Subscribe to Updates
Get the latest creative news from FooBar about art, design and business.
Author: ಸುರೇಶ್
"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು
ಬೆಂಗಳೂರು : ಬೆಂಗಳೂರಿನಲ್ಲಿ ವಾಸಿಸುತ್ತಿರುವ ಎಲ್ಲರಿಗೂ ಈಗ ಮತ್ತೊಂದು ಬೆಲೆ ಏರಿಕೆಯ ಭೀತಿ ಎದುರಾಗಿದೆ. ಕೇಂದ್ರ ಸರ್ಕಾರವು ಆಟೋ ಎಲ್.ಪಿ.ಜಿ ದರವನ್ನು ಪ್ರತಿ ಲೀಟರ್‌ಗೆ ಬರೋಬ್ಬರಿ 5.73 ರೂಪಾಯಿಗಳಷ್ಟು ದಿಢೀರ್ ಏರಿಕೆ ಮಾಡಿದೆ. ಸರ್ಕಾರದ ಈ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿರುವ ಆಟೋ ಚಾಲಕರು, ಆಟೋ ಪ್ರಯಾಣ ದರವನ್ನು ಹೆಚ್ಚಿಸುವಂತೆ ರಾಜ್ಯ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಲಾರಂಭಿಸಿದ್ದಾರೆ. ಇದರಿಂದಾಗಿ ದಿನನಿತ್ಯ ಆಟೋಗಳಲ್ಲಿ ಸಂಚರಿಸುವ ಬೆಂಗಳೂರಿನ ಲಕ್ಷಾಂತರ ಪ್ರಯಾಣಿಕರಿಗೆ ಆಟೋ ಚಾರ್ಜ್ ಏರಿಕೆಯ ಬಿಸಿ ಮುಟ್ಟುವ ಸಾಧ್ಯತೆ ದಟ್ಟವಾಗಿದೆ. ಆಟೋ ಚಾಲಕರ ಪ್ರಮುಖ ಬೇಡಿಕೆಗಳೇನು? ಸದ್ಯ ಬೆಂಗಳೂರಿನಲ್ಲಿ ಆಟೋ ಕನಿಷ್ಠ ದರ (ಮೊದಲ 2 ಕಿಲೋಮೀಟರ್‌ಗೆ) 36 ರೂ. ನಿಗದಿಪಡಿಸಲಾಗಿದೆ. ಆ ನಂತರದ ಪ್ರತಿ ಕಿಲೋಮೀಟರ್‌ಗೆ 18 ರೂ. ಇದೆ. ಆದರೆ, ಈಗ ಗ್ಯಾಸ್ ಬೆಲೆ ವಿಪರೀತವಾಗಿ ಏರಿಕೆಯಾಗಿರುವುದರಿಂದ ಈ ದರದಲ್ಲಿ ಆಟೋ ಓಡಿಸಿದರೆ ನಮಗೆ ಯಾವುದೇ ಲಾಭವಿಲ್ಲ. ಹೀಗಾಗಿ ಕನಿಷ್ಠ ದರವನ್ನು 50 ರೂ.ಗಳಿಗೆ ಹಾಗೂ ನಂತರದ ಪ್ರತಿ ಕಿಲೋಮೀಟರ್‌ಗೆ 25…
ನವದೆಹಲಿ : ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಸರಣಿ ದಾಳಿಗಳು ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿವೆ. ಇತ್ತೀಚೆಗಷ್ಟೇ ಹೋಟೆಲ್ ಒಂದರಲ್ಲಿ ಸಭೆ ನಡೆಸುತ್ತಿದ್ದಾಗ ಅವರ ಮೇಲೆ ಹಲ್ಲೆಗೆ ಪ್ರಯತ್ನ ನಡೆದ ಬೆನ್ನಲ್ಲೇ, ಇದೀಗ ವೈಟ್ ಹೌಸ್‌ನಲ್ಲಿ (ಶ್ವೇತಭವನ) ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಯುವಕನೊಬ್ಬ ಗುಂಡಿನ ದಾಳಿ ನಡೆಸಿರುವ ಆತಂಕಕಾರಿ ಘಟನೆ ವರದಿಯಾಗಿದೆ. ಸಭೆಯ ಮಧ್ಯೆ ನುಗ್ಗಿದ ಅಪರಿಚಿತ: ಡೊನಾಲ್ಡ್ ಟ್ರಂಪ್ ಅವರು ಪ್ರಮುಖ ಮುಖಂಡರೊಂದಿಗೆ ಶ್ವೇತಭವನದ ಆವರಣದಲ್ಲಿ ಸಭೆ ನಡೆಸುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಯುವಕನೊಬ್ಬ ಭದ್ರತಾ ಕವಚವನ್ನು ಭೇದಿಸಿ ಒಳನುಗ್ಗಲು ಪ್ರಯತ್ನಿಸಿದ್ದಾನೆ. ಸಭೆ ನಡೆಯುತ್ತಿದ್ದ ಸ್ಥಳದ ಸಮೀಪದಲ್ಲೇ ಆತ ಗುಂಡು ಹಾರಿಸಿದ್ದು, ಕ್ಷಣಾರ್ಧದಲ್ಲಿ ಅಲ್ಲಿ ನೆರೆದಿದ್ದವರು ಭಯಭೀತರಾಗಿದ್ದಾರೆ. ಅದೃಷ್ಟವಶಾತ್, ಟ್ರಂಪ್ ಅವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಭದ್ರತಾ ಸಿಬ್ಬಂದಿಯ ಕ್ಷಿಪ್ರ ಕಾರ್ಯಾಚರಣೆ: ಗುಂಡಿನ ಶಬ್ದ ಕೇಳಿಸುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಅಮೆರಿಕದ ಸೀಕ್ರೆಟ್ ಸರ್ವಿಸ್ ಸಿಬ್ಬಂದಿಗಳು ಮತ್ತು ಭದ್ರತಾ ಪಡೆಯವರು ತಕ್ಷಣವೇ ಟ್ರಂಪ್ ಅವರನ್ನು ಸುರಕ್ಷಿತ…
ಬೆಂಗಳೂರು : ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಚರ್ಚೆ ನಡೆದಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ಪವರ್ ಫೈಟ್ ಗೆ ತೆರೆ ಎಳೆಯಲು ಹೈಕಮಾಂಡ್ ಮುಹೂರ್ತ ಫಿಕ್ಸ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮೇ 15ರ ಒಳಗೆ ದೆಹಲಿಗೆ ಸಿಎಂ ಸಿದ್ದರಾಮಯ್ಯ ಮತ್ತು ಕರೆದು ನಾಯಕತ್ವ ಬದಲಾವಣೆ ಕುರಿತು ಹೈಕಮಾಂಡ್ ಚರ್ಚೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೌದು ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಹಾಗೂ ಸಂಪುಟ ಪುನಾರಚನೇ ವಿಚಾರ ಕುರಿತು ಭಾರಿ ಚರ್ಚೆ ನಡೆಯುತ್ತಿತ್ತು. ಇದೀಗ ಮೇ 15ರ ಆಸುಪಾಸಿನಲ್ಲಿ ಹೈಕಮಾಂಡ್ ಚರ್ಚೆ ನಡೆಸುವ ಸಾಧ್ಯತೆ ಇದೆ. ಮೇ 10ರೊಳಗಾಗಿ ಕೇರಳ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಮುಗಿಸಲು ತೀರ್ಮಾನಿಸಿದ್ದು. ಮೇ 15ರ ಆಸುಪಾಸಿನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ದೆಹಲಿಗೆ ಕರೆದು ನಾಯಕತ್ವ ಬದಲಾವಣೆ ವಿಚಾರವಾಗಿ ಚರ್ಚಿಸಲಿದ್ದಾರೆ ಎಂದು ಇದೀಗ ಬಲ್ಲಮೂಲಗಳಿಂದ ತಿಳಿದುಬಂದಿದೆ.
ಬೀದರ್: ನಗರದ ಹೃದಯಭಾಗದಲ್ಲಿರುವ ಜೈಲ್ ಕಾಲೋನಿಯ ಕಾಮತ್ ಹೋಟೆಲ್ ಸಮೀಪ ಮಂಗಳವಾರ ಮಧ್ಯಾಹ್ನ ಅಮೃತ ಯೋಜನೆಯ ಗ್ಯಾಸ್ ಪೈಪ್‌ಲೈನ್ ದಿಢೀರ್ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡಿದೆ. ರಸ್ತೆಯ ಪಕ್ಕದಲ್ಲೇ ಅಳವಡಿಸಲಾಗಿದ್ದ ಪೈಪ್‌ನಿಂದ ಗ್ಯಾಸ್ ಲೀಕ್ ಆಗುತ್ತಿದ್ದಂತೆ ದೊಡ್ಡ ಮಟ್ಟದ ಜ್ವಾಲೆ ಎದ್ದಿದ್ದು, ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳ ಮಾಲೀಕರು ಹಾಗೂ ಸಾರ್ವಜನಿಕರು ಭಯಭೀತರಾಗಿ ಓಡಿದ ಘಟನೆ ನಡೆಯಿತು. ಕಾಮಗಾರಿ ವೇಳೆ ಎಡವಟ್ಟು? ಪ್ರಾಥಮಿಕ ಮಾಹಿತಿಯ ಪ್ರಕಾರ, ಸದರಿ ಪ್ರದೇಶದಲ್ಲಿ ನಡೆಯುತ್ತಿದ್ದ ಯಾವುದೋ ಕಾಮಗಾರಿಯ ವೇಳೆ ಪೈಪ್‌ಲೈನ್‌ಗೆ ಹಾನಿಯಾಗಿರಬಹುದು ಎಂದು ಶಂಕಿಸಲಾಗಿದೆ. ಪೈಪ್ ಒಡೆದ ಪರಿಣಾಮ ಅನಿಲವು ಅಧಿಕ ಒತ್ತಡದೊಂದಿಗೆ ಹೊರಬರಲಾರಂಭಿಸಿತು. ಈ ವೇಳೆ ಸಣ್ಣ ಕಿಡಿ ತಗುಲಿದ್ದೇ ತಡ, ಬೆಂಕಿ ಧಗಧಗನೆ ಉರಿಯಲು ಪ್ರಾರಂಭಿಸಿತು. ಹೋಟೆಲ್ ಮತ್ತು ವಾಣಿಜ್ಯ ಸಂಕೀರ್ಣಗಳಿರುವ ಪ್ರದೇಶವಾಗಿದ್ದರಿಂದ ಜನಸಂದಣಿ ಹೆಚ್ಚಾಗಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತ್ವರಿತ ಕಾರ್ಯಾಚರಣೆ ಘಟನೆ ತಿಳಿಯುತ್ತಿದ್ದಂತೆ ಎಚ್ಚೆತ್ತ ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ದಳ ಹಾಗೂ ಗ್ಯಾಸ್ ಪೈಪ್‌ಲೈನ್ ನಿರ್ವಹಣಾ ಸಿಬ್ಬಂದಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ…
ಧಾರವಾಡ: ಕಳೆದ ಕೆಲ ದಿನಗಳ ಹಿಂದೆ ನಡೆದಿದ್ದ ಬೌದ್ಧ ಸನ್ಯಾಸಿ ಕೊಲೆ ಪ್ರಕರಣವನ್ನು ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಭೇದಿಸಿದ್ದಾರೆ. ಎಪ್ರಿಲ್ 29 ರಂದು ಧಾರವಾಡದ ಹಳಿಯಾಳ ರಸ್ತೆಯಲ್ಲಿ ಸನ್ಯಾಸಿಯ ಶವ ಪತ್ತೆಯಾಗಿತ್ತು. ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಕಳೆದ ಏಪ್ರಿಲ್ 29ರಂದು ಧಾರವಾಡದ ಹಳಿಯಾಳ ರಸ್ತೆಯ ನಿರ್ಜನ ಪ್ರದೇಶದಲ್ಲಿ ಬೌದ್ಧ ಸನ್ಯಾಸಿಯೊಬ್ಬರ ಶವ ಪತ್ತೆಯಾಗಿತ್ತು. ಮೃತದೇಹದ ಮೇಲೆ ತೀವ್ರ ಸ್ವರೂಪದ ಗಾಯಗಳಾಗಿದ್ದರಿಂದ ಇದು ವ್ಯವಸ್ಥಿತವಾಗಿ ನಡೆದ ಕೊಲೆ ಎಂಬ ಅನುಮಾನ ವ್ಯಕ್ತವಾಗಿತ್ತು. ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿದ್ದರು. ಪೊಲೀಸರು ತಾಂತ್ರಿಕ ದಾಖಲೆಗಳು ಮತ್ತು ಖಚಿತ ಮಾಹಿತಿಗಳನ್ನು ಆಧರಿಸಿ ಕಾರ್ಯಾಚರಣೆ ನಡೆಸಿದಾಗ, ಆರೋಪಿಗಳು ನೆರೆರಾಜ್ಯ ಮಹಾರಾಷ್ಟ್ರದಲ್ಲಿ ಅಡಗಿರುವ ಸುಳಿವು ಲಭ್ಯವಾಗಿತ್ತು. ತಕ್ಷಣವೇ ಕೊಲ್ಹಾಪುರಕ್ಕೆ ತೆರಳಿದ ಧಾರವಾಡ ಗ್ರಾಮೀಣ ಪೊಲೀಸರ ತಂಡ, ಅಲ್ಲಿ ಅಡಗಿದ್ದ ಮೂವರು ಪ್ರಮುಖ ಆರೋಪಿಗಳನ್ನು ಸಿನಿಮೀಯ ಶೈಲಿಯಲ್ಲಿ…
ಬೆಂಗಳೂರು : ತಮಿಳುನಾಡಿನಲ್ಲಿ ನಟ ವಿಜಯ್ ಅವರು ಮೊದಲ ಬಾರಿ ಇತಿಹಾಸ ನಿರ್ಮಾಣ ಮಾಡಿದ್ದು, ಮೊದಲ ಪ್ರಯತ್ನದಲ್ಲಿ ಅವರ ನೇತೃತ್ವದ ಟಿ ವಿ ಕೆ ಪಕ್ಷ 108 ಸ್ಥಾನಗಳನ್ನು ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದೆ. ಈ ಒಂದು ವಿಚಾರಕ್ಕೆ ಸಂಬಂಧಪಟ್ಟಂತೆ ಸ್ಯಾಂಡಲ್ ವುಡ್ ಹಿರಿಯ ನಟ ಶಿವರಾಜ್ ಕುಮಾರ್ ನಟ ವಿಜಯ ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಇದು ನಿಜವಾಗಿಯೂ ನಿಮಗೆ ಸದಾ ಜನ ಆಶೀರ್ವಾದದ ಜಯ. ತೀವ್ರ ಟೀಕೆಗಳ ಸಮಯದಲ್ಲಿ ಮೌನವಾಗಿದ್ದು ನಿಮ್ಮ ಕೆಲಸವೇ ಮಾತನಾಡಲು ಬಿಡುವುದು ಅದೇ ದೊಡ್ಡ ಜಯ. ತಮಿಳುನಾಡಿನ ಜನತೆಗೆ ನೀಡಿದ ಎಲ್ಲಾ ಭರವಸೆಗಳನ್ನು ನೀವು ಈಡೇರಿಸಿ. ಪತ್ರಕರ್ತರೊಂದಿಗೆ ನಡೆದ ಒಂದು ಸಂಭಾಷಣೆಯಲ್ಲಿ ನಾನು ಹಾಸ್ಯವಾಗಿ ಟಿವಿಕೆ ಟ್ರೈ ವಿಜಯ್ ಆಸ್ ಕಿಂಗ್ ಅಂತ ಹೇಳಿದ್ದೆ. ಇಂದು ನೀವು ನಿಜವಾಗಿಯೂ ರಾಜನಂತೆ ಎದ್ದು ನಿಂತಿದ್ದೀರಿ. ತಮಿಳುನಾಡು ಜನತೆಗೆ ನೀಡಿದ ಎಲ್ಲಾ ಭರವಸೆಗಳನ್ನು ನೀವು ಈಡೇರಿಸಿ ಮತ್ತು ಸದಾ ಅಭಿವೃದ್ಧಿ ಮುಂದುವರೆಯಲಿ ಎಂದು ಅಭಿನಂದನೆ ತಿಳಿಸಿದ್ದಾರೆ
ಬೆಂಗಳೂರು : ಕರ್ನಾಟಕದ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ನ ಇಬ್ಬರು ಅಭ್ಯರ್ಥಿಗಳು ಭರ್ಜರಿ ಜಯಗಳಿಸಿದ್ದಾರೆ. ಅಲ್ಲದೆ ಶೃಂಗೇರಿ ಉಪಚುನಾವಣೆಯಲ್ಲಿ ಅಕ್ರಮ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಬೆಂಗಳೂರಿನ ಗೃಹಕಚೇರಿ ಕೃಷ್ಣಾದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜೇಗೌಡರಿಗೆ 58602 ಮತಗಳು ಇದ್ದವು. ಪೋಸ್ಟಲ್ ನಲ್ಲಿ 589 ಮತಗಳು ಇದ್ದವು. ಅದೇ ರೀತಿಯಾಗಿ ಜೀವರಾಜ್ ಅವರಿಗೆ 58278 ಮತಗಳು ಇದ್ದವು . ಪೋಸ್ಟಲ್ ನಲ್ಲಿ 692 ಮತಗಳು ಇದ್ದವು. 201 ಮತಗಳಿಂದ ಶೃಂಗೇರಿ ಕ್ಷೇತ್ರದಲ್ಲಿ ರಾಜೇಗೌಡ ಗೆದ್ದಿದ್ದರು. ಕೋರ್ಟ್ ಆದೇಶದ ಮೇಲೆ ಮತ ಎಣಿಕೆ ಸಹ ಆಯ್ತು. ಮರುಮತ ಎಣಿಕೆಯಲ್ಲಿ ರಾಜೇಗೌಡಗೆ 255 ಮತಗಳು ಕಡಿಮೆ, ಮರುಮತ ಎಣಿಕೆಯಲ್ಲಿ ಜೀವರಾಜ್ ಗೆ 2 ಮತಗಳು ಕಡಿಮೆ ಬಂದಿವೆ. ಇದನ್ನು ನೋಡಿದಾಗ ವೋಟ್ ಚೋರಿ ಆಗಿರುವುದು ಪತ್ತೆಯಾಗಿದೆ. ಮರುಮದ ಎಣಿಕೆಯಲ್ಲಿ ವೋಟು ಚೂರಿ ಮಾಡಲಾಗಿದೆ ಇದು ವೋಟು ಚೂರಿ ಅಷ್ಟೇ ಅಲ್ಲ ವೋಟ್ ಡಕಾಯಿತಿ ಮಾಡಲಾಗಿದೆ…
ಬೆಂಗಳೂರು : ಶೃಂಗೇರಿ ಕ್ಷೇತ್ರದ ಮರುಮತ ಎಣಿಕೆಯಲ್ಲಿ ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣ ರದ್ದು ಕೋರಿ ಡಿ ಎನ್ ಜೀವರಾಜ್ ಸಲ್ಲಿಸಿರುವ ಅರ್ಜಿ ಇಂದು ಹೈಕೋರ್ಟ್ ಅಲ್ಲಿ ವಿಚಾರಣೆ ನಡೆಯಿತು. ವಿಚಾರಣೆ ನಡೆಸಿದ ಹೈಕೋರ್ಟ್ ಮೇ 7ರವರೆಗೆಬಿಜೆಪಿಯ ಡಿಎನ್ ದೇವರಾಜ್ ಅವರ ವಿರುದ್ಧ ದಾಖಲಾದ ಎಫ್ಐಆರ್ ಗೆ ತಡೆಯಾಜ್ಜೆ ನೀಡಿತು. 170 ಮತಗಳನ್ನು ತಿದ್ದುಪಡಿಯಾಗಿದೆ ಎಂದು ಸುಧೀರ್ ಕುಮಾರ್ ಮುರಳಿ ದೂರು ನೀಡಿದ್ದರು. ದೂರು ಆಧರಿಸಿ ನಗರ ಠಾಣೆ ಪೊಲೀಸರು ದಾಖಲಿಸಿದ್ದರು. ಗೊಂದಲಗಳಿದ್ದರೆ ಚುನಾವಣಾ ತಕರಾರು ಅರ್ಜಿಯಲ್ಲೇ ಉಲ್ಲೇಖಿಸಬೇಕಿತ್ತು. ಸಂಬಂಧಪಟ್ಟ ನ್ಯಾಯಮೂರ್ತಿಗಳು ಸೂಕ್ತ ಆದೇಶ ನೀಡುತ್ತಿದ್ದರು. ರಾಜಕೀಯ ಒತ್ತಡದಿಂದ ದೂರು ದಾಖಲಿಸುವುದು ಸರಿಯಲ್ಲ ಹೀಗಾದರೆ ಯಾವ ಅಧಿಕಾರಿಯು ಸ್ವತಂತ್ರವಾಗಿ ಕೆಲಸ ಮಾಡಲಾಗುವುದಿಲ್ಲ ಎಂದು ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿತು.
ಪಶ್ಚಿಮಬಂಗಾಳ : ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಒಂದು ಅಭೂತಪೂರ್ವ ಮತ್ತು ಐತಿಹಾಸಿಕ ಬದಲಾವಣೆ ಘಟಿಸಿದೆ. ಇತ್ತೀಚೆಗೆ ನಡೆದ ಅತ್ಯಂತ ಜಿದ್ದಾಜಿದ್ದಿನ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಭರ್ಜರಿ ಬಹುಮತ ಗಳಿಸುವ ಮೂಲಕ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಆಡಳಿತಕ್ಕೆ ಮುಕ್ತಿ ಹಾಡಿದೆ. ಈ ಮಹತ್ವದ ಗೆಲುವಿನ ಬೆನ್ನಲ್ಲೇ ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ ಮತ್ತು ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ದಿನಾಂಕ ಹಾಗೂ ಸಮಯ ಅಧಿಕೃತವಾಗಿ ಪ್ರಕಟಗೊಂಡಿದೆ. ಮುಂಬರುವ ಮೇ 9 ರಂದು ಕೋಲ್ಕತ್ತಾದಲ್ಲಿ ಪಶ್ಚಿಮ ಬಂಗಾಳದ ಹೊಸ ಮುಖ್ಯಮಂತ್ರಿ ಅಧಿಕಾರ ಸೂತ್ರ ಹಿಡಿಯಲಿದ್ದಾರೆ. ಈ ದಿನವು ಬಂಗಾಳದ ಸಾಂಸ್ಕೃತಿಕ ಇತಿಹಾಸದಲ್ಲಿ ಅತ್ಯಂತ ಪ್ರಮುಖ ದಿನವಾಗಿದ್ದು ವಿಶ್ವಕವಿ ರವೀಂದ್ರನಾಥ ಟ್ಯಾಗೋರ್ ಅವರ ಜನ್ಮದಿನವಾದ ರವೀಂದ್ರ ಜಯಂತಿಯಂದೇ ಈ ಐತಿಹಾಸಿಕ ಕಾರ್ಯಕ್ರಮ ನಡೆಯುತ್ತಿರುವುದು ವಿಶೇಷ ರಾಜಕೀಯ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಬಂಗಾಳ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಅವರು ಈ ನಿರ್ಧಾರವನ್ನು ಮಾಧ್ಯಮಗಳಿಗೆ…
ಚಿಕ್ಕಮಗಳೂರು : ಚಿಕ್ಕಮಗಳೂರಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮನೆಯ ಮುಂದೆ ಕಿಡಿಗೇಡಿಗಳು ವಾಮಾಚಾರ ಮಾಡಿದ್ದಾರೆ. ಎಸಿಎಫ್ ಮೋಹನ್ ಹಾಗು ಜೀಪ್ ಡ್ರೈವರ್ ಮೇಲೂ ಕೂಡ ವಾಮಾಚಾರ ಪ್ರಯೋಗ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರು ಮನೆ ಮುಂದೆ ಕಿಡಿಗೇಡಿಗಳು ವಾಮಾಚಾರ ಮಾಡಿದ್ದಾರೆ. ಕಿಡಿಗೇಡಿಗಳು ಎ ಸಿ ಎಫ್ ಮೋಹನ್ ಹಾಗೂ ಜೀಪ್ ಚಾಲಕನ ಫೋಟೋ ಇಟ್ಟು ವಾಮಾಚಾರ ಮಾಡಿದ್ದಾರೆ. ಕೂಡಲೇ ಕಚೇರಿಯ ಸಿಬ್ಬಂದಿಯ ಮೇಲೆ ಅನುಮಾನ ಬಂದು ಎ ಸಿ ಎಫ್ ಮೋಹನ್ ಇದೀಗ ದೂರು ನೀಡಿದ್ದಾರೆ. ಮೋಹನ್ ಅವರ ದೂರಿನ ಆಧಾರದ ಮೇಲೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














