೇಶಪೂರ್ವಕ ಅವಿಧೇಯತೆ ಎಂದ ಪೀಠ, ನ್ಯಾಯಾಲಯದ ಆದೇಶ ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ್ದನ್ನ ಪರಿಗಣಿಸಿ, ಮಂಗಳೂರಿನ ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ವಾರಂಟ್ ಹೈಕೋರ್ಟ್ ಎತ್ತಿಹಿಡಿದಿದೆ.

ಪ್ರಕರಣದ ಹಿನ್ನೆಲೆ: ಮಂಗಳೂರು ಮೂಲದ ಸೈಲೇಶ್ ಕುಮಾರ್ ಮತ್ತು ನಿಶಾ ಎಸ್. ಕುಮಾರ್ 1998ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ 2000ನೇ ಇಸವಿಯಲ್ಲಿ ಗಂಡು ಮಗು ಜನಿಸಿತ್ತು. ಆದರೆ, ದಂಪತಿಗಳ ನಡುವೆ ಉಂಟಾದ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮನಸ್ತಾಪ ಉಂಟಾಗಿ ಕಾನೂನು ಹೋರಾಟ ಆರಂಭವಾಗಿತ್ತು. ಪತ್ನಿ ನಿಶಾ ಅವರು ತಮ್ಮ ಮತ್ತು ಮಗನ ಜೀವನೋಪಾಯಕ್ಕಾಗಿ 2014ರಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಜೀವನಾಂಶದ ಹಂತ ಹಂತದ ಆದೇಶಗಳು: ಆರಂಭದಲ್ಲಿ ಪತ್ನಿ ನಿಶಾ ಅವರು ಮಾಸಿಕ 5 ಲಕ್ಷ ರೂಪಾಯಿ ಮಧ್ಯಂತರ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಅಂದು ಮಾಸಿಕ 12,750 ರೂಪಾಯಿ ಪಾವತಿಸುವಂತೆ ಮಧ್ಯಂತರ ಆದೇಶ ನೀಡಿತ್ತು. ತದನಂತರ ಪ್ರಕರಣದ ಸಮಗ್ರ ವಿಚಾರಣೆ ನಡೆಸಿದ ಕೌಟುಂಬಿಕ ನ್ಯಾಯಾಲಯವು, ಪತಿಯ ಆರ್ಥಿಕ ಸ್ಥಿತಿಗತಿ ಮತ್ತು ಕುಟುಂಬದ ಅಗತ್ಯಗಳನ್ನು ಗಮನಿಸಿ, ವಿವಿಧ ಅವಧಿಗಳಿಗೆ ಅನ್ವಯವಾಗುವಂತೆ ಮಾಸಿಕ 1.80 ಲಕ್ಷದಿಂದ 2.80 ಲಕ್ಷ ರೂಪಾಯಿವರೆಗೆ ಜೀವನಾಂಶವನ್ನು ಪರಿಷ್ಕರಿಸಿ ಆದೇಶಿಸಿತ್ತು.

ಬಡ್ಡಿ ಮತ್ತು ಬಾಕಿ ಮೊತ್ತದ ವಿಚಾರ: ಕೌಟುಂಬಿಕ ನ್ಯಾಯಾಲಯವು ಕೇವಲ ಮಾಸಿಕ ಮೊತ್ತವನ್ನಷ್ಟೇ ಅಲ್ಲದೆ, ಈವರೆಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಒಟ್ಟು ಮೊತ್ತಕ್ಕೆ ವಾರ್ಷಿಕ ಶೇ. 7.5 ರಷ್ಟು ಬಡ್ಡಿಯನ್ನೂ ಸೇರಿಸಿ ಪಾವತಿಸಬೇಕು ಎಂದು ನಿರ್ದೇಶನ ನೀಡಿತ್ತು. ಈ ಆದೇಶವನ್ನು ಪಾಲಿಸುವಲ್ಲಿ ಪತಿ ವಿಫಲರಾದಾಗ, ಕೌಟುಂಬಿಕ ನ್ಯಾಯಾಲಯವು ಆತನ ವಿರುದ್ಧ ಬಂಧನ ವಾರೆಂಟ್ ಹೊರಡಿಸಿತ್ತು.

ಹೈಕೋರ್ಟ್ ನೀಡಿದ ಸಂದೇಶ: ತನ್ನ ವಿರುದ್ಧದ ಬಂಧನ ವಾರೆಂಟ್ ಪ್ರಶ್ನಿಸಿ ಸೈಲೇಶ್ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಹೈಕೋರ್ಟ್, “ನ್ಯಾಯಾಲಯದ ಆದೇಶಗಳನ್ನು ಲಘುವಾಗಿ ಪರಿಗಣಿಸಬಾರದು. ಜೀವನಾಂಶ ಬಾಕಿ ಉಳಿಸಿಕೊಳ್ಳುವುದು ಪತ್ನಿಯ ಜೀವನದ ಹಕ್ಕನ್ನು ಕಸಿದುಕೊಂಡಂತೆ” ಎಂಬ ಅಭಿಪ್ರಾಯದೊಂದಿಗೆ ಅರ್ಜಿಯನ್ನು ತಿರಸ್ಕರಿಸಿತು. ಈ ಮೂಲಕ ಜೀವನಾಂಶ ನೀಡದೆ ತಪ್ಪಿಸಿಕೊಳ್ಳುವವರಿಗೆ ಹೈಕೋರ್ಟ್ ಕಠಿಣ ಎಚ್ಚರಿಕೆ ನೀಡಿದಂತಾಗಿದೆ.

Share. Facebook Twitter LinkedIn WhatsApp Email

Related Posts

BREAKING : ವಚನಾನಂದ ಸ್ವಾಮೀಜಿಗೆ ಮತ್ತೊಂದು ಸಂಕಷ್ಟ : ಪೋಕ್ಸೋ ಕೇಸ್ ನಲ್ಲಿ ‘FIR’ ದಾಖಲು!

1 Min Read

BIG NEWS : ವಿಜಯಪುರದಲ್ಲಿ ಬೆಳ್ಳಂ ಬೆಳಿಗ್ಗೆ ಚಿನ್ನದ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ : ಇಬ್ಬರಿಗೆ ಗಂಭೀರ ಗಾಯ!

1 Min Read

ರಾಜ್ಯದ ಜನತೆಯ ಗಮನಕ್ಕೆ: `ಲೋಕಾಯುಕ್ತಕ್ಕೆ ದೂರು’ ಸಲ್ಲಿಸುವುದು ಹೇಗೆ? ಇಲ್ಲಿವೆ ಅಗತ್ಯ ನಮೂನೆಗಳು | Lokayukta

1 Min Read
Recent News

SHOCKING : ದೆಹಲಿಯಲ್ಲಿ ಮತ್ತೆ ನಿರ್ಭಯಾ ಮಾದರಿ ಕೃತ್ಯ: ಚಲಿಸುವ ಬಸ್ಸಿನಲ್ಲಿ ಮಹಿಳೆಯ ಮೇಲೆ 2 ಗಂಟೆಗಳ ಕಾಲ ಗ್ಯಾಂಗ್ ರೇಪ್!

BIG NEWS : ಪತ್ನಿಗೆ ಜೀವನಾಂಶ ನೀಡದ ಪತಿಗೆ ಬಂಧನ ವಾರೆಂಟ್ ಜಾರಿ ಮಾಡಬಹುದು : ಹೈಕೋರ್ಟ್ ಮಹತ್ವದ ಆದೇಶ

BREAKING : ವಚನಾನಂದ ಸ್ವಾಮೀಜಿಗೆ ಮತ್ತೊಂದು ಸಂಕಷ್ಟ : ಪೋಕ್ಸೋ ಕೇಸ್ ನಲ್ಲಿ ‘FIR’ ದಾಖಲು!

BIG NEWS : ವಿಜಯಪುರದಲ್ಲಿ ಬೆಳ್ಳಂ ಬೆಳಿಗ್ಗೆ ಚಿನ್ನದ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ : ಇಬ್ಬರಿಗೆ ಗಂಭೀರ ಗಾಯ!

State News
KARNATAKA

BIG NEWS : ಪತ್ನಿಗೆ ಜೀವನಾಂಶ ನೀಡದ ಪತಿಗೆ ಬಂಧನ ವಾರೆಂಟ್ ಜಾರಿ ಮಾಡಬಹುದು : ಹೈಕೋರ್ಟ್ ಮಹತ್ವದ ಆದೇಶ

By ಸುರೇಶ್‌ KARNATAKA 2 Mins Read

ಬೆಂಗಳೂರು : ಪತ್ನಿಗೆ ನ್ಯಾಯಾಲಯ ನಿಗದಿಪಡಿಸಿದ ಜೀವನಾಂಶ ಪಾವತಿಸದ ಪತಿಯ ವಿರುದ್ಧ ಬಂಧನ ವಾರೆಂಟ್ ಜಾರಿ ಮಾಡಬಹುದು ಎಂದು ಹೈಕೋರ್ಟ್…

BREAKING : ವಚನಾನಂದ ಸ್ವಾಮೀಜಿಗೆ ಮತ್ತೊಂದು ಸಂಕಷ್ಟ : ಪೋಕ್ಸೋ ಕೇಸ್ ನಲ್ಲಿ ‘FIR’ ದಾಖಲು!

BIG NEWS : ವಿಜಯಪುರದಲ್ಲಿ ಬೆಳ್ಳಂ ಬೆಳಿಗ್ಗೆ ಚಿನ್ನದ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ : ಇಬ್ಬರಿಗೆ ಗಂಭೀರ ಗಾಯ!

ರಾಜ್ಯದ ಜನತೆಯ ಗಮನಕ್ಕೆ: `ಲೋಕಾಯುಕ್ತಕ್ಕೆ ದೂರು’ ಸಲ್ಲಿಸುವುದು ಹೇಗೆ? ಇಲ್ಲಿವೆ ಅಗತ್ಯ ನಮೂನೆಗಳು | Lokayukta

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.