Author: kannadanewsnow57

ಹೈದರಾಬಾದ್: ಪತ್ನಿಯ ಘೋರ ವಂಚನೆ ಹಾಗೂ ಹೆತ್ತ ಮಗುವನ್ನೇ ಮಾರಾಟ ಮಾಡಿದ ಆಘಾತಕಾರಿ ಘಟನೆಗೆ ಮನನೊಂದು ಪತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಅತ್ಯಂತ ಹೃದಯವಿದ್ರಾವಕ ಘಟನೆ ಹೈದರಾಬಾದ್ನ ಹಯತ್ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೊಹೆಡಾ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಗೋವರ್ಧನ್ ಆತ್ಮಹತ್ಯೆಗೆ ಶರಣಾದ ದುರ್ದೈವಿ ಪತಿ. ಈತನ ಪತ್ನಿ ಸರಿತಾ ಗೌಡ್ ಮಾಡಿದ ದ್ರೋಹವೇ ಈತನ ಸಾವಿಗೆ ಕಾರಣ ಎಂದು ಹೇಳಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಗೋವರ್ಧನ್ ಹಾಗೂ ಸರಿತಾ ಗೌಡ್ ನಾಲ್ಕು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಇವರ ದಾಂಪತ್ಯದ ಕುರುಹಾಗಿ ಸುಂದರ ಗಂಡು ಮಗುವೂ ಜನಿಸಿತ್ತು. ಆರಂಭದಲ್ಲಿ ಅತ್ಯಂತ ಸಂತೋಷದಿಂದಿದ್ದ ಈ ದಂಪತಿಗಳ ನಡುವೆ ಇತ್ತೀಚೆಗೆ ಭಿನ್ನಾಭಿಪ್ರಾಯಗಳು ತಲೆದೋರಿದ್ದವು. ದಿನೇ ದಿನೇ ಕೌಟುಂಬಿಕ ಕಲಹ ಹೆಚ್ಚಾದ ಹಿನ್ನೆಲೆಯಲ್ಲಿ, ಸರಿತಾ ಪತಿಯನ್ನು ತೊರೆದು ಮನೆಯಿಂದ ಹೊರಟುಹೋಗಿದ್ದಳು. ಮನೆಯಿಂದ ಹೊರಹೋದ ಸರಿತಾ ಮಾಡಿದ ಕೃತ್ಯ ಇಡೀ ಸಮಾಜವೇ ತಲೆತಗ್ಗಿಸುವಂತಿದೆ. ಹೆತ್ತ ಮಗುವೆಂಬ ಮಮತೆಯೂ ಇಲ್ಲದೆ ಆಕೆ ತನ್ನ ಹಸುಗೂಸನ್ನು ಬೇರೆಯವರಿಗೆ…

Read More

ಮಧ್ಯಪ್ರದೇಶ: ತಿರುವನಂತಪುರಂನಿಂದ ಹಜರತ್ ನಿಜಾಮುದ್ದೀನ್ಗೆ ಚಲಿಸುತ್ತಿದ್ದ ರಾಜಧಾನಿ ಎಕ್ಸ್ಪ್ರೆಸ್ ರೈಲಿನಲ್ಲಿ ಭಾನುವಾರ ಅಗ್ನಿ ಅವಘಡ ಸಂಭವಿಸಿದೆ. ರೈಲು ಸಂಖ್ಯೆ 12431ರ ಬಿ-1 (B-1) ಕೋಚ್ನಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ ಎಂದು ಪಶ್ಚಿಮ ಮಧ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ಮಧ್ಯಪ್ರದೇಶದ ಲುನಿ ರಿಚ್ಚಾ ಮತ್ತು ವಿಕ್ರಮಗಢ ಆಲೋಟ್ ನಿಲ್ದಾಣಗಳ ನಡುವೆ ರೈಲು ಚಲಿಸುತ್ತಿದ್ದಾಗ ಈ ಘಟನೆ ನಡೆದಿದೆ. ಅದೃಷ್ಟವಶಾತ್, ಬೆಂಕಿ ಕಾಣಿಸಿಕೊಂಡ ತಕ್ಷಣವೇ ಎಚ್ಚೆತ್ತ ರೈಲ್ವೆ ಸಿಬ್ಬಂದಿ, ತೊಂದರೆಗೊಳಗಾದ ಕೋಚ್ನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ತಕ್ಷಣವೇ ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾರೆ. ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ ಹಾಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. https://twitter.com/ANI/status/2055839827325816838?s=20

Read More

ಬೆಂಗಳೂರು: ರಾಜ್ಯದಲ್ಲಿರುವ ಸರ್ಕಾರಿ ಶಾಲೆ ಹಾಗೂ ಕಾಲೇಜುಗಳ ಭೂ ದಾಖಲೆಗಳನ್ನು ಕಂದಾಯ ಇಲಾಖೆಯ ಪಹಣಿ (RTC) ಗಳಲ್ಲಿ ಅಧಿಕೃತವಾಗಿ ದಾಖಲಿಸಲು ಮತ್ತು ಅಕ್ರಮ ಒತ್ತುವರಿಯನ್ನು ತಡೆಗಟ್ಟಲು ಕಂದಾಯ ಇಲಾಖೆ ಆಯುಕ್ತರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ತುರ್ತು ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳ ಭೂಮಿಗಳ ಅಧಿನಿಯಮ 2026′ ರ ಅನ್ವಯ, ಕನಿಷ್ಠ 12 ವರ್ಷಗಳಿಂದ ನಿರಂತರವಾಗಿ ಸರ್ಕಾರಿ ಶಾಲೆ-ಕಾಲೇಜುಗಳು ಬಳಸುತ್ತಿರುವ ಭೂಮಿಯು ಎಲ್ಲಾ ಹಕ್ಕು, ದಾವೆ ಹಾಗೂ ಬಾಧ್ಯತೆಗಳಿಂದ ಮುಕ್ತಗೊಂಡು ರಾಜ್ಯ ಸರ್ಕಾರದ ಪರವಾಗಿ ನಿಹಿತವಾಗಿರುತ್ತದೆ. ಆಯಾ ವ್ಯಾಪ್ತಿಯ ಜಿಲ್ಲಾ ಮತ್ತು ತಾಲೂಕು ಹಂತದ ಶಾಲಾ ಶಿಕ್ಷಣ ಇಲಾಖೆಯ ಮುಖ್ಯಸ್ಥರು ಹಾಗೂ ತಹಶೀಲ್ದಾರ್ಗಳ ಮೂಲಕ ಸಂಬಂಧಪಟ್ಟ ಪಹಣಿಗಳಲ್ಲಿ ಸರ್ಕಾರಿ ಶಾಲೆಯ ಹೆಸರನ್ನು ದಾಖಲಿಸಲು ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಒಂದು ವೇಳೆ ಈ ಜಮೀನುಗಳಲ್ಲಿ ಯಾವುದೇ ರೀತಿಯ ಅಕ್ರಮ ಒತ್ತುವರಿ ಅಥವಾ ಅನಧಿಕೃತ ಬಳಕೆ ಕಂಡುಬಂದಲ್ಲಿ, ಜಿಲ್ಲಾಡಳಿತದ ಮೂಲಕ ನಿಯಮಾನುಸಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಕೈಗೊಂಡ ಕ್ರಮಗಳ ಕುರಿತು…

Read More

ಮಗಳ ಭವಿಷ್ಯಕ್ಕಾಗಿ ಉಳಿತಾಯ ಮಾಡಲು ಬಯಸುವ ಕುಟುಂಬಗಳಲ್ಲಿ ‘ಸುಕನ್ಯಾ ಸಮೃದ್ಧಿ ಯೋಜನೆ’ (SSY) ಅತ್ಯಂತ ಜನಪ್ರಿಯ ಸರ್ಕಾರಿ ಯೋಜನೆಗಳಲ್ಲಿ ಒಂದಾಗಿದೆ. ಹೆಚ್ಚಿನ ಬಡ್ಡಿ ದರ, ಆದಾಯ ತೆರಿಗೆ ವಿನಾಯಿತಿ ಮತ್ತು ದೀರ್ಘಾವಧಿಯ ಸುರಕ್ಷತೆಯ ಕಾರಣದಿಂದಾಗಿ ಲಕ್ಷಾಂತರ ಪೋಷಕರು ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಈ ಯೋಜನೆಗೆ ಸಂಬಂಧಿಸಿದಂತೆ ಅನೇಕರಲ್ಲಿ ಕಾಡುವ ಪ್ರಮುಖ ಪ್ರಶ್ನೆಯೆಂದರೆ – ಮೆಚ್ಯೂರಿಟಿ ಅವಧಿಗಿಂತ ಮುಂಚಿತವಾಗಿಯೇ ಹಣವನ್ನು ಹಿಂಪಡೆಯಲು ಸಾಧ್ಯವೇ? ಇದಕ್ಕೆ ಉತ್ತರ ‘ಹೌದು, ಸಾಧ್ಯವಿದೆ’. ಆದರೆ ಇದಕ್ಕೆ ಕೆಲವು ಕಟ್ಟುನಿಟ್ಟಾದ ನಿಯಮಗಳು ಮತ್ತು ನಿಬಂಧನೆಗಳು ಅನ್ವಯಿಸುತ್ತವೆ. 21 ವರ್ಷಗಳ ಮೆಚ್ಯೂರಿಟಿ ಅವಧಿ ಸಾಮಾನ್ಯವಾಗಿ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯು, ಖಾತೆ ಆರಂಭಿಸಿದ ದಿನದಿಂದ 21 ವರ್ಷಗಳ ನಂತರ ಸಂಪೂರ್ಣವಾಗಿ ಮೆಚ್ಯೂರ್ ಆಗುತ್ತದೆ. ಹೆಣ್ಣುಮಕ್ಕಳ ದೀರ್ಘಾವಧಿಯ ಉಳಿತಾಯವನ್ನು ಉತ್ತೇಜಿಸುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿರುವುದರಿಂದ, ಈ ಅವಧಿಗಿಂತ ಮುಂಚಿತವಾಗಿ ಸಂಪೂರ್ಣ ಹಣವನ್ನು ಹಿಂಪಡೆಯಲು ಅನುಮತಿ ಇರುವುದಿಲ್ಲ. 18 ವರ್ಷ ತುಂಬಿದ ನಂತರ ಭಾಗಶಃ ಹಣ ಪಡೆಯಲು ಅವಕಾಶ…

Read More

ಬೆಂಗಳೂರು: ಮುಂಗಾರು ಆಗಮನಕ್ಕೂ ಮುನ್ನ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ ರಾಜ್ಯಾದ್ಯಂತ ಮಳೆಯ ಆರ್ಭಟ ಮುಂದುವರಿದಿದೆ. ಶನಿವಾರ ರಾಜ್ಯದ 7ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ಪ್ರತ್ಯೇಕ ಅವಘಡಗಳಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದಾರೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ರಾಜ್ಯದ ಹಲವೆಡೆ ಇನ್ನೂ 4 ದಿನಗಳ ಕಾಲ ಮಳೆ ಮುಂದುವರಿಯಲಿದೆ. ಬಳ್ಳಾರಿ ತಾಲೂಕಿನ ದಾಸರನಾಗೇನಹಳ್ಳಿಯಲ್ಲಿ ಸಪೋಟ ಕೊಯ್ಯಲು ಹೊಲಕ್ಕೆ… ತೆರಳಿದ್ದ ಕೋರಿ ಗಾಡಿಲಿಂಗಪ್ಪ (32) ಎಂಬುವವರಿಗೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಸತ್ಯಗಾಲ ಗ್ರಾಮದಲ್ಲಿ ಹಸುಗಳನ್ನು ಮನೆಗೆ ಕರೆತರಲು ತೆರಳಿದ್ದ ವಿನೋದಾ (42) ಎಂಬ ಮಹಿಳೆ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಎರಡು ಹಸುಗಳೂ ಸಹ ಸಿಡಿಲಿಗೆ ಬಲಿಯಾಗಿವೆ. ಚಾಮರಾಜನಗರದ ಬೇಗೂರು, ಎಚ್.ಡಿ. ಕೋಟೆ, ನಂಜನಗೂಡು ಹಾಗೂ ಕೊಳ್ಳೇಗಾಲದಲ್ಲಿ ಸಾಧಾರಣದಿಂದ ಉತ್ತಮ ಮಳೆಯಾಗಿದೆ. ಶುಕ್ರವಾರ ರಾತ್ರಿ ಮೈಸೂರು ನಗರದಲ್ಲಿ ಮಿಂಚು, ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ನೂರಾರು ಮರಗಳು ಹಾಗೂ ಜಾಹೀರಾತು…

Read More

ಹೈದರಾಬಾದ್: ಕೇಂದ್ರ ಸಚಿವ ಹಾಗೂ ತೆಲಂಗಾಣ ಬಿಜೆಪಿ ಪ್ರಮುಖ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಪುತ್ರ ಬಂಡಿ ಭಗೀರಥ್ನನ್ನು ಪೋಕ್ಸೊ (POCSO) ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರಾಬಾದ್ ಪೊಲೀಸರು ಬಂಧಿಸಿದ್ದಾರೆ. ಆದರೆ, ತನಿಖೆಗೆ ಸಹಕರಿಸಲು ತನ್ನ ಮಗ ಸ್ವತಃ ಪೊಲೀಸರ ಮುಂದೆ ಶರಣಾಗಿದ್ದಾನೆ ಎಂಬ ಕೇಂದ್ರ ಸಚಿವರ ಹೇಳಿಕೆಯನ್ನು ಸೈಬರಾಬಾದ್ ಪೊಲೀಸ್ ಕಮಿಷನರ್ ರಮೇಶ್ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಆರೋಪಿಯನ್ನು ಹೈದರಾಬಾದ್ ಹೊರವಲಯದಲ್ಲಿ ಬಂಧಿಸಲಾಗಿದೆಯೇ ಹೊರತು, ಇದು ಶರಣಾಗತಿಯಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸಂತ್ರಸ್ತ ಯುವತಿ ಮತ್ತು ಆಕೆಯ ಪೋಷಕರ ಹೇಳಿಕೆಯನ್ನು ನ್ಯಾಯಾಲಯದ ಮುಂದೆ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿ ದೇಶ ಬಿಟ್ಟು ಓಡಿಹೋಗದಂತೆ ತಡೆಯಲು ಲುಕ್-ಔಟ್ (Look-out) ಸುತ್ತೋಲೆಯನ್ನು ಹೊರಡಿಸಿದ್ದರು. ಇದರ ಬೆನ್ನಲ್ಲೇ ಶನಿವಾರ ಈ ಬಂಧನ ಪ್ರಕ್ರಿಯೆ ನಡೆದಿದೆ. ತಮ್ಮ ಮಗನ ಬಂಧನದ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್, “ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ ಎಂದು ಸತತವಾಗಿ ಹೇಳುತ್ತಿದ್ದಾನೆ. ಕಾನೂನಿನ ಮೇಲಿನ ಗೌರವ ಮತ್ತು ತನಿಖೆಗೆ…

Read More

ಕುಷ್ಟಗಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಗೃಹಲಕ್ಷ್ಮಿ’ ಯೋಜನೆಯಡಿ ತಮಗೆ ಸಿಗುತ್ತಿದ್ದ ಮಾಸಿಕ 2,000 ರೂಪಾಯಿ ಹಣವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಕೊಪ್ಪಳ ಜಿಲ್ಲೆಯ ಕುಷ್ಟಗಿಯ ಮೂವರು ಮಹಿಳೆಯರು ಸ್ವಾವಲಂಬಿ ಬದುಕಿಗೆ ಮಾದರಿಯಾಗಿದ್ದಾರೆ. ಈ ಮಹಿಳೆಯರು ಒಟ್ಟಾಗಿ ರೊಟ್ಟಿ ತಯಾರಿಕಾ ಕೇಂದ್ರವನ್ನು ಆರಂಭಿಸಿದ್ದು, ಅದಕ್ಕೆ ‘ಗೃಹಲಕ್ಷ್ಮಿ ರೊಟ್ಟಿ ಕೇಂದ್ರ’ ಎಂದು ಹೆಸರಿಟ್ಟಿದ್ದಾರೆ. ಕುಷ್ಟಗಿ ಪಟ್ಟಣದ ನಿವಾಸಿಗಳಾದ ಮಕ್ತುಂಬಿ ಕೊಪ್ಪದ, ಸಾಜನಬಿ ದಾದಿಬಾಯಿ ಮತ್ತು ಹುಸೇನಬಿ ಕಮ್ಮಾರ ಎಂಬ ಮೂವರು ಮಹಿಳೆಯರೇ ಈ ಸಾಹಸಕ್ಕೆ ಕೈಹಾಕಿದ ಗೆಳತಿಯರು. ಗೃಹಲಕ್ಷ್ಮಿ ಯೋಜನೆಯಿಂದ ಪ್ರತಿ ತಿಂಗಳು ಬರುತ್ತಿದ್ದ ಹಣವನ್ನು ಪೋಲು ಮಾಡದೆ ಉಳಿತಾಯ ಮಾಡಿದ್ದ ಈ ಮಹಿಳೆಯರು, ತಲಾ ₹58 ಸಾವಿರದಂತೆ ಒಟ್ಟು ₹1,74,000 ಹಣವನ್ನು ಒಟ್ಟುಗೂಡಿಸಿದ್ದಾರೆ. ಉಳಿದ ಮೊತ್ತವನ್ನು ತಮ್ಮ ಸ್ವಂತ ಶ್ರಮದಿಂದ ಹೊಂದಿಸಿಕೊಂಡು, ಹುಬ್ಬಳ್ಳಿಯಲ್ಲಿ ₹2 ಲಕ್ಷಕ್ಕೂ ಅಧಿಕ ವೆಚ್ಚದ ರೊಟ್ಟಿ ತಯಾರಿಕಾ ಯಂತ್ರವನ್ನು (Machine) ಖರೀದಿ ಮಾಡಿದ್ದಾರೆ. ಯಂತ್ರವನ್ನು ಅಳವಡಿಸಿಕೊಂಡು ಯಶಸ್ವಿಯಾಗಿ ಸ್ವಯಂ ಉದ್ಯೋಗ ಆರಂಭಿಸಿರುವ ಈ ಮಹಿಳೆಯರು, ಸರ್ಕಾರದ ಧನಸಹಾಯವನ್ನು…

Read More

ಹಾಸನ: ಜನಸ್ಪಂದನ ಕಾರ್ಯಕ್ರಮವನ್ನೇ ಕಾಯದೇ ಬಡವರ ಕೆಲಸವನ್ನು ಜವಾಬ್ದಾರಿಯುತವಾಗಿ ಮಾಡುವ ಮೂಲಕ ಜನರಿಗೆ ಸವಲತ್ತುಗಳನ್ನು ದೊರಕಿಸುವಂತೆ ಕಂದಾಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ. ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಸ್ವೀಕೃತವಾಗಿರುವ ಅರ್ಜಿಗಳನ್ನು ವಿಲೇವಾರಿ ಮಾಡಿರುವ ಬಗ್ಗೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕರಿಸಿದ 4538 ಅರ್ಜಿಗಳಲ್ಲಿ 4444 ಅರ್ಜಿಗಳು ವಿಲೇವಾರಿಯಾಗಿದ್ದು, ಇದರಲ್ಲಿ ಕೆಲವು ಅರ್ಜಿ ಸಮರ್ಪಕವಾಗಿ ವಿಲೇವಾರಿಯಾಗಿಲ್ಲ ಎಂದರು. 94 ಸಿ ಮತ್ತು 94 ಸಿ.ಸಿ.ಗೆ ಸಂಬಂಧಿಸಿದ ಅರ್ಜಿ ಗಳ ವಿಲೇವಾರಿಗೆ ಆದ್ಯತೆ ಮೇಲೆ ಜಂಟಿ ಸರ್ವೆ ಮಾಡಿ ಜನರಿಗೆ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜನಸ್ಪಂದನ ಕಾರ್ಯಕ್ರಮ ನಡೆಸುವುದರಿಂದ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಸಹಕಾರಿ ಆಗಿದೆ ಆರ್.ಆರ್.ಟಿ. ಪ್ರಕರಣಗಳು ಸ್ವೀಕಾರ ಆಗುತ್ತಿರುವ ಅರ್ಜಿಗಳನ್ನು ನೋಡಿದರೆ ಇನ್ನೂ…

Read More

ಬೆಂಗಳೂರು: ರಾಜ್ಯದ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದಿಂದ ಭರಪೂರ ಕೊಡುಗೆ ಸಿಕ್ಕಿದೆ. ಕರ್ನಾಟಕಕ್ಕೆ ಒಟ್ಟು 1122 ಹೆಚ್ಚುವರಿ ವೈದ್ಯಕೀಯ ಸೀಟುಗಳನ್ನು ಮಂಜೂರು ಮಾಡಲಾಗಿದ್ದು, ಇದರಲ್ಲಿ 550 ಪಿಜಿ (ಸ್ನಾತಕೋತ್ತರ) ಮತ್ತು 572 ಯುಜಿ (ಎಂಬಿಬಿಎಸ್) ಸೀಟುಗಳು ಸೇರಿವೆ. ಶನಿವಾರ ವಿಕಾಸಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಈ ಮಹತ್ವದ ವಿಷಯವನ್ನು ಪ್ರಕಟಿಸಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ರಾಜ್ಯಕ್ಕೆ ಹೆಚ್ಚುವರಿ ವೈದ್ಯಕೀಯ ಸೀಟುಗಳು ಹಂಚಿಕೆಯಾಗಿರುವುದು ಇದೇ ಮೊದಲು ಎಂದು ಅವರು ತಿಳಿಸಿದ್ದಾರೆ. ಮಂಜೂರಾಗಿರುವ ಹೆಚ್ಚುವರಿ ಸೀಟುಗಳಲ್ಲಿ ಬಹುಪಾಲು ಸೀಟುಗಳನ್ನು ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೇ ಹಂಚಿಕೆ ಮಾಡಲಾಗಿದೆ.ಈ ಹೆಚ್ಚುವರಿ ಸೀಟುಗಳ ಹಂಚಿಕೆಯು ರಾಜ್ಯದಲ್ಲಿ ಹೊಸದಾಗಿ 10 ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವುದಕ್ಕೆ ಸಮನಾಗಿದೆ ಎಂದು ಸಚಿವರು ಬಣ್ಣಿಸಿದ್ದಾರೆ. ವೈದ್ಯಕೀಯ ಮೂಲಸೌಕರ್ಯ ವೃದ್ಧಿಗಾಗಿ ಕೇಂದ್ರ ಸರ್ಕಾರ ಒಟ್ಟು ₹1090 ಕೋಟಿ ಅಭಿವೃದ್ಧಿ ಅನುದಾನ ನೀಡುತ್ತಿದ್ದು, ರಾಜ್ಯ ಸರ್ಕಾರ ತನ್ನ ಪಾಲಿನ ₹600 ಕೋಟಿಗೂ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಲಿದೆ.…

Read More

ನವದೆಹಲಿ/ಬೆಂಗಳೂರು: ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ನೀಟ್ (NEET) ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವು ಈಗ ವಿದ್ಯಾರ್ಥಿಗಳ ಜೀವಕ್ಕೆ ಕುತ್ತು ತಂದಿದೆ. ಮೇ 3 ರಂದು ನಡೆದಿದ್ದ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿದ ಬೆನ್ನಲ್ಲೇ, ಆಘಾತ ಹಾಗೂ ತೀವ್ರ ಮಾನಸಿಕ ಖಿನ್ನತೆಗೆ ಒಳಗಾದ ದೇಶದ ವಿವಿಧ ಭಾಗಗಳ ಒಟ್ಟು ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಧೃತಿಕೇಡಿಸುವ ಘಟನೆ ಬೆಳಕಿಗೆ ಬಂದಿದೆ. ಮೃತರ ಪೈಕಿ ಬೆಂಗಳೂರು ಮೂಲದ ಒಬ್ಬ ವಿದ್ಯಾರ್ಥಿನಿಯೂ ಸೇರಿದ್ದಾರೆ. ಕಠಿಣ ಪರಿಶ್ರಮ ಪಟ್ಟು ರಾತ್ರಿ-ಹಗಲು ಎನ್ನದೆ ಓದಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳಿಗೆ ಪರೀಕ್ಷೆ ರದ್ದತಿ ಸುದ್ದಿ ಭಾರಿ ಆಘಾತ ನೀಡಿದೆ. ಪರೀಕ್ಷೆ ರದ್ದಾಗಿರುವುದರಿಂದ ಮತ್ತೆ ಪರೀಕ್ಷೆ ಬರೆಯಬೇಕಾದ ತೀವ್ರ ಒತ್ತಡ ಮತ್ತು ಭವಿಷ್ಯದ ಬಗೆಗಿನ ಚಿಂತೆ ವಿದ್ಯಾರ್ಥಿಗಳನ್ನು ತೀವ್ರ ನಿರಾಶೆಗೆ ತಳ್ಳಿದೆ. ಇದೇ ಖಿನ್ನತೆಯಿಂದಾಗಿ ವಿದ್ಯಾರ್ಥಿಗಳು ಈ ದುಡುಕಿನ ನಿರ್ಧಾರಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ. ಮೃತ ವಿದ್ಯಾರ್ಥಿಗಳ ವಿವರ: ಬೆಂಗಳೂರಿನ ವಿದ್ಯಾರ್ಥಿನಿ: ಬೆಂಗಳೂರು ಮೂಲದ ವಿದ್ಯಾರ್ಥಿನಿಯೊಬ್ಬರು ಗೋವಾದಲ್ಲಿ ಬುಧವಾರ…

Read More