ಬೆಂಗಳೂರು : ಬೆಂಗಳೂರಲ್ಲಿ ಮಹಿಳೆಯ ಜೊತೆಗೆ ವೃದ್ಧನೊಬ್ಬ ಅಸಭ್ಯವಾಗಿ ವರ್ತನೆ ಮಾಡಿದ್ದಾನೆ. ಪಕ್ಕದ ಮನೆಯ ಮನೆಯ ಮಹಿಳೆಗೆ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಘಟನೆ ನಡೆದಿದೆ.
ಪಕ್ಕದ ಮನೆ ನಿವಾಸಿಯಾಗಿರುವ ವೃದ್ಧಾ ಕೃಷ್ಣಮೂರ್ತಿ ಬೊನ್ ಇಟ್ಟು ಸುಮಾರು 3 ರಿಂದ 4 ನಾಯಿಗಳನ್ನು ಸಾಕುತ್ತಿದ್ದ. ಈ ಬಗ್ಗೆ ಮಹಿಳೆ ಸಾಕಷ್ಟು ಬಾರಿ ಮನವಿ ಮಾಡಿದ್ದಳು. ಮಹಿಳೆಯ ಜೊತೆ ಯಾವಾಗಲೂ ಕಿರಿಕ್ ಮಾಡಿ ಆತ ಅಸಭ್ಯವಾಗಿ ವರ್ತನೆ ತೋರುತ್ತಿದ್ದ. ಮಹಿಳೆ ಕ್ಯಾಬ್ ನಲ್ಲಿ ಬಂದಾಗ ರಸ್ತೆ ಬ್ಲಾಕ್ ಆಗಿರುತ್ತಿತ್ತು ಹೀಗಾಗಿ ಪ್ರತಿನಿತ್ಯ ನಡೆದು ಬರುವ ಪರಿಸ್ಥಿತಿ ನಿರ್ಮಾಣ ಆಗಿತ್ತು.
ಈ ಬಗ್ಗೆ ಜಿಬಿಎ ಅಧಿಕಾರಿಗಳಿಗೂ ಮಹಿಳೆ ದೂರು ಕೊಟ್ಟಿದ್ದಳು. ಇದು ಸಾರ್ವಜನಿಕರ ರಸ್ತೆ ಈ ರೀತಿ ಮಾಡಬಾರದು ಎಂದು ಜಿಬಿಎ ಸೂಚನೆ ನೀಡಿತ್ತು. ಇದೇ ಕಾರಣಕ್ಕೆ ಮಹಿಳೆಯ ಜೊತೆ ಕೃಷ್ಣಮೂರ್ತಿ ವರ್ತನೆ ತೋರಿದ್ದಾನೆ. ಇದೀಗ ಮಹಿಳೆಯ ದೂರನ್ನು ಆಧರಿಸಿ ಆರೋಪಿ ಕೃಷ್ಣಮೂರ್ತಿನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.








