ಬೆಂಗಳೂರು : ಬೆಂಗಳೂರಿನಲ್ಲಿ ಕಸದ ಹೆಸರಿನಲ್ಲಿ 36,000 ಕೋಟಿ ರೂಪಾಯಿ ಲೂಟಿ ಮಾಡಲಾಗಿದೆ. ಅಲ್ಲದೆ 36,000 ಕೋಟಿ ಹಗರಣದಲ್ಲಿ 10,000 ಕೋಟಿ ಕಿಕ್ ಬ್ಯಾಂಕ್ ಪಡೆದಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ ಗಂಭೀರವಾಗಿ ಆರೋಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಸದ ಹೆಸರಿನಲ್ಲಿ ಮಾಡಿರುವ ಲೂಟಿ ಬಗ್ಗೆ ದಾಖಲೆ ಸಂಗ್ರಹಿಸಿದ್ದು ಕಸದಲ್ಲಿ ಇಷ್ಟು ದೊಡ್ಡ ಹಗಿರಣ ದೇಶದ ಇತಿಹಾಸದಲ್ಲಿಯೇ ನಡೆದಿಲ್ಲ ಮುಂದಿನ 30 ವರ್ಷಕ್ಕೆ ಟೆಂಡರ್ ಕೊಟ್ಟು, ಹಗರಣ ಮಾಡಿದ್ದಾರೆ ಜೊತೆಗೆ 35 ವರ್ಷಕ್ಕೆ ವಿಸ್ತರಣೆ ಮಾಡಬಹುದು ದೆಹಲಿ ಕಂಪನಿಯಿಂದ ಹಗರಣ ನಡೆದಿದೆ ಕಾಂಗ್ರೆಸ್ ಹೈಕಮಾಂಡ್ ಮೂಲಕವೇ ಹಗರಣ ನಡೆಸಿದ್ದಾರೆ. ರಾಮ್ ಕಿ ಹೆಸರಿನ ಕಂಪನಿ ಈಗಾಗಲೇ ಕಪ್ಪು ಪಟ್ಟಿಗೆ ಸೇರಿದೆ ಕಪ್ಪು ಪಟ್ಟಿಗೆ ಸೇರಿದ ಕಂಪನಿಗೆ ಇವರು ಟೆಂಡರ್ ಕೊಟ್ಟಿದ್ದಾರೆ.
ಕಸ ಸಂಸ್ಕರಣೆ ಮತ್ತು ವಿಲೇವಾರಿಗೆ 380 ಕೋಟಿ ರೂಪಾಯಿ ಖರ್ಚು ಆಗುತ್ತೆ. ಪೌರಕಾರ್ಮಿಕರಿಗೆ 444 ಕೋಟಿ ರೂಪಾಯಿ ಸಂಬಳ ಕೊಡಲಾಗುತ್ತಿದೆ. ವಾರ್ಷಿಕವಾಗಿ ಒಟ್ಟು 1,344 ಕೋಟಿ ರೂಪಾಯಿ ಖರ್ಚು ಆಗುತ್ತದೆ ಆದರೆ ಈಗಿನ ಸರ್ಕಾರ ಹೊಸ ಪ್ರಸ್ತಾವನೆ ತಂದಿದೆ ತೆರಿಗೆ ಹಣವನ್ನು ಲೂಟಿ ಮಾಡುವ ಯೋಜನೆ ತಂದಿದ್ದಾರೆ ಬಲಾಢ್ಯ ಕಂಪನಿಗಳಿಗೆ ಕಸದ ಟೆಂಡರ್ ಕೊಡಲಾಗಿದೆ ಎಂದು ತಿಳಿಸಿದರು.








