Author: ಸುರೇಶ್‌

"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು

ಮೈಸೂರು: ಜಿಲ್ಲೆಯ ಕೆ.ಆರ್. ನಗರ ಪಟ್ಟಣದಲ್ಲಿ ಜನಗಣತಿ ಕಾರ್ಯದಲ್ಲಿ ತೊಡಗಿದ್ದ ಸರ್ಕಾರಿ ಶಾಲಾ ಶಿಕ್ಷಕರೊಬ್ಬರು ಕರ್ತವ್ಯದ ಅವಧಿಯಲ್ಲೇ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರುವ ಘೋರ ಘಟನೆ ನಡೆದಿದೆ. ಕೆ.ಆರ್. ನಗರದ ಕುವೆಂಪು ಬಡಾವಣೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಶಿಕ್ಷಣ ಇಲಾಖೆಯ ಸಹೋದ್ಯೋಗಿಗಳಲ್ಲಿ ಮತ್ತು ಸ್ಥಳೀಯರಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ. ಮೃತ ಶಿಕ್ಷಕರು ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಮುಳ್ಳೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸುದೀರ್ಘ ಸೇವೆ ಸಲ್ಲಿಸುತ್ತಿದ್ದರು. ಜನಗಣತಿ ಪ್ರಕ್ರಿಯೆಯ ಭಾಗವಾಗಿ ಇವರಿಗೆ ಕೆ.ಆರ್. ನಗರ ಪಟ್ಟಣದ ಜವಾಬ್ದಾರಿಯನ್ನು ವಹಿಸಲಾಗಿತ್ತು. ಎಂದಿನಂತೆ ನಿಗದಿತ ಬಡಾವಣೆಯಲ್ಲಿ ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದ ವೇಳೆ ಇವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ ಎನ್ನಲಾಗಿದೆ. ಕುವೆಂಪು ಬಡಾವಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಶಿಕ್ಷಕರು ಹಠಾತ್ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಸ್ಥಳೀಯರು ಮತ್ತು ಸಹ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದರಾದರೂ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಕೆಲಸದ ಒತ್ತಡ ಅಥವಾ ಹಠಾತ್ ಆರೋಗ್ಯ ಏರುಪೇರಿನಿಂದ ಈ…

Read More

ಬೆಂಗಳೂರು : ಬೆಂಗಳೂರಲ್ಲಿ ಘೋರ ಕೃತ್ಯವನ್ನು ನಡೆದಿದ್ದು, ನಿರ್ಜನ ಪ್ರದೇಶದಲ್ಲಿ ಕಾರೊಂದು ಹೊತ್ತಿ ಉರಿದಿದೆ. ಸುಟ್ಟುಕರಕಲಾದ ಕಾರಿನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಈ ಘಟನೆ ನಡೆದ ಅನತಿ ದೂರದಲ್ಲಿ ಪುರುಷನೊಬ್ಬನ ಸುಟ್ಟ ಬಟ್ಟೆ ಮೊಬೈಲ್ ಪತ್ತೆಯಾಗಿದೆ. ಸ್ಥಳದಿಂದ ಪರಾರಿಯಾಗಿದ್ದ ವ್ಯಕ್ತಿ ಅದೇ ದಿನ ರಾತ್ರಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ದೊಡ್ಡಬಳ್ಳಾಪುರ ತಾಲೂಕಿನ ಕೆ.ಜಿ ಕುಂಟನಹಳ್ಳಿ ಬಳಿಯ ನಿರ್ಜನ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ನಡೆದ ಕೆಲವೇ ತಾಸಿನಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಇಂಚಿಂಚು ಮಾಹಿತಿಯನ್ನ ಹೊರಗೆ ತಂದಿದ್ದಾರೆ. ಅಂದ ಹಾಗೇ ಇಲ್ಲಿ ಸುಟ್ಟುಕರಕಲಾದ ಸ್ಥಿತಿಯಲ್ಲಿ ಸಿಕ್ಕ ಮಹಿಳೆ ಹೆಸರು ಸರೋಜಾ ಎಂದು ಪೊಲೀಸರು ಗುರುತಿಸಿದ್ದಾರೆ. ಪ್ರಕರಣ ಹಿನ್ನೆಲೆ? ದೇವನಹಳ್ಳಿಯಲ್ಲಿ ವಾಸವಾಗಿರುವ ಸರೋಜಾಗೆ ಮದುವೆಯಾಗಿ ಒಬ್ಬ ಮಗನಿದ್ದಾನೆ. ಗಂಡ ಏರ್ ಪೋರ್ಟ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಮೇ 2ರಂದು ಹಲ್ಲಿನ ಸಮಸ್ಯೆ ಇದೆ, ಆಸ್ಪತ್ರೆಗೆ ಹೋಗಬೇಕೆಂದು ಗಂಡನಿಗೆ ಹೇಳಿ ಬಸ್ ನಿಲ್ದಾಣಕ್ಕೆ ಡ್ರಾಪ್ ಹಾಕಿಸಿಕೊಂಡಿದ್ದ ಸರೋಜಾ, ಮಾರ್ಗ ಮಧ್ಯದಲ್ಲಿ ಇಳಿದು…

Read More

ಬೆಂಗಳೂರು: ಚುನಾವಣೆ ಗೆದ್ದ ಹಿನ್ನೆಲೆಯಲ್ಲಿ ಶುಭಾಶಯ ಕೋರಲು ಬಂದಿದ್ದ ಪೌರಕಾರ್ಮಿಕರ ವಿರುದ್ಧ ಜಾತಿನಿಂದನೆ ಮಾಡಿದ ಆರೋಪ ಎದುರಿಸುತ್ತಿರುವ ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬಂಧನ ವಾರೆಂಟ್ ಜಾರಿ ಮಾಡಿದೆ. ಪ್ರಕರಣದ ವಿಚಾರಣೆಗೆ ಸತತವಾಗಿ ಗೈರುಹಾಜರಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಕಠಿಣ ಕ್ರಮ ಕೈಗೊಂಡಿದೆ. ಘಟನೆಯ ಹಿನ್ನೆಲೆ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹರಿಹರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಬಿ.ಪಿ. ಹರೀಶ್ ಅವರಿಗೆ ಶುಭ ಕೋರಲು ಪರಿಶಿಷ್ಟ ಜಾತಿಗೆ ಸೇರಿದ ಪೌರಕಾರ್ಮಿಕರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಶಾಸಕರು ಅವರೊಂದಿಗೆ ಅಸಭ್ಯವಾಗಿ ವರ್ತಿಸಿ, ಜಾತಿ ಹಿನ್ನೆಲೆಯನ್ನು ಹಿಡಿದು ನಿಂದಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಸಂಬಂಧ ಸಂತ್ರಸ್ತರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ವಿಚಾರಣೆಗೆ ಶಾಸಕರ ಗೈರು: ಈ ಪ್ರಕರಣದ ವಿಚಾರಣೆಯು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದೆ. ನ್ಯಾಯಾಲಯವು ಈ ಹಿಂದೆ ಹಲವಾರು ಬಾರಿ ಸಮನ್ಸ್ ಜಾರಿ…

Read More

ತುಮಕೂರು : ತಮಿಳುನಾಡಿನಲ್ಲಿ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಭಾರಿ ಗೆಲುವಿನೊಂದಿಗೆ ಹೊಸ ಇತಿಹಾಸ ಸೃಷ್ಟಿಸಲು ಮುಂದಾಗಿದ್ದಾರೆ. ಇದೀಗ ಕರ್ನಾಟಕ ಮೂಲದ ವ್ಯಕ್ತಿ ಒಬ್ಬರು ಟಿವಿಕೆ ಪಕ್ಷದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ದಳಪತಿ ವಿಜಯ್ ಟಿವಿಕೆ ಪಕ್ಷದಿಂದ ಕರ್ನಾಟಕದ ಶಾಸಕರಾಗಿದ್ದು ತಮಿಳುನಾಡಿನ ಮೆಟ್ಟುಪಾಳ್ಯಂ ಕ್ಷೇತ್ರದಲ್ಲಿ ಸುನಿಲ್ ಆನಂದ್ ಎನ್ನುವವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹೌದು ಸುನೀಲ್ ಆನಂದ್ ಮೂಲತಹ ಕರ್ನಾಟಕದವರು. ಇವರು ತುಮಕೂರು ಮೂಲದವರಾಗಿದ್ದು, ಕಳೆದ 96 ವರ್ಷಗಳ ಹಿಂದೆ ತಮಿಳುನಾಡಿಗೆ ಅವರ ಕುಟುಂಬ ವಲಸೆ ಹೋಗಿತ್ತು. ಬರಗಾಲದಲ್ಲಿ ತಮಿಳುನಾಡು ಸೇರಿದ ಸುನಿಲ್ ಕುಟುಂಬ, ಸುನಿಲ್ ಆನಂದ್ ಮುತ್ತತ ಬೋರೇಗೌಡ ಸ್ಥಳಾಂತರ ಆಗಿದ್ದರು. ಇದೀಗ ಪಕ್ಷದ ಶಾಸಕರಾಗಿ ಸುನಿಲ್ ಆನಂದ್ ಆಯ್ಕೆಯಾಗಿದ್ದಾರೆ. ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ದಬ್ಬೆಗೆಟ್ಟ ಹೋಬಳಿಯ ಒಣಕೆಘಟ್ಟ ಮೂಲದವರಾಗಿದ್ದು, ಇದೀಗ ಸುನಿಲ್ ಆನಂದ್ ಅವರು, ಮೆಟ್ಟುಪಾಳ್ಯಂ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮೆಟ್ಟುಪಾಳ್ಯಂನಲ್ಲಿ ಕನ್ನಡಿಗನ ಜಯಭೇರಿ ದಳಪತಿ ವಿಜಯ್ ಅವರ ಟಿವಿಕೆ ಪಕ್ಷದ ಪರವಾಗಿ ಸ್ಪರ್ಧಿಸಿದ್ದ ಕರ್ನಾಟಕ ಮೂಲದ ವ್ಯಕ್ತಿಯೊಬ್ಬರು ತಮಿಳುನಾಡಿನ…

Read More

ಚೆನ್ನೈ: ತಮಿಳುನಾಡು ರಾಜಕೀಯ ರಣಾಂಗಣದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಆಡಳಿತ ಪಕ್ಷದ ಭದ್ರಕೋಟೆಯನ್ನು ನಡುಗಿಸಿರುವ ನಟ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK), ಚುನಾವಣೆಯಲ್ಲಿ ಬರೋಬ್ಬರಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಅನಿರೀಕ್ಷಿತ ಯಶಸ್ಸಿನ ಬೆನ್ನಲ್ಲೇ, ವಿಜಯ್ ಅವರ ಪಕ್ಷಕ್ಕೆ ಕೈ ಜೋಡಿಸಲು ಕಾಂಗ್ರೆಸ್ ಅಧಿಕೃತವಾಗಿ ಮುಂದಾಗಿದೆ. ಕಾಂಗ್ರೆಸ್ ಹೈಕಮಾಂಡ್ ಹಸಿರು ನಿಶಾನೆ ಟಿವಿಕೆ ಪಕ್ಷಕ್ಕೆ ಬೆಂಬಲ ನೀಡುವ ಕುರಿತು ಎಐಸಿಸಿ ರಾಜಕೀಯ ವ್ಯವಹಾರಗಳ ಸಮಿತಿಯು ಮಹತ್ವದ ತೀರ್ಮಾನ ಕೈಗೊಂಡಿದೆ. ತಮಿಳುನಾಡು ಕಾಂಗ್ರೆಸ್ ಘಟಕಕ್ಕೆ ಈ ಬಗ್ಗೆ ಸಂಪೂರ್ಣ ಅಧಿಕಾರವನ್ನು ಹೈಕಮಾಂಡ್ ನೀಡಿದ್ದು, ಸ್ಥಳೀಯ ನಾಯಕರು ವಿಜಯ್ ಅವರೊಂದಿಗೆ ಮಾತುಕತೆ ನಡೆಸಲು ಸಜ್ಜಾಗಿದ್ದಾರೆ. ರಾಜ್ಯದ ಹಿತದೃಷ್ಟಿಯಿಂದ ಮತ್ತು ಪ್ರಗತಿಪರ ಆಡಳಿತ ನೀಡುವ ಉದ್ದೇಶದಿಂದ ಈ ಮೈತ್ರಿಗೆ ಕಾಂಗ್ರೆಸ್ ಒಲವು ತೋರಿದೆ ಎನ್ನಲಾಗಿದೆ. ಸಂಪುಟದಲ್ಲಿ ಸ್ಥಾನಕ್ಕೆ ಬೇಡಿಕೆ? ವಿಜಯ್ ಅವರ ಟಿವಿಕೆ ಸರ್ಕಾರ ರಚನೆಗೆ ಬೆಂಬಲ ನೀಡುವ ಬದಲಾಗಿ, ಕಾಂಗ್ರೆಸ್ ಪಕ್ಷವು ಹೊಸ…

Read More

ಯಾದಗಿರಿ : PSI ಜೊತೆಗೆ ಕಳೆದ 8 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಮಹಿಳಾ ಪೇದೆ ಒಬ್ಬಳು, ಪ್ರೀತಿ ಜೊತೆಗೆ ಮೂರು ಬಾರಿ ಗರ್ಭಪಾತ ಮಾಡಿಸಿಕೊಂಡಿದ್ದಾಳೆ, ಅಲ್ಲದೆ ಪಿಎಸ್ಐ ಬಳಿ 35 ಲಕ್ಷ ರೂಪಾಯಿ ಪಡೆದು ವಂಚನೆ ಎಸಗಿ, ಇದೀಗ ಬೇರೆ ಯುವಕನ ಜೊತೆಗೆ ಮದುವೆ ಮಾಡಿಕೊಳ್ಳಲು ಮುಂದಾಗಿರುವ ಘಟನೆ ಇದೀಗ ವರದಿಯಾಗಿದೆ. ಹೌದು ಯಾದಗಿರಿ ಜಿಲ್ಲೆಯ ಶಹಾಪುರ ಠಾಣೆಯಲ್ಲಿ ಇಂಟಲಿಜೆನ್ಸ್ ಪಿಎಸ್‌ಐ ವಿರೇಶ್ ಆಲೂರು ಗಂಭೀರ ಆರೋಪ ಮಾಡಿದ್ದಾರೆ. ನಾವಿಬ್ಬರು ಕಳೆದ ಎಂಟು ವರ್ಷಗಳಿಂದ ಸಂಬಂಧದಲ್ಲಿದ್ದು, ಇದೀಗ ಜಾತಿ ಕಾರಣ ನೀಡಿ ನನ್ನನ್ನು ದೂರ ಮಾಡ್ತಿದ್ದಾರೆ ಎಂದು ವಿರೇಶ್ ಆರೋಪಿಸಿದ್ದಾರೆ. ಮೇ 7ರಂದು ರಾಯಚೂರಿನಲ್ಲಿ ಮಹಿಳಾ ಪೇದೆಯ ಮದುವೆ ನಡೆಯಲಿದೆ. ವೀರೇಶ್ ಆಲೂರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗುಬ್ಬೆವಾಡದ ಮೂಲ ನಿವಾಸಿಯಾಗಿದ್ದು, ಮಹಿಳಾ ಪೇದೆಯು ಸಹ ವಿಜಯಪುರ ಜಿಲ್ಲೆಯ ಆಲ್‌ಮೇಲ್ ತಾಲೂಕಿನ ಬಳಗಾನೂರಿನವರು. ಎಂಟು ವರ್ಷದ ಹಿಂದೆ ಸಿಂದಗಿಯ ಶ್ರೀ ಮಾತಾ ಕೋಚಿಂಗ್ ಸೆಂಟರ್‌ನಲ್ಲಿ ವಿರೇಶ್ ಆಲೂರು ಅವರಿಗೆ ಸನ್ಮಾನ…

Read More

ರಾಯಚೂರು : ಪ್ರೀತಿಯ ವಿಚಾರಕ್ಕೆ ಸಂಬಂಧಪಟ್ಟಂತೆ ಅಪ್ರಾಪ್ತ ಬಾಲಕಿಯನ್ನು ಕಿಡ್ನಾಪ್ ಮಾಡಲು ಮುಂಡದಾಗ ತಡೆಯಲು ವ್ಯಕ್ತಿಯೊಬ್ಬ ಬಂದಿದ್ದಾನೆ. ಈ ವೇಳೆ ಆತನನ್ನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಯಾಪಲ್ ದಿನ್ನಿ ಗ್ರಾಮದಲ್ಲಿ ನಡೆದಿದೆ. ಯಾಪಲದಿನ್ನಿ ಗ್ರಾಮದ ಈಶಪ್ಪ (30) ಕೊಲೆಯಾದ ದುರ್ದೈವಿ. ಘಟನೆ ನಡೆದ ರಾತ್ರಿ ಈಶಪ್ಪ ತಮ್ಮ ಮನೆಯ ಮಾಳಿಗೆಯ ಮೇಲೆ ಮಲಗಿದ್ದರು. ಈ ವೇಳೆ ಅನ್ಯ ಧರ್ಮದ ಯುವಕ ಅಸ್ಲಂ ಮತ್ತು ಆತನ ಸ್ನೇಹಿತರು ಸೇರಿ 14 ವರ್ಷದ ಅಪ್ರಾಪ್ತ ಬಾಲಕಿಯನ್ನು ಕರೆದೊಯ್ಯುತ್ತಿರುವುದನ್ನು ಈಶಪ್ಪ ಗಮನಿಸಿದ್ದಾರೆ. ನಡುರಾತ್ರಿ ನಡೆದ ಘೋರ ಕೃತ್ಯ ಘಟನೆ ನಡೆದ ರಾತ್ರಿ ಈಶಪ್ಪ ಅವರು ಎಂದಿನಂತೆ ತಮ್ಮ ಮನೆಯ ಮಾಳಿಗೆಯ ಮೇಲೆ ನಿದ್ದೆ ಮಾಡುತ್ತಿದ್ದರು. ಈ ವೇಳೆ ಅನ್ಯ ಧರ್ಮದ ಯುವಕ ಅಸ್ಲಂ ಮತ್ತು ಆತನ ಸ್ನೇಹಿತರ ತಂಡವೊಂದು 14 ವರ್ಷದ ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಅಪಹರಿಸಲು ಯತ್ನಿಸುತ್ತಿತ್ತು. ನಿದ್ದೆಯಲ್ಲಿದ್ದ ಈಶಪ್ಪ ಅವರು ಕೆಳಗಿನ ಗಲಾಟೆ ಕೇಳಿ ಎಚ್ಚರಗೊಂಡು ನೋಡಿದಾಗ, ಬಾಲಕಿಯನ್ನು…

Read More

ತಮಿಳುನಾಡು : ತಮಿಳುನಾಡಲ್ಲಿ 234 ಕ್ಷೇತ್ರಗಳಲ್ಲಿ 108 ಪೈಕಿ ಗೆದ್ದಿರುವ ದಳಪತಿ ನಟ ವಿಜಯ್ ನೇತೃತ್ವದ TVK ಪಕ್ಷವು, ಇದೀಗ ತಮಿಳುನಾಡಲ್ಲಿ ಮೊದಲ ಬಾರಿ ಸರ್ಕಾರ ರಚನೆಗೆ ಮುಂದಾಗಿದೆ. ಹಾಗಾಗಿ ಈಗಾಗಲೇ ADMK ಜೊತೆ ಮೈತ್ರಿ ತಿರಸ್ಕರಿಸಿರುವ ವಿಜಯ್ ಕಾಂಗ್ರೆಸ್ ಹಾಗು ಎಡಪಕ್ಷಗಳ ಜೊತೆ ಕೈ ಜೋಡಿಸಿ ಸರ್ಕಾರ ರಚನೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಕಾಂಗ್ರೆಸ್ VCK, CPI, CPI(M), IUML ಪಕ್ಷಗಳು ಇದ್ದು, ವಿಜಯ್ ಮೈತ್ರಿ ಆಯ್ಕೆ ಓಪನ್ ಇಟ್ಕೊಂಡಿದ್ದಾರೆ. ಹಾಗಾಗಿ ಯಾವುದೇ ಕ್ಷಣದಲ್ಲಿ ಮೈತ್ರಿಗೆ ಅಹ್ವಾನ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ADMK ಮೈತ್ರಿ ತಿರಸ್ಕರಿಸಿದ ವಿಜಯ್ ಬಹುಮತಕ್ಕೆ ಕೆಲವೇ ಸ್ಥಾನಗಳ ಅಂತರವಿರುವ ಹಿನ್ನೆಲೆಯಲ್ಲಿ, ಪ್ರಮುಖ ಪ್ರತಿಪಕ್ಷವಾದ ADMK ವಿಜಯ್ ಅವರೊಂದಿಗೆ ಕೈಜೋಡಿಸಲು ಮುಂದಾಗಿತ್ತು. ಆದರೆ, ತನ್ನ ಸಿದ್ಧಾಂತ ಮತ್ತು ಪಕ್ಷದ ಸ್ವತಂತ್ರ ಅಸ್ತಿತ್ವಕ್ಕೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ವಿಜಯ್ ಅವರು ADMK ಜೊತೆಗಿನ ಮೈತ್ರಿಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಭ್ರಷ್ಟಾಚಾರ ಮುಕ್ತ ಮತ್ತು ಪಾರದರ್ಶಕ ಆಡಳಿತದ ಭರವಸೆ…

Read More

ಬೆಂಗಳೂರು : ಶೃಂಗೇರಿ ಕ್ಷೇತ್ರದ ಅಂಚೆ ಮತ ಮರು ಎಣಿಕೆಯಲ್ಲಿ ವೋಟ್ ಚೋರಿ ಅಲ್ಲ. ಇದು ವೋಟ್ ಡಕಾಯಿತಿ ಆಗಿದೆ. ಅಂಚೆ ಮತ ಪತ್ರವನ್ನು ವ್ಯವಸ್ಥಿತವಾಗಿ ತಿದ್ದಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕೋರ್ಟ್ ಆದೇಶದಂತೆ ಪೋಸ್ಟಲ್ ಬ್ಯಾಲೆಟ್ ಮರು ಎಣಿಕೆ ಆಯಿತು. 2023ರ ಚುನಾವಣೆಯಲ್ಲಿ 201 ಮತಗಳ ಅಂತರದಿಂದ ರಾಜೇಗೌಡ ಅವರು ಗೆದ್ದಿದ್ದರು. ಅವರಿಗೆ 59,171 ಮತಗಳು ಬಂದಿದ್ದವು. ಬಿಜೆಪಿಯ ಜೀವರಾಜ್​ಗೆ 58,970 ಮತಗಳು ಬಂದಿದ್ದವು. ರಾಜೇಗೌಡರಿಗೆ ಇವಿಎಂನಿಂದ ಬಂದ‌ ಮತಗಳು 58,602. ಪೋಸ್ಟಲ್​ನಿಂದ ಬಂದಿದ್ದು 569. ಜೀವರಾಜ್​ಗೆ ಇವಿಎಂನಿಂದ 58,278 ಮತಗಳು ಬಂದಿದ್ದವು. ಅವರಿಗೆ ಪೋಸ್ಟಲ್​ನಿಂದ ಬಂದ‌ ಮತ 692. ಒಟ್ಟಾರೆಯಾಗಿ 201 ಮತಗಳಿಂದ ರಾಜೇಗೌಡ ಅವರು ಗೆದ್ದಿದ್ದರು. ಇವೆಲ್ಲವೂ ಸಿಂಧು ಮತಗಳೆಂದು ರಿಟರ್ನಿಂಗ್ ಅಧಿಕಾರಿಗಳು, ಚುನಾವಣಾ ಏಜೆಂಟ್​ಗಳು ಸಹಿ ಹಾಕಿ ಘೋಷಿಸಿದ್ದರು ಎಂದು ತಿಳಿಸಿದರು. ಘೋಷಣೆ ಆದ ಮೇಲೆ ಜೀವರಾಜ್ ಅವರು ಮಾಲ್ ಪ್ರಾಕ್ಟೀಸ್ ಆಗಿದೆ ಎಂದು…

Read More

ಬೆಂಗಳೂರು : ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ನಾವೀನ್ಯತೆಯನ್ನು ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ದೇಶದಲ್ಲಿ ಮೊದಲ ಬಾರಿಗೆ ರಾಜ್ಯ ಸರ್ಕಾರದ ನೇತೃತ್ವದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಶ್ರೇಷ್ಠತಾ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದೆ. ಈ ಕೇಂದ್ರವನ್ನು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಿದರು. ಬಾಹ್ಯಾಕಾಶ ತಂತ್ರಜ್ಞಾನಗಳ ವಾಣಿಜ್ಯ ಅನ್ವಯವನ್ನು ವೇಗಗೊಳಿಸುವುದು ಮತ್ತು ಸರ್ಕಾರ, ಕೈಗಾರಿಕೆ ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವಿನ ಸಹಯೋಗವನ್ನು ಬಲಪಡಿಸುವುದು ಈ ಉಪಕ್ರಮದ ಉದ್ದೇಶವಾಗಿದೆ. ಎಕ್ಸಲೆನ್ಸ್​ ಸೆಂಟರ್: ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಎಕ್ಸಲೆನ್ಸ್​ ಸೆಂಟರ್​ (CoE ಸ್ಪೇಸ್‌ಟೆಕ್ ಫೌಂಡೇಶನ್) ಅನ್ನು ಕರ್ನಾಟಕ ಸರ್ಕಾರವು ಕರ್ನಾಟಕ ಇನ್ನೋವೇಶನ್ ಅಂಡ್ ಟೆಕ್ನಾಲಜಿ ಸೊಸೈಟಿ (KITS) ಮೂಲಕ ಸ್ಥಾಪಿಸಿದೆ. ಈ ಉಪಕ್ರಮವು ಸ್ಯಾಟ್‌ಕಾಮ್ ಇಂಡಸ್ಟ್ರಿ ಅಸೋಸಿಯೇಷನ್ ​​ಆಫ್ ಇಂಡಿಯಾ (SIA-ಇಂಡಿಯಾ) ಸಹಯೋಗವನ್ನು ಸಹ ಒಳಗೊಂಡಿದೆ. ಉದಯೋನ್ಮುಖ ಬಾಹ್ಯಾಕಾಶ ತಂತ್ರಜ್ಞಾನಗಳಲ್ಲಿ ಸಂಶೋಧನೆ, ನಾವೀನ್ಯತೆ ಮತ್ತು ಸಾಮರ್ಥ್ಯ ವೃದ್ಧಿಗೆ ಕೇಂದ್ರವು ಸಮರ್ಪಿತವಾಗಿದೆ. ಪ್ರಮುಖ ಉದ್ದೇಶಗಳು ಮತ್ತು ಕಾರ್ಯಗಳು: ಈ ಕೇಂದ್ರದ ಪ್ರಾಥಮಿಕ ಗಮನವು ಮುಂದುವರಿದ ಸಂಶೋಧನೆ,…

Read More