Author: kannadanewsnow05

ಬೆಂಗಳೂರು : ಇತ್ತೀಚಿಗೆ ನಯಾರ ಪೆಟ್ರೋಲ್ ಬಂಕ್ ಪೆಟ್ರೋಲ್ ಡಿಸೇಲ್ ದರ ಹೆಚ್ಚಳ ಮಾಡಿತ್ತು. ಅದರ ಬೆನ್ನಲ್ಲೆ, ಇದೀಗ ಪೆಟ್ರೋಲ್, ಡೀಸೆಲ್ ಕೊರತೆ ವದಂತಿ ಬೆನ್ನಲ್ಲೇ ಖಾಸಗಿ ಸ್ವಾಮ್ಯದ ಶೆಲ್ ಪೆಟ್ರೋಲ್ ಬಂಕ್ ಜನತೆಗೆ ಮತ್ತೆ ಶಾಕ್ ಕೊಟ್ಟಿದೆ. ಕಳೆದ 15 ದಿನಗಳಲ್ಲಿ ಮೂರು ಬಾರಿ ದರ ಏರಿಕೆ ಮಾಡಿದ್ದ ಶೆಲ್ ಇದೀಗ ಮತ್ತೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದೆ. ಪ್ರೀಮಿಯಂ ಜೊತೆಗೆ ಸಾಮಾನ್ಯ ಪೆಟ್ರೋಲ್, ಡೀಸೆಲ್ ದರವೂ ಏರಿಕೆಯಾಗಿದೆ. ಸಾಮಾನ್ಯ ಪೆಟ್ರೋಲ್ ದರ ಮೊದಲು 106 ರೂ.ನಿಂದ 108.50 ರೂ. ಆಗಿತ್ತು. ನಾಲ್ಕು ದಿನದ ಹಿಂದೆ 112 ರೂ.ಗೆ ಏರಿಕೆ ಆಗಿತ್ತು. ಈಗ 119.8 ರೂ.ಗೆ ಏರಿಕೆಯಾಗಿದೆ. ಸಾಮಾನ್ಯ ಪೆಟ್ರೋಲ್ ದರ ಲೀಟರ್‌ಗೆ 7 ರೂ.ನಷ್ಟು ಹೆಚ್ಚಳವಾಗಿದೆ. ಪ್ರೀಮಿಯಂ ಪೆಟ್ರೋಲ್ ದರ ಲೀಟರ್‌ಗೆ 122.42 ರೂ.ನಿಂದ 129.8ಕ್ಕೆ ಏರಿಕೆಯಾಗಿದೆ.

Read More

ಬೆಂಗಳೂರು : ಇನ್ಮುಂದೆ ಪೊಲೀಸರು ನೋಟಿಸ್ ಅಥವಾ ಎಫ್‌ಐಆರ್ ಪ್ರತಿಯನ್ನು ವಾಟ್ಸ್ಆ್ಯಪ್‌ ಅಥವಾ ಇತರೆ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ನೀಡುವಂತಿಲ್ಲ, ಬದಲಾಗಿ ಭೌತಿಕವಾಗಿಯೇ ನೀಡಬೇಕು ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ. ಹೌದು ಏಳು ವರ್ಷಕ್ಕಿಂತ ಕಡಿಮೆ ಅವಧಿಯ ಶಿಕ್ಷೆ ವಿಧಿಸಬಹುದಾದ ಪ್ರಕರಣಗಳಲ್ಲಿ ಆರೋಪಿಯನ್ನು ಬಂಧಿಸುವ ಮುನ್ನ ನೋಟಿಸ್ ನೀಡುವುದು ಕಡ್ಡಾಯವಿದ್ದರೂ ಆರೋಪಿ ಉದ್ದೇಶಪೂರ್ವಕವಾಗಿ ಪೊಲೀಸ್ ನೋಟಿಸ್ ಸ್ವೀಕರಿಸದೆ ತಲೆಮರೆಸಿಕೊಂಡು ತನಿಖೆಗೆ ಅಸಹಕಾರ ತೋರಿದ ಸಂದರ್ಭದಲ್ಲಿ ನೇರವಾಗಿ ಬಂಧಿಸಬಹುದಾಗಿದೆ ಎಂದು ಹೇಳಿದೆ. ಹೂಡಿಕೆದಾರರಿಗೆ ಲಕ್ಷಾಂತರ ಹಣ ವಂಚಿಸಿದ ಪ್ರಕರಣದಲ್ಲಿ ತನಿಖೆಗೆ ಸಹಕರಿಸದೆ 40 ದಿನಗಳ ಕಾಲ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಕಡಲೂರು ನಿವಾಸಿ ಯೋಗ ಶಿಕ್ಷಕ ಆರ್‌.ಯುಗದೇವ್‌ (34) ಎಂಬುವರು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ತನ್ನ ವಿರುದ್ಧ ಹೊರಡಿಸಿದ ಬಂಧನ ಆದೇಶವನ್ನು ರದ್ದುಪಡಿಸಬೇಕು. ತನ್ನ ಬಂಧನವನ್ನು ಕಾನೂನು ಬಾಹಿರವೆಂದು ಘೋಷಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್‌ 35(3)ರ ಪ್ರಕಾರ ಪೊಲೀಸರು ತನಗೆ ವಿದ್ಯುನ್ಮಾನ ಅಥವಾ ಭೌತಿಕವಾಗಿ ನೋಟಿಸ್‌…

Read More

ಬೆಂಗಳೂರು : ಬಿಸಿಲಿನ ತಾಪಮಾನ ಹೆಚ್ಚಾಗಿರುವುದಿಂದ ಉತ್ತರ ಕರ್ನಾಟಕ ಭಾಗದ ನಾಲ್ಕು ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಸಮಯದಲ್ಲಿ ಬದಲಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಹೌದು ಬಿಸಿಲಿನ ತಾಪಮಾನದ ಹೆಚ್ಚಳ ಹಿನ್ನೆಲೆ ಕಿತ್ತೂರು ಕರ್ನಾಟಕದ ಎರಡು ಜಿಲ್ಲೆ, ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಸಮಯವನ್ನು ಬದಲಾವಣೆ ಮಾಡಲಾಗಿದೆ. 2026ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪ್ರಸ್ತುತ ಇರುವ ಕಚೇರಿ ವೇಳಾಪಟ್ಟಿಯ ಬದಲಾಗಿ ಬೆಳಿಗ್ಗೆ 8.00 ಗಂಟೆಯಿಂದ ಮಧ್ಯಾಹ್ನ 1.30 ನಿಗದಿ ಮಾಡಿ ಇಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರ ಹಿತ ದೃಷ್ಟಿಯಿಂದ ಈ ಕ್ರಮಕೈಗೊಳ್ಳಲಾಗಿದೆ. ಬೆಳಗಾವಿ ವಿಭಾಗದ ವಿಜಯಪುರ, ಬಾಗಲಕೋಟೆ ಹಾಗೂ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ನೌಕರರು ಕರ್ತವ್ಯ ನಿರ್ವಹಿಸುವಲ್ಲಿ ತೊಂದರೆ ಎದುರಿಸುತ್ತಿದ್ದಾರೆ. ಹೀಗಾಗಿ ಮಾನವೀಯ ದೃಷ್ಟಿಯಿಂದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಬೆಳಿಗ್ಗೆ 8ರಿಂದ ಮಾಧ್ಯಾಹ್ನ 1:30ರವರೆಗೆ ಕಚೇರಿಗಳಲ್ಲಿ ಕೆಲಸ ನಿರ್ವಹಿಸಲು ಸೂಚಿಸಲಾಗಿದೆ. ಈ ಎಲ್ಲಾ ಜಿಲ್ಲೆಗಳಲ್ಲಿನ…

Read More

ಬೆಂಗಳೂರು : ನಾಳೆ ರಾಜ್ಯದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ದಕ್ಷಿಣ ಒಳನಾಡು, ಕರಾವಳಿ ಮತ್ತು ಬೆಂಗಳೂರಿನಲ್ಲಿ ಗುಡುಗು ಸಹಿತ ಹಗುರ ಮಳೆಯನ್ನು ಅಂದಾಜಿಸಲಾಗಿದೆ. ಮುಂದಿನ ಕೆಲ ದಿನಗಳ ಕಾಲ ರಾಜ್ಯದ ಹಲವೆಡೆ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೌದು ನಾಳೆ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆ ಇದೆ. ಸುಮಾರು 12 ಜಿಲ್ಲೆಗಳಲ್ಲಿ ವರುಣನ ಆಗಮನದ ನಿರೀಕ್ಷೆ ಇದ್ದು, ರಾಜ್ಯದಲ್ಲಿ ಬಿಸಿಲು ಮತ್ತು ಮಳೆಯ ಮಿಶ್ರ ಹವಾಮಾನ ಕಂಡುಬರಲಿದೆ. ಕೆಲವು ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿದರೆ, ಮತ್ತೆ ಕೆಲವು ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಬಳ್ಳಾರಿ, ದಾವಣಗೆರೆ, ವಿಜಯನಗರ ಮತ್ತು ಚಿತ್ರದುರ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಹಾಗೆಯೇ ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಅಲ್ಲಲ್ಲಿ ಹಗುರ ಮಳೆಯಾಗುವ ನಿರೀಕ್ಷೆಯಿದೆ. ಶಿವಮೊಗ್ಗ, ಹಾಸನ ಮತ್ತು…

Read More

ಬೆಂಗಳೂರು : ಸಾಂಖ್ಯಿಕ ಮತ್ತು ಅಂಕಿ ಸಂಖ್ಯೆ ಸಚಿವ ಡಿ ಸುಧಾಕರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಚಿವ ಡಿ ಸುಧಾಕರ್ ಆರೋಗ್ಯದಲ್ಲಿ ಭಾರೀ ವ್ಯತ್ಯಯ ಆಗಿದ್ದು ಕೂಡಲೇ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ . ಇಂದು ಏಕಾಏಕಿ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿತು. ತಕ್ಷಣ ಅವರನ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಯಿತು. ವೈದ್ಯರು ಅವರಿಗೆ ಚಿಕಿತ್ಸೆ ಮುಂದುವರೆಸಿದ್ದಾರೆ. ಸದ್ಯ ತೀವ್ರ ನಿಗಾ ಘಟಕದಲ್ಲಿ ಡಿ ಸುಧಾಕರ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.ಈ ಕುರಿತು ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

Read More

ಬೆಂಗಳೂರು : ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಬೀದರನಲ್ಲಿ ಏಪ್ರಿಲ್ 11 ಮತ್ತು 12 ರಂದು ನಡೆಯಲಿರುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿಗಳ ವಿವರ ಇಂತಿದೆ. 1. ಜಿ. ನಾರಾಯಣಸ್ವಾಮಿ ಪ್ರಶಸ್ತಿ (ಅತ್ಯುತ್ತಮ ಗ್ರಾಮಾಂತರ ವರದಿ) ಯೋಗೇಶ್ ಮಲ್ಲೂರು, ವಾರ್ತಾಭಾರತಿ, ಬೆಂಗಳೂರು ಕೆ.ಎ.ಇಸ್ಮಾಯಿಲ್, ಶಕ್ತಿ, ಕೊಡಗು 2. ಪಟೇಲ್ ಭೈರಹನುಮಯ್ಯ ಪ್ರಶಸ್ತಿ (ಅತ್ಯುತ್ತಮ ಮಾನವೀಯ ವರದಿ) ಮಲ್ಲಯ್ಯ ಪೋಲಂಪಲ್ಲಿ, ಕನ್ನಡಪ್ರಭ, ಶಹಪೂರ, ಯಾದಗಿರಿ ರವಿಕುಮಾರ ಕಗ್ಗಣ್ಣನವರ, ಕನ್ನಡಮ್ಮ, ಧಾರವಾಡ 3. ಗಿರಿಧರ್ ಪ್ರಶಸ್ತಿ (ಅತ್ಯುತ್ತಮ ಅಪರಾಧ ವರದಿ) ಬಸವರಾಜ ಕಟ್ಟಿಮನಿ, ಕನ್ನಡಪ್ರಭ, ಹುಣಸಗಿ, ಯಾದಗಿರಿ. ಪಿ.ಕೆ.ರವಿಕುಮಾರ್, ವಿಜಯವಾಣಿ, ಮೈಸೂರು 4. ಬಿ. ಎಸ್. ವೆಂಕಟರಾಂ ಪ್ರಶಸ್ತಿ (ಅತ್ಯುತ್ತಮ ಸ್ಕೂಪ್ ವರದಿ) ಓದೇಶ ಸಕಲೇಶಪುರ, ಪ್ರಜಾವಾಣಿ, ರಾಮನಗರ ಮಹೇಶ್ ಮುನ್ನಯ್ಯನವರ ಮಠ,…

Read More

ಬೆಂಗಳೂರು : ಇತ್ತೀಚಿಗೆ ನಟಿ ರಮ್ಯಾ ಹಾಗೂ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಕಿಟಿಕೆಡಿಗಳು ಅಶ್ಲೀಲ ಮೆಸೇಜ್ ಕಳುಹಿಸಿದ ಪ್ರಕರಣ ನಡೆದಿತ್ತು. ಆದರೆ ಇದೀಗ ಗೃಹಸಚಿವ ಡಾ. ಜಿ.ಪರಮೇಶ್ವರ್ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಪ್ರಕಟಿಸಿದ ಆರೋಪದ ಮೇಲೆ, ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸರು IT Act ಹಾಗೂ BNS ಸೆಕ್ಷನ್ 299 ಅಡಿಯಲ್ಲಿ ಈ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹಿಂದೂ ಜಾಗೃತನಾಗು’ ಎಂಬ ಎಕ್ಸ್ ಖಾತೆಯಿಂದ ಈ ವಿವಾದಾತ್ಮಕ ಪೋಸ್ಟ್ ಮಾಡಲಾಗಿದೆ. ಪೋಸ್ಟ್‌ನಲ್ಲಿ ಗೃಹಸಚಿವರನ್ನು ಉದ್ದೇಶಿಸಿ ಆಕ್ಷೇಪಾರ್ಹ ಹೇಳಿಕೆ ನೀಡಲಾಗಿದೆ.ಪೋಸ್ಟ್ ಗೃಹಸಚಿವರ ಕುರಿತು ಮಾತ್ರವಲ್ಲದೆ, ಎರಡು ಧರ್ಮದವರ ನಡುವೆ ನಾಗರಿಕ ಭಾವನೆಗಳಿಗೆ ಉದ್ದೇಶಪೂರ್ವಕವಾಗಿ ಮತ್ತು ದ್ವೇಷಪೂರಿತವಾಗಿ ಆಘಾತವನ್ನುಂಟುಮಾಡುವ ಉದ್ದೇಶ ಹೊಂದಿದೆ ಎಂದು ಆರೋಪಿಸಲಾಗಿದೆ.

Read More

ತುಮಕೂರು : ಸಿದ್ದಗಂಗಾ ಮಠದಲ್ಲಿ ನಾಳೆ (ಏಪ್ರಿಲ್ 1) ಶ್ರೀ ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮ ಜಯಂತಿ ಕಾರ್ಯಕ್ರಮ ನಡೆಯಲಿದ್ದು, ರಾಷ್ಟ್ರಪತಿಗಳು ಪಾಲ್ಗೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 1,500 ಪೊಲೀಸ್ ಸಿಬ್ಬಂದಿಯೊಂದಿಗೆ ಕಟ್ಟುನಿಟ್ಟಿನ ಬಂದೋಬಸ್ತ್ ಮಾಡಲಾಗಿದೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಲಿಕಾಪ್ಟರ್ ಬೆಳಿಗ್ಗೆ ಇಲ್ಲಿನ ಹೆಲಿಪ್ಯಾಡ್​ನಲ್ಲಿ ಲ್ಯಾಂಡ್ ಆಗಲಿದೆ. ಅಲ್ಲಿಂದ ಸಿದ್ದಗಂಗಾ ಮಠಕ್ಕೆ ಹೊರಟು ಕಾರ್ಯಕ್ರಮ ಮುಗಿಸಿ ಬಂದಿರುವ ಹೆಲಿಕಾಪ್ಟರ್​ನಲ್ಲೇ ಅವರು ವಾಪಸ್ ತೆರಳಲಿದ್ದಾರೆ ಎಂದರು. ಬೆಳಗ್ಗೆ 10ರಿಂದ 11 ಗಂಟೆಯವರೆಗೆ ಹಾಗೂ 11:30ರಿಂದ 12:30 ಯವರೆಗೆ ಸಂಚಾರ ನಿರ್ಬಂಧಗಳಿರುತ್ತವೆ. ಈ ಸಮಯದಲ್ಲಿ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು. ಬಿ.ಹೆಚ್. ರೋಡ್ ಮತ್ತು ಬಟ್ವಾಡಿಯಿಂದ ಎನ್​ಹೆಚ್​ ಫೋರ್ ಸರ್ಕಲ್​ತನಕ ಎನ್​ಹೆಚ್ ರೋಡ್, ಶಿರಾ ರೋಡ್ ಮತ್ತು ಸಿದ್ದಗಂಗಾ ಮಠದ ಆವರಣದಲ್ಲಿ ಬಂದೋಬಸ್ತ್ ಇರುತ್ತದೆ. ಸಾರ್ವಜನಿಕರು ನಾವು ಹೇಳಿರುವ ಸಮಯದಲ್ಲಿ ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

Read More

ಬೆಂಗಳೂರು : ವ್ಯವಸ್ಥಾಪಕ ನಿರ್ದೇಶಕ ವಿ. ಮುನಿಯಪ್ಪ ದೋಷಿ ಎಂದು ತೀರ್ಪು ಪ್ರಕಟವಾಗಿದೆ. ಕರ್ನಾಟಕ ಲೋಕಾಯುಕ್ತದಿಂದ ಮಹತ್ವದ ತೀರ್ಪು ಪ್ರಕಟವಾಗಿದ್ದು ಕರ್ನಾಟಕ ಕೌನ್ಸಿಲ್ ಫಾರ್ ಟೆಕ್ನಿಕಲ್ ವ್ಯವಸ್ಥಾಪಕ ನಿರ್ದೇಶಕ ಮುನಿಯಪ್ಪ ಬೆಂಗಳೂರಿನ ಬಸವಭವನದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಮುನಿಯಪ್ಪಗೆ ಇದೀಗ ಮೂರು ವರ್ಷ ಕಠಿಣ ಕಾರ್ಯ ಗ್ರಹ ಶಿಕ್ಷೆ ಹಾಗೂ ನಾಲ್ಕು ಪಾಯಿಂಟ್ ಐದು ಕೋಟಿ ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ ವಿ ಮುನಿಯಪ್ಪ ವಿರುದ್ಧ 2014ರಲ್ಲಿ ಭ್ರಷ್ಟಾಚಾರ ಪ್ರಕರಣ ದಾಖಲಾಗಿತ್ತು ಆದಾಯಕ್ಕೂ ಮೀರಿ ಹೆಚ್ಚು ಹಣ ಸಂಪಾದನೆ ಮಾಡಿರುವುದು ಬಹಿರಂಗವಾಗಿದೆ ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ಬರೆಯಲಾಗಿದೆ ಆರು ತಿಂಗಳು ಹೆಚ್ಚುವರಿ ಶಿಕ್ಷೆ ವಿಧಿಸಲಾಗುತ್ತದೆ ಎಂದು ಕರ್ನಾಟಕ ಲೋಕಾಯುಕ್ತ ಮಹತ್ವದ ತೀರ್ಪು ಹೊರಡಿಸಿದೆ.

Read More

ವಿಜಯಪುರ : ವಿಜಯಪುರ ಜಿಲ್ಲೆಯಲ್ಲಿ ಘೋರವಾದ ಘಟನೆಯೊಂದು ನಡೆದಿದ್ದು, ಲವ್ ಬ್ರೇಕಪ್ ಆಗಿದ್ದಕ್ಕೆ ಬಸ್ಸಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕನ್ನೊಳ್ಳಿ ಟೋಲ್‌ಗೇಟ್ ಬಳಿ ಘಟನೆ ನಡೆದಿದೆ. ಮೃತ ಯುವಕನನ್ನು ಸಿಂದಗಿ ಪಟ್ಟಣದ ಅಲ್ಲಾಪುರ ಲೇಔಟ್‌ನ ಯವಕ ಅಭಿಷೇಕ ಸೈಬಗೌಡ ನಾಗರಳ್ಳಿ (19) ಎಂದು ತಿಳಿದುಬಂದಿದೆ. ಕನ್ನೊಳ್ಳಿ ಕ್ರಾಸ್ ಬಳಿ ಹೋಗುತ್ತಿದ್ದ ಸರ್ಕಾರಿ ಬಸ್‌ಗೆ ಮೃತ ಅಭಿಷೇಕ ತನ್ನ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಬಂದು ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯಾದ ರಭಸಕ್ಕೆ ಬೈಕ್‌ಗೆ ಬೆಂಕಿ ಹತ್ತಿದೆ. ಬಳಿಕ ಬಸ್ಸಿಗೂ ಬೆಂಕಿ ಆವರಿಸಿಕೊಂಡಿದ್ದು, ಭಾಗಶಃ ಸುಟ್ಟು ಕರಕಲಾಗಿದೆ. ಪರಿಣಾಮ ಬೈಕ್ ಸವಾರ ಸಜೀವ ದಹನವಾಗಿದ್ದಾನೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಪ್ರಯಾಣಿಕರು ಬಸ್ಸಿನಿಂದ ಕೆಳಗಿಳಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಸೂಸೈಡ್ ಮಾಡಿಕೊಳ್ಳಲು ತನ್ನ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಬಂದು ಬಸ್‌ಗೆ ಡಿಕ್ಕಿ ಹೊಡೆದಿದ್ದಾನೆ. ಆತ್ಮಹತ್ಯೆಗೂ ಮುನ್ನ ಮೃತ ಅಭಿಷೇಕ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾನೆ. ಅದರಲ್ಲಿ…

Read More