ವಿಜಯಪುರ : ಜಿಲ್ಲೆಯಲ್ಲಿ ಅಕಾಲಿಕ ಮಳೆಗೆ ಭಾರಿ ಅವಾಂತರ ಸೃಷ್ಟಿಯಾಗಿದ್ದು, ಜಿಲ್ಲೆಯ ನಿಡಗುಂದಿ ಪಟ್ಟಣದ ಸುತ್ತಮುತ್ತ ನಿನ್ನೆ ಧಾರಾಕಾರವಾಗಿ ಮಳೆ ಸುರಿದಿದೆ. ಧಾರಾಕಾರ ಮಳೆಗೆ ತೋಟದ ಮನೆಗೆ ಹಾನಿಯಾಗಿದೆ. ಶಿವಪ್ಪ ಹುಗ್ಗಿ ಎಂಬವರಿಗೆ ಸೇರಿದ ತೋಟದಲ್ಲಿ ಒಂದು ಘಟನೆ ನಡೆದಿದೆ.
ಶೀಟ್ ಮನೆಯ ಮೇಲೆ ಬೇರುಸಮಿತ ಬೃಹತ್ ಉರುಳಿ ಬಿದ್ದಿದೆ. ಮನೆಯೊಳಗೆ ಇದ್ದ ನಾಲ್ವರನ್ನು ತಕ್ಷಣ ರಕ್ಷಣೆ ಮಾಡಿದ್ದಾರೆ. ಮರ ಬಿದ್ದ ಪರಿಣಾಮ ಪರಸಪ್ಪ ಹುಗ್ಗಿ ಎನ್ನುವ ಬಾಲಕನಿಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯಲ್ಲಿ ಇದ್ದ ಪಡಿತರ ಧಾನ್ಯ ಗೃಹ ಉಪಯೋಗಿ ವಸ್ತುಗಳಿಗೆ ಹಾನಿಗಳಾಗಿದೆ. ಸ್ಥಳಕ್ಕೆ ಪೊಲೀಸರು ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.








