Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಶಿವಮೊಗ್ಗದಲ್ಲಿ ಘೋರ ದುರಂತ : ತಲೆನೋವು ತಾಳಲಾರದೆ ಗನ್‌ನಿಂದ ಶೂಟ್ ಮಾಡಿಕೊಂಡು ವೃದ್ಧ ಆತ್ಮಹತ್ಯೆ!

ಶಾಸಕ ಗೋಪಾಲಕೃಷ್ಣ ಬೇಳೂರು ಸಚಿವರಾಗಲಿ; ಸಾಗರದಲ್ಲಿ ನಾಗರಾಜ್ ಗುಡ್ಡೇಮನೆ ನೇತೃತ್ವದಲ್ಲಿ ವಿಶೇಷ ಪೂಜೆ

SHOCKING : ರಾಜ್ಯದಲ್ಲಿ ಹೃದಯವಿದ್ರಾವಕ ಘಟನೆ : ಮಗನ ಕಣ್ಣೆದುರೇ ನದಿಯಲ್ಲಿ ನೀರು ಪಾಲಾದ ತಂದೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡಲು ಗಣಪತಿ ಮಂಡಗಳಲೆ ಆಗ್ರಹ
KARNATAKA

ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡಲು ಗಣಪತಿ ಮಂಡಗಳಲೆ ಆಗ್ರಹ

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ: ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಸಾಗರ ನಗರಸಭೆಯ ಮಾಜಿ ವಿರೋಧ ಪಕ್ಷದ ನಾಯಕರಾದ ಗಣಪತಿ ಮಂಡಗಳಲೆ ಅವರು ಪಕ್ಷದ ಹೈಕಮಾಂಡ್ ಹಾಗೂ ಸರ್ಕಾರವನ್ನು ಒತ್ತಾಯಿಸಿದ್ದಾರೆ.

​ಇಂದು ಸಾಗರದ ಇತಿಹಾಸ ಪ್ರಸಿದ್ಧ ಮಹಾಗಣಪತಿ ದೇವಸ್ಥಾನದಲ್ಲಿ ಪಕ್ಷದ ಪ್ರಮುಖರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಮುಖಂಡರೆಲ್ಲರೂ ಒಟ್ಟಾಗಿ ಸೇರಿ, ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ಸಿಗಲೆಂದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

​ಬಡವರ ಬಂಧು ಬೇಳೂರು

​ಗೋಪಾಲಕೃಷ್ಣ ಬೇಳೂರು ಅವರು ಕೇವಲ ಒಂದು ತಾಲೂಕಿಗೆ ಸೀಮಿತವಾಗದೆ, ಜಿಲ್ಲೆಯ ಯಾವುದೇ ಭಾಗದ ಬಡವರು ಕಷ್ಟ ಎಂದು ಮನೆಗೆ ಬಂದರೆ ಅವರ ಸುಖ-ದುಃಖಗಳನ್ನು ವಿಚಾರಿಸಿ, ತಮಗೆ ಸಾಧ್ಯವಿರುವ ಸಹಾಯ ಮಾಡುವಂತಹ ಉದಾತ್ತ ಗುಣ ಹೊಂದಿದ್ದಾರೆ. ಅವರು ನಿಜವಾದ ‘ಬಡವರ ಬಂಧು’ ಎಂದು ಗಣಪತಿ ಮಂಡಗಳಲೆ ಬಣ್ಣಿಸಿದರು.

​ಬೆಂಗಳೂರಿನಿಂದ ಅವರು ಸಾಗರದ ಮನೆಗೆ ಬಂದಾಗ, ಮುಂಜಾನೆ 7 ಗಂಟೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಜನರು ಅವರನ್ನು ಭೇಟಿಯಾಗಲು ಬರುತ್ತಾರೆ. ಬಂದವರೆಲ್ಲರನ್ನೂ ಯಾವುದೇ ಪಕ್ಷ-ಭೇದವಿಲ್ಲದೆ ಪ್ರೀತಿಯಿಂದ ಮಾತನಾಡಿಸಿ ಕಳುಹಿಸುವ ಅಪರೂಪದ ವ್ಯಕ್ತಿತ್ವ ಅವರದ್ದಾಗಿದೆ ಎಂದರು.

​ಪಕ್ಷ ಸಂಘಟನೆಗೆ ಶಕ್ತಿ

​ಶಿವಮೊಗ್ಗ ಜಿಲ್ಲೆ ಹಾಗೂ ಕರಾವಳಿ ಭಾಗದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಮತ್ತು ಸಂಘಟನಾತ್ಮಕವಾಗಿ ಮುನ್ನಡೆಸಲು ಬೇಲೂರು ಅವರಿಗೆ ಸಚಿವ ಸ್ಥಾನ ನೀಡುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಬೇಳೂರು ಅವರಿಗೆ ಕ್ಯಾಬಿನೆಟ್‌ನಲ್ಲಿ ಸ್ಥಾನ ಕಲ್ಪಿಸಿಕೊಡಬೇಕು ಎಂದು ಅವರು ಮನವಿ ಮಾಡಿದರು.

​ಕಾರ್ಯಕರ್ತರಲ್ಲಿ ತೀವ್ರ ಕುತೂಹಲ

​ಮುಂಬರುವ ಬುಧವಾರ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಗೋಪಾಲಕೃಷ್ಣ ಬೇಳೂರು ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಆಶಾಭಾವನೆ ಮತ್ತು ಕಾತುರ ತಾಲೂಕಿನ ಎಲ್ಲಾ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿ ವಲಯದಲ್ಲಿದೆ. ಇದೇ ಕಾರಣಕ್ಕಾಗಿ ಕ್ಷೇತ್ರದಾದ್ಯಂತ ವಿವಿಧ ದೇವಸ್ಥಾನಗಳಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಹಾಗೂ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

​ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಸುರೇಶ್ ಬಾಬು, ಮಹಾಬಲೇಶ್, ಈಶ್ವರನ್, ನಾಗರಾಜ್ ಗುಡ್ಡೇಮನೆ, ದಿನೇಶ್, ಕನ್ನಪ್ಪ, ನಾಗೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..

Share. Facebook Twitter LinkedIn WhatsApp Email

Related Posts

BREAKING : ಶಿವಮೊಗ್ಗದಲ್ಲಿ ಘೋರ ದುರಂತ : ತಲೆನೋವು ತಾಳಲಾರದೆ ಗನ್‌ನಿಂದ ಶೂಟ್ ಮಾಡಿಕೊಂಡು ವೃದ್ಧ ಆತ್ಮಹತ್ಯೆ!

2 Mins Read

ಶಾಸಕ ಗೋಪಾಲಕೃಷ್ಣ ಬೇಳೂರು ಸಚಿವರಾಗಲಿ; ಸಾಗರದಲ್ಲಿ ನಾಗರಾಜ್ ಗುಡ್ಡೇಮನೆ ನೇತೃತ್ವದಲ್ಲಿ ವಿಶೇಷ ಪೂಜೆ

1 Min Read

SHOCKING : ರಾಜ್ಯದಲ್ಲಿ ಹೃದಯವಿದ್ರಾವಕ ಘಟನೆ : ಮಗನ ಕಣ್ಣೆದುರೇ ನದಿಯಲ್ಲಿ ನೀರು ಪಾಲಾದ ತಂದೆ!

1 Min Read
Recent News

BREAKING : ಶಿವಮೊಗ್ಗದಲ್ಲಿ ಘೋರ ದುರಂತ : ತಲೆನೋವು ತಾಳಲಾರದೆ ಗನ್‌ನಿಂದ ಶೂಟ್ ಮಾಡಿಕೊಂಡು ವೃದ್ಧ ಆತ್ಮಹತ್ಯೆ!

ಶಾಸಕ ಗೋಪಾಲಕೃಷ್ಣ ಬೇಳೂರು ಸಚಿವರಾಗಲಿ; ಸಾಗರದಲ್ಲಿ ನಾಗರಾಜ್ ಗುಡ್ಡೇಮನೆ ನೇತೃತ್ವದಲ್ಲಿ ವಿಶೇಷ ಪೂಜೆ

SHOCKING : ರಾಜ್ಯದಲ್ಲಿ ಹೃದಯವಿದ್ರಾವಕ ಘಟನೆ : ಮಗನ ಕಣ್ಣೆದುರೇ ನದಿಯಲ್ಲಿ ನೀರು ಪಾಲಾದ ತಂದೆ!

BREAKING :ಲುಧಿಯಾನ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ : ಮೂವರು ಕಾರ್ಮಿಕರು ಸಾವು, ನಾಲ್ವರ ಸ್ಥಿತಿ ಗಂಭೀರ

State News
KARNATAKA

BREAKING : ಶಿವಮೊಗ್ಗದಲ್ಲಿ ಘೋರ ದುರಂತ : ತಲೆನೋವು ತಾಳಲಾರದೆ ಗನ್‌ನಿಂದ ಶೂಟ್ ಮಾಡಿಕೊಂಡು ವೃದ್ಧ ಆತ್ಮಹತ್ಯೆ!

By ಸುರೇಶ್‌ KARNATAKA 2 Mins Read

ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನ ನಿಟ್ಟೂರು ಗ್ರಾಮದ ಬಳಿಯ ತಟ್ಟೆಕೊಡ್ಲುವಿನಲ್ಲಿ ಭೀಕರ ಘಟನೆಯೊಂದು ಸಂಭವಿಸಿದೆ. 85 ವರ್ಷದ ವೃದ್ಧರೊಬ್ಬರು ತಮ್ಮದೇ…

ಶಾಸಕ ಗೋಪಾಲಕೃಷ್ಣ ಬೇಳೂರು ಸಚಿವರಾಗಲಿ; ಸಾಗರದಲ್ಲಿ ನಾಗರಾಜ್ ಗುಡ್ಡೇಮನೆ ನೇತೃತ್ವದಲ್ಲಿ ವಿಶೇಷ ಪೂಜೆ

SHOCKING : ರಾಜ್ಯದಲ್ಲಿ ಹೃದಯವಿದ್ರಾವಕ ಘಟನೆ : ಮಗನ ಕಣ್ಣೆದುರೇ ನದಿಯಲ್ಲಿ ನೀರು ಪಾಲಾದ ತಂದೆ!

ಸಾಗರದ ಮಾರಿ ಜಾತ್ರೆ ಅನುದಾನದ ಬಗ್ಗೆ ಸತ್ಯ ಸಾರ್ವಜನಿಕರ ಮುಂದಿದೆ: ಟೌನ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಬಾಬು

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.