ಬೆಂಗಳೂರು : ಕನ್ನಡ ಇನ್ಫ್ಲುಯೆನ್ಸರ್ ಸಾಧನಾ ಶೆಟ್ಟಿ ವಿರುದ್ಧದ 1.5 ಕೋಟಿ ಬ್ಲ್ಯಾಕ್‌ಮೇಲ್ ಆರೋಪಕ್ಕೆ ಹೊಸ ತಿರುವು ಸಿಕ್ಕಿದೆ. ಪತಿ ಕಾರ್ತಿಕ್ ಸುಳ್ಳು ದೂರು ನೀಡಿದ್ದಾನೆ ಎಂದು ಆತನ ಪತ್ನಿ ಹರ್ಷಿತಾ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಪತಿಯ ಲೈಂಗಿಕ ಅಕ್ರಮ ಮತ್ತು ವಂಚನೆಯ ಜಾಲವನ್ನು ಸಾಕ್ಷಿಸಮೇತ ಪತ್ನಿಯೇ ಪೊಲೀಸರಿಗೆ ರವಾನಿಸಿದ್ದು, ಉದ್ಯಮಿ ಕಾರ್ತಿಕ್ ಅಸಲಿ ಮುಖ ಬಯಲಾಗಿದೆ.
ಮೇಕಪ್ ಕ್ಲಿನಿಕ್ ಮಾಲೀಕ ಕಾರ್ತಿಕ್ ಪುತಾ ಎಂಬುವವರು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸಾಧನಾ ಶೆಟ್ಟಿ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿತ್ತು. ಇದೀಗ ಈ ಸಂಬಂಧ ಪತಿ ಕಾರ್ತಿಕ್ ಪುತಾ ವಿರುದ್ಧ ಪತ್ನಿ ಹರ್ಷಿತಾ ಹೈದರಾಬಾದ್, ಬೆಂಗಳೂರು ಡಿಜಿಗೆ ಪತ್ರ ಬರೆದು ಸುಳ್ಳು ಕಥೆಯ ಬಗ್ಗೆ ತಿಳಿಸಿದ್ದಾರೆ.
ತನ್ನ ತಪ್ಪನ್ನು ಮುಚ್ಚಿಟ್ಟುಕೊಳ್ಳಲು ಸಾಧನಾ ಮೇಲೆ ದೂರು ನೀಡಿದ್ದ. ಕ್ಲಿನಿಕ್ ಪ್ರಮೋಶನ್ ಸಲುವಾಗಿ ಯುವತಿಯನ್ನು ಭೇಟಿ ಮಾಡಿದ್ದ. ಆಗ ಇಬ್ಬರ ಮಧ್ಯೆ ಸ್ನೇಹವಾಗಿತ್ತು. ಬಳಿಕ ಪ್ರೀತಿಯ ಹೆಸರಲ್ಲಿ ಮುಂದುವರೆಯೋದಾಗಿ ತಿಳಿಸಿ, ಸಾಕಷ್ಟು ಕಡೆ ಸುತ್ತಾಡಿಸಿ ಎಂಜಾಯ್ ಮಾಡಿದ್ದ. ಅಲ್ಲದೇ ಲೈಂಗಿಕವಾಗಿ ಬಳಸಿಕೊಂಡಿದ್ದಾನೆಂದು ಯುವತಿ ಮನೆ ಹತ್ತಿರ ಬಂದು ಗಲಾಟೆ ಮಾಡಿದ್ದಳು.
ಕಳೆದ ವರ್ಷ ಯುವತಿ ಹೈದರಾಬಾದ್‌ನಲ್ಲಿ ದೂರು ನೀಡಿದ್ದಳು. ಆಗ ಆಕೆಯ ಮೊಬೈಲ್‌ನ್ನು ಕಳ್ಳತನ ಮಾಡಿಸಿದ್ದ. ಚಾಲಾಕಿತನ ಉಪಯೋಗಿಸಿ ತನ್ನ ಲೈಂಗಿಕ ಸಂಬಂಧ ಮುಚ್ಚಿಹಾಕಲು ಖಾಸಗಿ ಫೋಟೋ, ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆಂದು ಆರೋಪಿಸಿ ದೂರು ನೀಡಿದ್ದ ಎಂದು ಆರೋಪಿಸಿದ್ದಾರೆ.
ಇದೀಗ ಕಾರ್ತಿಕ್ ಪತ್ನಿ ಜಯನಗರ ಪೊಲೀಸ್ ಠಾಣೆಯಲ್ಲಿ ಕಾರ್ತಿಕ್ ಯಾವುದೇ ಬಿಸಿನೆಸ್ ಮೆನ್ ಅಲ್ಲ. ಕಾಸ್ಮೆಟಿಕ್ ಬಗ್ಗೆ ಮಾರ್ಕೆಟಿಂಗ್ ಮಾಡುತ್ತಿದ್ದ. ಯುವತಿ ದೂರು ನೀಡಿದ್ರೆ ತನಗೆ ತೊಂದರೆ ಆಗುತ್ತೆ ಅಂತ ದೂರು ನೀಡಿದ್ದ ಎಂದು ಹೇಳಿಕೆ ನೀಡಿದ್ದಾರೆ. 1.5 ಕೋಟಿ ರೂ. ಹಣಕ್ಕೆ ಡಿಮ್ಯಾಂಡ್ ಮಾಡಿದ ಬ್ಲ್ಕ್ಯಾಕ್‌ಮೇಲ್ ಕಥೆ ಸಂಪೂರ್ಣ ಸುಳ್ಳು ಎಂದು ತಿಳಿಸಿದ್ದಾರೆ.








