ಬೆಂಗಳೂರು : ಬೆಂಗಳೂರಿನಲ್ಲಿ ಕಸದ ಟೆಂಡರ್ ನಲ್ಲಿ ಸಾವಿರಾರು ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂದು ಕಳೆದ ಕೆಲವು ದಿನಗಳ ಹಿಂದೆ ವಿರೋಧ ಪಕ್ಷದ ನಾಯಕ ಆರು ಅಶೋಕ್ ಗಂಭೀರವಾಗಿ ಆರೋಪಿಸಿದ್ದರು. ಇದೀಗ ಇದೆ ವಿಚಾರವಾಗಿ ಆರ್ ಅಶೋಕ್ ಡಿಕೆ ಶಿವಕುಮಾರ್ ಅವರಿಗೆ ಸವಾಲು ಹಾಕಿದ್ದು ನೀವು ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎನ್ನುವುದಾದರೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಎಂದು ಸವಾಲು ಹಾಕಿದ್ದಾರೆ.
ನಾನು ಯಾವುದೇ ತನಿಖೆಗೆ ಸಿದ್ಧ ಎಂದು ಮಾಧ್ಯಮಗಳ ಮುಂದೆ ಹಾರಿಕೆ ಉತ್ತರ ನೀಡುವ ಕಮಿಷನ್ ಮಿನಿಸ್ಟರ್ ಡಿಕೆ ಶಿವಕುಮಾರ್ ಅವರೇ, ಕ್ಯಾಮೆರಾಗಳ ಮುಂದೆ ನಿಮ್ಮ ಈ ‘ಉತ್ತರಕುಮಾರನ ಪೌರುಷ’ ಸಾಕು ಮಾಡಿ. ನಿಮ್ಮಲ್ಲಿ ನಿಜವಾಗಿಯೂ ಪ್ರಾಮಾಣಿಕತೆ ಇದ್ದರೆ, ಕಸದ ಟೆಂಡರ್‌ನ ಈ ಮಹಾ ಲೂಟಿಯಲ್ಲಿ ನಿಮ್ಮ ಪಾತ್ರವಿಲ್ಲ ಎಂಬ ಧೈರ್ಯ ನಿಮಗಿದ್ದರೆ, ಈ ಕೂಡಲೇ ಪ್ರಕರಣವನ್ನು CBI ತನಿಖೆಗೆ ಒಪ್ಪಿಸಿ.
ಘನತ್ಯಾಜ್ಯ ವಿಲೇವಾರಿ ಟೆಂಡರ್ ಹೆಸರಿನಲ್ಲಿ ನಡೆದಿರುವ ಈ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ನಾನೇ ಖುದ್ದಾಗಿ ದೂರು ಕೊಡುತ್ತೇನೆ! ಮಾಧ್ಯಮಗಳ ಮುಂದೆ ಕ್ಯಾಮೆರಾ ನೋಡಿ ಬಿಲ್ಡಪ್ ಕೊಡುವುದನ್ನು ಬಿಟ್ಟು, ತನಿಖೆಗೆ ಆದೇಶಿಸುವ ತಾಕತ್ತು ಪ್ರದರ್ಶಿಸಿ. ಕಸದಲ್ಲೂ ಕಮಿಷನ್ ಹೊಡೆದ ಆ ಮಹಾ “ಕಮಿಷನ್ ಏಜೆಂಟ್” ಯಾರು ಎಂಬ ಸತ್ಯ ಹೊರಬರಲಿ. ಕರ್ನಾಟಕದ ಜನತೆಗೆ ಈ ಸರ್ಕಾರದ ಅಸಲಿ ಮುಖ ಏನೆಂದು ತಿಳಿಯಲಿ.
CM = C̶h̶i̶e̶f̶ Commission Minister
"ನಾನು ಯಾವುದೇ ತನಿಖೆಗೆ ಸಿದ್ಧ" ಎಂದು ಮಾಧ್ಯಮಗಳ ಮುಂದೆ ಹಾರಿಕೆ ಉತ್ತರ ನೀಡುವ ಕಮಿಷನ್ ಮಿನಿಸ್ಟರ್ @DKShivakumar ಅವರೇ,
ಕ್ಯಾಮೆರಾಗಳ ಮುಂದೆ ನಿಮ್ಮ ಈ ‘ಉತ್ತರಕುಮಾರನ ಪೌರುಷ’ ಸಾಕು ಮಾಡಿ. ನಿಮ್ಮಲ್ಲಿ ನಿಜವಾಗಿಯೂ ಪ್ರಾಮಾಣಿಕತೆ ಇದ್ದರೆ, ಕಸದ ಟೆಂಡರ್‌ನ ಈ ಮಹಾ ಲೂಟಿಯಲ್ಲಿ ನಿಮ್ಮ… pic.twitter.com/PRTPWYBKgi
— R. Ashoka (@RAshokaBJP) June 13, 2026








