ಬೆಂಗಳೂರು : ದೊಡ್ಡಬಳ್ಳಾಪುರ ತಾಲೂಕಿನ ಅಪಕಾರನಹಳ್ಳಿಗೆ ನಲ್ಲಿ ಕೇವಲ 200 ರೂಪಾಯಿ ಸಾಲದ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಅಪಕಾರನಹಳ್ಳಿ ಗೇಟ್ನಲ್ಲಿ ದೊಣ್ಣೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮದಲ್ಲಿ ಈ ಒಂದು ಕೊಲೆ ನಡೆದಿದೆ.
ಟೀ ಕುಡಿದಿದ್ದ ಸಾಲದ ಹಣ ಕೇಳಿದ್ದಕ್ಕೆ ದೊಣ್ಣೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಲಾಗಿದೆ. ದ್ಯಾವಸಂದ್ರ ಗ್ರಾಮದ ಮಂಜುನಾಥ (40) ಕೊಲೆಯಾದ ದುರ್ದೈವಿ ಎಂದು ತಿಳಿದು ಬಂದಿದೆ. ಮೇ 12ರಂದು ಮುನಿಯಪ್ಪ ಬೆಳಿಗ್ಗೆ ಟೀ ಕುಡಿಯಲು ಬಂದು ಸಾಲ ಕೇಳಿದ್ದ. ಮತ್ತೆ ಸಾಲ ಕೊಡುವುದಿಲ್ಲ ಅಂತ ಟೀ ಅಂಗಡಿ ಮಾಲಿಕ ಮಂಜುನಾಥ ಮುನಿಯಪ್ಪನಿಗೆ ಹೇಳಿದ್ದಾನೆ. ಮಂಜುನಾಥ ಮತ್ತು ಮುನಿಯಪ್ಪ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ.
ಈ ವೇಳೆ ಮುನಿಯಪ್ಪ ಮಂಜುನಾಥನ ತಲೆಗೆ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿದ್ದಾನೆ . ಹಲ್ಲೆಯಿಂದ ಗಾಯಗೊಂಡು ಮಂಜುನಾಥ್ ಆಸ್ಪತ್ರೆಗೆ ದಾಖಲಾಗಿದ್ದ. ಈ ಹಿಂದೆ ತಾಯಿಗೂ ಚಾಕು ಇರಿದಿದ್ದ ಕೊಲೆ ಆರೋಪಿ ಮುನಿಯಪ್ಪ, ಜಾಮೀನಿನ ಮೇಲೆ ಹೊರಗಡೆ ಬಂದು ಟೀ ಅಂಗಡಿ ಮಾಲೀಕನ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿ ಮುನಿಯಪ್ಪನನ್ನು ದೊಡ್ಡಬೆಳವಂಗಲ ಠಾಣೆ ಪೋಲೀಸರು ಅರೆಸ್ಟ್ ಮಾಡಿದ್ದಾರೆ.








