Author: kannadanewsnow05

ಬೆಂಗಳೂರು : ಬೆಸ್ಕಾಂ ಹಾಗೂ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು (ಸೆಸ್ಕ್ ಮೈಸೂರು) ಗ್ರಾಹಕರಿಗೆ ದರ ಏರಿಕೆಯ ಶಾಕ್‌ ನೀಡಲಾಗಿದೆ. 2024-25ನೇ ಸಾಲಿನಲ್ಲಿ ಉಂಟಾಗಿರುವ ಆದಾಯ ಕೊರತೆ ತುಂಬಿಕೊಳ್ಳಲು 2026-27ನೇ ಸಾಲಿನಲ್ಲಿ ಬೆಸ್ಕಾಂ ಪ್ರತಿ ಯುನಿಟ್‌ಗೆ 56 ಪೈಸೆ ಹಾಗೂ ಸೆಸ್ಕ್‌ ಪ್ರತಿ ಯುನಿಟ್‌ಗೆ 15 ಪೈಸೆಯಂತೆ ಗ್ರಾಹಕರಿಂದ ಹೆಚ್ಚುವರಿಯಾಗಿ ಸಂಗ್ರಹಿಸಲು ಕೆಇಆರ್‌ಸಿ ಆದೇಶ ಮಾಡಿದೆ. 2026-27ನೇ ಸಾಲಿಗೆ ಬೆಸ್ಕಾಂ ಗ್ರಾಹಕರಿಗೆ ಪ್ರತಿ ಯುನಿಟ್‌ಗೆ 56 ಪೈಸೆ ಹಾಗೂ ಮೈಸೂರು ಚಾಮುಂಡೇಶ್ವರಿ ವಿದ್ಯುತ್‌ ಸರರಬಾಜು ಕಂಪೆನಿ ಗ್ರಾಹಕರಿಗೆ 15 ಪೈಸೆ ಹೊರೆ ಬಿದ್ದಿದೆ. ಬೆಸ್ಕಾಂ ಹಾಗೂ ಸೆಸ್ಕ್​​ನ ಗೃಹ ಜ್ಯೋತಿ ಫಲಾನುಭವಿಗಳಿಗೆ ಈ ಹೊರೆ ಬೀಳುವುದಿಲ್ಲ. ಆದರೆ, ಇತರೆ ಗ್ರಾಹಕರಿಗೆ ದರ ಏರಿಕೆಯ ಹೊರೆ ಆಗಲಿದೆ. ಗೃಹ ಜ್ಯೋತಿ ಗ್ರಾಹಕರ ಪರವಾಗಿ ಈ ಹೆಚ್ಚುವರಿ ದರ ಏರಿಕೆ ಹೊರೆ ಸರ್ಕಾರದ ಮೇಲೆ ಬೀಳಲಿದೆ.‌ ಈ ಆದೇಶ 2026 ಮೇ 1ರಿಂದ 2027ರ ಏಪ್ರಿಲ್‌ 31ರವರೆಗೆ ಬಳಕೆಯಾಗುವ ವಿದ್ಯುತ್‌ ಬಿಲ್‌ಗೆ ಅನ್ವಯವಾಗಲಿದೆ. ಇತ್ತ, 2024-25ರಲ್ಲಿ…

Read More

ಬೆಂಗಳೂರು, (ಕೆಂಪೇಗೌಡ ಅಂ.ರಾ.ವಿಮಾನ ನಿಲ್ದಾಣ), ಏ.18: ಬನ್ನೇರುಘಟ್ಟ ಮೃಗಾಲಯಕ್ಕೆ ದಕ್ಷಿಣ ಆಫ್ರಿಕಾದಿಂದ ತರಿಸಿಕೊಂಡ 4 ಶಿವಂಗಿ (ಚೀತಾ)ಗಳನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು ಮಧ್ಯರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಕಲ್ಬುರ್ಗಿಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಹೈದ್ರಾಬಾದ್ ಮಾರ್ಗವಾಗಿ ಮಧ್ಯರಾತ್ರಿ ಬೆಂಗಳೂರಿಗೆ ಆಗಮಿಸಿದ ಅರಣ್ಯ ಸಚಿವರು, ಅಲ್ಲಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸರಕು ಸಾಗಣೆ ವಿಭಾಗಕ್ಕೆ ತೆರಳಿ ಬನ್ನೇರುಘಟ್ಟ ಮೃಗಾಲಯಕ್ಕೆ ಆಗಮಿಸಿರುವ ಈ ವಿದೇಶೀ ಅತಿಥಿಗಳನ್ನು ಬರಮಾಡಿಕೊಂಡರು. ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಆಗಮಿಸಿರುವ ಈ ಚೀತಾಗಳಿಗೆ ವಾತಾವರಣ, ಹವಾಮಾನ ಬದಲಾವಣೆಯಾಗುವ ಕಾರಣ ಅವುಗಳಿಗೆ ಯಾವುದೇ ತೊಂದರೆ ಆಗದಂತೆ, ಆರೋಗ್ಯ ಸಮಸ್ಯೆ ಎದುರಾಗದ ರೀತಿಯಲ್ಲಿ ಸೂಕ್ತ ನಿಗಾ ಇಡಬೇಕು, ವನ್ಯಜೀವಿಗಳನ್ನು ಕ್ವಾರಂಟೈನಲ್ಲಿಡಬೇಕು, 30ದಿನಗಳ ಕಾಲ ಗೊತ್ತುಪಡಿಸಿದ ಆಹಾರ ನೀಡಬೇಕು, ಈ ವಿದೇಶಿ ವನ್ಯಜೀವಿಗಳಿಗೆ ಸೋಂಕು ಏನಾದರೂ ಇದೆಯೇ ಎಂದು ಪರಿಶೀಲಿಸಬೇಕು. ಪ್ರಾಣಿಗಳನ್ನು ಸುರಕ್ಷಿತವಾಗಿ ಬನ್ನೇರುಘಟ್ಟಕ್ಕೆ ಸಾಗಿಸಬೇಕು ಎಂದು ಅಧಿಕಾರಿಗಳಿಗೆ ಮತ್ತು ಪಶುವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಒಂದು…

Read More

ಬೆಂಗಳೂರು : ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ (ತದಿಗೆ) ತಿಥಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಹಾಗಿದ್ದರೆ ಈ ವರ್ಷ (2026) ಅಕ್ಷಯ ತೃತೀಯ ಯಾವಾಗ ಬಂದಿದೆ? ಹಬ್ಬ ಆಚರಣೆಗೆ ಶುಭ ಮುಹೂರ್ತ ಯಾವಾಗ? ನಿಮ್ಮ ಗೊಂದಲಕ್ಕೆ ಇಲ್ಲಿದೆ ನೋಡಿ ಉತ್ತರ. ಅಕ್ಷಯ ತೃತೀಯವನ್ನು ಜನ ಸಂಭ್ರಮದಿಂದ ಆಚರಿಸುತ್ತಾರೆ. ಈ ದಿನ ಸಾಮನ್ಯವಾಗಿ ಚಿನ್ನ ಖರೀದಿಸುವುದು ವಾಡಿಕೆ ಇದೆ. ಹಾಗೆಯೇ ಅನೇಕರು ಹೊಸ ವಾಹನ, ಭೂಮಿ ಹಾಗೂ ಇನ್ನಿತರ ಶುಭ ಕಾರ್ಯಗಳಿಗೆ ಚಾಲನೆ ನೀಡುತ್ತಾರೆ. ಏಕೆಂದರೆ ಈ ದಿನಕ್ಕೆ ಅಷ್ಟೊಂದು ಮಹತ್ವವಿದೆ. ಅಕ್ಷಯ ತೃತೀಯ ಯಾವಾಗ? ಪೂಜಾವಿಧಿ ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ ವರ್ಷ ಅಕ್ಷಯ ತೃತೀಯವನ್ನು ಏಪ್ರಿಲ್ 20, 2026, ಸೋಮವಾರದಂದು ಆಚರಿಸಲಾಗುತ್ತದೆ. ತೃತೀಯ ತಿಥಿ ಆರಂಭ: ಏಪ್ರಿಲ್ 19, 2026 ರಂದು ಮಧ್ಯಾಹ್ನ 2:45 ಕ್ಕೆ. ತೃತೀಯ ತಿಥಿ ಮುಕ್ತಾಯ: ಏಪ್ರಿಲ್ 20, 2026 ರಂದು ಮಧ್ಯಾಹ್ನ 1:25 ಕ್ಕೆ. ಪೂಜೆ ಮತ್ತು ದಾನಕ್ಕೆ ಶುಭ…

Read More

ಹರಿಹರ ಸುತ ಅಯ್ಯಪ್ಪನ :- ಕಾರ್ತಿಕ ಮಾಸ ಬಂದಾಗ ಅಯ್ಯಪ್ಪ ಸ್ವಾಮಿ ಭಕ್ತರು ನಿಯಮಪಾಲನೆಯೊಂದಿಗೆ ವ್ರತ ಆಚರಿಸಿ, ಮಾಲೆ ಧರಿಸಿ, ಕಪ್ಪು ವಸ್ತ್ರಗಳನ್ನು ಧರಿಸಿ ಶಬರಿಮಲೆ ಯಾತ್ರೆಗೆ ತೆರಳಿ ಸ್ವಾಮಿ ದರ್ಶನ ಪಡೆಯುತ್ತಾರೆ. ಅಯ್ಯಪ್ಪ ಸ್ವಾಮಿ ಯಾರು? ಧರ್ಮ ಶೌರ್ಯ ಮತ್ತು ಭಕ್ತಿಯ ಪ್ರತೀಕವಾದ ಅಯ್ಯಪ್ಪನ ಅವತಾರದ ಹಿಂದೆ ಒಂದು ದೈವಿಕ ಕಾರಣವಿದೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ…

Read More

ಬೆಂಗಳೂರು : ಬೆಂಗಳೂರಲ್ಲಿ ಅಕ್ರಮ ಸಂಬಂಧದ ಬಗ್ಗೆ ಪತ್ನಿಗೆ ಹೇಳಿದ್ದಾರೆ ಎಂದು ಈ ಹಿನ್ನೆಲೆಯಲ್ಲಿ ಅಪ್ಪ ಮತ್ತು ಮಗನಿಂದ ದೇವಿಕಾ ಎಂಬ ಮಹಿಳೆಯ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ವೈಯ್ಯಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾತ್ರಿ 10:00 ಸುಮಾರಿಗೆ ಮನೆಯ ಬಳಿ ನಿಂತಿದ್ದಾಗ ಅಪ್ಪ-ಮಗ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ನಾಗರಾಜ್ ಮತ್ತು ಮಗ ಲೋಕೇಶ್ ವಿರುದ್ಧ ಮಹಿಳೆ ದೂರು ನೀಡಿದ್ದಾಳೆ. ಪೊಲೀಸರು ಠಾಣೆಗೆ ಆರೋಪಿಗಳನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ ನಮ್ಮ ಮೇಲು ಹಲ್ಲೆ ನಡೆಸಿದ್ದಾರೆ ಎಂದು ತಂದೆ ಮಗನಿಂದ ಪ್ರತಿ ದೂರು ದಾಖಲಾಗಿದೆ. ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಮಹಿಳೆಯಿಂದ ದೂರು ಹಾಗೂ ಅಪ್ಪ ಮಗನಿಂದ ಪ್ರತಿ ದೂರು ದಾಖಲಾಗಿದೆ.

Read More

ಚಿತ್ರದುರ್ಗ : ಚಿತ್ರದುರ್ಗದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಚಿತ್ರಹಳ್ಳಿ ಗೇಟ್ ಬಳಿ ಬಯಕೆಗೆ ಕಾರುಡಿಕೆ ಹೊಡೆದ ಪರಿಣಾಮ ಸ್ಥಳದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಗೇಟ್ ಬಳಿ ಈ ಒಂದು ಅಪಘಾತ ಸಂಭವಿಸಿದೆ. ಮೃತರನ್ನು ಹೊಳಲ್ಕೆರೆ ಯಶವಂತ (30) ಹಾಗೂ ವಾಸುದೇವ (43) ಎಂದು ತಿಳಿದುಬಂದಿದ್ದು, ಹೊಳಲ್ಕೆರೆಗೆ ತೆರಳುವಾಗ ರಾಷ್ಟ್ರೀಯ ಹೆದ್ದಾರಿ 369ರಲ್ಲಿ ಅಪಘಾತ ಸಂಭವಿಸಿದೆ. ಅಪಘಾತದ ಕುರಿತು ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Read More

ತಮಿಳುನಾಡು : ತಮಿಳುನಾಡಿನಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಕಂದಗಕ್ಕೆ ವ್ಯಾನ್ ಉರುಳಿ ಬಿದ್ದ ಪರಿಣಾಮ 8 ಶಿಕ್ಷಕರು ಸೇರಿದಂತೆ 10 ಪ್ರವಾಸಿಗರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ವಾಲ್ಪರೈ ಬೆಟ್ಟದಲ್ಲಿ ಈ ಒಂದು ದುರಂತ ಸಂಭವಿಸಿದೆ. ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ, ಈ ಒಂದು ವ್ಯಾನ್ ಪಲ್ಟಿಯಾಗಿದೆ. ಘಟನೆಯಲ್ಲಿ 10 ಜನ ಸಾವನ್ನಪ್ಪಿದ್ದು, 6 ಪ್ರವಾಸಿಗರಿಗೆ ಗಂಭೀರವಾದ ಗಾಯಗಳಾಗಿವೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರು ಹಾಗೂ ಎಲ್ಲಾ ಗಾಯಾಳುಗಳು ಕೇರಳ ಮೂಲದವರು ಎಂದು ತಿಳಿದು ಬಂದಿದೆ.

Read More

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕೋಮು ಗಲಭೆ ಘಟನೆಗಳು ನಡೆದೇ ಇಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ನ್ಯಾಯ ವಿತರಣೆಯಲ್ಲಿ ಕರ್ನಾಟಕ ಪೊಲೀಸ್ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ. ಪೊಲೀಸ್ ಕಟ್ಟಡಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದಲ್ಲಿ ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆಯನ್ನು ಸಮರ್ಥವಾಗಿ ಕಾಪಾಡುತ್ತಿದೆ. ಇತರೆ ರಾಜ್ಯಗಳಿಂದ ಬಂಡವಾಳ ಹೂಡಿಕೆದಾರರು ಬರುತ್ತಿದ್ದು, ರಾಜ್ಯಕ್ಕೆ ಆದಾಯ ಮತ್ತು ಉದ್ಯೋಗವಕಾಶಗಳು ದೊರೆಯುತ್ತಿವೆ. ನಮ್ಮ ಸರ್ಕಾರ ಬಂದ ನಂತರ ಕೋಮು ಗಲಭೆಗಳಿಗೆ ಕಡಿವಾಣ ಹಾಕಿದ್ದು, ರಾಜ್ಯದಲ್ಲಿ ಕೋಮುಗಲಭೆ ನಡೆದಿಲ್ಲ. ನಡೆಯಲೂ ಬಿಡುವುದಿಲ್ಲ ಎಂದರು. ಇದೇ ಸಂದರ್ಭದಲ್ಲಿ ಡ್ರಗ್ಸ್ ವಿರುದ್ಧ ಪೊಲೀಸರ ಕಾರ್ಯಾಚರಣೆ ಕುರಿತು ಮಾತನಾಡಿದ ಅವರು, ಯುವಕರಿಗೆ ಮಾದಕ ವಸ್ತುಗಳ ಹಂಚಿಕೆ ಹಾಗೂ ಮಾದಕ ವಸ್ತುಗಳ ಸೇವನೆ ಪ್ರಕರಣಗಳು ಕಂಡು ಬರುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಮಾದಕ ವಸ್ತುಗಳ ಮಾರಾಟಗಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.…

Read More

ಬೆಂಗಳೂರು : ರಾಜ್ಯದಲ್ಲಿ ಚಾಣಕ್ಯ ಬಂದ ವೇಳೆ ಅಪಘಾತ ಆಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಚಾರಣಕ್ಕೆ ತೆರಳುವವರಿಗೆ ಇದೀಗ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಮಾರ್ಗಸೂರ್ಚಿಯನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಇದೀಗ ಬಿಡುಗಡೆ ಮಾಡಿದ್ದಾರೆ.. ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಚಾರಣಕ್ಕೆ ಹೋಗುವವರಿಗೆ ಎಸ್ಓಪಿ ಕಡ್ಡಾಯಗೊಳಿಸಲಾಗಿದೆ. ಸೆವೆನ್ ಮಿನಿಸ್ಟರ್ ಕ್ವಾಟರ್ಸ್ನಲ್ಲಿ ಸಚಿವ ಈಶ್ವರ ಖಂಡ್ರೆ ಎಸ್ಓಪಿ ಅನ್ನು ಬಿಡುಗಡೆ ಮಾಡಿದರು. ಕಳೆದ ಕೆಲವು ದಿನಗಳ ಹಿಂದೆ ಚಿಕ್ಕಮಂಗಳೂರಲ್ಲಿ ಚರಣಕ್ಕೆ ಬಂದು ಓರ್ವ ಬಾಲಕಿ ಸಾವನ್ನುಪ್ಪಿದ್ದಳು. ಘಟನೆಗಳು ಪುನರಾವರ್ತನೆ ಆಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಎಸ್ಓಪಿ ಜಾರಿಗೊಳಿಸಲಾಗಿದೆ. ಹೊಸ ಮಾರ್ಗಸೂಚಿಯ ಪ್ರಮುಖ ಅಂಶಗಳು: ರಿಯಲ್ ಟೈಮ್ ಟ್ರ್ಯಾಕಿಂಗ್ ಆ್ಯಪ್: ಚಾರಣಿಗರ ಚಲನವಲನವನ್ನು ಪತ್ತೆಹಚ್ಚಲು ವಿಶೇಷ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಲಾಗುತ್ತಿದೆ. ಚಾರಣಕ್ಕೆ ತೆರಳುವವರು ಈ ಆ್ಯಪ್ ಅನ್ನು ಕಡ್ಡಾಯವಾಗಿ ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಇದು ಕಾಡಿನೊಳಗೆ ದಾರಿ ತಪ್ಪಿದಲ್ಲಿ ಅವರನ್ನು ಹುಡುಕಲು ನೆರವಾಗಲಿದೆ. ಕಡ್ಡಾಯ ವಿಮೆ (Mandatory Insurance): ಚಾರಣದ ಸಮಯದಲ್ಲಿ ಸಂಭವಿಸಬಹುದಾದ ಅಪಘಾತ ಅಥವಾ ತುರ್ತು…

Read More

ಬೆಂಗಳೂರು : ನಿವೇಶನದ ಖಾತೆ ಮಾಡಲು ಲಕ್ಷಾಂತರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು, 1 ಲಕ್ಷ ರೂ, ಲಂಚ ಸ್ವೀಕರಿಸುವಾಗ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಕಳಲುಘಟ್ಟ ಗ್ರಾಮ ಪಂಚಾಯಿತಿ ಪಿಡಿಓ ಹಾಗೂ ಯುಟ್ಯೂಬರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಳಲುಘಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೀತಾಮಣಿ, ಹಾಗೂ ಸ್ಥಳೀಯ ಖಾಸಗಿ ವಾಹಿನಿ ಪ್ರತಿನಿಧಿ ಗಂಗಾಧರ್ ಒಂದು ಲಕ್ಷ ರೂ. ಲಂಚದ ಹಣದ ಸಮೇತ ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಪಿಡಿಓ ಗೀತಾಮಣಿ ಅವರು ⁠1,50,000 ರೂಪಾಯಿಗೆ ಬೇಡಿಕೆ ಇಟ್ಟಿದ್ದು, ಈ ಹಣವನ್ನು ಯುಟ್ಯೂಬರ್ ಗಂಗಾಧರ್ ಗೆ ನೀಡುವಂತೆ ಸೂಚಿಸಿದ್ದರು. ಈ ವಿಚಾರವನ್ನು ಗೀತಾಮಣಿ, ಗಂಗಾಧರ್​​ಗೆ ಹೇಳಿದ್ದರು. ಡೀಲ್​​ ನಂತೆ ಫೈಜಲ್ ನಿಂದ ಗಂಗಾಧರ್ 1,20,000 ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಅಧಿಕಾರಿಗಳು ಪಿಐ ಉಮಾ ಮಹೇಶ್, ಹಾಗೂ ಎಸ್ ಪಿ ಮಹಾಂತೇಶ್ವರ ಜಿದ್ದಿ ತಂಡ ದಾಳಿ ಮಾಡಿದ್ದು, ರೆಡ್​ ಹ್ಯಾಂಡ್ ಆಗಿ…

Read More