Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪಿಪ್ಪಲಾದ ಅವತಾರ |ಶನಿಯ ಅಹಂಕಾರವನ್ನು ಶಮನ ಮಾಡಿದ ಶಿವಾವತಾರ | Pippalada Avatar: The Form of Shiva Feared Even by Shani Dev

BREAKING : ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸರ್ಜನೆ | Karnataka state cabinet dissolved

ಭಾರತೀಯ ರಾಜಕಾರಣದ ಧೀಮಂತ ನಾಯಕ : ಸಿದ್ದರಾಮಯ್ಯ ರಾಜೀನಾಮೆ ಕೊಟ್ಟ ಬಳಿಕ ಡಿಕೆಶಿ ಮೊದಲ ಪೋಸ್ಟ್!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸರ್ಜನೆ | Karnataka state cabinet dissolved
KARNATAKA

BREAKING : ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸರ್ಜನೆ | Karnataka state cabinet dissolved

By ಸುರೇಶ್‌

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಚಲನವಲನಗಳು ಸೃಷ್ಟಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಿನ್ನೆಯಷ್ಟೇ ಅವರು ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದು, ಇಂದು ರಾಜ್ಯಪಾಲರು ಅದನ್ನು ಅಧಿಕೃತವಾಗಿ ಅಂಗೀಕರಿಸಿದ್ದಾರೆ. ಇದರ ಬೆನ್ನಲ್ಲೇ ಸದ್ಯದ ಸಚಿವ ಸಂಪುಟವನ್ನು ಸಹ ವಿಸರ್ಜನೆಗೊಳಿಸಿ ರಾಜಭವನದಿಂದ ಮಹತ್ವದ ಆದೇಶ ಹೊರಬಿದ್ದಿದೆ.

ನಿನ್ನೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲು ರಾಜಭವನಕ್ಕೆ ತೆರಳಿದ ಸಂದರ್ಭದಲ್ಲಿ ರಾಜ್ಯಪಾಲರು ಸ್ಥಳದಲ್ಲಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ಕಾರ್ಯದರ್ಶಿಯಾದ ಪ್ರಭುಶಂಕರ್ ಅವರಿಗೆ ಹಸ್ತಾಂತರಿಸಿದ್ದರು. ಇಂದು ಬೆಂಗಳೂರಿಗೆ ಮರಳಿದ ರಾಜ್ಯಪಾಲರು, ಕಾರ್ಯದರ್ಶಿಗಳಿಂದ ರಾಜೀನಾಮೆ ಪತ್ರವನ್ನು ಪಡೆದು ಪರಿಶೀಲಿಸಿ, ಅದಕ್ಕೆ ತಕ್ಷಣವೇ ಅಂಕಿತ ಹಾಕಿದ್ದಾರೆ.

ರಾಜಭವನದ ಪ್ರಕಟಣೆ: “ಭಾರತದ ಸಂವಿಧಾನದ 164(1) ನೇ ವಿಧಿಯ ಅಡಿಯಲ್ಲಿ ನನಗೆ ನೀಡಲಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕದ ರಾಜ್ಯಪಾಲರಾದ ನಾನು, ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದೇನೆ ಮತ್ತು ಅವರ ನೇತೃತ್ವದ ಸಚಿವ ಸಂಪುಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜಿಸಿದ್ದೇನೆ.” ಎಂದು ರಾಜ್ಯಪಾಲರು ತಮ್ಮ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿಗಳ ರಾಜೀನಾಮೆ ಅಂಗೀಕಾರ ಹಾಗೂ ಸಚಿವ ಸಂಪುಟ ವಿಸರ್ಜನೆಯಾಗಿದ್ದರೂ, ರಾಜ್ಯದಲ್ಲಿ ಆಡಳಿತಾತ್ಮಕ ಶೂನ್ಯತೆ ಸೃಷ್ಟಿಯಾಗದಂತೆ ರಾಜ್ಯಪಾಲರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಮುಂದಿನ ಪರ್ಯಾಯ ವ್ಯವಸ್ಥೆ ಅಥವಾ ಹೊಸ ಸರ್ಕಾರ ಅಧಿಕಾರಕ್ಕೆ ಬರುವವರೆಗೂ ಶ್ರೀ ಸಿದ್ದರಾಮಯ್ಯ ಅವರೇ ಉಸ್ತುವಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲಿದ್ದಾರೆ ಎಂದು ರಾಜಭವನದ ಪ್ರಕಟಣೆ ತಿಳಿಸಿದೆ.

ಸಿದ್ದರಾಮಯ್ಯ ಅವರ ರಾಜೀನಾಮೆ ಹಾಗೂ ಸಚಿವ ಸಂಪುಟ ವಿಸರ್ಜನೆಯಿಂದಾಗಿ ರಾಜ್ಯ ರಾಜಕೀಯದಲ್ಲಿ ಮುಂದಿನ ನಡೆ ಏನು ಎಂಬ ಕುತೂಹಲ ತೀವ್ರಗೊಂಡಿದೆ. ಹೊಸ ಸರ್ಕಾರದ ರಚನೆ ಅಥವಾ ಮುಂದಿನ ರಾಜಕೀಯ ಬೆಳವಣಿಗೆಗಳ ಕುರಿತು ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಸರಣಿ ಸಭೆಗಳು ಆರಂಭವಾಗಿದ್ದು, ಸಾರ್ವಜನಿಕ ವಲಯದಲ್ಲೂ ಭಾರಿ ಚರ್ಚೆ ಮುನ್ನಲೆಗೆ ಬಂದಿದೆ.

Share. Facebook Twitter LinkedIn WhatsApp Email

Related Posts

ಪಿಪ್ಪಲಾದ ಅವತಾರ |ಶನಿಯ ಅಹಂಕಾರವನ್ನು ಶಮನ ಮಾಡಿದ ಶಿವಾವತಾರ | Pippalada Avatar: The Form of Shiva Feared Even by Shani Dev

4 Mins Read

ಭಾರತೀಯ ರಾಜಕಾರಣದ ಧೀಮಂತ ನಾಯಕ : ಸಿದ್ದರಾಮಯ್ಯ ರಾಜೀನಾಮೆ ಕೊಟ್ಟ ಬಳಿಕ ಡಿಕೆಶಿ ಮೊದಲ ಪೋಸ್ಟ್!

1 Min Read

BIG NEWS : ಸಿದ್ದರಾಮಯ್ಯ ಗೌರವಯುತ ರಾಜೀನಾಮೆಗೆ ‘AICC’ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೆಚ್ಚುಗೆ!

1 Min Read
Recent News

ಪಿಪ್ಪಲಾದ ಅವತಾರ |ಶನಿಯ ಅಹಂಕಾರವನ್ನು ಶಮನ ಮಾಡಿದ ಶಿವಾವತಾರ | Pippalada Avatar: The Form of Shiva Feared Even by Shani Dev

BREAKING : ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸರ್ಜನೆ | Karnataka state cabinet dissolved

ಭಾರತೀಯ ರಾಜಕಾರಣದ ಧೀಮಂತ ನಾಯಕ : ಸಿದ್ದರಾಮಯ್ಯ ರಾಜೀನಾಮೆ ಕೊಟ್ಟ ಬಳಿಕ ಡಿಕೆಶಿ ಮೊದಲ ಪೋಸ್ಟ್!

BIG NEWS : ಸಿದ್ದರಾಮಯ್ಯ ಗೌರವಯುತ ರಾಜೀನಾಮೆಗೆ ‘AICC’ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೆಚ್ಚುಗೆ!

State News
KARNATAKA

ಪಿಪ್ಪಲಾದ ಅವತಾರ |ಶನಿಯ ಅಹಂಕಾರವನ್ನು ಶಮನ ಮಾಡಿದ ಶಿವಾವತಾರ | Pippalada Avatar: The Form of Shiva Feared Even by Shani Dev

By ಸುರೇಶ್‌ KARNATAKA 4 Mins Read

ಭಗವಾನ್ ಶಿವನ 19 ಪ್ರಮುಖ ಅವತಾರಗಳಲ್ಲಿ ಅತ್ಯಂತ ತೇಜೋಮಯ, ನ್ಯಾಯಸ್ವರೂಪವಾದ ಅವತಾರವೇ ಪಿಪ್ಪಲಾದ ಅವತಾರ. ಅನೇಕ ಪ್ರದೇಶಗಳಲ್ಲಿ ಇವರು ಪಿಪ್ಲೇಶ್ವರ…

BREAKING : ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸರ್ಜನೆ | Karnataka state cabinet dissolved

ಭಾರತೀಯ ರಾಜಕಾರಣದ ಧೀಮಂತ ನಾಯಕ : ಸಿದ್ದರಾಮಯ್ಯ ರಾಜೀನಾಮೆ ಕೊಟ್ಟ ಬಳಿಕ ಡಿಕೆಶಿ ಮೊದಲ ಪೋಸ್ಟ್!

BIG NEWS : ಸಿದ್ದರಾಮಯ್ಯ ಗೌರವಯುತ ರಾಜೀನಾಮೆಗೆ ‘AICC’ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೆಚ್ಚುಗೆ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.