Subscribe to Updates
Get the latest creative news from FooBar about art, design and business.
Author: ಸುರೇಶ್
"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು
ಹೈದರಾಬಾದ್: ಭಯೋತ್ಪಾದನೆಗೆ ನಿರಂತರವಾಗಿ ಪ್ರೋತ್ಸಾಹ ಮತ್ತು ಬೆಂಬಲ ನೀಡುತ್ತಿರುವ ನೆರೆರಾಷ್ಟ್ರ ಪಾಕಿಸ್ತಾನದ ವಿರುದ್ಧ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭಯೋತ್ಪಾದನೆಯನ್ನು ಜಾಗತಿಕ ಮಟ್ಟದಲ್ಲಿ ಪ್ರಾಯೋಜಿಸುವ ದೇಶಗಳಿಗೆ ಸಿಂಧೂ ನದಿಯ ನೀರನ್ನು ತಲುಪಲು ಎನ್‌ಡಿಎ ಸರ್ಕಾರವು ಎಂದಿಗೂ ಬಿಡುವುದಿಲ್ಲ ಎಂದು ಅವರು ಶುಕ್ರವಾರ ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅತ್ಯಂತ ಕಡಕ್ ಆಗಿ ಎಚ್ಚರಿಸಿದ್ದಾರೆ. ಉಗ್ರರ ದಾಳಿ ಮತ್ತು ಭಾರತದ ಕಠಿಣ ನಿರ್ಧಾರ ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಉಗ್ರರ ದಾಳಿಯನ್ನು ಉಲ್ಲೇಖಿಸಿದ ರಕ್ಷಣಾ ಸಚಿವರು, ಈ ದಾಳಿಯ ನಂತರ ಭಾರತ ಸರ್ಕಾರವು ಪಾಕಿಸ್ತಾನಕ್ಕೆ ಅತ್ಯಂತ ಸ್ಪಷ್ಟ ಹಾಗೂ ಕಠಿಣ ಸಂದೇಶವನ್ನು ರವಾನಿಸಿದೆ ಎಂದು ತಿಳಿಸಿದರು. ಗಡಿಯಾಚೆಗಿನ ಭಯೋತ್ಪಾದನೆಯನ್ನು ಮಟ್ಟಹಾಕಲು ಮತ್ತು ಭಾರತೀಯರ ಸುರಕ್ಷತೆಯನ್ನು ಕಾಯ್ದುಕೊಳ್ಳಲು ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಅಮಾನತುಗೊಳಿಸುವ ಮೂಲಕ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಲಾಗಿದೆ ಎಂದು ಅವರು ವಿವರಿಸಿದರು. ಮಾನವೀಯತೆಯ ಶತ್ರುಗಳಿಗೆ ನೀರಿಲ್ಲ “ಯಾರ…
ಬೆಂಗಳೂರು : ಬೆಂಗಳೂರಿನಲ್ಲಿ ಕಸದ ಟೆಂಡರ್ ನಲ್ಲಿ ಸಾವಿರಾರು ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂದು ಕಳೆದ ಕೆಲವು ದಿನಗಳ ಹಿಂದೆ ವಿರೋಧ ಪಕ್ಷದ ನಾಯಕ ಆರು ಅಶೋಕ್ ಗಂಭೀರವಾಗಿ ಆರೋಪಿಸಿದ್ದರು. ಇದೀಗ ಇದೆ ವಿಚಾರವಾಗಿ ಆರ್ ಅಶೋಕ್ ಡಿಕೆ ಶಿವಕುಮಾರ್ ಅವರಿಗೆ ಸವಾಲು ಹಾಕಿದ್ದು ನೀವು ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎನ್ನುವುದಾದರೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಎಂದು ಸವಾಲು ಹಾಕಿದ್ದಾರೆ. ನಾನು ಯಾವುದೇ ತನಿಖೆಗೆ ಸಿದ್ಧ ಎಂದು ಮಾಧ್ಯಮಗಳ ಮುಂದೆ ಹಾರಿಕೆ ಉತ್ತರ ನೀಡುವ ಕಮಿಷನ್ ಮಿನಿಸ್ಟರ್ ಡಿಕೆ ಶಿವಕುಮಾರ್ ಅವರೇ, ಕ್ಯಾಮೆರಾಗಳ ಮುಂದೆ ನಿಮ್ಮ ಈ ‘ಉತ್ತರಕುಮಾರನ ಪೌರುಷ’ ಸಾಕು ಮಾಡಿ. ನಿಮ್ಮಲ್ಲಿ ನಿಜವಾಗಿಯೂ ಪ್ರಾಮಾಣಿಕತೆ ಇದ್ದರೆ, ಕಸದ ಟೆಂಡರ್‌ನ ಈ ಮಹಾ ಲೂಟಿಯಲ್ಲಿ ನಿಮ್ಮ ಪಾತ್ರವಿಲ್ಲ ಎಂಬ ಧೈರ್ಯ ನಿಮಗಿದ್ದರೆ, ಈ ಕೂಡಲೇ ಪ್ರಕರಣವನ್ನು CBI ತನಿಖೆಗೆ ಒಪ್ಪಿಸಿ. ಘನತ್ಯಾಜ್ಯ ವಿಲೇವಾರಿ ಟೆಂಡರ್ ಹೆಸರಿನಲ್ಲಿ ನಡೆದಿರುವ ಈ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ನಾನೇ ಖುದ್ದಾಗಿ ದೂರು…
ಬೆಂಗಳೂರು : ಸರ್ಕಾರಿ ಒಡೆತನದ ಆಹಾರ ಗೋದಾಮುಗಳ ಮೇಲೆ ಇಂದು ಏಕಾಯಕಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು. ಬೆಂಗಳೂರಿನ ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಲೋಕಾಯುಕ್ತ ಪೊಲೀಸರಿಂದ ಏಕಕಾಲಕ್ಕೆ 27 ಕಡೆ ದಾಳಿ ನಡೆದಿದೆ. ಲೋಕಾಯುಕ್ತ ಅಧಿಕಾರಿಗಳ ಕಳ್ಳಾಟ ಬಯಲಾಗಿದೆ. ಸರಿಯಾದ ಲೆಕ್ಕ ನೀಡದೆ ಅಧಿಕಾರಿಗಳು ಕಳ್ಳಾಟ ನಡೆಸಿದ್ದಾರೆ. ಕೆಲವು ಕಡೆ ಸಂಬಂಧ ಪಟ್ಟವರಿಗೆ ಮಾಹಿತಿ ನೀಡದೆ ಅಧಿಕಾರಿಗಳು ಗೈರು ಆಗಿದ್ದಾರೆ. ಇದು ಏಕಾಏಕಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರಿಂದ ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿದ್ದಾರೆ.
ಬೆಳಗಾವಿ : ಬೆಳಗಾವಿಯಲ್ಲಿ 2 ಕೋಟಿ ವಿಮೆಗಾಗಿ ಪತ್ನಿಯಿಂದ ಪತಿಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮಾಜಿ ಸೈನಿಕನ ಕೊಲೆಯ ರಹಸ್ಯ ಬಯಲಾಗಿದೆ ಪತ್ನಿಯ ಪ್ರಿಯಕರನಿಂದ ಸ್ಪೋಟಕ ಹೇಳಿಕೆ ಒಂದು ಬಿಡುಗಡೆ ಆಗಿದೆ. ಕೊಲೆ ರಹಸ್ಯವನ್ನು ಮಾಜಿ ಸೈನಿಕನ ಪತ್ನಿಯ ಪ್ರಿಯಕರ ಬಿಚ್ಚಿಟ್ಟಿದ್ದಾನೆ. ಸೆಲ್ಫಿ ವಿಡಿಯೋ ಮಾಡಿ ಪ್ರಿಯಕರ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ. ಮಾಜಿ ಸೈನಿಕನ ಪತ್ನಿಯ ಪ್ರಿಯಕರ ಕುಂಡಲಿಪುಂಡಲೀಕ ಗೋಡಗೇರಿಯಲ್ಲಿ ನಾನು ಎಗ್ ರೈಸ್ ಅಂಗಡಿ ಮಾಡಿಕೊಂಡಿದ್ದೆ. ಸುಮಾ ಗಂಡ ಮಾಜಿ ಸೈನಿಕ ಸಂದೀಪ್ ನಿತ್ಯ ಅಂಗಡಿಗೆ ಬರುತ್ತಿದ್ದರು. ಸಂದೀಪ್ ಕೂಡ ಟಿ ಅಂಗಡಿ ಓಪನ್ ಮಾಡಿದ್ದರು. ಸುಮಾ ಮನೆಯಲ್ಲಿ ಬಾಕ್ಸ್ ಗಟ್ಟಲೆ ಮದ್ಯ ಇಟ್ಟಿದ್ದಳು. ಮಧ್ಯಕ್ಕೆ ನಿದ್ದೆ ಮಾತ್ರೆ ಹಾಕಿ ನಿತ್ಯ ಗಂಡನಿಗೆ ಕುಡಿಸುತ್ತಿದ್ದಳು. ಈ ಬಗ್ಗೆ ಕೇಳಿದ್ರೆ ಗಂಡ ಸಾಯಲಿ ಅಂತ ಸುಮಾ ಹೇಳುತಿದ್ದಳು. ಸಂದೀಪ್‌ಗೆ ಅಪಘಾತವಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು, ಸುಮಾ ಹುಳುವಿಗೆ ಹೊಡೆಯುವ ಔಷದ ತರಿಸಿಕೊಂಡಿದ್ದಳು. ನಾನು ಔಷದ ತಂದುಕೊಟ್ಟ ಮಾರನೇ ದಿನ ಸಂದೀಪ್ ಸತ್ತಿದ್ದ.…
ನವದೆಹಲಿ: ಭಾರತೀಯ ವಾಯುಪಡೆಗೆ ಸೇರಿದ ಯುದ್ಧ ವಿಮಾನವೊಂದರಲ್ಲಿ ಏಕಾಏಕಿ ಭೀಕರ ಬೆಂಕಿ ಕಾಣಿಸಿಕೊಂಡಿರುವ ಘಟನೆ ಅಸ್ಸಾಂನ ಜೋರ್ಹತ್‌ನಲ್ಲಿರುವ ವಾಯುನೆಲೆಯಲ್ಲಿ ಸಂಭವಿಸಿದೆ. ತಾಂತ್ರಿಕ ಕಾರ್ಯಾಚರಣೆಯಲ್ಲಿದ್ದ AN-32 ರವಾನೆ/ಯುದ್ಧ ವಿಮಾನವು ಜೋರ್ಹತ್ ಏರ್‌ಬೇಸ್‌ನಲ್ಲಿ ಲ್ಯಾಂಡಿಂಗ್ ಆಗುತ್ತಿದ್ದಂತೆಯೇ ಈ ಅಗ್ನಿ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ. ಈ ಆಕಸ್ಮಿಕ ದುರಂತವು ರಕ್ಷಣಾ ವಲಯದಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ. ರನ್‌ವೇಯಲ್ಲೇ ಹೊತ್ತಿ ಉರಿದ ವಿಮಾನ ಮೂಲಗಳ ಪ್ರಕಾರ, ವಿಮಾನವು ತನ್ನ ಯಶಸ್ವಿ ಹಾರಾಟವನ್ನು ಮುಗಿಸಿ ಜೋರ್ಹತ್ ವಾಯುನೆಲೆಯ ರನ್‌ವೇ ಮೇಲೆ ಸುರಕ್ಷಿತವಾಗಿ ಇಳಿಯುತ್ತಿದ್ದ ಸಂದರ್ಭದಲ್ಲೇ ಈ ಘಟನೆ ನಡೆದಿದೆ. ವಿಮಾನದ ಚಕ್ರಗಳು ನೆಲಕ್ಕೆ ಅಪ್ಪಳಿಸುತ್ತಿದ್ದಂತೆ ತಾಂತ್ರಿಕ ದೋಷ ಅಥವಾ ಇಂಜಿನ್ ವೈಫಲ್ಯದಿಂದಾಗಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಇಡೀ ವಿಮಾನವನ್ನು ದಟ್ಟವಾದ ಹೊಗೆ ಮತ್ತು ಜ್ವಾಲೆಗಳು ಆವರಿಸಿಕೊಂಡವು ಎನ್ನಲಾಗಿದೆ. ಪೈಲಟ್ ಸಾವಿನ ಶಂಕೆ ಈ ಭೀಕರ ವಿಮಾನ ಅಪಘಾತದಲ್ಲಿ ಕರ್ತವ್ಯದಲ್ಲಿದ್ದ ಪೈಲಟ್ ಸಾವನ್ನಪ್ಪಿರುವ ಬಲವಾದ ಶಂಕೆ ವ್ಯಕ್ತವಾಗಿದೆ. ವಿಮಾನವು ರನ್‌ವೇ ಮೇಲೆ ಇಳಿಯುತ್ತಿದ್ದಂತೆ ಬೆಂಕಿ ತೀವ್ರವಾಗಿ…
ಧಾರವಾಡ : ಲವ್ ಜಿಹಾದ್ ಗೆ ಹೆದರಿ ದಲಿತ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದಲ್ಲಿ ನಡೆದಿದ್ದು ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಸಿಪಿಐ ಶಿವಕುಮಾರ್ ಲೋಹಾರ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ ಧಾರವಾಡ ಗ್ರಾಮೀಣ ವೃತ್ತದ ಸಿಪಿಐ ಶಿವಕುಮಾರ್ ಅಮಾನತುಗೊಳಿಸಲಾಗಿದೆ. ಪ್ರೀತಿಸುವ ನಾಟಕವಾಡಿ ಲವ್ ಜಹಾದ್ಗೆ ಯತ್ನಿಸಿದ ಆರೋಪ ಕೇಳಿ ಬಂದಿದೆ. ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿತ್ತು. ಘಟನೆಯಿಂದ ನೊಂದಿದ್ದ ದಲಿತ ಸಮುದಾಯದ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಳು. ಹಾಗಾಗಿ ಕರ್ತವ ಲೋಪದ ಹಿನ್ನೆಲೆಯಲ್ಲಿ ಇದೀಗ ಶಿವಕುಮಾರ್ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಘಟನೆ ಖಂಡಿಸಿ ಎಂದುಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಪೊಲೀಸರ ನಿರ್ಲಕ್ಷದ ಬಗ್ಗೆ ಆರೋಪ ಮಾಡಲಾಗಿತ್ತು ಈ ಹಿನ್ನಲೆ ಸಿಪಿಐ ಕುಮಾರ್ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಬೆಂಗಳೂರು : ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ವರದಿ ಕೇಳಿರುವ ಬೆನ್ನಲ್ಲೇ ತನಿಖಾ ಪ್ರಕ್ರಿಯೆ ತೀವ್ರಗೊಂಡಿದೆ. ಈ ಮಹತ್ವದ ಬೆಳವಣಿಗೆಯ ಬೆನ್ನಲ್ಲೇ, ವಿಶೇಷ ತನಿಖಾ ದಳದ (SIT) ಮುಖ್ಯಸ್ಥರಾದ ಪ್ರಣಬ್ ಮೊಹಂತಿ ಅವರು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿರುವುದು ಈಗ ತನಿಖಾ ವಲಯದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ನಡೆದ ಈ ಉನ್ನತ ಮಟ್ಟದ ಸಭೆಯು ಸುಮಾರು 20 ನಿಮಿಷಗಳ ಕಾಲ ಜರುಗಿತು. ಈ ವೇಳೆ ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಅವರು ಪ್ರಕರಣದ ಇದುವರೆಗಿನ ತನಿಖಾ ಪ್ರಗತಿಯ ಸಂಪೂರ್ಣ ವಿವರಗಳನ್ನು ಗೃಹ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು. ನ್ಯಾಯಾಲಯಕ್ಕೆ ಸಲ್ಲಿಸಬೇಕಾದ ವರದಿಯ ಸಿದ್ಧತೆಗಳ ಕುರಿತು ಸಚಿವರೊಂದಿಗೆ ಪ್ರಮುಖವಾಗಿ ಸಮಾಲೋಚನೆ ನಡೆಸಲಾಯಿತು. ವಿಶೇಷವೆಂದರೆ, ಎಸ್‌ಐಟಿ ಮುಖ್ಯಸ್ಥರು ಕೇವಲ ಮೌಖಿಕ ಮಾಹಿತಿ ನೀಡದೆ, ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಅತ್ಯಂತ ಪ್ರಮುಖ ಹಾಗೂ ಗೌಪ್ಯ ದಾಖಲೆಗಳೊಂದಿಗೆ ಗೃಹ ಸಚಿವರನ್ನು ಭೇಟಿಯಾಗಿದ್ದರು. ಈ ದಾಖಲೆಗಳನ್ನು ಪರಿಶೀಲಿಸಿದ ಬಳಿಕ, ಪ್ರಕರಣದ…
ಬೆಂಗಳೂರು: ಬೆಳಗಾವಿಯಲ್ಲಿ ನಡೆದು ಇಡೀ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಸುಮಾರು 4,500 ಕೋಟಿ ರೂಪಾಯಿಗಳ ಬೃಹತ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿ ಶಿವಾನಂದ ನೀಲಣ್ಣನವರ್‌ಗೆ ಬೆಂಗಳೂರಿನ ನ್ಯಾಯಾಲಯವು ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ಆದೇಶವು ಪ್ರಕರಣದ ತನಿಖೆಯ ಹಂತದಲ್ಲಿ ಅತ್ಯಂತ ಪ್ರಮುಖ ಬೆಳವಣಿಗೆಯಾಗಿ ಹೊರಹೊಮ್ಮಿದೆ. ಬೆಂಗಳೂರಿನ 93ನೇ ಸಿಟಿ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಲಯವು ಆರೋಪಿಯ ಜಾಮೀನು ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿತು. ಉಭಯ ಪಕ್ಷಗಳ ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ, ನ್ಯಾಯಾಧೀಶರು ಕೆಲವು ಕಠಿಣ ಷರತ್ತುಗಳನ್ನು ವಿಧಿಸುವ ಮೂಲಕ ಆರೋಪಿಗೆ ಮಧ್ಯಂತರ ಜಾಮೀನು ನೀಡಿ ಆದೇಶ ಪ್ರಕಟಿಸಿದ್ದಾರೆ. ನ್ಯಾಯಾಲಯವು ಜಾಮೀನು ನೀಡುವಾಗ ಮುಖ್ಯವಾಗಿ ಆರ್ಥಿಕ ಶೂರಿಟಿಗೆ ಒತ್ತು ನೀಡಿದೆ. ಆರೋಪಿ ಶಿವಾನಂದ ನೀಲಣ್ಣನವರ್ 3 ಲಕ್ಷ ರೂಪಾಯಿ ಮೊತ್ತದ ಬಾಂಡ್ ಹಾಗೂ ಒಬ್ಬರ ಭದ್ರತೆ (ಶೂರಿಟಿ)ಯನ್ನು ಒದಗಿಸಬೇಕು ಎಂದು ಸೂಚಿಸಿದೆ. ಈ ಶರತ್ತನ್ನು ಪೂರೈಸಿದ ಬಳಿಕವಷ್ಟೇ ಆರೋಪಿಯ ಬಿಡುಗಡೆಗೆ ಕಾನೂನು ಪ್ರಕ್ರಿಯೆಗಳು ಚಾಲನೆ ಪಡೆಯಲಿವೆ. ನ್ಯಾಯಾಲಯದ ಪ್ರಮುಖ…
ಬೆಂಗಳೂರು : ಬೆಂಗಳೂರಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ ನಡೆಸಿದ ಪರಿಣಾಮ ಓರ್ವ ವ್ಯಕ್ತಿ ಸಾವನಪ್ಪಿದ್ದು, ಮೂವರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಮೈಸೂರು ರಸ್ತೆಯ ಇಂದ್ರಪ್ರಸ್ಥ ಅಪಾರ್ಟ್ಮೆಂಟ್ ಬಳಿ ಈ ಒಂದು ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ ಅಡ್ಡಾದಿಡಿಯಾಗಿ ಚಾಲಕ ಇಕೋ ಕಾರನ್ನು ಚಲಾಯಿಸಿದ್ದಾನೆ. ಇಕೋ ಕಾರಿನಲ್ಲಿ ಇದ್ದ ಸುಖದೇವ್ ಸಾವನಪ್ಪಿದು ಮೂವರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ವರದಿಯಾಗಿದೆ. ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಎರಡು ಬೈಕ್ಗಳಿಗೆ ಕಾರು ಡಿಕ್ಕಿ ಹೊಡೆದಿದೆ. ಮುಂದೆ ಹೋಗುತ್ತಿದ್ದ ಎರಡು ಬೈಕ್ಗಳಿಗೆ ಡಿಕ್ಕಿ ಹೊಡೆದು ಕಾರು ಪಲ್ಟಿಯಾಗಿದೆ. ಈ ವೇಳೆ ಹೊರಗೆ ಬಿದ್ದಿದ್ದ ಸುಖದೇವ್ ಮೇಲೆ ಇಕೋ ಕಾರು ಬಿದ್ದಿದೆ. ಎರಡು ಬೈಕ್ ಗಳಿದ್ದ ಮೂವರು ಸವಾರರಿಗೆ ಗಂಭೀರ ಗಾಯಗಳಾಗಿದ್ದು ಕಾರುಬಿದ್ದ ಪರಿಣಾಮ ಸುಖದೇವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೆಂಗೇರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಪಘಾತ ಸಂಭವಿಸಿದೆ.
ಬೆಂಗಳೂರು : ಬೆಂಗಳೂರಲ್ಲಿ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮತ್ತೆ ವಿವಾದಕ್ಕೆ ಸಿಲುಕಿದ್ದು, ರಿಕ್ಕಿ ರೈ ಲ್ಯಾಂಬೋರ್ಗಿನಿ ಕಾರು ರ‍್ಯಾಶ್ ಡ್ರೈವಿಂಗ್ ಮಾಡಲಾಗಿದೆ. ಏರ್ಪೋರ್ಟ್ ರಸ್ತೆಯಲ್ಲಿ ರಿಕ್ಕಿ ಲ್ಯಾಂಬರ್ಗಿನಿ ಕಾರಿನಿಂದ ಪುಂಡಾಟ ಮೆರೆಯಲಾಗಿದೆ. ಸಾರ್ವಜನಿಕರಿಗೆ ಭಯ ಮತ್ತು ಆತಂಕ ಸೃಷ್ಟಿಸುವ ರೀತಿಯಲ್ಲಿ ಕಾರು ಚಾಲನೆ ಮಾಡಲಾಗಿದೆ. ಕಾರಿನ ಸೈಲೆನ್ಸರ್ ನಲ್ಲಿ ಬೆಂಕಿಯನ್ನು ಸಿಡಿಸಿ ಕರ್ಕಶವಾಗಿ ಶಬ್ದ ಮಾಡಿಕೊಂಡು ಕಾರು ಡ್ರೈವ್ ಮಾಡಲಾಗಿದೆ ಈ ಒಂದು ವಿಡಿಯೋ ಆದರಿಸಿ ಪೊಲೀಸರು ಪರಿಶೀಲನೆಗೆ ಮುಂದಾಗಿದ್ದಾರೆ. ಅತಿ ವೇಗವಾಗಿ ಚಾಲನೆ ಮಾಡಿರುವ ವಿಡಿಯೋ ವೈರಲ್ ಆಗಿದೆ KA 05 NR 0009 ನಂಬರ್ನ ರಿಕ್ಕಿ ರಾಯ್ ಒಡೆತನದ ಲ್ಯಾಂಬೋರ್ಗಿನಿ ಕಾರು ಎಂದು ತಿಳಿದುಬಂದಿದೆ. ಕಾರು ಯಾರು ಚಾಲನೆ ಮಾಡಿದ್ದಾರೆ ಎನ್ನುವುದು ತಿಳಿದುಬಂದಿಲ್ಲ ಈ ವಿಡಿಯೋ ಆಧರಿಸಿ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.














