ನವದೆಹಲಿ: ಬಾಲಿವುಡ್‌ನ ಖ್ಯಾತ ನಟಿ, ‘ನಾಗಿಣಿ’ ಖ್ಯಾತಿಯ ಮೌನಿ ರಾಯ್ ಅವರ ವೈವಾಹಿಕ ಜೀವನದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಈಗ ದೊಡ್ಡ ಮಟ್ಟದ ಚರ್ಚೆ ಆರಂಭವಾಗಿದೆ. ಮೌನಿ ರಾಯ್ ಮತ್ತು ಅವರ ಪತಿ ಸೂರಜ್ ನಂಬಿಯಾರ್ ಪರಸ್ಪರ ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ (Unfollow) ಮಾಡಿರುವುದು ಅಭಿಮಾನಿಗಳಲ್ಲಿ ಆತಂಕ ಮತ್ತು ಕುತೂಹಲವನ್ನು ಮೂಡಿಸಿದೆ. ಯಾವಾಗಲೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ದಿಢೀರನೆ ಈ ನಿರ್ಧಾರ ತೆಗೆದುಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ರಹಸ್ಯ: ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಜೋಡಿ. ಪ್ರವಾಸದ ಫೋಟೋಗಳು, ಹಬ್ಬದ ಸಂಭ್ರಮ ಹಾಗೂ ಪರಸ್ಪರರ ಮೇಲಿರುವ ಪ್ರೀತಿಯನ್ನು ಫೋಟೋಗಳ ಮೂಲಕ ಹಂಚಿಕೊಳ್ಳುತ್ತಿದ್ದ ಇವರು, ಈಗ ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡುತ್ತಿಲ್ಲ. ಅಷ್ಟೇ ಅಲ್ಲದೆ, ಈ ಹಿಂದೆ ಹಂಚಿಕೊಂಡಿದ್ದ ಕೆಲವು ಫೋಟೋಗಳು ಡಿಲೀಟ್ ಆಗಿವೆ ಎಂಬ ಸುದ್ದಿಯೂ ಹರಿದಾಡುತ್ತಿದ್ದು, ಇದು ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತಿಗೆ ಪುಷ್ಟಿ ನೀಡುವಂತಿದೆ.
ವದಂತಿಗಳಿಗೆ ಸಿಗದ ಅಧಿಕೃತ ಸ್ಪಷ್ಟನೆ: ಈ ಬಿರುಕಿನ ಸುದ್ದಿಯ ಬಗ್ಗೆ ಮೌನಿ ರಾಯ್ ಆಗಲಿ ಅಥವಾ ಸೂರಜ್ ನಂಬಿಯಾರ್ ಆಗಲಿ ಇಲ್ಲಿಯವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಸಾಮಾನ್ಯವಾಗಿ ಇಂತಹ ವದಂತಿಗಳು ಹಬ್ಬಿದಾಗ ಸೆಲೆಬ್ರಿಟಿಗಳು ಸ್ಪಷ್ಟನೆ ನೀಡುತ್ತಾರೆ, ಆದರೆ ಈ ಜೋಡಿ ಮೌನಕ್ಕೆ ಶರಣಾಗಿರುವುದು ಅಭಿಮಾನಿಗಳಲ್ಲಿ ಗೊಂದಲವನ್ನು ಹೆಚ್ಚಿಸಿದೆ. ಈ ಸಡನ್ ಬದಲಾವಣೆಯು ಕೇವಲ ಸಣ್ಣ ಮುನಿಸೋ ಅಥವಾ ದಾಂಪತ್ಯ ಅಂತ್ಯಗೊಳ್ಳುವ ಮುನ್ಸೂಚನೆಯೋ ಎಂಬ ಪ್ರಶ್ನೆ ಎದ್ದಿದೆ.
ಅಭಿಮಾನಿಗಳ ಆತಂಕ: ನಾಗಿಣಿ ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ಮೌನಿ ರಾಯ್, ನಂತರ ಬಾಲಿವುಡ್‌ನ ದೊಡ್ಡ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದರು. ಇವರ ವೈವಾಹಿಕ ಜೀವನ ಸುಂದರವಾಗಿ ಸಾಗುತ್ತಿದೆ ಎಂದು ಭಾವಿಸಿದ್ದ ಅಭಿಮಾನಿಗಳು, ಈ “ಅನ್‌ಫಾಲೋ” ಸುದ್ದಿಯಿಂದ ಬೇಸರ ವ್ಯಕ್ತಪಡಿಸಿದ್ದಾರೆ. “ಮೇಡ್ ಫಾರ್ ಈಚ್ ಅದರ್” ಎನ್ನಿಸಿಕೊಳ್ಳುತ್ತಿದ್ದ ಈ ಜೋಡಿ ಮತ್ತೆ ಒಂದಾಗಲಿ ಎಂದು ಅವರ ಫಾಲೋವರ್ಸ್ ಸೋಷಿಯಲ್ ಮೀಡಿಯಾದಲ್ಲಿ ಆಶಿಸುತ್ತಿದ್ದಾರೆ.
ಈ ವಿಷಯದ ಸಂಬಂಧ ಪ್ರತಿಕ್ರಿಯಿಸಿದ ಅಭಿಮಾನಿಗಳು, ನೀವಿಬ್ಬರು ಶಿವ-ಪಾರ್ವತಿಯಂತೆ ಕಾಣುತ್ತೀರಾ ಬೇರಾಗಬೇಡಿ. ಏನೇ ಸಮಸ್ಯೆ ಇದ್ದರೂ ಸರಿಪಡಿಸಿಕೊಂಡು ಮತ್ತೇ ಒಂದಾಗಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು, ನೀವು ಡಿವೋರ್ಸ್ ತೆಗೆದುಕೊಳ್ಳುತ್ತಿದ್ದೀರಾ ಎಂದು ಪ್ರಸ್ನಿಸುತ್ತಿದ್ದಾರೆ. ಜನವರಿ 2022 ರಲ್ಲಿ ಗೋವಾದಲ್ಲಿರುವ ಕ್ಯಾಂಡೋಲಿಮ್‌ನ ಹಿಲ್ಟನ್ ರೆಸಾರ್ಟ್ ಮಲೆಯಾಳಿ ಮತ್ತು ಬಂಗಾಳಿ ಸಂಪ್ರದಾಯದ ಪ್ರಕಾರ ಇವರಿಬ್ಬರು ಮದುವೆಯಾಗಿದ್ದರು.








