Subscribe to Updates
Get the latest creative news from FooBar about art, design and business.
Author: kannadanewsnow05
ಮುಂಬೈ : ದೇಶದ ಆರ್ಥಿಕ ಕ್ಷೇತ್ರದಲ್ಲಿ ಇಂದು ಭಾರಿ ಬೆಳವಣಿಗೆಯಾಗಿದ್ದು, ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಒಂದು ಡಾಲರ್ ಬೆಲೆ 95 ರೂಪಾಯಿ ತಲುಪುವ ಮೂಲಕ ವಹಿವಾಟು ನಡೆಸುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತ, ಕಚ್ಚಾ ತೈಲ ಬೆಲೆ ಏರಿಕೆ ಮತ್ತು ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಿಂದ ಹಿಂದೆ ಸರಿಯುತ್ತಿರುವುದು ಈ ಕುಸಿತಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ. ರೂಪಾಯಿ ಮೌಲ್ಯ ಕುಸಿತದಿಂದಾಗಿ ಪೆಟ್ರೋಲ್, ಡೀಸೆಲ್ ಸೇರಿದಂತೆ ಆಮದು ಮಾಡಿಕೊಳ್ಳುವ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
ತುಮಕೂರು : ತುಮಕೂರಲ್ಲಿ ಬರ್ಬರವಾದ ಹತ್ಯೆ ನಡೆದಿದ್ದು, ಅತ್ತಿಗೆ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ ಅಣ್ಣನೊಬ್ಬ ಮದುವೆ ನಿಶ್ಚಯವಾಗಿದ್ದ ತಮ್ಮನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ತುಮಕೂರು ನಗರದ ಬನಶಂಕರಿಯಲ್ಲಿ ನಡೆದಿದೆ.ಸ್ಟಾಲಿನ್ (29) ಮೃತ ಯುವಕನಾಗಿದ್ದು, ಆತನ ಸಹೋದರ ನವೀನ್ ಮತ್ತು ತಂದೆ ಜಾನ್ ಪಾಲ್ ಎಂಬುವವರೇ ಆರೋಪಿಗಳಾಗಿದ್ದಾರೆ. ಆರೋಪಿ ಜಾನ್ ಪಾಲ್ಗೆ ಇಬ್ಬರು ಗಂಡುಮಕ್ಕಳಿದ್ದು, ಆ ಪೈಕಿ ನವೀನ್ ಮೊದಲ ಮಗನಾದರೆ ಮೃತ ಸ್ಟಾಲಿನ್ ಎರಡನೇ ಪುತ್ರ. ನವೀನ್ಗೆ ಅದಾಗಲೇ ಮದುವೆಯಾಗಿದ್ದು, ಆತನ ಹೆಂಡತಿ ತುಂಬು ಗರ್ಭಿಣಿ ಕೂಡ ಹೌದು. ಈ ನಡುವೆ ಸ್ಟಾಲಿನ್ಗೆ ಜನಿಫರ್ ಎಂಬ ಯುವತಿಯ ಜೊತೆಗೆ ಮದುವೆ ನಿಶ್ಚಯವಾಗಿತ್ತು. ವಿವಾಹ ತಯಾರಿಯ ನಡುವೆ ತಾನು ಮದುವೆಯಾಗಬೇಕಿದ್ದ ಸ್ಟಾಲಿನ್ ಮತ್ತು ಆತನ ಅತ್ತಿಗೆ ಅಂದರೆ ನವೀನ್ ಪತ್ನಿ ನಡುವೆ ಅಕ್ರಮ ಸಂಬಂಧ ಇರೋದಾಗಿ ಆಕೆ ಗಂಭೀರ ಆರೋಪ ಮಾಡಿದ್ದಳು. ದೇ ವಿಚಾರವಾಗಿ ಸ್ಟಾಲಿನ್ ಮನೆಯಲ್ಲಿ ಒಂದು ವಾರದಿಂದ ಗಲಾಟೆ ನಡೆಯುತ್ತಿತ್ತು. ಇದು ವಿಕೋಪಕ್ಕೆ ಹೋಗಿ…
ವಾರಾಣಸಿ : ವಿಮಾನದ ತುರ್ತು ನಿರ್ಗಮನದ ಬಾಗಿಲನ್ನುಎರಡು ಬಾರಿ ತೆರೆಯಲು ಯತ್ನಿಸಿದ ಆರೋಪದ ಮೇಲೆ ಬೆಂಗಳೂರಿನಿಂದ ಬಂದಿದ್ದ ಯುವಕನೊಬ್ಬನನ್ನು ವಾರಾಣಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಅದ್ಘಾನ್ ಎಂದು ಗುರುತಿಸಲಾಗಿದೆ. ಈತ ಶನಿವಾರ ರಾತ್ರಿ ಬೆಂಗಳೂರಿನಿಂದ ವಾರಾಣಸಿಗೆ ತೆರಳುತ್ತಿದ್ದ ‘ಇಂಡಿಗೋ’ (6E 185) ವಿಮಾನದ ಪ್ರಯಾಣಿಕನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ವಿಮಾನವು ಬೆಂಗಳೂರಿನಿಂದ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಅನ್ನಾನ್ ಏಕಾಏಕಿ ವಿಮಾನದ ಬಾಗಿಲು ತೆರೆಯಲು ಮುಂದಾಗಿದ್ದಾನೆ. ಇದನ್ನು ಕಂಡು ಬೆಚ್ಚಿಬಿದ್ದ ವಿಮಾನದ ಸಿಬ್ಬಂದಿ ಕೂಡಲೇ ಆತನನ್ನು ತಡೆದು, ಸಮಾಧಾನಪಡಿಸಿ ಸೀಟಿನಲ್ಲಿ ಕುಳ್ಳಿರಿಸಿದ್ದರು.ಇನ್ನು ಎರಡನೇ ಬಾರಿ ವಾರಾಣಸಿಯಲಿ ಲ್ಯಾಂಡ್ ಆದ ಮೇಲೆ ಬಾಗಿಲು ತೆರೆಯಲು ಯತ್ನಿಸಿದ್ದಾನೆ ಆ ವೇಳೆ ಸಿಬ್ಬಂದಿ ಆತನನ್ನು ತಡೆದಿದ್ದರೆ. ಪೊಲೀಸರ ವಿಚಾರಣೆ ವೇಳೆ ಆರೋಪಿ ವಿಚಿತ್ರ ಹೇಳಿಕೆ ನೀಡಿದ್ದಾನೆ. ನಾನು ಮೊದಲ ಬಾರಿಗೆ ವಿಮಾನ ಏರಿದ್ದೆ, ಆಕಾಶದಲ್ಲಿ ಹಾರುವಾಗ ವಿಪರೀತ ಆತಂಕ ಮತ್ತು ಗಾಬರಿಯಾಯಿತು ಅದಕ್ಕೆ ಹೊರಗೆ ಹೋಗಲು…
ಬೆಂಗಳೂರು : ಜಾಗತಿಕ ಯುದ್ಧದ ಸನ್ನಿವೇಶದಿಂದಾಗಿ ಕಚ್ಚಾ ವಸ್ತುಗಳ ಬೆಲೆ ಹಾಗೂ ಸಾರಿಗೆ ವೆಚ್ಚದಲ್ಲಿ ಏರಿಕೆಯಾಗಿದ್ದು, ಇದರ ನೇರ ಪರಿಣಾಮ ನಂದಿನಿ ಉತ್ಪನ್ನಗಳ ಮೇಲೆ ಬೀರುವ ಲಕ್ಷಣಗಳು ಕಾಣಿಸುತ್ತಿವೆ. ಹೈನುಗಾರಿಕೆ ವೆಚ್ಚ ಹೆಚ್ಚಾಗಿರುವುದರಿಂದ ಕೆಎಂಎಫ್ (KMF) ದರ ಪರಿಷ್ಕರಣೆಗೆ ಮುಂದಾಗುವ ಸಾಧ್ಯತೆಯಿದೆ ಎಂದು ಬಮುಲ್ ಅಧ್ಯಕ್ಷ ಡಿಕೆ ಸುರೇಶ್ ತಿಳಿಸಿದ್ದಾರೆ. ಹಾಲು ಒಕ್ಕೂಟಗಳಿಗೆ ಗ್ಯಾಸ್ ಬಳಕೆಯನ್ನು ಶೇ. 55ರಷ್ಟು ಕಡಿಮೆ ಮಾಡುವಂತೆ ಸೂಚಿಸಲಾಗಿದೆ. ಇಲ್ಲವಾದರೆ ಶೇ. 30ರಷ್ಟು ಹೆಚ್ಚುವರಿ ವೆಚ್ಚವನ್ನು ಭರಿಸಬೇಕಾಗುತ್ತದೆ. ಈ ಹೆಚ್ಚುವರಿ ವೆಚ್ಚ ಅಂತಿಮವಾಗಿ ಗ್ರಾಹಕರ ಮೇಲೆ ಬೀಳಲಿದ್ದು, ಇದು ನಂದಿನಿ ಹಾಲು ಉತ್ಪನ್ನಗಳ ಬೆಲೆ ಏರಿಕೆಗೆ ಕಾರಣವಾಗುತ್ತದೆ.ಸರ್ಕಾರ ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ತುಮಕೂರು : ತುಮಕೂರಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ನಿಯಂತ್ರಣ ತಪ್ಪಿ ಬೈಕ್ ಮೇಲಿಂದ ಬಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು ತಾಲೂಕಿನ ನಾಗವಲ್ಲಿ ಗ್ರಾಮದ ಬಳಿ ನಡೆದಿದೆ. ಮೃತ ಯುವಕರನ್ನು ರಂಗನಾಥಪುರದ ಪ್ರತಾಪ್ (20) ವಸಂತ್ (22) ಎಂದು ತಿಳಿದುಬಂದಿದೆ. ರಂಗನಾಥಪುರದಿಂದ ತುಮಕೂರು ಕಡೆಗೆ ಹೋಗುವಾಗ ಅಪಘಾತ ಸಂಭವಿಸಿದೆ. ತೀವ್ರವಾಗಿ ರಕ್ತಸ್ರಾವ ಲ್ ಆಗಿ ಸ್ಥಳದಲ್ಲೇ ಪ್ರಸಾದ್ ವಸಂತ್ ಸಾವನ್ನಪ್ಪಿದ್ದರೆ. ಹೆಬ್ಬುರೂ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಬೆಂಗಳೂರು : ಆರೋಪಿಗಳಿಗೆ ವಾಟ್ಸಪ್ ಮೂಲಕ ನೋಟಿಸ್ ಜಾರಿಯ ನಿಯಮವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಬಂಧನದಿಂದ ಬಿಡುಗಡೆ ಕೋರಿದ ವಂಚನೆ ಆರೋಪಿ ಅರ್ಜಿಯನ್ನು ಇದೇ ಸಂದರ್ಭದಲ್ಲಿ ವಜಾಗೊಳಿಸಿ ಆದೇಶ ಹೊರಡಿಸಿದೆ. ಹೈ ಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಈ ಒಂದು ಆದೇಶ ಹೊರಡಿಸಿದ್ದು, ಬಿಎನ್ಎಸ್ ಸೆಕ್ಷನ್ 35 ಪೊಲೀಸರಿಗೆ ಎಲೆಕ್ಟ್ರಾನಿಕ್ ನೋಟಿಸ್ ಜಾರಿಗೆ ಅವಕಾಶ ಇಲ್ಲ ಪೊಲೀಸ್ ವಿಚಾರಣೆಯ ನೋಟಿಸ್ ಖುದ್ದಾಗಿ ಜಾರಿಗೊಳಿಸಬೇಕು ನೋಟಿಸ್ ಜಾರಿಗೆ ಪೊಲೀಸರು ಯತ್ನಿಸಿದರು ಆರೋಪಿ ಸಿಕ್ಕಿಲ್ಲ. 40 ದಿನಗಳ ಕಾಲ ಪೊಲೀಸ್ ನೋಟಿಸ್ ಜಾರಿ ತಪ್ಪಿಸಿಕೊಂಡಿದ್ದಾನೆ. ಎಲೆಕ್ಟ್ರಾನಿಕ್ ನೋಟಿಸ್ ಜಾರಿಗೊಳಿಸಬಹುದು ಎಂಬ ವಾದ ಒಪ್ಪಲಾಗದು. ಬಂಧನದ ಕಾರಣಗಳನ್ನು ನೀಡಿ ಆರೋಪಿ ಬಂಧಿಸಲಾಗಿದೆ. ಹೀಗಾಗಿ ವಂಚನೆ ಬಿಡುಗಡೆ ಕೋರಿದ ಅರ್ಜಿಯನ್ನು ಹೈಕೋರ್ಟ್ ಮಜಾ ಗೊಳಿಸಿದೆ.
ಬೆಂಗಳೂರು : ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ (86) ಬೆಂಗಳೂರಿನಲ್ಲಿ ಇಂದು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಬೆಳಿಗ್ಗೆ ವಿಧಿವಶರಾಗಿದ್ದು, ಇಂದು ಸಂಜೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ. ಕಳೆದ ಕೆಲವು ಸಮಯದಿಂದ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು, ಸೋಮವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ಎಂದು ಕುಟುಂಬದ ಮೂಲಗಳು ತಿಳಿಸಿವೆ. ಸೋಮವಾರ ಸಂಜೆ ಬೆಂಗಳೂರಿನಲ್ಲಿಯೇ ಅವರ ಅಂತ್ಯಕ್ರಿಯೆ ನೆರವೇರಲಿದೆ ಎಂದು ತಿಳಿದುಬಂದಿದೆ. ಮೂಲತಃ ಕನ್ನಡಿಗರಾದ ಪ್ರಕಾಶ್ ರಾಜ್ ಅವರು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ವಿಶಿಷ್ಟ ನಟನೆಯ ಮೂಲಕ ಗುರುತಿಸಿಕೊಂಡಿದ್ದಾರೆ. ತಾಯಿಯ ಅಗಲಿಕೆಗೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ಸೂಚಿಸುತ್ತಿದ್ದಾರೆ.
ಶಿವಮೊಗ್ಗ : ಇಂದು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಏಕಾಏಕಿ ಕರಡಿ ಒಂದು ನುಗ್ಗಿದೆ ಶಿವಮೊಗ್ಗ ಏರ್ ಪೋರ್ಟ್ ನಲ್ಲಿ ಕೆಲವೊಂದು ಆತಂಕದ ವಾತಾವರಣ ನಿರ್ಮಾಣ ಆಗಿತ್ತು. ಏರ್ಪೋರ್ಟ್ ನಿಂದ ತಕ್ಷಣ ಸಿಬ್ಬಂದಿಗಳು ಕರಡಿಯನ್ನು ಹೊರಗಡೆ ಓಡಿಸಿದ್ದಾರೆ. ನಂತರ ಕರಡಿಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಸೇರಹಿಡಿದಿದ್ದಾರೆ. ಶಿವಮೊಗ್ಗ ಏರ್ಪೋರ್ಟ್, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ.
ಧಾರವಾಡ : ಜೈಲಿಗೆ ಹೋದರು ಪಾಗಲ್ ಪ್ರೇಮಿಯೊಬ್ಬ ಅಪ್ರಾಪ್ತ ಬಾಲಕಿಗೆ ವಿಡಿಯೋ ಕಾಲ್ ಮಾಡಿ ಕಿರುಕುಳ ನೀಡಿದ್ದಾನೆ. ಧಾರವಾಡ ಸೆಂಟ್ರಲ್ ಜೈಲಿನಿಂದಲೇ ಯುವಕ ವಿಡಿಯೋ ಕಾಲ್ ಮಾಡಿದ್ದಾನೆ. ಹೌದು ಧಾರವಾಡ ಸೆಂಟ್ರಲ್ ಜಲದಿಂದ ಅನ್ಯಕೋಮಿನ ಯುವಕನೊಬ್ಬ ಹಿಂದೂ ಅಪ್ರಾಪ್ತ ಬಾಲಕಿಗೆ ವಿಡಿಯೋ ಕಾಲ್ ಮಾಡಿ ಹಿಂಸೆ ನೀಡಿರುವ ಆರೋಪ ಕೇಳಿ ಬಂದಿದೆ. ಸದ್ಯ ಪೋಕ್ಸೋ ಕೇಸ್ ನಲ್ಲಿ ಜೈಲಿನಲ್ಲಿರುವ ಆರೋಪಿ ಕೋರ್ಟ್ ನಲ್ಲಿ ನನ್ನ ಪರವಾಗಿ ಮಾತನಾಡುವಂತೆ ತಾಕತ್ತು ಮಾಡಿದ್ದಾನೆ ಅಲ್ಲದೇ ಕೈ ಮೇಲೆ ಸಂತ್ರಸ್ತೆಯ ಹೆಸರು ಬರೆದುಕೊಂಡಿದ್ದು, ಜೈವಿನಲ್ಲಿ ಈಗಲೂ ಮೊಬೈಲ್ ಗಳು ಇತರೆ ವಸ್ತುಗಳು ಕೈದಿಗಳಿಗೆ ಸುಲಭವಾಗಿ ಸಿಗುತ್ತಿವೆ ಎನ್ನುವುದಕ್ಕೆ ಇದೀಗ ಮತ್ತೊಂದು ಉದಾಹರಣೆ ದೊರೆತಿದೆ. ಜೈಲಾಧಿಕಾರಿಗಳು ಹಾಗೂ ಜೈಲಿನ ಸಿಬ್ಬಂದಿಗಳ ಸಹಕಾರ ಮತ್ತು ಸಹಾಯವಿಲ್ಲದೆ ಇಂತಹ ಕೃತ್ಯ ನಡೆಯಲು ಸಾಧ್ಯವಿಲ್ಲ.
ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಕಮರ್ಷಿಯಲ್ ಟ್ಯಾಕ್ಸ್ ಡಿಸಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ವರದಿಯಾಗಿದೆ. ಹುಬ್ಬಳ್ಳಿಯಲ್ಲಿ ಕಮರ್ಷಿಯಲ್ ಟ್ಯಾಕ್ಸ್ ಡಿಸಿ ಭರತ್ ಹೆಗಡೆ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡಾಗಿ ಬಲೆಗೆ ಬಿದ್ದಿದ್ದಾರೆ. 6 ಲಕ್ಷ ರೂಪಾಯಿ ಲಂಚ ಪಡೆಯುವಾಗ ಕಮರ್ಷಿಯಲ್ ಟ್ಯಾಕ್ಸ್ ಡಿಸಿ ಭರತ್ ಹೆಗಡೆ ಲೋಕಾಯುಕ್ತ ಬೆಲೆಗೆ ಬಿದ್ದಿದ್ದಾರೆ. ಬೆಂಗಳೂರು ಲೋಕಾಯುಕ್ತ ಅಧಿಕಾರಿಗಳಿಂದ ಭರತ್ ಹೆಗಡೆ ಟ್ರ್ಯಾಕ್ ಮಾಡಲಾಗಿದ್ದು, ದೂರುದಾರರಿಗೆ 60 ಲಕ್ಷ ಹಣ ಕಟ್ಟುವಂತೆ ಡಿಸಿ ಭರತ್ ಹೆಗಡೆ ನೋಟಿಸ್ ನೀಡಿದ್ದ. ಹಣ ಕಡಿಮೆ ಮಾಡಬೇಕು ಅಥವಾ ಕಟ್ಟದ ಹಾಗೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಹತ್ತು ಲಕ್ಷ ಹಣ ನೀಡುವಂತೆ ಭರತ್ ಹೆಗಡೆ ಬೇಡಿಕೆ ಇಟ್ಟಿದ್ದ ಲಾರಿ ಮತ್ತು ಪೆಟ್ರೋಲ್ ಬಂಕ್ ಮಾಲಿಕನ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮುಂಗಡವಾಗಿ 6 ಲಕ್ಷ ರೂಪಾಯಿ ಲಂಚ ಪಡೆಯುವಾಗ ಭರತ್ ಹೆಗಡೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಗಿಬಿದ್ದಿದ್ದಾನೆ.














