Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಡಿಐಜಿ ಅಲೋಕ್ ಕುಮಾರ್ ಹೆಸರಿಗೆ ಕಳಂಕ ತರಲು ಕೈದಿಗಳು ಸಂಚು ರೂಪಿಸಿದ್ದಾರೆ. ಜೈಲಿನ ಒಳಗಿನಿಂದಲೇ ಅಲೋಕ ಕುಮಾರ್ ವಿರುದ್ಧದ ವಿಡಿಯೋ ಮಾಡಿದ್ದಾರೆ. ಅಲೋಕ ಕುಮಾರ್ ಅವರೇ ಮೊಬೈಲ್ ಕೊಟ್ಟಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಆರ್ಸಿಬಿ ಮ್ಯಾಚ್ ಇದೆ ಈ ಸಲ ಕಪ್ ನಮ್ದೇ ಎಂದು ಕೈದಿಗಳು ವಿಡಿಯೋ ಮಾಡಿದ್ದಾರೆ. ವಿಡಿಯೋ ಬಳಿಕ ಪೊಲೀಸರು ಅಲರ್ಟ್ ಆಗಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಧಿಕಾರಿಗಳು ಶೋಧ ನೆಡೆಸುತ್ತಿದ್ದಾರೆ ಜೈಲಿನೊಳಗೆ ವಿಡಿಯೋ ಮಾಡಿದ್ದ ವಿಚಾರಣಾನಾಧೀನ ಕೈದಿಗಳು ಪತ್ತೆಯಾಗಿದ್ದು ಕೈದಿಗಳನ್ನು ಅವರ ಹೆಸರಿನ ಆಧಾರದ ಬೇರೆ ಬೇರೆ ಬ್ಯಾರೆಕಗೆ ಶಿಫ್ಟ್ ಮಾಡಲಾಗಿದೆ. ಅಲೋಕ್ ಕುಮಾರ್ ವಿರುದ್ಧ ವಿಡಿಯೋ ಮಾಡಿದ್ದ ಕೈದಿಗಳು ಲಾಕ್ ಆಗಿದ್ದಾರೆ. ವಿಡಿಯೋ ಬಳಿಕ ಆದ ಅಧಿಕಾರಿಗಳು ಪರಪ್ಪನ ಅಗ್ರಹಾರ ಶೋಧ ನೆಡಿಸಲಾಗಿದೆ. ಇವಳೇ ಡ್ರೈನೇಜ್ ನೀರು ಹೋಗುವ ಸ್ಥಳದಲ್ಲಿ ಕೈದಿಗಳು ಬಟ್ಟೆಯಲ್ಲಿ ಮೊಬೈಲ್ ಸುದ್ದಿ ಇಟ್ಟಿದ್ದಾರೆ, ಕೊಡಲೇ ಪೊಲೀಸರು ಕೈದಿಗಳಿಂದಲೇ ಮೊಬೈಲ್ ಗಳನ್ನು ಹೊರಗಡೆ ತೆಗೆಸಿದ್ದು…
ಬೆಂಗಳೂರು : ವೈವಾಹಿಕ ಜೀವನದಲ್ಲಿ ನಡೆಯುವ ಸಾಮಾನ್ಯ ಅಸಮಾಧಾನಗಳು ಅಥವಾ ಕುಟುಂಬದ ಒಳಗಿನ ಸಣ್ಣಪುಟ್ಟ ಜಗಳಗಳನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498A ಅಡಿಯಲ್ಲಿ ‘ವರದಕ್ಷಿಣೆ ಕಿರುಕುಳ’ ಅಥವಾ ‘ಕ್ರೌರ್ಯ’ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ಮತ್ತು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದ ಆರೋಪಪಟ್ಟಿ ರದ್ದು ಕೋರಿ ಪತಿಯ ಸಂಬಂಧಿಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಈ ಆದೇಶ ಮಾಡಿದೆ. ಅವಿಭಕ್ತ ಕುಟುಂಬಗಳಲ್ಲಿ ನಡೆಯಯುವ ದಿನನಿತ್ಯದ ಜಗಳಗಳು, ಸಣ್ಣ ವಾಗ್ವಾದಗಳು ಸಾಮಾನ್ಯ. ಇದು ಅಲ್ಲದೆ, ಮದುವೆಗೂ ಮುನ್ನ ನಡೆದಿರುವ ಮದುವೆಯ ಖರ್ಚು ವೆಚ್ಚಗಳ ಕುರಿತ ಚರ್ಚೆಗಳನ್ನು ವರದಕ್ಷಿಣೆ ಕಿರುಕುಳ ಎಂದು ಹೇಳಲಾಗಿದೆ. ಅದನ್ನು ಹೊರತುಪಡಿಸಿ ಯಾವುದೇ ಕೌಟುಂಬಿಕೆ ದೌರ್ಜನ್ಯ ಆರೋಪವಿಲ್ಲ.ಅಲ್ಲದೆ, ಅಸ್ಪಷ್ಟ ಮತ್ತು ಆಧಾರರಹಿತ ಆರೋಪಗಳಿಂದ ಇಡೀ ಕುಟುಂಬದ ಸದಸ್ಯರನ್ನು ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿಸಲು ಸಾಧನವಾಗಿ ಬಳಸಲಾಗುವುದಿಲ್ಲ ಎಂದು ಪೀಠ ಹೇಳಿದೆ. ಮದುವೆಗೆ ಆಗಿರುವ…
BREAKING : ಪರಪ್ಪನ ಅಗ್ರಹಾರ ಜೈಲಲ್ಲಿ, ಡ್ರೈನೇಜ್ ನಲ್ಲಿ ಮೊಬೈಲ್ ಬಚ್ಚಿಟ್ಟು ಕೈದಿಗಳು ಕಳ್ಳಾಟ : ಅಧಿಕಾರಿಗಳು ಶಾಕ್!
ಬೆಂಗಳೂರು : ಬೆಂಗಳೂರಿನ ಕೇಂದ್ರ ಕಾರ್ಯ ಗ್ರಹದಲ್ಲಿ ಮೊಬೈಲ್ ಫೋನ್ ಪತ್ತೆಯಾಗಿರುವ ಘಟನೆ ವರದಿಯಾಗಿದೆ.ಜೈಲು ಸಿಬ್ಬಂದಿ ಕಣ್ಣು ತಪ್ಪಿಸಲು ಕೈದಿಗಳು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಕೈದಿಗಳ ಈ ಒಂದು ಪ್ಲಾನ್ ಗೆ ಸ್ವತಃ ಪೊಲೀಸ್ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಹೌದು ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಡಿಯೋ ಮಾಡಿ ಹರಿಬಿಟ್ಟ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಲ್ಲಿ ಮೊಬೈಲ್ ಪತ್ತೆಗಾಗಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ನಟ ದರ್ಶನ್, ಅಭಿಷೇಕ್ ಇರುವ ಬ್ಯಾರಕ್ನಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಕೇಂದ್ರ ಕಾರಾಗೃಹದ 9ನೇ ಬ್ಯಾರಕ್ ನಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ಈ ವೇಳೆ ಡ್ರೈನೇಜ್ ನೀರು ಹೋಗುವ ಜಾಗದಲ್ಲಿ ಮೊಬೈಲ್ ಪತ್ತೆಯಾಗಿದೆ. ಬಳಸಿದ ಹಾಲಿನ ಪ್ಯಾಕೆಟ್ ಗಳಲ್ಲಿ ಸುತ್ತಿ ಮೊಬೈಲ್ ಬಚ್ಚಿಡಲಾಗಿತ್ತು. ಆರೋಪಿಗಳ ಕೈಯಲ್ಲಿಯೆ ಅಧಿಕಾರಿಗಳು ಮೊಬೈಲ್ ಗಳನ್ನು ಹೊರಗಡೆ ತೆಗೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದ್ದು, ಪೊಲೀಸರು ಜೈಲಿನಲ್ಲಿ ಮತ್ತಷ್ಟು ತಪಾಸಣೆ ಮುಂದುವರೆಸಿದ್ದಾರೆ.
ಮಂಗಳೂರು : ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ರಾಜವಷ್ಟೇ ಅಲ್ಲದೆ ಇಡೀ ದೇಶವನ್ನೇ ಬೆಚ್ಚಿಬಿಳಿಸಿತ್ತು. ಇದೀಗ ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಮೊಹಮ್ಮದ್ ಶಾರೀಕ್ ತಪ್ಪೊಪ್ಪಿಕೊಂಡಿದ್ದಾನೆ. ಎನ್‌ಐಎ ವಿಶೇಷ ನ್ಯಾಯಾಲಯವು ಆತನ ಅರ್ಜಿಯನ್ನು ಅಂಗೀಕರಿಸಿದೆ. ನವೆಂಬರ್ 2022ರಲ್ಲಿ ಆಟೋರಿಕ್ಷಾದಲ್ಲಿ ಐಇಡಿ ಸ್ಫೋಟಿಸಿದ್ದನ್ನು ಶಾರೀಕ್ ಒಪ್ಪಿಕೊಂಡಿದ್ದಾನೆ. ಸದ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯು ಅರ್ಜಿ ಸಲ್ಲಿಸಿದ್ದು, ತನ್ನ ಅರ್ಜಿಯಲ್ಲಿ ಶಾರೀಕ್, ಕುಕ್ಕರ್‌ನಲ್ಲಿ ಐಇಡಿ ಇಟ್ಟು ಸ್ಫೋಟ ಮಾಡಿದ್ದೇನೆ. ನನಗೆ ಪಶ್ಚಾತ್ತಾಪವಾಗಿದೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾನೆ. ಮೂರು ತಿಂಗಳ ವಿಚಾರಣೆ ಬಳಿಕ ನ್ಯಾಯಾಲಯವು ಈ ಅರ್ಜಿಯನ್ನು ಮಾನ್ಯಗೊಳಿಸಿದೆ. ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಮೊಹಮ್ಮದ್ ಶಾರೀಕ್ ತಪ್ಪೊಪ್ಪಿಕೊಂಡಿದ್ದು, ಆತನ ಅರ್ಜಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯವು ಅಂಗೀಕರಿಸಿದೆ. ಪ್ರಕರಣ ಹಿನ್ನೆಲೆ? ಶಿವಮೊಗ್ಗ ಮೂಲದ 27 ವರ್ಷದ ಶಾರೀಕ್, 2022ರ ನವೆಂಬರ್ 19ರಂದು ಆಟೋರಿಕ್ಷಾದಲ್ಲಿ ಸಾಗಿಸುತ್ತಿದ್ದ ಪ್ರೆಶರ್ ಕುಕ್ಕರ್ ಬಾಂಬ್ ಅವನ ಮಡಿಲಲ್ಲೇ ಸ್ಫೋಟಗೊಂಡ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ. ಟೈಮರ್ ದೋಷದಿಂದ ಸಂಭವಿಸಿದ್ದ ಸ್ಫೋಟದಲ್ಲಿ ಆಟೋ…
ಬೆಳಗಾವಿ : ಸಿಎಂ ಸಿದ್ದರಾಮಯ್ಯ ಸರ್ಕಾರ ಪಾಕಿಸ್ತಾನದೊಳಗಿನ ಒಂದು ಸರ್ಕಾರ ಇದ್ದಂತಿದೆ ಎಂದು ಬಿಜೆಪಿ ಉಚ್ಛಾಟಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿದ್ದರಾಮಯ್ಯ ಸರ್ಕಾರವನ್ನು ಪಾಕಿಸ್ತಾನ ಸರಕಾರಕ್ಕೆ ಹೋಲಿಸಿ ವಿವಾದ ಹುಟ್ಟು ಹಾಕಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮಾತನಾಡಿ, ಬಜೆಟ್ನಲ್ಲಿ ಎಲ್ಲವೂ ಮುಸ್ಲಿಮರಿಗೆ ಕೊಟ್ಟಿದ್ದಾರೆ. ಅವರ ಹೆಣ್ಣು ಮಕ್ಕಳಿಗೆ ಕರಾಟೆ ತರಬೇತಿ, ಸಿಬಿಎಸ್ಸಿ ಶಾಲೆ ಮಾಡುವುದು, ಪಿಎಸ್ಐ ಟ್ರೈನಿಂಗ್ ಹಾಗೂ ಉರ್ದು ಶಾಲೆಗೆ ಪ್ರೋತ್ಸಾಹ ಕೊಡುತ್ತಿದ್ದಾರೆ.ಇದು ಒಬ್ಬ ರಾಜ್ಯದ ಮುಖ್ಯಮಂತ್ರಿ ಮಾಡುವ ಬಜೆಟ್ಟಾ? ಈ ರೀತಿ ಪಾಕಿಸ್ತಾನದಲ್ಲಿ ಕೂಡ ಕೊಟ್ಟಿಲ್ಲ. ಇಂತಹ ಮುಖ್ಯಮಂತ್ರಿ ಆಗಿದ್ದು, ಇಂತಹ ಸರ್ಕಾರ ಇದ್ದಿದ್ದು ನಮ್ಮ ದುರಂತ. ನಮಗೆ ಭ್ರಷ್ಟ ಹಾಗೂ ಸಾಬರ ಕಾಂಗ್ರೆಸ್ ಪಕ್ಷವನ್ನು ಸೋಲಿಸಬೇಕಾಗಿದೆ. ಈ ಸರ್ಕಾರ ಹೋದಮೇಲೆ ಭ್ರಷ್ಟ ಮಾರಿ ಮುಖ್ಯಮಂತ್ರಿ ಪುತ್ರ ಬರಬಾರದು ಪರೋಕ್ಷವಾಗಿ ಮತ್ತೆ ಬಿ. ವೈ ವಿಜಯೇಂದ್ರ ವಿರುದ್ಧ ಯತ್ನಾಳ್ ಕಿಡಿಕಾರಿದರು. ಅವನು ಮಹಾ ಭ್ರಷ್ಟ ಇವರು ಭ್ರಷ್ಟ ಜನರು ಏನು ಮಾಡಬೇಕು?…
ದಾವಣಗೆರೆ : ರಾಜ್ಯದಲ್ಲಿ ಮತ್ತೊಂದು ಬೃಹತ್ ದರೋಡೆ ನಡೆದಿದ್ದು ಜಮೀನು ಮಾರಾಟ ಮಾಡಿದ ಹಣದೊಂದಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಓಮಿನಿ ವಾಹನ ತಡೆದು, ಹಲ್ಲೆ ನಡೆಸಿ ₹38 ಲಕ್ಷ ನಗದು, ಮೊಬೈಲ್ ದರೋಡೆ ಮಾಡಿರುವ ಘಟನೆ ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗಡಿಭಾಗದ ಅರಕೆರೆ ಎ.ಕೆ. ಕಾಲೋನಿ ಸಮೀಪ ಶುಕ್ರವಾರ ಮುಂಜಾನೆ 4 ಗಂಟೆ ಹೊತ್ತಿಗೆ ನಡೆದಿದೆ. ಈ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಯ ಪಿಎಸ್‌ಐ ನಿರ್ಮಲ ದೂರು ದಾಖಲಿಸಿಕೊಂಡಿದ್ದಾರೆ. ಭದ್ರಾವತಿ ತಾಲೂಕಿನ ಮೈದೊಳಲು ಮಲ್ಲಾಪುರ ಗ್ರಾಮದ ಕಿರಾಣಿ ವರ್ತಕ ಮಾಲತೇಶ್ ಹಣ ಕಳೆದುಕೊಂಡ ದುರ್ದೈವಿ. ಹೊಸಪೇಟೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮೋರಗೇರ ಗ್ರಾಮದಲ್ಲಿದ್ದ ತನ್ನ 10 ಎಕರೆ 58 ಸೆಂಟ್ಸ್ ಜಮೀನನ್ನು ಮಾಲತೇಶ್ ಹೊಸಪೇಟೆಯ ಡಾಕ್ಟರ್ ಒಬ್ಬರಿಗೆ ಮಾರಾಟ ಮಾಡಿದ್ದರು. ಜಮೀನು ಮಾರಾಟದ 1.21 ಕೋಟಿ ಹಣವನ್ನು ಮರಿಯಮ್ಮನಹಳ್ಳಿಯಲ್ಲಿ ಪಡೆದುಕೊಂಡಿದ್ದ ಮಾಲತೇಶ್ ಅವರು, ಹೊಸಪೇಟೆಯ ಬಾಬುಲಾಲ್ ಹತ್ತಿರ ತಾವು ಮಾಡಿದ್ದ 36 ಲಕ್ಷ ಸಾಲಕ್ಕೆ ಹಣ ಪಾವತಿ ಮಾಡಿದ್ದಾರೆ. ಬಳಿಕ ರಿಜೆಸ್ಟ್ರೇಷನ್…
ಹಾಸನ : ಹಾಸನದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ರಸ್ತೆ ದಾಟುವ ವೇಳೆ ಕಾರು ಡಿಕ್ಕಿಯಾಗಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಹೊಳೆನರಸೀಪುರ ತಾಲೂಕಿನ ಕಾಮಸಮುದ್ರದ ಬಳಿಯ ರಾಷ್ಟ್ರೀಯ ಹೆದ್ದಾರಿ 373ರಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಚಿರಂತ್ (16) ಎಂದು ಗುರುತಿಸಲಾಗಿದೆ. ಪರೀಕ್ಷೆ ಮುಗಿಸಿ ಬಸ್‍ನಲ್ಲಿ ಊರಿಗೆ ಬಂದಿದ್ದ ಬಾಲಕ ರಸ್ತೆ ದಾಟುತ್ತಿದ್ದ. ಈ ವೇಳೆ ವೇಗವಾಗಿ ಬಂದ ಕಾರು ಬಾಲಕನಿಗೆ ಡಿಕ್ಕಿಯಾಗಿದೆ. ಪರಿಣಾಮ ಬಾಲಕ ಸಾವನ್ನಪ್ಪಿದ್ದಾನೆ. ಅತಿಯಾದ ವೇಗ ಹಾಗೂ ಕಾರು ಚಾಲಕನ ಅಜಾಗರೂಕತೆಯಿಂದ ಅಪಘಾತ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ಹೊಳೆನರಸೀಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ.
ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಇಂದು ವರುಣ ಅಬ್ಬರಿಸಿದ್ದು, ಜಿಲ್ಲೆಯ ಮೂಡಿಗೆರೆ ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದೆ. ಬಿಸಿಲಿನ ವಾತಾವರಣದ ನಡುವೆ ದಿಢೀರನೆ ಶುರುವಾದ ಮಳೆಯಿಂದ ವಾಹನ ಸವಾರರು ಪರದಾಡಿದ್ದಾರೆ. ಚಿಕ್ಕಮಗಳೂರು ನಗರದಲ್ಲೂ ಮಳೆ ಅಬ್ಬರಿಸುತ್ತಿದೆ. ಭಾರೀ ಗಾಳಿ ಜೊತೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಯಾವುದೇ ಮುನ್ಸೂಚನೆ ಇಲ್ಲದೇ ಆರಂಭವಾದ ಮಳೆಯಿಂದ ಜನ ಪರದಾಡುವಂತಾಗಿದೆ. ವಾಹನ ಸವಾರರು ವಾಹನ ಚಾಲನೆ ಮಾಡಲು ಸಾಧ್ಯವಾಗದೆ ಪರದಾಡಿದ್ದಾರೆ. ಬೈಕ್ ಸವಾರರು ಅಂಗಡಿಗಳು, ಬಸ್ ನಿಲ್ದಾಣಗಳ ಆಶ್ರಯ ಪಡೆದಿದ್ದಾರೆ. ಕೆಲವೆಡೆ ಗಾಳಿಯ ಅಬ್ಬರಕ್ಕೆ ಕಬ್ಬಿಣದ ತಗಡುಗಳು ಹಾರಿ ಹೋಗಿವೆ.ಬಿಸಿಲ ಧಗೆಗೆ ಕಂಗೆಟ್ಟಿದ್ದ ರೈತರು ಮಾತ್ರ ಮಳೆ ಬಂದಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಕಾಫಿ ಗಿಡಗಳಿಗೆ ನೀರು ಹಾಯಿಸಲು ಪರದಾಡುತ್ತಿದ್ದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ
ಬೆಂಗಳೂರು : ಕ್ಲಾಸ್ ರೂಮಿನಲ್ಲಿ ವಿದ್ಯಾರ್ಥಿಯನ್ನು ಉಗ್ರ ಎಂದು ಕರೆದ ಆರೋಪದ ಹಿನ್ನೆಲೆಯಲ್ಲಿ ಈಗ ಸಸ್ಪೆಂಡ್ ಆದ ಪ್ರೊಫೆಸರ್ ಮುರುಳಿದರ ದೇಶಪಾಂಡೆ ವಿರುದ್ಧ ಗಿರಿನಗರ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದ ಒಂದು ಪೋಸ್ಟನ್ನು ಆಧರಿಸಿ ಕೇಸ್ ದಾಖಲಿಸಿಕೊಂಡಿದ್ದಾರೆ ಧಾರ್ಮಿಕ ಭಾವನೆಗೆ ದಕ್ಕೆ ಮಾಡುವ ಆರೋಪದ ಅಡಿ ಲೆಸ್ ದಾಖಲಾಗಿದೆ. ಬಿ ಎನ್ ಎಸ್ ಸೆಕ್ಷನ್ 299 352ರ ಅಡಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಘಟನೆ ಹಿನ್ನೆಲೆ? ನಗರದ ಪ್ರತಿಷ್ಠಿತ PES ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರು ತರಗತಿಯಲ್ಲಿದ್ದ ಮುಸ್ಲಿಂ ವಿದ್ಯಾರ್ಥಿಯೊಬ್ಬನಿಗೆ ‘ಭಯೋತ್ಪಾದಕ’ (Terrorist) ಎಂದು ನಿಂದಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ವಿವಾದದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ವಿಶ್ವವಿದ್ಯಾಲಯ ಆಡಳಿತ ಮಂಡಳಿಯು ಪ್ರೊಫೆಸರ್ ಅವರನ್ನು ಅಮಾನತುಗೊಳಿಸಿದೆ. ವಿದ್ಯಾರ್ಥಿ ಅಫ್ಫಾನ್ ತರಗತಿಯ ನಡುವೆ ಹೊರಗೆ ಹೋಗಲು ಅನುಮತಿ ಕೇಳಿದ್ದನು. ಇದರಿಂದ ಆಕ್ರೋಶಗೊಂಡ ಪ್ರೊಫೆಸರ್ ಡಾ. ಮುರಳೀಧರ್ ದೇಶಪಾಂಡೆ, ವಿದ್ಯಾರ್ಥಿಯನ್ನು ತೀವ್ರವಾಗಿ ತರಾಟೆಗೆ…
ಬೆಂಗಳೂರು : ಐಪಿಎಲ್ ನಡೆಯುವಾಗ ಶಾಸಕರಿಗೆ ಕೇವಲ ಒಂದು ಟಿಕೆಟ್ ಮಾತ್ರ ನೀಡಲಾಗುತ್ತದೆ ನಮಗೆ ಒಂದು ಟಿಕೆಟ್ ನಲ್ಲಿ ನಾವು ಕುಟುಂಬದವರನ್ನು ಹೇಗೆ ಕಳುಹಿಸಬೇಕು ಎಂದು ಸದನದಲ್ಲಿ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ ಸೇರಿದಂತೆ ಬಿಜೆಪಿ ನಾಯಕರು ಕೂಡ ಹೆಚ್ಚುವರಿ ಟಿಕೆಟ್ ಗಾಗಿ ಬೇಡಿಕೆ ಇಟ್ಟಿದ್ದರು. ಅದರ ಬೆನ್ನಲ್ಲೆ ಕೆಎಸ್ಸಿಎ ಎರಡು ಟಿಕೆಟ್ ನೀಡುವುದಾಗಿ ಯೋಚನೆ ಮಾಡಿತು. ಆದರೆ ಇದೀಗ ಐಪಿಎಲ್ ಪಂದ್ಯಗಳಿಗೆ ಸಂಬಂಧಿಸಿದಂತೆ ನನ್ನ ಹೆಸರಿನಲ್ಲಿ ಯಾವುದೇ ಟಿಕೆಟ್ ಅಥವಾ ಪಾಸ್‌ಗಳನ್ನು ವಿತರಿಸಬಾರದೆಂದು ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ಕುಮಾರ್ ಸ್ಪೀಕರ್ ಯುಟಿ ಖಾದರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಸಮಾಜವಾದಿ ಎಂದು ಹೇಳಿಕೊಳ್ಳುವ ಸರ್ಕಾರದ ಆಡಳಿತದಲ್ಲಿ ಈ ವಿಐಪಿ ಸಂಸ್ಕೃತಿಗೆ ಪುರಸ್ಕಾರ ಸಿಗುತ್ತಿರುವುದು ಆಘಾತಕಾರಿಯಾಗಿದೆ. ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ವ್ಯಾಪ್ತಿಯಲ್ಲಿ ಜನಸಾಮಾನ್ಯರು ಅನುಭವಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ದಿಢೀರನೆ ಚಿನ್ನಸ್ವಾಮಿ ಸ್ಟೇಡಿಯಂನ ಐಪಿಎಲ್ ಪಂದ್ಯ, ಶಾಸಕರಿಗೆ ಟಿಕೆಟ್ ಹಂಚಿಕೆ…














