Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜೂ.12ಕ್ಕೆ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಗೆ ತಮಿಳುನಾಡು ಸಿಎಂ ವಿಜಯ್ ಭೇಟಿ : ಕರಾವಳಿಗೆ ಮೊದಲ ಬಾರಿ ಆಗಮನ!

ಒಂಟಿ ಮನೆಯಲ್ಲಿರುವವರೆ ಹುಷಾರ್ : ಬೆಂಗಳೂರಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಕದ್ದು ಕಳ್ಳರು ಪರಾರಿ!

BIG NEWS : ಬೆಂಗಳೂರಿನ ಕಸದ ಟೆಂಡರ್ ನಲ್ಲಿ ಸಾವಿರಾರು ಕೋಟಿ ಅಕ್ರಮ : ಲೋಕಾಯುಕ್ತಕ್ಕೆ ಬಿಜೆಪಿ ದೂರು ಸಲ್ಲಿಕೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : 94ಸಿ, 94ಸಿಸಿ ಅರ್ಜಿಗಳ ಜಂಟಿ ಸರ್ವೆ ನಡೆಸಿ ತಕ್ಷಣ ಹಕ್ಕುಪತ್ರ ನೀಡಿ: ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಖಡಕ್ ಸೂಚನೆ.!
KARNATAKA

BIG NEWS : 94ಸಿ, 94ಸಿಸಿ ಅರ್ಜಿಗಳ ಜಂಟಿ ಸರ್ವೆ ನಡೆಸಿ ತಕ್ಷಣ ಹಕ್ಕುಪತ್ರ ನೀಡಿ: ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಖಡಕ್ ಸೂಚನೆ.!

By kannadanewsnow57

ಹಾಸನ: ಜನಸ್ಪಂದನ ಕಾರ್ಯಕ್ರಮವನ್ನೇ ಕಾಯದೇ ಬಡವರ ಕೆಲಸವನ್ನು ಜವಾಬ್ದಾರಿಯುತವಾಗಿ ಮಾಡುವ ಮೂಲಕ ಜನರಿಗೆ ಸವಲತ್ತುಗಳನ್ನು ದೊರಕಿಸುವಂತೆ ಕಂದಾಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ. ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಸ್ವೀಕೃತವಾಗಿರುವ ಅರ್ಜಿಗಳನ್ನು ವಿಲೇವಾರಿ ಮಾಡಿರುವ ಬಗ್ಗೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕರಿಸಿದ 4538 ಅರ್ಜಿಗಳಲ್ಲಿ 4444 ಅರ್ಜಿಗಳು ವಿಲೇವಾರಿಯಾಗಿದ್ದು, ಇದರಲ್ಲಿ ಕೆಲವು ಅರ್ಜಿ ಸಮರ್ಪಕವಾಗಿ ವಿಲೇವಾರಿಯಾಗಿಲ್ಲ ಎಂದರು.

94 ಸಿ ಮತ್ತು 94 ಸಿ.ಸಿ.ಗೆ ಸಂಬಂಧಿಸಿದ ಅರ್ಜಿ ಗಳ ವಿಲೇವಾರಿಗೆ ಆದ್ಯತೆ ಮೇಲೆ ಜಂಟಿ ಸರ್ವೆ ಮಾಡಿ ಜನರಿಗೆ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜನಸ್ಪಂದನ ಕಾರ್ಯಕ್ರಮ ನಡೆಸುವುದರಿಂದ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಸಹಕಾರಿ ಆಗಿದೆ ಆರ್.ಆರ್.ಟಿ. ಪ್ರಕರಣಗಳು ಸ್ವೀಕಾರ ಆಗುತ್ತಿರುವ ಅರ್ಜಿಗಳನ್ನು ನೋಡಿದರೆ ಇನ್ನೂ ಸಮಸ್ಯೆಗಳು ಬಗೆಹರಿಯದೆ ಇದರ ಆಳ ಅಗಲ ಎಷ್ಟಿದೆ ಎಂದು ತಿಳಿಯಬೇಕಿದೆ ಎಂದು ತಿಳಿಸಿದರು.

ಜನಸ್ಪಂದನ ಕಾರ್ಯಕ್ರಮಕ್ಕೆ ಪದೆ ಪದೇ ಒಂದೇ ವಿಷಯಕ್ಕೆ ಸಂಬಂಧಿಸಿದಂತ ಅರ್ಜಿಗಳು ಬರುತ್ತಿವೆ. ನೀವು ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಕಾಟಾಚಾರಕ್ಕೆ ವಿಲೇ ಮಾಡಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಕಾಶೆಯಲ್ಲಿ ರಸ್ತೆ ಇರುವ ಜಮೀನಿಗೆ ಬಿತ್ತನೆ ಬೀಜ, ರಸಗೊಬ್ಬರ ತೆಗೆದುಕೊಂಡು ಹೋಗಲು ಹಾಗೂ ಬೆಳೆ ಕಟಾವು ಮಾಡಿ ತೆಗೆದು ಕೊಂಡು ಹೋಗಲು ಅವಕಾಶ ಕಲ್ಪಿಸಲು ತಹಸೀಲ್ದಾರ್ ಅವರಿಗೆ ಅಧಿಕಾರ ಇದೆ ಎಂದು ತಿಳಿಸಿದರು.

ಆರ್.ಆರ್.ಟಿ.ಸಂಬಂದಿಸಿದ ಅರ್ಜಿಗಳನ್ನು ಜನರೆ ನೇರವಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ ಈ ನಿಟ್ಟಿನಲ್ಲಿ ಜನರಿಗೆ ಅರಿವು ಮೂಡಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಸಾರ್ವಜನಿಕರ ಕೆಲಸ ತಂತಾನೇ ಆಗಬೇಕು ಅವರು ಕಚೇರಿಗೆ ಅಲೆಯುವಂತಾಗಬಾರದು ಈ ನಿಟ್ಟಿನಲ್ಲಿ ಅಧಿಕಾರಿಗಳು ಅರ್ಥೈಸಿಕೊಂಡು ಜವಾಬ್ದಾರಿಯಿಂದ ನಿಮ್ಮ ಹಂತದಲ್ಲಿಯೇ ಪರಿಹಾರ ಮಾಡಬೇಕು ಎಂದು ಹೇಳಿದರು.

ದರಖಾತ್ತು ಪೋಡಿಗೆ ಗರಿಷ್ಟ 5 ದಾಖಲೆಗಳು ಇರಬೇಕು, 24 ಪ್ರಕರಣಗಳಲ್ಲಿ ಅಳತೆ ಕಾರ್ಯವಾಗಿದೆ, 30 ಸಾವಿರ ಪ್ರಕರಣಗಳು ಪ್ರಕಿಯೆಯಲ್ಲಿವೆ. ಅದರಲ್ಲಿ ಮಿಸ್ಸಿಂಗ್ ಪ್ರಕರಣಗಳು ಹೆಚ್ಚು ಇದ್ದು, ಅಂತಹ ಪ್ರಕರಣಗಳನ್ನು ಮಿಸ್ಸಿಂಗ್ ಕಮಿಟಿಯಲ್ಲಿ ಇಟ್ಟು ದುರಸ್ತಿ ಮಾಡಲು ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು.

25 ಸಾವಿರ ಪ್ರಕರಣಗಳಲ್ಲಿ 3 ದಾಖಲೆಗಳು ಇಲ್ಲ, 7 ರಿಂದ 8 ಸಾವಿರ ಪ್ರಕರಣಗಳಲ್ಲಿ 2 ದಾಖಲೆಗಳಿವೆ, 9-10 ಸಾವಿರ ಪ್ರಕರಣಗಳಲ್ಲಿ ಒಂದೇ ಒಂದು ದಾಖಲೆ ಇರುವುದು ಕಂಡು ಬಂದಿದೆ. ಹಂತ ಹಂತವಾಗಿ ಪೋಡಿ ದುರಸ್ತಿ ಮಾಡಲಾಗುವುದು. 50 ಕ್ಕೂ ಸಾವಿರಕ್ಕೂ ಹೆಚ್ಚು ಕುಟುಂಬದ ಪೋಡಿ ದುರಸ್ತಿ ಕಾರ್ಯವನ್ನು ಈ ವರ್ಷದಲ್ಲೇ ಪೂರ್ಣಗೊಳಿಸಲಾಗುವುದು, ಈಗಾಗಲೇ 24 ಸಾವಿರ ಪೋಡಿಯಾಗಿದೆ ಎಂದು ತಿಳಿಸಿದರು.

ಪುರಸಭೆಗಳ ವ್ಯಾಪ್ತಿಯಲ್ಲಿ ಯಾವುದೇ ಆಸ್ತಿಗೆ ಸಂಬಂಧಿಸಿದಂತೆ ಓಡಾಡಲು ಜಾಗವಿರಬೇಕು. ಪುರಸಭೆಯ ಮುಖ್ಯಾಧಿಕಾರಿ ಕ್ರಮ ವಹಿಸಲು ಸೂಚನೆ ನೀಡಿದರು. ಗೋಮಾಳ, ಕೆರೆ, ಸ್ಮಶಾನ ಒತ್ತುವರಿಯನ್ನು ತೆರವುಗೊಳಿಸಲು ಪಂಚಾಯತ್ ರಾಜ್ ನಿಂದ ಗಮನಹರಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿತ್ತನೆಗೆ ಗುಣಮಟ್ಟದ ಮೆಕ್ಕೆ ಜೋಳ, ಆಲೂಗಡ್ಡೆ ಮತ್ತು ಅಗತ್ಯ ಔಷಧಿಗಳನ್ನು ಕೃಷಿಕರಿಗೆ ನಿಗದಿತ ಸಮಯದಲ್ಲಿ ಕಲ್ಪಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ರೋಗ ಬರದಂತೆ ತಡೆಗಟ್ಟಲು ಮುನ್ನೆಚ್ಚರಿಕೆ ವಹಿಸಿ ನಿರಂತರವಾಗಿ ಮಾನಿಟರಿಂಗ್ ಮಾಡಲು ನಿರ್ದೇಶನ ನೀಡಿದರು.

ಹಾಸನ- ಪಿರಿಯಾಪಟ್ಟಣ ರಸ್ತೆ 10 ರಿಂದ 15 ಕಡೆ ಎರಡು ಕಿಲೋಮೀಟರ್ ಅಂತರದಲ್ಲಿ ಕಿತ್ತು ಹೋಗಿದೆ. ಗುಣಮಟ್ಟ ಸರಿಯಾಗಿದ್ದರೆ ಕಿತ್ತು ಹೋಗಲು ಹೇಗೆ ಸಾಧ್ಯ, ಉಳಿದಿರುವ ರಸ್ತೆ ಕಾಮಗಾರಿಯ ಗುಣಮಟ್ಟ ಸರಿಯಾಗಿದೆ ಎಂದು ಪಾಸ್ ಆಗಿರುವುದು ಹೇಗೆ ಸಾಧ್ಯ. ರಸ್ತೆ ಕಿತ್ತುಕೊಂಡು ಹೋಗುತ್ತಿದ್ದರು ಸಹ ಕೆಲಸ ಮುಂದುವರೆಯುತ್ತಿದೆ. ನಿಮ್ಮ ಜವಾಬ್ದಾರಿ ಏನು ಕೆ.ಆರ್.ಡಿ.ಸಿ.ಎಲ್. ಅಧಿಕಾರಿಯನ್ನು ಸಚಿವರು ಪ್ರಶ್ನಿಸಿದರು.

ಜನರು ಸ್ವಂತ ಜಮೀನಿನಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಖಾತೆ ನೀಡಬೇಕು ಎಂದ ಅವರು ಮನೆ ಕಟ್ಟಲು ಪರವಾನಗಿ ತೆಗೆದುಕೊಳ್ಳಲು ಜನರಿಗೆ ಮಾಹಿತಿ ತಲುಪಿಸಲು ನಿಗಾವಹಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮನೆ ಕಟ್ಟಲು ಪರವಾನಿಗೆ ನೀಡುವ ನಿಟ್ಟಿನಲ್ಲಿ ನರೇಗಾ ಇಂಜಿನಿಯರ್ಸ್ ಮೂಲಕ ಆನ್ ಲೈನ್ ನಲ್ಲಿ ಮನೆ ನಕ್ಷೆಯನ್ನು ಅಪ್ಲೋಡ್ ಮಾಡಲು ಕ್ರಮವಹಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ. ಇ-ಸ್ವತ್ತು ಮಾಡಲು ಕೂಡ ಒಂದು ಡ್ರೈವ್ ಮಾಡುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಈಗಾಗಲೇ ಒಪ್ಪಿಗೆ ನೀಡಿರುವ 77 ಶಾಲೆಗಳು ಕೆಪಿಎಸ್ ಶಾಲೆಗಳನ್ನು ತೆರೆಯಲು ಸ್ಥಳೀಯ ಶಾಸಕರುಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮವಹಿಸಿ, ಗ್ರಾಮಗಳಿಂದ ಮಕ್ಕಳನ್ನು ಕೆಪಿಎಸ್ ಶಾಲೆಗೆ ಕರೆತರಲು ಸ್ಥಳೀಯವಾಗಿ ಲಭ್ಯವಿರುವ ವಾಹನಗಳನ್ನು ಬಳಸಿಕೊಂಡು ಸಾರಿಗೆ ವ್ಯವಸ್ಥೆಗೆ ಕ್ರಮವಹಿಸಲು ಸೂಚಿಸಿದರು.

ಸಂಸದ ಶ್ರೇಯಸ್ ಎಂ. ಪಟೇಲ್, ಜಿಲ್ಲಾಧಿಕಾರಿ ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಶುಕ್ಲ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್ ಉಪಸ್ಥಿತರಿದ್ದರು.

94CC applications and issue title deeds immediately: Minister Krishna Byre Gowda issues stern instructions to officials! BIG NEWS: Conduct a joint survey of 94C
Share. Facebook Twitter LinkedIn WhatsApp Email

Related Posts

ಜೂ.12ಕ್ಕೆ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಗೆ ತಮಿಳುನಾಡು ಸಿಎಂ ವಿಜಯ್ ಭೇಟಿ : ಕರಾವಳಿಗೆ ಮೊದಲ ಬಾರಿ ಆಗಮನ!

2 Mins Read

ಒಂಟಿ ಮನೆಯಲ್ಲಿರುವವರೆ ಹುಷಾರ್ : ಬೆಂಗಳೂರಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಕದ್ದು ಕಳ್ಳರು ಪರಾರಿ!

1 Min Read

BIG NEWS : ಬೆಂಗಳೂರಿನ ಕಸದ ಟೆಂಡರ್ ನಲ್ಲಿ ಸಾವಿರಾರು ಕೋಟಿ ಅಕ್ರಮ : ಲೋಕಾಯುಕ್ತಕ್ಕೆ ಬಿಜೆಪಿ ದೂರು ಸಲ್ಲಿಕೆ

2 Mins Read
Recent News

ಜೂ.12ಕ್ಕೆ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಗೆ ತಮಿಳುನಾಡು ಸಿಎಂ ವಿಜಯ್ ಭೇಟಿ : ಕರಾವಳಿಗೆ ಮೊದಲ ಬಾರಿ ಆಗಮನ!

ಒಂಟಿ ಮನೆಯಲ್ಲಿರುವವರೆ ಹುಷಾರ್ : ಬೆಂಗಳೂರಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಕದ್ದು ಕಳ್ಳರು ಪರಾರಿ!

BIG NEWS : ಬೆಂಗಳೂರಿನ ಕಸದ ಟೆಂಡರ್ ನಲ್ಲಿ ಸಾವಿರಾರು ಕೋಟಿ ಅಕ್ರಮ : ಲೋಕಾಯುಕ್ತಕ್ಕೆ ಬಿಜೆಪಿ ದೂರು ಸಲ್ಲಿಕೆ

BREAKING : ಚಿಕ್ಕಮಗಳೂರಲ್ಲಿ ರಿವಲ್ವಾರ್ ನಿಂದ ಗುಂಡು ಹಾರಿಸಿಕೊಂಡು ಗೃಹಿಣಿ ಆತ್ಮಹತ್ಯೆಗೆ ಶರಣು!

State News
KARNATAKA

ಜೂ.12ಕ್ಕೆ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಗೆ ತಮಿಳುನಾಡು ಸಿಎಂ ವಿಜಯ್ ಭೇಟಿ : ಕರಾವಳಿಗೆ ಮೊದಲ ಬಾರಿ ಆಗಮನ!

By ಸುರೇಶ್‌ KARNATAKA 2 Mins Read

ಬೆಂಗಳೂರು: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಸಿಎಂ ವಿಜಯ್ ಅವರು ನೆರೆರಾಜ್ಯ ಕರ್ನಾಟಕಕ್ಕೆ…

ಒಂಟಿ ಮನೆಯಲ್ಲಿರುವವರೆ ಹುಷಾರ್ : ಬೆಂಗಳೂರಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಕದ್ದು ಕಳ್ಳರು ಪರಾರಿ!

BIG NEWS : ಬೆಂಗಳೂರಿನ ಕಸದ ಟೆಂಡರ್ ನಲ್ಲಿ ಸಾವಿರಾರು ಕೋಟಿ ಅಕ್ರಮ : ಲೋಕಾಯುಕ್ತಕ್ಕೆ ಬಿಜೆಪಿ ದೂರು ಸಲ್ಲಿಕೆ

BREAKING : ಚಿಕ್ಕಮಗಳೂರಲ್ಲಿ ರಿವಲ್ವಾರ್ ನಿಂದ ಗುಂಡು ಹಾರಿಸಿಕೊಂಡು ಗೃಹಿಣಿ ಆತ್ಮಹತ್ಯೆಗೆ ಶರಣು!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.