Subscribe to Updates
Get the latest creative news from FooBar about art, design and business.
Author: ಸುರೇಶ್
"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು
ಚಿತ್ರದುರ್ಗ : ತೀವ್ರ ಅನಾರೋಗ್ಯ ಹಾಗು ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ಸಚಿವ ಡಿ.ಸುಧಾಕರ್, ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಇಂದು ನಸುಕಿನ ಜಾವ 3 ಗಂಟೆ 15 ನಿಮಿಷಕ್ಕೆ ನಿಧನರಾಗಿದ್ದಾರೆ. ಇದೀಗ ಸಚಿವ ಡಿ ಸುಧಾಕರ್ ಅವರ ಅಂತ್ಯಕ್ರಿಯೆ ಇಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಸಂಜೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ. ರಾಜಕೀಯ ಜೀವನ 1961 ಮಾರ್ಚ್ 28ರಂದು ಸಚಿವ ಡಿ ಸುಧಾಕರ್ ಎನ್ ದಶರಥ ಹಾಗೂ ಕಾಂಚನಮಾಲಮ್ಮ ಪುತ್ರರಾಗಿ ಜನಿಸುತ್ತಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಪೂರೈಸುತ್ತಾರೆ ಶಿವಮೊಗ್ಗದ ನ್ಯಾಷನಲ್ ಕಾಲೇಜಿನಲ್ಲಿ ಬಿಕಾಂ ಕಂಪ್ಲೀಟ್ ಮಾಡುತ್ತಾರೆ. ತಂದೆಯಿಂದ ಲಿಕ್ಕರ್ ಉದ್ಯಮ ಹಾಗೂ ಕೃಷಿ ಕೆಲಸ ಬಳುವಳಿಯಾಗಿ ಬಂದಿತ್ತು. 1978 ಮತ್ತು 1989 ರಲ್ಲಿ ಚಳ್ಳಕೆರೆ ಕ್ಷೇತ್ರದ ಶಾಸಕರಾಗಿದ್ದ ಎಂ ಜಯಣ್ಣ ಅವರಿಂದ ರಾಜಕೀಯ ಪಾಠ ಕಲಿತ ಡಿ ಸುಧಾಕರ್, 2004ರಲ್ಲಿ ಚಳ್ಳಕೆರೆ…
ಹುಬ್ಬಳ್ಳಿ : ಹೆಂಡತಿಯು ತನ್ನ ಇಬ್ಬರು ತಂಗಿಯರ ಫೋಟೋ ತೆಗೆಯಬೇಡ ಎಂದು ಗಂಡನಿಗೆ ಹೇಳಿದಾಗ್ಯೂ ಧಿಕ್ಕರಿಸಿ ಫೋಟೋ ತೆಗೆದಿದ್ದಕ್ಕೆ ದಂಪತಿ ಮಧ್ಯೆ ಜಗಳ ವಿಕೋಪಕ್ಕೆ ತಿರುಗಿ ಪತ್ನಿ ಸೇರಿ ಕುಟುಂಬಸ್ಥರ ಮೇಲೆ ಆ್ಯಸಿಡ್ ದಾಳಿ ನಡೆಸಿದ ಘಟನೆ ಹುಬ್ಬಳ್ಳಿ ತಾಲೂಕಿನ ತಾರಿಹಾಳದ ವಾಜಪೇಯಿ ನಗರದಲ್ಲಿ ಶನಿವಾರ ನಡೆದಿದೆ. ಘಟನೆಯಲ್ಲಿ ಮಗು ಸೇರಿ ಐವರು ಗಾಯಗೊಂಡಿದ್ದು, ಅವರನ್ನು ಕೆಎಂಸಿಆರ್‌ಐಗೆ ದಾಖಲಿಸಲಾಗಿದೆ.ಸುರೇಶಬೈಲಪತ್ತಾರ (33), ಈತನ ಪತ್ನಿ ರಾಜೇಶ್ವರಿ ಬೈಲಪತ್ತಾರ (24), ಪತ್ನಿಯ ತಂಗಿಯರಾದ ಶ್ರುತಿ, ರೇಷ್ಮಾ ಹಾಗೂ 6 ತಿಂಗಳ ಮಗುವಿನ ಮೇಲೆ ಆ್ಯಸಿಡ್ ಬಿದ್ದು ಗಂಭೀರ ಗಾಯವಾಗಳಾಗಿವೆ. ಗಾಯಾಳುಗಳನ್ನು ಕೆಎಂಸಿಆರ್‌ಐ ಆಸ್ಪತ್ರೆಗೆ ದಾಖಲಿಸಿದ್ದು, ಸುರೇಶ ಬೈಲಪತ್ತಾರ ಹಾಗೂ ರಾಜೇಶ್ವರಿ ಅವರ ಸ್ಥಿತಿ ಗಂಭೀರವಾಗಿದೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಏನಿದು ಘಟನೆ?: ತಾರಿಹಾಳದ ವಾಜಪೇಯಿ ನಗರದಲ್ಲಿ ಕುಟುಂಬದೊಂದಿಗೆ ವಾಸವಾಗಿರುವ ಸುರೇಶ ಬೈಲಪತ್ತಾರ ಹಿತ್ತಾಳೆ, ತಾಮ್ರದ ಕೆಲಸ ಮಾಡಿಕೊಂಡಿದ್ದಾನೆ. ನಾದಿನಿಯರ ವಿಚಾರವಾಗಿ ಸುರೇಶ ಮತ್ತವನ ಪತ್ನಿ ರಾಜೇಶ್ವರಿ ನಡುವೆ ಜಗಳ ನಡೆದಿದೆ.…
ಬೆಂಗಳೂರು : ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ ಸುಧಾಕರ್ (65) ಇದೀಗ ನಿಧನರಾಗಿದ್ದಾರೆ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಸಚಿವ ಡಿ ಸುಧಾಕರ್ ನಿಧನ ರಾಗಿದ್ದಾರೆ ಚಿತ್ರದುರ್ಗದ ಉಸ್ತುವಾರಿ ಸಚಿವರಾಗಿರುವ ಡಿಸುಧಾಕರ್ ಇನ್ನಿಲ್ಲ ಇಂದು ಬೆಳಿಗ್ಗೆ 3. 15 ಕ್ಕೆ ಸಚಿವ ಡಿ ಸುಧಾಕರ್ ನಿಧನರಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಡಿ ಸುಧಾಕರ್ ಚಿಕಿತ್ಸೆ ಪಡೆಯುತ್ತಿದ್ದರು ಆರೋಗ್ಯದಲ್ಲಿ ಚೇತರಿಕೆ ಕೂಡ ಕಾಣದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 3. 15 ರ ಸುಮಾರಿಗೆ ಡಿ ಸುಧಾಕರ್ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಸಚಿವ ಸುಧಾಕರ್ ಅವರ ಆರೋಗ್ಯ ಸ್ಥಿತಿ ಏರುಪೇರಾಗಿತ್ತು. ಹೀಗಾಗಿ ಅವರನ್ನು ತಜ್ಞ ವೈದ್ಯರ ನಿಗಾದಲ್ಲಿ ಇರಿಸಿ ಸುದೀರ್ಘ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಕಾರಣ ಇಂದು ಮುಂಜಾನೆ ಸುಮಾರು 3:15 ಗಂಟೆಗೆ ಅವರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಖಚಿತಪಡಿಸಿವೆ. ಮೃತ ಸುಧಾಕರ್ ಅವರು ಚಿತ್ರದುರ್ಗ ಜಿಲ್ಲೆಯ ಹಿರಿಯ ರಾಜಕಾರಣಿಯಾಗಿದ್ದು,…
ಬೆಂಗಳೂರು : ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ ಸುಧಾಕರ್ (65) ಇದೀಗ ನಿಧನರಾಗಿದ್ದಾರೆ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಸಚಿವ ಡಿ ಸುಧಾಕರ್ ನಿಧನ ರಾಗಿದ್ದಾರೆ ಚಿತ್ರದುರ್ಗದ ಉಸ್ತುವಾರಿ ಸಚಿವರಾಗಿರುವ ಡಿಸುಧಾಕರ್ ಇನ್ನಿಲ್ಲ ಇಂದು ಬೆಳಿಗ್ಗೆ 3. 15 ಕ್ಕೆ ಸಚಿವ ಡಿ ಸುಧಾಕರ್ ನಿಧನರಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಡಿ ಸುಧಾಕರ್ ಚಿಕಿತ್ಸೆ ಪಡೆಯುತ್ತಿದ್ದರು ಆರೋಗ್ಯದಲ್ಲಿ ಚೇತರಿಕೆ ಕೂಡ ಕಾಣದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 3. 15 ರ ಸುಮಾರಿಗೆ ಡಿ ಸುಧಾಕರ್ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಸಚಿವ ಸುಧಾಕರ್ ಅವರ ಆರೋಗ್ಯ ಸ್ಥಿತಿ ಏರುಪೇರಾಗಿತ್ತು. ಹೀಗಾಗಿ ಅವರನ್ನು ತಜ್ಞ ವೈದ್ಯರ ನಿಗಾದಲ್ಲಿ ಇರಿಸಿ ಸುದೀರ್ಘ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಕಾರಣ ಇಂದು ಮುಂಜಾನೆ ಸುಮಾರು 3:15 ಗಂಟೆಗೆ ಅವರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಖಚಿತಪಡಿಸಿವೆ. ಮೃತ ಸುಧಾಕರ್ ಅವರು ಚಿತ್ರದುರ್ಗ ಜಿಲ್ಲೆಯ ಹಿರಿಯ ರಾಜಕಾರಣಿಯಾಗಿದ್ದು,…
ತಮಿಳುನಾಡು : ತಮಿಳುನಾಡಿನಲ್ಲಿ ಇಂದಿನಿಂದ ದಳಪತಿ ದರ್ಬಾರ್ ಆರಂಭವಾಗಲಿದೆ. ಪಟ್ಟಾಭಿಷೇಕಕ್ಕೆ ಇದೀಗ ಕ್ಷಣಗಣನೆ ಆರಂಭವಾಗಿದ್ದು ತಮಿಳುನಾಡಿನ ಮುಖ್ಯಮಂತ್ರಿ ಆಗಿ ಇಂದು ಸಿ ಜೋಸೆಫ್ ವಿಜಯ ಪದಗ್ರಹಣ ಮಾಡಲಿದ್ದಾರೆ. ಪ್ರಮಾಣವಚನ ಸ್ವೀಕರಿಸುವಂತೆ ರಾಜ್ಯಪಾಲರು ಆಹ್ವಾನ ನೀಡಿದ್ದಾರೆ ಲೋಕಭವನದಲ್ಲಿ ವಿಜಯ್ ಗವರ್ನರ್ ಆಹ್ವಾನ ನೀಡಿದ್ದಾರೆ. ತಮಿಳುನಾಡು ಸಿಎಂ ಆಗಿ ವಿಜಯ್ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದು ಮೇ 13ರ ಒಳಗೆ ವಿಶ್ವಾಸಮತ ಯಾಚನೇ ಮಾಡಲಿದ್ದಾರೆ. ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡಲಿದ್ದು ಬೆಳಿಗ್ಗೆ 10 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಚೆನ್ನೈನ ನೆಹರು ಸ್ಟೇಡಿಯಂನಲ್ಲಿ ಪ್ರಮಾಣವಚನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಗಿ ಆಗಲಿದ್ದಾರೆ. ವಿಜಯ್ ನಿಯೋಜಿತ ಸಿಎಂ ಎಂದು ಗವರ್ನರ್ ಉಲ್ಲೇಖ ಮಾಡಿದ್ದು, ವಿಜಯಗೆ ನೀಡಿರುವ ಆಹ್ವಾನ ಪತ್ರದಲ್ಲಿ ಗವರ್ನರ್ ಉಲ್ಲೇಖಿಸಿದ್ದಾರೆ ಮಿತ್ರ ಪಕ್ಷಗಳ ನಾಯಕರು ಸಮ್ಮುಖದಲ್ಲಿ ನೀಡಿದ್ದಾರೆ.
ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಘೋರವಾದ ದುರಂತ ಒಂದು ಸಂಭವಿಸಿದ್ದು, ಮನೆ ಬಳಿ ಆಟವಾಡುತ್ತಿದ್ದ ಇಬ್ಬರು ಮಕ್ಕಳ ಮೇಲೆ ಗೇಟ್ ಬಿದ್ದು ಒಂದು ಮಗು ಸಾವನ್ನಪ್ಪಿ, ಮತ್ತೊಂದು ಮಗು ಗಂಭೀರವಾಗಿ ಗಾಯ ಗೊಂಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರ ದ್ವಾರಕಾನಗರ ದಲ್ಲಿ ನಡೆದಿದೆ. ಇಮಾಮ್ ಮತ್ತು ರಮೀಜಾ ದಂಪತಿಗಳ ಮಗು ಮೃತ ಗೌಸಿಯಾ(5) ಮೃತ ಮಗು. ಇಮಾಮ್ ತಂಗಿ ಶಕೀಲಾ ಅವರ ಮಗು ಸುಮಯ(03) ಎಂಬ ಮಗುವಿಗೆ ಕಾಲು ಮುರಿದಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಲು ಮುರಿತಕ್ಕೆ ಒಳಗಾದ ಮಗು ಆಸ್ಪತ್ರೆಗೆ ದಾಖಲೀಸಲಾಗಿದೆ. ದ್ವಾರಕಾನಗರದ ಲ್ಲಿರುವ ಮನೆ ರವಿಶಂಕರ್ ಅವರಿಗೆ ಸೇರಿದ್ದಾ ಗಿದೆ. ಕಳೆದ 5 ತಿಂಗಳ ಹಿಂದೆಯಷ್ಟೇ ಬಾಡಿಗೆ ಮನೆಗೆ ಬಂದಿದ್ದರು. ದಂಪತಿಗಳು ಬಸ್ ನಿಲ್ದಾಣದ ಬಳಿ ಹಣ್ಣು ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ. ಈಗ ಮಗುವನ್ನು ಕಳೆದುಕೊಂಡ ಅವರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯಕ್ಕೆ ಮರಣೋ ತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಮೃತದೇಹ ರವಾನಿಸ ಲಾಗಿದೆ. ಈ…
ಹಾವೇರಿ / ಕೋಲಾರ : ಹಾವೇರಿ ಮತ್ತು ಕೋಲಾರದಲ್ಲಿ ಪ್ರತ್ಯೇಕ ಘಟನೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಹಾವೇರಿಯಲ್ಲಿ ಭೀಕರವಾದ ಕೊಲೆ ನಡೆದಿದ್ದು ಮಾರಕಾಸ್ತ್ರಗಳಿಂದ ಕೊಚ್ಚಿ ಮನೆಯಲ್ಲಿ ಮಲಗಿದ್ದವನು ಕೊಲೆ ಮಾಡಲಾಗಿದೆ. ಹಾವೇರಿ ಜಿಲ್ಲೆಯ ಹಿರೇಕೆರೂರಿನ ಬಸವನಬೀದಿಯಲ್ಲಿ ಒಂದು ಘಟನೆ ನಡೆದಿದ್ದು ಮಹಾಲಿಂಗ ಜಯ ಬಸವರಾಜ್ ಮಳವಳ್ಳಿ (41) ಎಂಬ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ ಜಯ ಬಸವರಾಜ ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ ಘಟನೆ ಕುರಿತು ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ . ಇನ್ನೊಂದು ಕಡೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಗ್ರಾಮದಲ್ಲಿ ಸತ್ಯ ಮೈದಾನದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯನ್ನು ಬೀಕರವಾಗಿ ಕೊಲೆ ಮಾಡಲಾಗಿದೆ ಜಂಗಾಲಹಳ್ಳಿ ಪುರುಷೋತ್ತಮ (26) ಎನ್ನುವ ವ್ಯಕ್ತಿಯನ್ನು ಬರ್ಬಾರವಾಗಿ ಕೊಲೆ ಮಾಡಲಾಗಿದ್ದು ಮಚ್ಚಿನಿಂದ ಹಲ್ಲೆ ಮಾಡಿ ಬಳಿಕ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ. ಪುರುಷೋತ್ತಮ್ನನ್ನು ಕೊಲೆ ಮಾಡಿ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ ಘಟನೆ ಕುರಿತು ಮಾಸ್ತಿ ಪೊಲೀಸ್ ಠಾಣೆಯಲ್ಲಿ…
ಬೆಂಗಳೂರು : ಒಂದು ಕಡೆ ರಾಜ್ಯದ ಜನರು ಸಿಲಿಂಡರ್ ಸಿಗದೆ ಪರದಾಡುತ್ತಿದ್ದರೆ, ಮತ್ತೊಂದು ಕಡೆ ದಿನದಿಂದ ದಿನಕ್ಕೆ ಏರುತ್ತಿರುವ ತರಕಾರಿ ಬೆಲೆ ಜನರಿಗೆ ಸಂಕಷ್ಟ ಇನ್ನಷ್ಟು ಹೆಚ್ಚು ಮಾಡಿದೆ. ಕಳೆದ ಹದಿನೈದು ದಿನಕ್ಕೆ ಹೋಲಿಸಿದರೆ ಕೆಲವು ತರಕಾರಿಗಳ ಬೆಲೆ ಎರಡು ಪಟ್ಟು ಹೆಚ್ಚಳವಾಗಿದೆ. ಬಿಸಿಲಿನ ತಾಪಕ್ಕೆ ತರಕಾರಿಗಳ ಹೂವು ಉದುರುತ್ತಿದ್ದು, ಇತ್ತೀಚೆಗೆ ಕೆಲವೆಡೆ ಸುರಿದ ಭಾರೀಮಳೆಯಿಂದಲೂ ಇಳುವರಿ ಕಡಿಮೆ ಆಗಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ವಿವಾಹ, ಊರ ಹಬ್ಬ, ಜಾತ್ರೆ, ರಥೋತ್ಸವಗಳ ಹಿನ್ನೆಲೆಯಲ್ಲಿ ತರಕಾರಿಗೆ ಬೇಡಿಕೆ ಹೆಚ್ಚಾಗಿದ್ದು ಪೂರೈಕೆಯ ಪ್ರಮಾಣ ಕಡಿಮೆ ಇರುವುದೂ ಸಹ ದರ ಹೆಚ್ಚಳಕ್ಕೆ ಕಾರಣವಾಗಿದೆ. 10 ದಿನದ ಹಿಂದೆ ಕೆಜಿ ಬೀನ್ಸ್‌ಗೆ 80 ರುಪಾಯಿ ಇದ್ದದ್ದು ಈಗ 200 ರು ತಲುಪಿದೆ. ಬೀನ್ಸ್‌ಗೆ ಡಿಮ್ಯಾಂಡ್ ಹೆಚ್ಚಾಗಿರುವುದರಿಂದ ಬೆಲೆ ಅಧಿಕವಾಗಿದೆ. ವಾರದ ಹಿಂದೆ ಕೆಜಿ ಕ್ಯಾರೆಟ್‌ಗೆ 30 ರು. ಇದ್ದದ್ದು ಈಗ 60 ರು. ಆಗಿದೆ. 120 ರು. ಇದ್ದ ಬಟಾಣಿ 360 ರು. ಆಗಿದೆ. 120 ರು.…
ಚೆನ್ನೈ: ತಮಿಳುನಾಡು ರಾಜಕೀಯ ಇತಿಹಾಸದಲ್ಲಿ ಸುದೀರ್ಘ ಕಾಲದ ನಂತರ ಹೊಸ ಸಂಚಲನ ಸೃಷ್ಟಿಯಾಗಿದೆ. ದಶಕಗಳ ಕಾಲ ದ್ರಾವಿಡ ಪಕ್ಷಗಳ ಅಧಿಪತ್ಯವಿದ್ದ ರಾಜ್ಯದಲ್ಲಿ ಈಗ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. ನಾಳೆ ಬೆಳಿಗ್ಗೆ ವಿಜಯ್ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ನಾಳೆ ಬೆಳಿಗ್ಗೆ 10ಕ್ಕೆ ಪದಗ್ರಹಣ: ಮೇ 13ಕ್ಕೆ ವಿಶ್ವಾಸಮತ ರಾಜ್ಯಪಾಲರಿಂದ ಸರ್ಕಾರ ರಚನೆಯ ಅಧಿಕೃತ ಆಹ್ವಾನ ಪಡೆದಿರುವ ವಿಜಯ್ ಅವರು, ಮೇ 10ರಂದು ಬೆಳಿಗ್ಗೆ 10 ಗಂಟೆಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಧಿಕಾರ ವಹಿಸಿಕೊಂಡ ನಂತರದ ಮೊದಲ ಸವಾಲಾಗಿ, ಮೇ 13ರಂದು ವಿಧಾನಸಭೆಯಲ್ಲಿ ತಮ್ಮ ಸರ್ಕಾರದ ಬಹುಮತವನ್ನು ಸಾಬೀತುಪಡಿಸಲು ವಿಶ್ವಾಸಮತ ಯಾಚನೆ ನಡೆಸಲಿದ್ದಾರೆ. https://twitter.com/ANI/status/2053139539175301389 VCK ಬೆಂಬಲದೊಂದಿಗೆ ‘ಮ್ಯಾಜಿಕ್ ನಂಬರ್’ ತಲುಪಿದ TVK ಚುನಾವಣಾ ಫಲಿತಾಂಶದ ನಂತರ ಉಂಟಾಗಿದ್ದ ಅತಂತ್ರ ಸ್ಥಿತಿಗೆ ಈಗ ಪೂರ್ಣವಿರಾಮ ಬಿದ್ದಿದೆ. ವಿಡುದಲೈ ಚಿರೂತೈಗಲ್ ಕಚ್ಚಿ (VCK) ಅಧ್ಯಕ್ಷ ತೊಲ್ ತಿರುಮಾವಳವನ್ ಅವರು…
ಚಿಕ್ಕಬಳ್ಳಾಪುರ: ಜಿಲ್ಲೆಯ ಖಾಸಗಿ ಕಾಲೇಜೊಂದರ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಪೋಲಿಸ್ ಅಧಿಕಾರಿಗಳ ಮೇಲೆ ಕಾಲೇಜು ವಿದ್ಯಾರ್ಥಿಗಳ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ನಂದಿಗಿರಿಧಾಮ ಪೊಲೀಸ್ ಠಾಣೆಗೆ ಸೇರಿದ ಎಎಸ್‌ಐ ಗಂಗರಾಜು ಹಾಗೂ ಓರ್ವ ಪೊಲೀಸ್ ಕಾನ್ಸ್‌ಟೇಬಲ್ ಈ ದಾಳಿಗೆ ಒಳಗಾದ ದುರ್ದೈವಿಗಳಾಗಿದ್ದು, ಸದ್ಯ ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.ಈ ಕುರಿತು ಕರ್ನಾಟಕ ರಾಷ್ಟ್ರ ಸಮಿತಿ ವಿಡಿಯೋ ಹಂಚಿಕೊಂಡಿದೆ. ನಂದಿಗಿರಿಧಾಮ ಪೊಲೀಸ್ ಠಾಣೆಯ ಎಎಸ್‌ಐ ಗಂಗರಾಜು ಹಾಗೂ ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಪುಂಡ ವಿದ್ಯಾರ್ಥಿಗಳು ಗುಂಪು ಕಟ್ಟಿಕೊಂಡು ಹಲ್ಲೆ ನಡೆಸಿದ್ದಾರೆ. ಕಾಲೇಜಿನಲ್ಲಿ ಕಾರ್ಯಕ್ರಮವಿದ್ದ ಕಾರಣ ಸಿನಿಮಾ ನಟ ನಟಿಯರು ಆಗಮಿಸಿದ್ದರು. ಭದ್ರತೆಗೆ ಪೊಲೀಸರು ಕಾಲೇಜಿನ ಗೇಟ್ ಬಳಿ ತೆರಳಿದ್ದರು. ಈ ವೇಳೆ ಹತ್ತಾರು ಮಂದಿ ವಿದ್ಯಾರ್ಥಿಗಳು ಸೈಲೆನ್ಸರ್ ಅಲ್ಟರ್ ಮಾಡಿಕೊಂಡಿದ್ದ ಬೈಕ್‌ಗಳಲ್ಲಿ ಕರ್ಕಶ ಶಬ್ಧ ಮಾಡಿಕೊಂಡು ಓಡಾಡಿದ್ದರು. ಬೈಕ್ ಕರ್ಕಶ ಶಬ್ಧ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಎಎಸ್‌ಐ ಗಂಗರಾಜು ಸೈಲೆಂಟ್ ಆಗಿ ಹೋಗಿ ಎಂದು ಹೇಳಿದ್ದರಂತೆ. ಈ ವೇಳೆ ಪೊಲೀಸರ…













