Subscribe to Updates
Get the latest creative news from FooBar about art, design and business.
Author: kannadanewsnow05
ನವದೆಹಲಿ : ಲೋಕಸಭೆಯಲ್ಲಿ ಮಹತ್ವದ ಮಸೂದೆಗಳ ಬಗ್ಗೆ ಇಂದು ಆಡಳಿತ ಹಾಗೂ ವಿಪಕ್ಷಗಳ ನಡುವೆ ಚರ್ಚೆ ತಾರಕಕ್ಕೆ ಏರಿತು. ಈ ವಿಚಾರದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿದ್ದು, ಕ್ಷೇತ್ರ ಮರು ವಿಂಗಡಣೆ ದಲಿತರ ಹಾಗೂ ಒಬಿಸಿಗಳನ್ನು ಕಟ್ಟಿ ಹಾಕುವ ಯತ್ನ ಎಂದು ಆಕ್ರೋಶ ಹೊರಹಾಕಿದರು. ದಲಿತರು ಓಬಿಸಿ ವರ್ಗವನ್ನು ನಿಯಂತ್ರಿಸುವ ಪ್ರಯತ್ನ ನಡೆಯುತ್ತಿದೆ ಕ್ಷೇತ್ರ ಮರು ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಆಗಲಿದೆ ಕ್ಷೇತ್ರ ಮರು ವಿಂಗಡನೆ ದೇಶ ವಿರೋಧಿ ಮಸೂದೆಯಾಗಿದೆ ದೇಶದ ಚುನಾವಣೆ ನೀತಿಯನ್ನೇ ತೀರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿಗೆ ಚೆನ್ನಾಗಿ ಗೊತ್ತು ಈ ಬಿಲ್ ಪಾಸ್ ಮಾಡಲು ಆಗಲ್ಲ ಆದರೆ ಇದೊಂದು ಪ್ಲಾನಿಕ್ ರಿಯಾಕ್ಷನ್ ಆಗಿದೆ ಜಾದುಗಾರನ ಸತ್ಯ ಎಲ್ಲರಿಗೂ ಗೊತ್ತಾಗಿ ಹೋಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ರಾಹುಲ್ ಗಾಂಧಿ ಟಾಂಗ್ ನೀಡಿದರು. ಈ ವೇಳೆ ರಾಹುಲ್ ಗಾಂಧಿ ಮಾತಿಗೆ ಕಿರಣ್ ರಿಜಿಜು ಆಕ್ರೋಶ…
ಕೊಪ್ಪಳ : ತಡರಾತ್ರಿ ಸುರಿದ ಅಕಾಲಿಕ ಮಳೆಗೆ ಕೊಪ್ಪಳ ಜಿಲ್ಲೆಯ ಗಂಗಾವತಿಯ ಜಬ್ಬಲಗುಡ್ಡದಲ್ಲಿ ಓರ್ವ ರೈತ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತಪಟ್ಟ ರೈತನನ್ನು ಕರಿಯಪ್ಪ ದ್ಯಾವಣ್ಣ ಮ್ಯಾದನೇರಿ (36) ಎಂದು ಗುರುತಿಸಲಾಗಿದೆ. ರಾತ್ರಿ ಮಳೆ ಆರಂಭವಾಗಿದ್ದು, ಹೊಲದಲ್ಲಿ ರಾಶಿ ಮಾಡಿದ್ದ ಭತ್ತದ ಕಣಜ ಹಾಳಾಗದಿರಲೆಂದು ಅದರ ಮೇಲೆ ಹೊದಿಕೆ ಹಾಕಲು ಹೋದ ಸಂದರ್ಭದಲ್ಲಿ ಸಿಡಿಲು ಬಡಿದಿದೆ. ಕರಿಯಪ್ಪ ಅವರಿಗೆ ಪತ್ನಿ ದುರುಗಮ್ಮ, ಆರು ತಿಂಗಳ ಹಸುಗೂಸು ಸೇರಿದಂತೆ ಮೂವರು ಮಕ್ಕಳಿದ್ದಾರೆ. ಇನ್ನು ಕನಕಗಿರಿ ತಾಲೂಕಿನ ಸಿದ್ದಿಕೇರಿಯಲ್ಲಿ ಕುರಿಹಟ್ಟಿಯ ಮೇಲೆ ಸಿಡಿಲು ಬಡಿದು ಆರು ಆಕಳು ಸಾವನ್ನಪ್ಪಿವೆ. ಅಲೆಮಾರಿ ಜನಾಂಗಕ್ಕೆ ಸೇರಿದ ಕುಟುಂಬಗಳು ಕುರಿ ಮತ್ತು ಆಕಳುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಮೇಯಲು ಕರೆದುಕೊಂಡು ಹೋಗುತ್ತವೆ. ಕನಕಗಿರಿ ತಾಲೂಕಿನ ಬಂಕಾಪುರಕ್ಕೆ ಸೇರಿದ ಪಾರ್ವತಮ್ಮ ಸಣ್ಣ ಯಂಕಪ್ಪ ಬಂಡೇರ, ನಾಗೇಶ ಸಣ್ಣ ತಿಮಪ್ಪ ಬಂಡೇರ ಅವರಿಗೆ ಸೇರಿದ ತಲಾ ಮೂರು ಆಕಳು ಸಾವನ್ನಪ್ಪಿವೆ.
ದಾವಣಗೆರೆ : ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀಗಳನ್ನು ಪೀಠದಿಂದ ಇತ್ತೀಚಿಗೆ ಉದ್ಘಾಟನೆ ಗೊಳಿಸಲಾಗಿತ್ತು ಇದೀಗ ಶ್ರೀಗಳ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದೆ. ಹೌದು ವಚನಾನಂದ ಶ್ರೀಗಳು ವಿರುದ್ಧ ಮಕ್ಕಳ ಕಲ್ಯಾಣ ಮಂಡಳಿಗೆ ಇದೀಗ ದೂರು ನೀಡಲಾಗಿದೆ ಇದಕ್ಕೆ ಕಾರಣ ಮಕ್ಕಳಿಂದ ಶ್ರೀಗಳು ಮಸಾಜ್ ಮಾಡಿಸಿಕೊಳ್ಳುತ್ತಿದ್ದರು ಎನ್ನುವ ಆರೋಪ ಕೇಳಿ ಬಂದಿದೆ ಮಕ್ಕಳಿಗೆ ಶ್ರೀಗಳು ಹಿಂಸೆ ನೀಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ ಕೆಲ ಮಕ್ಕಳು ಹಾಗೂ ಪಾಲಕರಿಂದ ಶ್ರೀಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದು ದೂರು ನೀಡಿದ್ದಾರೆ. ಈ ಹಿನ್ನೆಲೆ ಪಂಚಮಸಾಲಿ ಗುರು ಪೀಠಕ್ಕೆ ಮಕ್ಕಳ ಕಲ್ಯಾಣ ಮಂಡಳಿ ಸದಸ್ಯರು ಭೇಟಿ ನೀಡಿದ್ದಾರೆ. ಮಕ್ಕಳ ಕಲ್ಯಾಣ ಸಮಿತಿಯ ಐವರು ಸದಸ್ಯರು ಇದೀಗ ಪಂಚಮಸಾಲಿ ಗುರುಪೀಠಕ್ಕೆ ಭೇಟಿ ನೀಡಿದ್ದಾರೆ. ಸಮಿತಿ ಸದಸ್ಯರಿಂದ ವಚನಾನಂದ ಶ್ರೀಗಳ ವಿಚಾರಣೆ ನಡೆಯುತ್ತಾ ಎಂದು ಕಾದು ನೋಡಬೇಕಾಗಿದೆ.
ನವದೆಹಲಿ : ಇವತ್ತು ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಹೊಸ ಚರಿತ್ರೆ ಸೃಷ್ಟಿಯಾಗುತ್ತಾ? ಎಂದು ಕಾದು ನೋಡಬೇಕಾಗಿದೆ. ಏಕೆಂದರೆ ಮಹಿಳಾ ಮೀಸಲಾತಿಗೆ ಸರ್ವ ಪಕ್ಷಗಳ ಬಲ ಸಿಗುತ್ತಾ? ಎಂದು ಕಾದು ನೋಡಬೇಕಾಗಿದೆ. ಮಹಿಳಾ ಮೀಸಲಾತಿಗೆ ನಮ್ಮದೇನು ತಕರಾರು ಇಲ್ಲ ಆದರೆ ಕ್ಷೇತ್ರಗಳ ಮರು ವಿಂಗಡಣೆ ಇದಕ್ಕೆ ಲಿಂಕ್ ಮಾಡುತ್ತಿದ್ದಾರಲ್ಲ ಅದಕ್ಕೆ ನಮ್ಮ ವಿರೋಧವಿದೆ ಎಂದು ವಿಪಕ್ಷಗಳು ಈಗಾಗಲೇ ಟಿಕೆ ಶುರು ಮಾಡಿವೆ. ಇನ್ನುಇದೇ ಸಂದರ್ಭದಲ್ಲಿ TMC ಸಂಸದ ಕಲ್ಯಾಣ್ ಬ್ಯಾನರ್ಜಿ ವ್ಯಂಗ್ಯವಾಡಿದ್ದು, ಮೋದಿ ಅವರ ಮಂಗಗಳ ಸೇನೆ ಬಹಳ ಚೆನ್ನಾಗಿದೆ. ಶ್ರೀರಾಮನ ಜೊತೆ ಹನುಮಾನ್ ಇದ್ದರು ಮೋದಿ ಅವರ ಪಾಲಿಗೆ ಕೋತಿಗಳು ಸಿಕ್ಕಿವೆ ಎಂದು ಬಿಜೆಪಿಯ ಉಳಿದಂತ ಸಂಸದರನ್ನು ಮಂಗಗಳು ಎಂದು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ವ್ಯಂಗ್ಯವಾಡಿದ್ದಾರೆ. ನಾವು ನಾರಿ ಶಕ್ತಿಯನ್ನು ಪೂಜಿಸುತ್ತೇವೆ. ನಮ್ಮ ಬಳಿ ಕಾಳಿಮಾತೆ ದುರ್ಗಾಮಾತೆಯರು ಇದ್ದಾರೆ. ನಾವು ಸಿಯಾರಾಮ್ ಎನ್ನುತ್ತೇವೆ. ನೀವು ಶ್ರೀರಾಮ್ ಅನ್ನುತ್ತೀರಿ. ನೀವು ಕೇವಲ ಜೈ ಶ್ರೀ ರಾಮ್ ಅಂತೀರಿ ನಾವು ಕಾಳಿ, ದುರ್ಗಾ…
ನವದೆಹಲಿ : ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಪವನ್ ಖೇರಾ ವಿರುದ್ಧ ಮಾನಹಾನಿ ಅಥವಾ ಆಕ್ಷೇಪಾರ್ಹ ಹೇಳಿಕೆಗಳ ಕುರಿತು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಸುಪ್ರೀಂ ಕೋರ್ಟ್ ನಲ್ಲಿ ಕಾಂಗ್ರೆಸ್ ನಾಯಕ ದವನಿಕ್ಕೆ ರಾಗಿ ಹಿನ್ನೆಡೆ ಆಗಿದ್ದು ಪವನ್ ಕೀರ ನಿರೀಕ್ಷಣ ಜಾಮೀನು ಅರ್ಜಿ ವಜಗೊಳಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಕಾಂಗ್ರೆಸ್ ಸಂಸದ ಪವನ್ ಖೇರಾ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ದೊಡ್ಡ ಹಿನ್ನಡೆಯಾಗಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ದಾಖಲಿಸಿರುವ ಪ್ರಕರಣದಲ್ಲಿ ಖೇರಾ ಅವರ ಜಾಮೀನು ವಿಸ್ತರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇದೀಗ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಅತುಲ್ ಎಸ್. ಚಂದೂರ್ಕರ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಈ ಆದೇಶವನ್ನು ಹೊರಡಿಸಿದೆ. ಈ ವಿಷಯದಲ್ಲಿ ನಾವು ಜಾಮೀನು…
ಬೆಂಗಳೂರು : ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಯಾವಾಗಲೂ ವಿವಾದದ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿ ಇರುತ್ತಾರೆ. ಸದಾ ಬಿಜೆಪಿ, ಕೇಂದ್ರ ಸರ್ಕಾರ, ಪ್ರಧಾನಿ ವಿರುದ್ಧ ಟೀಕೆ ಮಾಡುತ್ತಿರುತ್ತಾರೆ. ಅಲ್ಲದೇ ಹಿಂದೂಗಳ ವಿರುದ್ಧವೂ ಸಾಕಷ್ಟು ವಿವಾದದ ಹೇಳಿಕೆ ನೀಡಿರುವ ಪ್ರಕರಣಗಳು ನಡೆದಿವೆ. ಇದೀಗ ಕೇರಳದಲ್ಲಿ ನಡೆದ ಸಾಹಿತ್ಯ ಉತ್ಸವದಲ್ಲಿ ನಟ ರಾಮಾಯಣದ ಬಗ್ಗೆ ಅತ್ಯಂತ ಕೆಟ್ಟದ್ದಾಗಿ ಮಾತನಾಡಿದ್ದಾರೆ. ಕೇಂದ್ರ ಸರ್ಕಾರ, ಹಿಂದಿ ಭಾಷೆ ಎಲ್ಲವನ್ನೂ ಟೀಕಿಸುವ ಭರದಲ್ಲಿ, ಶ್ರೀರಾಮನನ್ನ ಉದಾಹರಣೆ ಮಾಡಿಕೊಂಡು ವಿವಾದದ ಹೇಳಿಕೆ ನೀಡಿದ್ದಾರೆ. ಶ್ರೀರಾಮ ಉತ್ತರ ಭಾರತದವನು ಹಾಗೆಯೇ ರಾವಣ ದಕ್ಷಿಣ ಭಾರತದ ಆದಿವಾಸಿ ಅಷ್ಟೇ. ರಾಮನು ದಕ್ಷಿಣ ಭಾರತದ ಜಮೀನಿಗೆ ನುಗ್ಗಿ ಹಣ್ಣನ್ನು ಕಿತ್ತು ತಿಂದಿದ್ದಾನೆ ಎನ್ನುವ ಮೂಲಕ ತಾವೇ ಸೃಷ್ಟಿಸಿರುವ ಕಥೆಯೊಂದನ್ನು ಹೇಳಿದ್ದಾರೆ. ಪ್ರಕಾಶ್ ರಾಜ್ ಅವರು ರಾಮಾಯಣವನ್ನು ಇಂದಿನ ರಾಜಕೀಯ ಪರಿಸ್ಥಿತಿಗೆ ಹೋಲಿಸಿ ಮಾತನಾಡುತ್ತಾ, “ಶ್ರೀರಾಮ ಉತ್ತರ ಭಾರತದವನು, ಆತ ದಕ್ಷಿಣಕ್ಕೆ ಬಂದು ಇಲ್ಲಿನ ಹಣ್ಣುಗಳನ್ನು ಕದ್ದು ತಿಂದಿದ್ದಕ್ಕೆ ರಾವಣನ ಜೊತೆ ಜಗಳವಾಯಿತು”…
ಬೆಂಗಳೂರು : ವಿದೇಶದಿಂದ ಅಕ್ರಮವಾಗಿ ಚಿನ್ನ ಕಳ್ಳ ಸಾಗಣೆ ಮಾಡಿದ ಆರೋಪ ಎದುರಿಸುತ್ತಿರುವ ನಟಿ ರನ್ಯಾ ರಾವ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಅವರ ವಿರುದ್ಧ ಕೇಂದ್ರ ಆರ್ಥಿಕ ಗುಪ್ತಚರ ಬ್ಯೂರೋ ಹೊರಡಿಸಿದ್ದ ಮುನ್ನೆಚ್ಚರಿಕೆ ಬಂಧನ ಆದೇಶವನ್ನು ಸುಪ್ರೀಂಕೋರ್ಟ್ ಗುರುವಾರ ಎತ್ತಿಹಿಡಿದಿದೆ. ವಿಭಾಗೀಯ ಪೀಠವು, ರನ್ಯಾ ರಾವ್ ಅವರ ತಾಯಿ ಮತ್ತು ಮತ್ತೊಬ್ಬ ಆರೋಪಿ ಸಾಹಿಲ್ ಸಕಾರಿಯಾ ಜೈನ್ ಅವರ ಸಂಬಂಧಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿತು. ಈ ಹಿಂದೆ 2025ರ ಡಿ.19ರಂದು ಕರ್ನಾಟಕ ಹೈಕೋರ್ಟ್ ಈ ಬಂಧನ ಆದೇಶಗಳನ್ನು ಎತ್ತಿಹಿಡಿದಿತ್ತು, ಇದೀಗ ಸುಪ್ರೀಂ ಕೋರ್ಟ್ ಕೂಡ ಹೈಕೋರ್ಟ್ ಆದೇಶವನ್ನು ಸರಿ ಎಂದು ಹೇಳಿದಂತಾಗಿದೆ. 2025 ಮಾರ್ಚ್‌ನಲ್ಲಿ ದುಬೈನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ರನ್ಯಾ ಅವರನ್ನು ತಪಾಸಣೆ ನಡೆಸಿದಾಗ, ಸುಮಾರು 14.2 ಕೇಜಿ ತೂಕದ ಚಿನ್ನದ ಬಿಸ್ಕೆಟ್‌ಗಳು ಪತ್ತೆಯಾಗಿದ್ದವು. ಪ್ರಕರಣ ಹಿನ್ನೆಲೆ? ರನ್ಯಾ ರಾವ್ ಅವರನ್ನು 2025ರ ಮಾರ್ಚ್ 3ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (DRI)…
ಯಾದಗಿರಿ : ರಾಜ್ಯದಲ್ಲಿ ಮತ್ತೊಂದು ಭೀಕರವಾದ ಅಪಘಾತ ಸಂಭವಿಸಿದ್ದು, ಕಾರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ 6 ಜನರು ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಪುರ ಬಳಿ ಈ ಅಪಘಾತ ಸಂಭವಿಸಿದೆ. ಘಟನೆಯ ವಿವರ: ಯಾದಗಿರಿಯಿಂದ ರಾಯಚೂರಿನ ಕಡೆಗೆ ತೆರಳುತ್ತಿದ್ದ ಕಾರಿಗೆ, ಬೆಂಗಳೂರಿನಿಂದ ಕಲಬುರ್ಗಿ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸ ಎಷ್ಟಿತ್ತೆಂದರೆ, ಅಪಘಾತ ಸಂಭವಿಸಿದ ತಕ್ಷಣವೇ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಓಡಿ ಬಂದಿದ್ದಾರೆ. ಕಾರು ಬೆಂಕಿಗೆ ಆಹುತಿಯಾದ ಕಾರಣ ರಕ್ಷಣಾ ಕಾರ್ಯಕ್ಕೆ ಅಡಚಣೆಯುಂಟಾಗಿತ್ತು ಎನ್ನಲಾಗಿದೆ. ವಿಷಯ ತಿಳಿದ ಸುರಪುರ ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತಪಟ್ಟವರ ಗುರುತು ಇನ್ನು ಪತ್ತೆಯಾಗಬೇಕಿದ್ದು, ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಹೈದ್ರಾಬಾದ್ : ಕಾಲಿನ ಸ್ನಾಯು ಸೆಳೆತದಿಂದಾಗಿ ಟೂರ್ನಿಯ ಮೊದಲೆರಡು ವಾರಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಕೆಲವು ಪಂದ್ಯಗಳಲ್ಲಿ ಆಡಿರಲಿಲ್ಲ ಆದರೆ ಇದೀಗ ಧೋನಿ ಅವರು ಸಿಎಸ್‌ಕೆ ಬಸ್ ಹತ್ತಿದ್ದು ನಾಳೆ ನಡೆಯುವ ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ಗ್ರೌಂಡಿಗೆ ಎಂಟ್ರಿ ಆಗುತ್ತಾರಾ ಎಂದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಹೌದು ಇದಕ್ಕೆ ಪುಷ್ಠಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಎಂ.ಎಸ್ ಧೋನಿ ಸಿಎಸ್‌ಕೆ ಬಸ್ ಹತ್ತುತ್ತಿರುವ ವಿಡಿಯೋವೊಂದು ಭಾರೀ ವೈರಲ್ ಆಗಿದ್ದು, ಶನಿವಾರ ನಡೆಯಲಿರುವ ಪಂದ್ಯದಲ್ಲಿ ಕಾಣಿಸಿಕೊಳ್ತಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಶನಿವಾರ ಹೈದರಾಬಾದ್‌ನಲ್ಲಿ ಸಿಎಸ್‌ಕೆ ತಂಡ ಎಸ್‌ಆರ್‌ಹೆಚ್‌ನ್ನು ಎದುರಿಸಲಿದೆ. ಹೀಗಾಗಿ ಧೋನಿ ಪಂದ್ಯಕ್ಕೂ ಮುನ್ನ ಹೈದರಾಬಾದ್‌ಗೆ ತೆರಳಿದ್ದಾರೆ. ಈ ಬಗ್ಗೆ ಸ್ವತಃ ಸಿಎಸ್‌ಕೆ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಆದರೆ ಇದರ ಹೊರತಾಗಿ ಪಂದ್ಯದಲ್ಲಿ ಆಡುತ್ತಾರಾ? ಎನ್ನುವ ಕುರಿತು ಈವರೆಗೂ ಅಧಿಕೃತ ಮಾಹಿತಿ ಹೊರಬಂದಿಲ್ಲ. ಕಾಲಿನ ಸ್ನಾಯು ಸೆಳೆತದಿಂದಾಗಿ ಟೂರ್ನಿಯ ಮೊದಲೆರಡು ವಾರಗಳಲ್ಲಿ ಧೋನಿ…
ಬೆಂಗಳೂರು : ಕರ್ನಾಟಕ ವಿಶ್ವವಿದ್ಯಾಲಯಗಳಲ್ಲಿ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯುವ ಕರ್ನಾಟಕ ರೋಹಿತ್ ವೇಮುಲಾ ಮಸೂದೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಹುಚರ್ಚಿತ ಮಸೂದೆಗೆ ಅಸ್ತು ನೀಡಲಾಗಿದೆ. ಮುಂದಿನ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡನೆ ಮಾಡಲಾಗುವುದು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ (ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳು/ವಿಶ್ವವಿದ್ಯಾಲಯಗಳು) ಜಾತಿ ಆಧಾರಿತ ತಾರತಮ್ಯವನ್ನು ನಿರ್ಮೂಲನೆ ಮಾಡುವ ಗುರಿಯೊಂದಿಗೆ ಈ ಮಸೂದೆಯನ್ನು ರೂಪಿಸಲಾಗಿದೆ. ಈ ಮಸೂದೆಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತಾರತಮ್ಯ ನಡೆದರೆ ಸಂತ್ರಸ್ತ, ಸಂತ್ರಸ್ತನ ಪೋಷಕರು, ಸಹೋದರ, ಸಹೋದರಿ ಅಥವಾ ಆತನ ರಕ್ತ ಸಂಬಂಧಿ, ಮದುವೆ, ದತ್ತು ಅಥವಾ ಯಾವುದಾದರೂ ರೀತಿಯಲ್ಲಿ ಸಂಬಂಧ ಹೊಂದಿರುವ ಸಹೋದ್ಯೋಗಿ ದೂರು ನೀಡಲು ಅವಕಾಶ ಇರಲಿದೆ. ಸಂಪುಟ ಸಭೆಯಲ್ಲಿ ಮಸೂದೆಯಲ್ಲಿ ಶಿಕ್ಷೆ ಪ್ರಮಾಣದಲ್ಲಿ ಕೆಲ ಸಣ್ಣ ಮಾರ್ಪಾಡುಗಳನ್ನು ಮಾಡಲು ತೀರ್ಮಾನಿಸಲಾಗಿದೆ. ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಮೇಲೆ ಒಟ್ಟು 30 ವಿವಿಧ ರೀತಿಯ ದೌರ್ಜನ್ಯ ಎಸಗುವುದನ್ನು ಪಟ್ಟಿ…














