Author: ಸುರೇಶ್‌

"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು

ಬೆಂಗಳೂರು: ರಾಜ್ಯದ ಮದ್ಯ ಪ್ರಿಯರಿಗೆ ಸರ್ಕಾರ ಮತ್ತೊಂದು ಬಿಗ್ ಶಾಕ್ ನೀಡಿದೆ. ಕಳೆದೆರಡು ದಿನಗಳಿಂದ ಕೇಳಿಬರುತ್ತಿದ್ದ ಮದ್ಯದ ದರ ಏರಿಕೆ ವದಂತಿಗಳಿಗೆ ಇದೀಗ ಅಧಿಕೃತ ಮುದ್ರೆ ಬಿದ್ದಿದ್ದು, ರಾಜ್ಯದಲ್ಲಿ ನೂತನ ಅಬಕಾರಿ ಸುಂಕ ಜಾರಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮದ್ಯ ಮತ್ತು ಬಿಯರ್ ದರಗಳನ್ನು ಪರಿಷ್ಕರಿಸಿ ರಾಜ್ಯ ಸರ್ಕಾರ ಅಧಿಕೃತ ನೂತನ ದರಪಟ್ಟಿಯನ್ನು ಹೊರಡಿಸಿದೆ. ಸರ್ಕಾರದ ನೂತನ ಆದೇಶದ ಪ್ರಕಾರ, ಮದ್ಯದಲ್ಲಿರುವ ಆಲ್ಕೋಹಾಲ್ ಅಂಶದ (Alcoholic Strength) ಆಧಾರದ ಮೇಲೆ ಸುಂಕವನ್ನು ನಿಗದಿಪಡಿಸಲಾಗಿದೆ. ಇಂದಿನಿಂದಲೇ ಜಾರಿಗೆ ಬರುವಂತೆ ಹೊಸ ದರಗಳು ಅನ್ವಯವಾಗಲಿದ್ದು, ಮದ್ಯದ ವಿವಿಧ ಬ್ರ್ಯಾಂಡ್‌ಗಳ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ. ಇದು ಗಿರಾಕಿಗಳ ಜೇಬಿಗೆ ಭಾರಿ ಕತ್ತರಿ ಹಾಕುವುದರಲ್ಲಿ ಯಾವುದೇ ಅನುಮಾನವಿಲ್ಲ. ಬಿಯರ್ ಬೆಲೆಯಲ್ಲಿ ಭಾರಿ ಏರಿಕೆ ಹೊಸ ದರ ಪಟ್ಟಿಯ ಅನ್ವಯ ಪ್ರಮುಖವಾಗಿ ಬಿಯರ್ ಪ್ರಿಯರಿಗೆ ದೊಡ್ಡ ಮಟ್ಟದ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಪ್ರತಿ ಬಾಟಲ್ ಬಿಯರ್ ಬೆಲೆಯಲ್ಲಿ ಕನಿಷ್ಠ 10 ರೂಪಾಯಿಯಿಂದ ಹಿಡಿದು, ಬ್ರ್ಯಾಂಡ್‌ಗಳಿಗೆ ಅನುಗುಣವಾಗಿ 20…

Read More

ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಚುರುಕುಗೊಂಡಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿ ನಿನ್ನೆ ಬಂಧನಕ್ಕೊಳಗಾಗಿದ್ದ ಪ್ರಶ್ನೆ ಪತ್ರಿಕೆ ತಯಾರಿಕಾ ಸಮಿತಿಯ ಸದಸ್ಯೆ, ಉಪನ್ಯಾಸಕಿ ಮನಿಷಾ ಗುರುನಾಥ್ ಅವರನ್ನ ಕೋರ್ಟ್ ಇಂದು 14 ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದೆ. ಸಮಿತಿಯಲ್ಲೇ ಇದ್ದು ಕೃತ್ಯ ಎಸಗಿದ ಆರೋಪಿ: ಬಂಧಿತ ಮನಿಷಾ ಗುರುನಾಥ್ ಮಹಾರಾಷ್ಟ್ರದ ಪುಣೆಯ ಕಾಲೇಜೊಂದರಲ್ಲಿ ಸಸ್ಯಶಾಸ್ತ್ರ (Botany) ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರ ಶೈಕ್ಷಣಿಕ ಹಿನ್ನೆಲೆಯನ್ನು ಪರಿಗಣಿಸಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಇವರನ್ನು ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ತಯಾರಿಸುವ ತಜ್ಞರ ಸಮಿತಿಗೆ ನೇಮಕ ಮಾಡಿತ್ತು. ಅತ್ಯಂತ ಗೌಪ್ಯವಾಗಿಡಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿದ್ದೂ ಇವರು ಪ್ರಶ್ನೆ ಪತ್ರಿಕೆ ಸೋರಿಕೆ ಜಾಲದೊಂದಿಗೆ ಕೈಜೋಡಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಸಿಬಿಐನಿಂದ ತೀವ್ರ ವಿಚಾರಣೆ ಸಾಧ್ಯತೆ: ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಹಂತದಲ್ಲಿಯೇ ಸೋರಿಕೆ ಹೇಗೆ ನಡೆಯಿತು? ಇದರ ಹಿಂದೆ ಎಷ್ಟು…

Read More

ದಕ್ಷಿಣಕನ್ನಡ : ಕನ್ನಡ ಚಿತ್ರರಂಗದ ಜನಪ್ರಿಯ ನಟಿ, ‘ಡಿಂಪಲ್ ಕ್ವೀನ್’ ಎಂದೇ ಖ್ಯಾತರಾಗಿರುವ ರಚಿತಾ ರಾಮ್ ಅವರು ತುಳುನಾಡಿನ ಕಾರಣಿಕ ದೈವವಾದ ಸ್ವಾಮಿ ಕೊರಗಜ್ಜನಿಗೆ ತಮ್ಮ ಹರಕೆ ಕೋಲ ಸೇವೆಯನ್ನು ಸಲ್ಲಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶ್ರದ್ಧೆ-ಭಕ್ತಿಯಿಂದ ಆಚರಿಸಲಾಗುವ ದೈವಾರಾಧನೆಗೆ ಚಿತ್ರರಂಗದ ಗಣ್ಯರು ಭೇಟಿ ನೀಡುವುದು ಸಾಮಾನ್ಯವಾಗಿದ್ದು, ಇದೀಗ ನಟಿ ರಚಿತಾ ರಾಮ್ ಕೂಡ ಕೊರಗಜ್ಜನ ಸನ್ನಿಧಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೆಂಜನಪದವಿನಲ್ಲಿರುವ ಪ್ರಸಿದ್ಧ ಕೊರಗಜ್ಜ ಸನ್ನಿಧಿಯಲ್ಲಿ ಈ ಹರಕೆ ಕೋಲ ಸೇವೆ ನಡೆದಿದೆ. ನಟಿ ರಚಿತಾ ರಾಮ್ ಅವರು ತಾನು ಅಂದುಕೊಂಡ ಕೆಲವು ಪ್ರಮುಖ ಕೆಲಸಗಳು ಯಶಸ್ವಿಯಾಗಿ ನೆರವೇರಿದರೆ ಕೊರಗಜ್ಜ ದೈವಕ್ಕೆ ಕೋಲ ಸೇವೆ ನೀಡುವುದಾಗಿ ಈ ಹಿಂದೆ ಹರಕೆ ಹೊತ್ತಿದ್ದರು. ತಾವು ಅಂದುಕೊಂಡ ಕಾರ್ಯಗಳು ಸಿದ್ದಿಸಿದ ಹಿನ್ನೆಲೆಯಲ್ಲಿ, ಅವರು ಶ್ರದ್ಧಾಭಕ್ತಿಗಳಿಂದ ಬೆಂಜನಪದವಿಗೆ ಆಗಮಿಸಿ ತಮ್ಮ ಹರಕೆಯನ್ನು ಪೂರ್ಣಗೊಳಿಸಿದ್ದಾರೆ. ಸ್ಯಾಂಡಲ್‌ವುಡ್‌ನ ಬಹುಬೇಡಿಕೆಯ ನಟಿಯಾಗಿರುವ ರಚಿತಾ ರಾಮ್, ಈಗಾಗಲೇ ಕನ್ನಡ ಚಿತ್ರರಂಗದ ಬಹುತೇಕ…

Read More

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಇತ್ತೀಚೆಗೆ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬ್ಯಾಂಕಾಕ್‌ನಿಂದ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಬರೋಬ್ಬರಿ 7.12 ಕೋಟಿ ರೂಪಾಯಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಿಮಾನ ನಿಲ್ದಾಣಕ್ಕೆ ಬ್ಯಾಂಕಾಕ್‌ನಿಂದ ಪ್ರತ್ಯೇಕ ವಿಮಾನಗಳಲ್ಲಿ ಬಂದಿಳಿದ ಇಬ್ಬರು ಪ್ರಯಾಣಿಕರ ಮೇಲೆ ಕಸ್ಟಮ್ಸ್ ಅಧಿಕಾರಿಗಳಿಗೆ ತೀವ್ರ ಅನುಮಾನ ವ್ಯಕ್ತವಾಗಿತ್ತು. ಅವರ ನಡವಳಿಕೆಯಲ್ಲಿ ಕಂಡುಬಂದ ಅಸಹಜತೆಯಿಂದ ಎಚ್ಚೆತ್ತ ಅಧಿಕಾರಿಗಳು, ತಕ್ಷಣವೇ ಅವರನ್ನು ತಡೆದು ನಿಲ್ಲಿಸಿ ತೀವ್ರ ತಪಾಸಣೆಗೆ ಒಳಪಡಿಸಿದರು. ಅಧಿಕಾರಿಗಳು ಆರೋಪಿಗಳ ಬ್ಯಾಗ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಸಾಗಿಸುತ್ತಿದ್ದ ಪೆಡ್ಲಿಂಗ್ ಜಾಲ ಬಯಲಾಗಿದೆ. ಬ್ಯಾಗ್‌ಗಳಲ್ಲಿ ಅಡಗಿಸಿಡಲಾಗಿದ್ದ ಒಟ್ಟು 20.7 ಕೆಜಿ ತೂಕದ ಅತ್ಯಂತ ದುಬಾರಿ ತಳಿಯ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಕೋಟಿಗಟ್ಟಲೆ ಇರಲಿದ್ದು, ಕಸ್ಟಮ್ಸ್ ಸಿಬ್ಬಂದಿ ಅದನ್ನು ಸಂಪೂರ್ಣವಾಗಿ ಜಪ್ತಿ ಮಾಡಿದ್ದಾರೆ. ಪ್ರಸ್ತುತ ಕರಾರುವಕ್ಕಾದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಬ್ಯಾಂಕಾಕ್‌ನಿಂದ ಬಂದಿದ್ದ…

Read More

ಬೆಂಗಳೂರು : ದೊಡ್ಡಬಳ್ಳಾಪುರ ತಾಲೂಕಿನ ಅಪಕಾರನಹಳ್ಳಿಗೆ ನಲ್ಲಿ ಕೇವಲ 200 ರೂಪಾಯಿ ಸಾಲದ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಅಪಕಾರನಹಳ್ಳಿ ಗೇಟ್ನಲ್ಲಿ ದೊಣ್ಣೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮದಲ್ಲಿ ಈ ಒಂದು ಕೊಲೆ ನಡೆದಿದೆ. ಟೀ ಕುಡಿದಿದ್ದ ಸಾಲದ ಹಣ ಕೇಳಿದ್ದಕ್ಕೆ ದೊಣ್ಣೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಲಾಗಿದೆ. ದ್ಯಾವಸಂದ್ರ ಗ್ರಾಮದ ಮಂಜುನಾಥ (40) ಕೊಲೆಯಾದ ದುರ್ದೈವಿ ಎಂದು ತಿಳಿದು ಬಂದಿದೆ. ಮೇ 12ರಂದು ಮುನಿಯಪ್ಪ ಬೆಳಿಗ್ಗೆ ಟೀ ಕುಡಿಯಲು ಬಂದು ಸಾಲ ಕೇಳಿದ್ದ. ಮತ್ತೆ ಸಾಲ ಕೊಡುವುದಿಲ್ಲ ಅಂತ ಟೀ ಅಂಗಡಿ ಮಾಲಿಕ ಮಂಜುನಾಥ ಮುನಿಯಪ್ಪನಿಗೆ ಹೇಳಿದ್ದಾನೆ. ಮಂಜುನಾಥ ಮತ್ತು ಮುನಿಯಪ್ಪ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಈ ವೇಳೆ ಮುನಿಯಪ್ಪ ಮಂಜುನಾಥನ ತಲೆಗೆ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿದ್ದಾನೆ . ಹಲ್ಲೆಯಿಂದ ಗಾಯಗೊಂಡು ಮಂಜುನಾಥ್ ಆಸ್ಪತ್ರೆಗೆ ದಾಖಲಾಗಿದ್ದ. ಈ ಹಿಂದೆ ತಾಯಿಗೂ ಚಾಕು ಇರಿದಿದ್ದ ಕೊಲೆ…

Read More

ಮಂಗಳೂರು: ನಗರದ ಕುಂಟಿಕಾನ ಬಳಿ ಇರುವ ಪ್ರಸಿದ್ಧ ಮಾರ್ಟ್ ಒಂದರ ಕಟ್ಟಡದಲ್ಲಿ ಭಾನುವಾರ ಅತ್ಯಂತ ಘೋರ ಹಾಗೂ ಮನಕಲಕುವ ಘಟನೆಯೊಂದು ಸಂಭವಿಸಿದೆ. ಕೆಲಸದ ನಿಮಿತ್ತ ಕಟ್ಟಡದ ಲಿಫ್ಟ್ ಬಳಸುತ್ತಿದ್ದ ಯುವಕನೋರ್ವ ತಾಂತ್ರಿಕ ದೋಷದಿಂದಾಗಿ ಲಿಫ್ಟ್‌ನಲ್ಲಿ ಸಿಲುಕಿ, ಸ್ಥಳದಲ್ಲೇ ಜಂಟಿ ಸಾವನ್ನಪ್ಪಿರುವ ಧೃತಿಗೆಡಿಸುವ ಘಟನೆ ವರದಿಯಾಗಿದೆ. ಮೃತರನ್ನು ಬೆಳ್ತಂಗಡಿ ತಾಲೂಕಿನ ಪೂಂಜಕೆರೆ ನಿವಾಸಿಯಾದ ನೌಫಾಲ್ (28) ಎಂದು ಗುರುತಿಸಲಾಗಿದೆ. ಮೊದಲ ಹಾಗೂ ಎರಡನೇ ಮಹಡಿಯ ಮಧ್ಯೆ ಸಿಲುಕಿದ ನೌಫಾಲ್: ಮೃತ ನೌಫಾಲ್ ಎಂದಿನಂತೆ ಸದರಿ ಮಾರ್ಟ್‌ನಲ್ಲಿ ತನ್ನ ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆ ಸಾಮಗ್ರಿಗಳನ್ನು ಸಾಗಿಸುವ ಅಥವಾ ಕೆಲಸದ ತುರ್ತು ನಿಮಿತ್ತ ಲಿಫ್ಟ್ ಮೂಲಕ ಮೇಲಿನ ಮಹಡಿಗೆ ತೆರಳುತ್ತಿದ್ದರು. ಆದರೆ, ಲಿಫ್ಟ್ ಮೊದಲನೇ ಹಾಗೂ ಎರಡನೇ ಮಹಡಿಯ ಮಧ್ಯ ತಲುಪುತ್ತಿದ್ದಂತೆ ತಾಂತ್ರಿಕ ದೋಷ ಕಾಣಿಸಿಕೊಂಡು ಇದ್ದಕ್ಕಿದ್ದಂತೆ ಸ್ಥಗಿತಗೊಂಡಿದೆ. ಇದರಿಂದಾಗಿ ನೌಫಾಲ್ ಲಿಫ್ಟ್ ಒಳಗಡೆಯೇ ಸಿಲುಕಿಕೊಳ್ಳುವಂತಾಗಿದೆ. ರಕ್ಷಣೆಗೆ ಧಾವಿಸಿದ ಸಹೋದ್ಯೋಗಿಗಳು, ಹೆಚ್ಚಿದ ಆತಂಕ: ಲಿಫ್ಟ್ ಅರ್ಧದಲ್ಲೇ ನಿಂತು ನೌಫಾಲ್ ಸಂಕಷ್ಟಕ್ಕೆ ಸಿಲುಕಿದ್ದನ್ನು…

Read More

ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಜಾಗತಿಕ ಪರಿಣಾಮಗಳು ಇದೀಗ ನೇರವಾಗಿ ಭಾರತದ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿವೆ. ಇಂಧನ ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆಯ ಬೆನ್ನಲ್ಲೇ, ಇದೀಗ ಜೀವ ರಕ್ಷಕ ಔಷಧಗಳ ಬೆಲೆಯೂ ಗಗನಕ್ಕೇರುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಕರ್ನಾಟಕ ಫಾರ್ಮಾ ಮೆಡಿಕಲ್ ಅಸೋಸಿಯೇಷನ್ ನೀಡಿರುವ ಮಾಹಿತಿಯ ಪ್ರಕಾರ, ಮಾರುಕಟ್ಟೆಗೆ ಬರುತ್ತಿರುವ ಹೊಸ ಬ್ಯಾಚ್‌ನ ಔಷಧಗಳ ಬೆಲೆಯಲ್ಲಿ ಸರಾಸರಿ ಶೇಕಡಾ 15 ರಿಂದ 20 ರಷ್ಟು ಹೆಚ್ಚಳವಾಗಿದೆ. ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕ ಪೂರೈಕೆ ಸರಪಳಿ (Supply Chain) ಸಂಪೂರ್ಣವಾಗಿ ಏರುಪೇರಾಗಿರುವುದು ಈ ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ. ಮಾತ್ರೆಗಳು ಮತ್ತು ಸಿರಪ್‌ಗಳ ತಯಾರಿಕೆಗೆ ಪೆಟ್ರೋ ಕೆಮಿಕಲ್ಸ್ ಅತ್ಯಗತ್ಯ ಕಚ್ಚಾವಸ್ತುವಾಗಿದೆ. ಆದರೆ ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದಾಗಿ ಕಚ್ಚಾ ತೈಲ ಮತ್ತು ಪೆಟ್ರೋ ಕೆಮಿಕಲ್ಸ್ ಆಮದು ವೆಚ್ಚ ದುಬಾರಿಯಾಗಿದೆ. ಸಾಗಣೆ ಸಮಯ ಹಾಗೂ ವೆಚ್ಚ ಎರಡೂ ಹೆಚ್ಚಾಗಿರುವುದರಿಂದ, ಫಾರ್ಮಾ ಕಂಪನಿಗಳು ಅನಿವಾರ್ಯವಾಗಿ ಹೊಸ ಬ್ಯಾಚ್‌ನ ಮೆಡಿಸಿನ್‌ಗಳ ದರವನ್ನು ಹಂತ ಹಂತವಾಗಿ ಏರಿಕೆ…

Read More

ಕಲಬುರಗಿ : ನಿವೃತ ಸೈನಿಕ ತಲೆಗೆ ಕಬ್ಬಿಣದ ರಾಡ್ ಇಂದ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಕಲಬುರ್ಗಿಯ ರಾಮಮಂದಿರ ಬಳಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ರವಿಚಂದ್ರ ಖೇಡ್ (45) ಎಂದು ತಿಳಿದುಬಂದಿದೆ. ಇಂಡಿಯನ್ ಆಯಿಲ್ ಡಿಪೋದಲ್ಲಿ ರವಿಚಂದ್ರ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ವಿವಾದಿತ ಖಾಸಗಿ ಜಾಗದಲ್ಲಿ ರವಿಚಂದ್ರವಾಗಿ ಕೊಲೆಯಾಗಿದ್ದಾರೆ. ವಿವಾದಿತ ಜಾಗದಲ್ಲಿ ಕಳೆದ ತಿಂಗಳು ಟಿನ್ ಶೆಡ್ ನಿರ್ಮಿಸಲಾಗಿತ್ತು. ಅದನ್ನು ವಿರೋಧಿ ಗುಂಪು ರಾತ್ರೋರಾತ್ರಿ ಜೆಸಿಬಿ ಇಂದ ಕೆಡವಲಾಗಿತ್ತು. ಅದೇ ವಿಚಾರವಾಗಿ ವಿರೋಧಿ ಗುಂಪಿನಿಂದ ರವಿಚಂದ್ರನ ಕೊಲೆಯಾಗಿದೆ. ನೈಟ್ ಶಿಫ್ಟ್ ನಲ್ಲಿ ರವಿಚಂದ್ರನ್ ಸೆಕ್ಯೂರಿಟಿ ಗಾರ್ಡ್ ಆಗಿದ್ದರು. ಕಂಡವರ ಜಾಗಕ್ಕೆ ಬೇಲಿ ಹಾಕುವ ಗ್ಯಾಂಗ್ ನಿಂದ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಳೆದ 4 ವರ್ಷದ ಹಿಂದೆ ರವಿಚಂದ್ರ ಬಿಎಸ್ಎಫ್ ನಿಂದ ನಿವೃತ್ತಿಯಾಗಿದ್ದರು. ಕಲ್ಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಹಡಲಗಿ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಸ್ಟೇಷನ್…

Read More

ಬೆಂಗಳೂರು: ದೇಶಾದ್ಯಂತ ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಗಗನಕ್ಕೇರಿ ಸಾರ್ವಜನಿಕರು ಕಂಗಾಲಾಗಿದ್ದಾರೆ. ಇದರ ನಡುವೆಯೇ ಇದೀಗ ಇಂಧನ ದರ ಏರಿಕೆಯಿಂದ ತತ್ತರಿಸಿದ್ದ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಕೇಂದ್ರ ಸರ್ಕಾರ ಮತ್ತೊಂದು ಭಾರಿ ಶಾಕ್ ನೀಡಿದೆ. ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (CNG) ದರವನ್ನು ಮತ್ತೆ ಒಂದು ರೂಪಾಯಿ ಹೆಚ್ಚಳ ಮಾಡುವ ಮೂಲಕ ಗ್ರಾಹಕರ ಜೇಬಿಗೆ ಕತ್ತರಿ ಹಾಕಲಾಗಿದೆ. ಕೇವಲ ಎರಡು ದಿನಗಳ ಹಿಂದಷ್ಟೇ ಪ್ರತಿ ಕೆಜಿ ಸಿಎನ್‌ಜಿ ದರವನ್ನು 2 ರೂಪಾಯಿಗಳಷ್ಟು ಹೆಚ್ಚಿಸಲಾಗಿತ್ತು. ಈ ಬೆಲೆ ಏರಿಕೆಯ ಆಘಾತದಿಂದ ಚಾಲಕರು ಚೇತರಿಸಿಕೊಳ್ಳುವ ಮುನ್ನವೇ, ಕೇವಲ 48 ಗಂಟೆಗಳ ಅವಧಿಯಲ್ಲಿ ಎರಡನೇ ಬಾರಿಗೆ ಮತ್ತೆ 1 ರೂಪಾಯಿ ಏರಿಕೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಈ ದಿಢೀರ್ ನಿರ್ಧಾರದಿಂದಾಗಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಹೊಸ ಸಿಎನ್‌ಜಿ ದರಗಳು ದೇಶಾದ್ಯಂತ ಅನ್ವಯವಾಗಲಿವೆ. ಬೆಂಗಳೂರಿನಲ್ಲಿ 90 ರೂಪಾಯಿ ಗಡಿ ದಾಟಿದ ಸಿಎನ್‌ಜಿ! ನಿರಂತರವಾಗಿ ಹೆಚ್ಚುತ್ತಿರುವ ಇಂಧನ ಬೆಲೆಯಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿ ಕೆಜಿ ಸಿಎನ್‌ಜಿ…

Read More

ಬೆಂಗಳೂರು : ಲಕ್ಕುಂಡಿಯಲ್ಲಿ ಮನೆ ನಿರ್ಮಾಣ ಮಾಡುವಾಗ ಪ್ರಾಚೀನ ಕಾಲದ ಚಿನ್ನಾಭರಣ ದೊರೆತಿದ್ದು, ದೇಶಾದ್ಯಂತ ಅಷ್ಟೆ ಭಾರಿ ಸದ್ದು ಮಾಡಿತ್ತು ಇದೀಗ ಲಕ್ಕುಂಡಿಯನ್ನು ಯುನೆಸ್ಕೋ ಪಟ್ಟಿಯಲ್ಲಿ ಸೇರಿಸಲು ತಯಾರಿ ನಡೆಸಿದ್ದು, ಎರಡು ತಿಂಗಳಲ್ಲಿ ಪ್ರಸ್ತಾಪ ಸಲ್ಲಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು. ವಿಧಾನಸೌಧದಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಲಕ್ಕುಂಡಿ ಪಾರಂಪರಿಕ‌ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಹಾಗೂ ರಾಜ್ಯ ಮಟ್ಟದ ಸಲಹಾ ಸಮಿತಿಯು ಕಾನೂನಾತ್ಮಕವಾಗಿ ರಚನೆಯಾಗಿದೆ. ಲಕ್ಕುಂಡಿ ಪ್ರಾಧಿಕಾರ ಗದಗನ್ನು ಮುಖ್ಯ ಕಚೇರಿ ಮಾಡಿ ಕೆಲಸ ಆರಂಭಿಸಿದೆ. 3 ವರ್ಷದಲ್ಲಿ ಲಕ್ಕುಂಡಿ ತಾಣಕ್ಕೆ ರಾಜ್ಯ ಸರ್ಕಾರ ಹೊಸ ಸ್ಪರ್ಶವನ್ನು ನೀಡಿದೆ. ಲಕ್ಕುಂಡಿಯಲ್ಲಿ ಮೊದಲ ಹಂತವಾಗಿ ಪ್ರಾಚ್ಯಾವಶೇಷ ವಸ್ತುಗಳ ಅನ್ವೇಷಣೆ ಆರಂಭಿಸಲಾಗಿದೆ ಎಂದರು. 10 ಪಲ್ಲಕ್ಕಿ ಹೊತ್ತು, ಗ್ರಾಮ ಪಂಚಾಯತಿ ಸುತ್ತಾಡಿ ಪ್ರಾಚ್ಯಾವಶೇಷ ವಸ್ತುಗಳನ್ನು ನಮಗೆ ಕೊಡಿ ಎಂದು ಮನವಿ ಮಾಡಿದೆವು. ಆಗ ಗ್ರಾಮದವರು 1500 ಪ್ರಾಚೀನ ವಸ್ತುಗಳನ್ನು ನಮಗೆ ಕೊಟ್ಟು ಸ್ಪಂದನೆ ಮಾಡಿದರು. ಜನಾಂದೋಲನ‌ ಮಾಡಬೇಕು ಅಂತ ಸಪ್ತಾಹ ಅಂತ…

Read More