Subscribe to Updates
Get the latest creative news from FooBar about art, design and business.
Author: kannadanewsnow57
ನವದೆಹಲಿ : ಆಧಾರ್ ಕಾರ್ಡ್ ಹೊಂದಿರುವವರಿಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಆನ್ಲೈನ್ನಲ್ಲಿ ಉಚಿತವಾಗಿ ಆಧಾರ್ ವಿವರಗಳನ್ನು ಅಪ್ಡೇಟ್ ಮಾಡಿಕೊಳ್ಳುವ ಗಡುವನ್ನು ಮತ್ತೊಂದು ವರ್ಷದವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ತಾಜಾ ಆದೇಶದ ಪ್ರಕಾರ, ಸಾರ್ವಜನಿಕರು 2027ರ ಜೂನ್ 14ರವರೆಗೆ ‘myAadhaar’ ಪೋರ್ಟಲ್ ಮೂಲಕ ತಮ್ಮ ದಾಖಲೆಗಳನ್ನು ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಬಹುದು. ಮೇ 13 ರಂದು ಹೊರಡಿಸಲಾದ ಅಧಿಕೃತ ಜ್ಞಾಪನಾ ಪತ್ರದ (ಮೆಮೊರಾಂಡಂ) ಪ್ರಕಾರ UIDAI ಈ ನಿರ್ಧಾರವನ್ನು ಪ್ರಕಟಿಸಿದೆ. ಹಳೇ ಆ್ಯಪ್ ಸ್ಥಗಿತ; ಹೊಸ ‘ಆಧಾರ್ ಆ್ಯಪ್’ ಬಿಡುಗಡೆ ಮತ್ತೊಂದೆಡೆ, ತಂತ್ರಜ್ಞಾನದ ದೃಷ್ಟಿಯಿಂದಲೂ UIDAI ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಪ್ರಸ್ತುತ ಬಳಕೆಯಲ್ಲಿರುವ ಹಳೆಯ ‘ಎಂಆಧಾರ್’ (mAadhaar) ಆ್ಯಪ್ ಅನ್ನು ಶೀಘ್ರದಲ್ಲೇ ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಅದರ ಬದಲಿಗೆ ಹೆಚ್ಚಿನ ಭದ್ರತೆ ಮತ್ತು ಅತ್ಯಾಧುನಿಕ ಫೀಚರ್ಗಳನ್ನು ಒಳಗೊಂಡ ಹೊಸ ‘Aadhaar app’ ಅನ್ನು ಜನರಿಗೆ ಪರಿಚಯಿಸಿದೆ. ಈ ಹೊಸ…
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (HRMS 2.0) ಯಲ್ಲಿನ ದತ್ತಾಂಶದ ನಿಖರತೆ ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆರ್ಥಿಕ ಇಲಾಖೆಯು ಮಹತ್ವದ ಕ್ರಮ ಕೈಗೊಂಡಿದೆ. ಸಕ್ರಿಯ ನೌಕರರ ಪಟ್ಟಿಯಲ್ಲಿ ಮುಂದುವರಿಯಲು ಅರ್ಹರಲ್ಲದ ನೌಕರರನ್ನು ತಕ್ಷಣವೇ ವ್ಯವಸ್ಥೆಯಿಂದ ಹೊರಹಾಕಲು (Exit Protocol) ಎಲ್ಲಾ ಇಲಾಖೆಗಳ ರೇಖನಾ ಮತ್ತು ವಿತರಣಾಧಿಕಾರಿಗಳಿಗೆ (DDOs) ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ವ್ಯವಸ್ಥೆಯಲ್ಲಿ ಪ್ರಸ್ತುತ ಸೇವೆಯಲ್ಲಿರುವ ನೌಕರರ ಮಾಹಿತಿ ಮಾತ್ರ ಇರಬೇಕಾಗಿದ್ದು ಕಡ್ಡಾಯವಾಗಿದೆ. ಆದರೆ, ಅರ್ಹರಲ್ಲದ ಹಲವು ನೌಕರರ ವಿವರಗಳು ಇನ್ನೂ ಸಕ್ರಿಯ ಪಟ್ಟಿಯಲ್ಲಿ ಮುಂದುವರಿಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದರಿಂದಾಗಿ ವೇತನ ಮತ್ತು ಇತರ ಭತ್ಯೆಗಳು ಅನಧಿಕೃತವಾಗಿ ಪಾವತಿಯಾಗುವುದನ್ನು ತಡೆಗಟ್ಟಲು ಈ ಕಠಿಣ ಕ್ರಮಕ್ಕೆ ಮುಂದಾಗಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಕಡ್ಡಾಯವಾಗಿ ಹೊರಗಡಬೇಕಾದ (Exit) 12 ವರ್ಗಗಳು: ಕೆಳಗಿನ ಯಾವುದೇ ಮಾನದಂಡಗಳ ಅಡಿಯಲ್ಲಿ ಬರುವ ನೌಕರರನ್ನು ಸಕ್ರಿಯ ಪಟ್ಟಿಯಿಂದ ತಕ್ಷಣವೇ ತೆಗೆದುಹಾಕಬೇಕಾಗುತ್ತದೆ: ಮರಣ (Death): ಮೃತಪಟ್ಟ ನೌಕರರ ವಿವರಗಳು. ವಯೋನಿವೃತ್ತಿ (Superannuation): ನಿವೃತ್ತಿ…
BIG NEWS :`ಅಂಗವಿಕಲರ ಮಾಸಾಶನ ಯೋಜನೆಯಡಿ’ ವಿಕಲಚೇತನರಿಗೆ ಸಿಗಲಿದೆ ಮಾಸಿಕ 2000 ರೂ. ಪಿಂಚಣಿ : ಹೀಗೆ ಅರ್ಜಿ ಸಲ್ಲಿಸಿ
ಬೆಂಗಳೂರು: ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹಾಗೂ ಅವರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಸರ್ಕಾರವು ‘ಅಂಗವಿಕಲರ ಮಾಸಾಶನ ಯೋಜನೆ’ಯನ್ನು ಜಾರಿಗೊಳಿಸಿದೆ. ಕೆಳಕಂಡ ವಿಕಲಚೇತನತೆ ಉಳ್ಳವರು, ವಿಕಲಚೇತನತೆಯೊಂದಿಗೆ ಹುಟ್ಟಿದ ಮಗು ಹಾಗೂ ಅಪಘಾತದಿಂದ ಅಂಗವಿಕಲತೆ ಉಂಟಾದ ವ್ಯಕ್ತಿಗಳು ಈ ಮಾಸಾಶನ ಯೋಜನೆಗೆ ಅರ್ಹರಾಗಿರುತ್ತಾರೆ. ಮಾಸಾಶನ ಪಡೆಯಲು ಇರಬೇಕಾದ ಅರ್ಹತೆಗಳು: ಆದಾಯ ಮಿತಿ: ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ವಾರ್ಷಿಕ ಆದಾಯವು ರೂ. 32,000/- ಕ್ಕಿಂತ ಕಡಿಮೆ ಇರಬೇಕು. ವಿಕಲಚೇತನತೆಯ ಪ್ರಮಾಣ: ವಿಕಲಚೇತನ ವ್ಯಕ್ತಿಗಳ ಕಾಯ್ದೆ 1995ರ ಪ್ರಕಾರ, ವೈದ್ಯಕೀಯ ಪ್ರಾಧಿಕಾರವು ಪ್ರಮಾಣೀಕರಿಸಿದ ರೀತಿಯಲ್ಲಿ ವಿಕಲಚೇತನತೆಯು ಶೇಕಡಾ 40 ಕ್ಕಿಂತ ಕಡಿಮೆ ಇರಬಾರದು. ಯೋಜನೆಯಡಿ ಬರುವ ವಿಕಲಚೇತನತೆಯ ವಿಧಗಳು: ಅಂಧತ್ವ ಮಂದದೃಷ್ಟಿ ಕುಷ್ಠರೋಗ ನಿವಾರಿತರು ಶ್ರವಣದೋಷವುಳ್ಳವರು ಚಲನವಲನ ಅಂಗವಿಕಲತೆ ಬುದ್ಧಿಮಾಂದ್ಯತೆ ಮಾನಸಿಕ ಅಸ್ವಸ್ಥತೆ ಮಾಸಿಕ ಪಿಂಚಣಿ ಮೊತ್ತದ ವಿವರ: ವೈದ್ಯಕೀಯ ಮಂಡಳಿಯಿಂದ ಪಡೆದ ಪ್ರಮಾಣ ಪತ್ರದ ಆಧಾರದ ಮೇಲೆ ಪಿಂಚಣಿ ಮೊತ್ತವನ್ನು ಈ ಕೆಳಗಿನಂತೆ ವರ್ಗೀಕರಿಸಲಾಗಿದೆ: ಕ್ರ.ಸಂ ವಿಕಲಚೇತನತೆಯ ಪ್ರಮಾಣ / ವಿವರ…
ಬೀದರ್: ಜಿಲ್ಲೆಯ ಪ್ರತಿಷ್ಠಿತ ಬ್ರಿಮ್ಸ್ (BRIMS) ಸರ್ಕಾರಿ ಆಸ್ಪತ್ರೆಯಲ್ಲಿ ತಡರಾತ್ರಿ ತಲ್ಲಣ ಉಂಟುಮಾಡುವ ಘಟನೆಯೊಂದು ನಡೆದಿದೆ. ಸಾರ್ವಜನಿಕರಿಗೆ ಜೀವ ನೀಡುವ ವೈದ್ಯರ ಮೇಲೆಯೇ ಕಿಡಿಗೇಡಿಗಳ ಗುಂಪೊಂದು ಧಾಂದಲೆ ನಡೆಸಿ, ಮನಸೋಇಚ್ಛೆ ಹಲ್ಲೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ತಡರಾತ್ರಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ಕರ್ತವ್ಯದಲ್ಲಿದ್ದ ಡಾ. ತುಕಾರಾಂ ಅವರು ಗಾಯಾಳಿಗೆ ಪ್ರಥಮ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಆದರೆ, ಚಿಕಿತ್ಸೆ ನೀಡುವ ವಿಚಾರದಲ್ಲಿ ರೋಗಿ ಜೊತೆ ಬಂದಿದ್ದ ಯುವಕರ ಗುಂಪು ವೈದ್ಯರೊಂದಿಗೆ ವಾಗ್ವಾದಕ್ಕೆ ಇಳಿದಿದೆ. ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ, ನಾಲ್ಕೈದು ಜನರಿದ್ದ ಯುವಕರ ದಂಡು ಡಾ. ತುಕಾರಾಂ ಅವರ ಮೇಲೆ ಮುಗಿಬಿದ್ದಿದೆ. ತೀರ ಕ್ಷುಲ್ಲಕ ಕಾರಣಕ್ಕಾಗಿ ವೈದ್ಯರನ್ನು ಹಿಗ್ಗಾಮುಗ್ಗಾ ಥಳಿಸಿ ಆಸ್ಪತ್ರೆಯ ಆವರಣದಲ್ಲೇ ರಂಪಾಟ ಸೃಷ್ಟಿಸಿದ್ದಾರೆ. ಕಿಡಿಗೇಡಿಗಳ ವರ್ತನೆಯಿಂದ ತೀವ್ರವಾಗಿ ಗಾಯಗೊಂಡಿರುವ ಡಾ. ತುಕಾರಾಂ ಅವರು ಸದ್ಯ ಅದೇ ಬ್ರಿಮ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ರಕ್ಷಣೆ ನೀಡಬೇಕಾದ…
ಬೆಂಗಳೂರು: ರಾಜ್ಯದಲ್ಲಿ ಕೃಷಿ ಉದ್ದೇಶಗಳಿಗಾಗಿ ಮಣ್ಣು ಸಾಗಾಟ ಮಾಡುವ ಹಾಗೂ ಜಮೀನು ಅಭಿವೃದ್ಧಿ ಪಡಿಸುವ ರೈತರಿಗೆ ಸರ್ಕಾರ ಮಹತ್ವದ ಮಾಹಿತಿ ನೀಡಿದೆ. ಕೃಷಿ ಭೂಮಿಯ ಕೆಲಸಗಳಿಗೆ ಇಲಾಖೆಯಿಂದ ಯಾವುದೇ ಕಠಿಣ ನಿರ್ಬಂಧಗಳಿಲ್ಲದೆ, ನಿಯಮಾನುಸಾರ ಅನುಮತಿ ಪಡೆಯಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು-2025ರ ನಿಯಮ 3-A(a) ಪ್ರಕಾರ, ರೈತರು ಮತ್ತು ಭೂಮಾಲೀಕರು ತಮ್ಮ ಸ್ವಂತ ಕೃಷಿ ಚಟುವಟಿಕೆಗಳಿಗಾಗಿ ಮಣ್ಣನ್ನು ಬಳಸಿಕೊಳ್ಳಲು ಇದ್ದ ಗೊಂದಲಗಳಿಗೆ ತೆರೆ ಬಿದ್ದಿದೆ. ಯಾವೆಲ್ಲಾ ಚಟುವಟಿಕೆಗಳಿಗೆ ಅನುಮತಿ ಸಿಗಲಿದೆ? ಹೊಸ ನಿಯಮಾವಳಿಗಳ ಪ್ರಕಾರ ಈ ಕೆಳಗಿನ ಕೆಲಸಗಳ ಸಮಯದಲ್ಲಿ ಸಿಗುವ ಮಣ್ಣನ್ನು ಬಳಸಿಕೊಳ್ಳಲು ಅವಕಾಶವಿರುತ್ತದೆ: ಪಟ್ಟಾ ಜಮೀನನ್ನು ಸಮತಟ್ಟು ಮಾಡುವುದು (Levelling). ಜಮೀನನ್ನು ಬೇಸಾಯಕ್ಕೆ ಯೋಗ್ಯವಾಗಿ ಅಭಿವೃದ್ಧಿಪಡಿಸುವುದು. ಕಟ್ಟಡ ನಿರ್ಮಾಣಕ್ಕಾಗಿ ಅಡಿಪಾಯ ತೆಗೆಯುವುದು. ನೀರಾವರಿ ಉದ್ದೇಶಕ್ಕಾಗಿ ಬಾವಿ ತೋಡುವುದು. ಮಳೆನೀರು ಕೊಯ್ಲು ಹಾಗೂ ಕೃಷಿ ಹೊಂಡ (Farm Pond) ನಿರ್ಮಾಣ ಮಾಡುವುದು. ಕೆರೆಗಳಲ್ಲಿ ಹೂಳು ತೆಗೆಯುವುದು ಹಾಗೂ ಮೀನುಗಾರಿಕೆ ಹೊಂಡಗಳನ್ನು ನಿರ್ಮಿಸುವುದು. ಅನುಮತಿ ಪಡೆಯುವುದು…
ಸಾಮಾನ್ಯವಾಗಿ ಚಿಕನ್ ಪ್ರಿಯರು ಲಿವರ್, ಲೆಗ್ ಪೀಸ್ ಅಥವಾ ಬ್ರೆಸ್ಟ್ ಪೀಸ್‌ಗಳನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ. ಆದರೆ ನಿಮಗೆ ಗೊತ್ತೇ? ಸಿಂಗಾಪುರ, ದಕ್ಷಿಣ ಆಫ್ರಿಕಾ ಮತ್ತು ಮೆಕ್ಸಿಕೋದಂತಹ ದೇಶಗಳಲ್ಲಿ ಸಾಮಾನ್ಯ ಚಿಕನ್‌ಗಿಂತ ಕೋಳಿ ಕಾಲುಗಳಿಗೆ (Chicken Feet) ಭಾರಿ ಬೇಡಿಕೆಯಿದೆ ಮತ್ತು ಇವುಗಳ ಬೆಲೆಯೂ ಕೂಡ ತೀರಾ ದುಬಾರಿ! ಇನ್ನು ಚೀನಾ ಮತ್ತು ವಿಯೆಟ್ನಾಂ ದೇಶಗಳಂತೂ ಕೋಳಿ ಕಾಲುಗಳನ್ನು ಇತರ ದೇಶಗಳಿಂದ ಭಾರಿ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತವೆ. ಅಷ್ಟಕ್ಕೂ ಈ ಕೋಳಿ ಕಾಲುಗಳಲ್ಲಿ ಅಡಗಿರುವ ಪೌಷ್ಟಿಕಾಂಶದ ಮೌಲ್ಯಗಳೇನು? ಇದನ್ನು ಹೇಗೆ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. ಕೋಳಿ ಕಾಲುಗಳಲ್ಲಿರುವ ಪೌಷ್ಟಿಕಾಂಶಗಳು ಅಮೆರಿಕದ ‘ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್’ (NIH) ಸಂಶೋಧನೆಯ ಪ್ರಕಾರ, ಕೋಳಿ ಕಾಲುಗಳಲ್ಲಿ ದೇಹಕ್ಕೆ ಪ್ರಯೋಜನಕಾರಿಯಾದ ಹಲವು ಪೋಷಕಾಂಶಗಳು ಮತ್ತು ಆರೋಗ್ಯಕರ ಗುಣಗಳಿವೆ. ಇವು ಕೇವಲ ಚರ್ಮ, ಮೂಳೆಗಳು ಮತ್ತು ಕರಗುವ ಕರಡುಗಳಿಂದ (Tendons) ಮಾಡಲ್ಪಟ್ಟಿದ್ದು, ಇವುಗಳಲ್ಲಿ ಸುಮಾರು ಶೇಕಡಾ 30 ರಿಂದ 35 ರಷ್ಟು…
ನಮ್ಮ ದೇಶದಲ್ಲಿ ಮೊಬೈಲ್ ಫೋನ್ಗಳು ಮತ್ತು ಟ್ಯಾಬ್ಲೆಟ್ಗಳಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ಸಾಲದ (EMI) ಮೂಲಕ ಖರೀದಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಗ್ರಾಹಕರ ಹಿತರಕ್ಷಣೆ ಮತ್ತು ಸಾಲ ವಸೂಲಾತಿಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಪ್ರಸ್ತಾಪಗಳನ್ನು ಮುಂದಿಟ್ಟಿದೆ. ಸಾಲಗಾರರು ಇಎಂಐ (EMI) ಪಾವತಿಸಲು ವಿಫಲವಾದರೆ, ಕೆಲವು ಕಠಿಣ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು, ಸಾಲ ನೀಡಿದ ಹಣಕಾಸು ಸಂಸ್ಥೆಗಳು ಮೊಬೈಲ್ ಅಥವಾ ಟ್ಯಾಬ್ಲೆಟ್ನ ಕೆಲವು ವೈಶಿಷ್ಟ್ಯಗಳನ್ನು (Features) ರಿಮೋಟ್ ಆಗಿ ಬ್ಲಾಕ್ ಮಾಡಲು ಅನುಮತಿಸುವ ಹೊಸ ಕರಡು ನಿಯಮಗಳನ್ನು ಆರ್ಬಿಐ ಬಿಡುಗಡೆ ಮಾಡಿದೆ. ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ವಾಣಿಜ್ಯ ಬ್ಯಾಂಕುಗಳು – ಜವಾಬ್ದಾರಿಯುತ ವ್ಯವಹಾರ ನಡವಳಿಕೆ) ತಿದ್ದುಪಡಿ ಆದೇಶಗಳು, 2026’ ಹೆಸರಿನಲ್ಲಿ ಬಿಡುಗಡೆಯಾಗಿರುವ ಈ ಕರಡು ನಿಯಮಗಳು ಅಕ್ಟೋಬರ್ 1, 2026 ರಿಂದ ಜಾರಿಗೆ ಬರುವ ಸಾಧ್ಯತೆಯಿದೆ. ಈ ಹೊಸ ನಿಯಮಗಳ ಸಂಪೂರ್ಣ ವಿವರಗಳು ಇಲ್ಲಿವೆ: 1. 90 ದಿನಗಳ ಬಾಕಿ ಇರಬೇಕು…
ನವದೆಹಲಿ : ಕೇಂದ್ರ ಸರ್ಕಾರಿ ಕೆಲಸದ ಹುಡುಕಾಟದಲ್ಲಿರುವ ನಿರುದ್ಯೋಗಿ ಯುವಜನತೆಗೆ ಭಾರತೀಯ ರೈಲ್ವೇ ಇಲಾಖೆಯು ಭರ್ಜರಿ ಸಿಹಿಸುದ್ದಿ ನೀಡಿದೆ. ದೇಶಾದ್ಯಂತ ಖಾಲಿ ಇರುವ ಸಾವಿರಾರು ಹುದ್ದೆಗಳ ಭರ್ತಿಗೆ ರೈಲ್ವೆ ನೇಮಕಾತಿ ಮಂಡಳಿ (RRB) ಗ್ರೀನ್ ಸಿಗ್ನಲ್ ನೀಡಿದ್ದು, ಸದ್ಯದಲ್ಲೇ ಬೃಹತ್ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ. ತಾಂತ್ರಿಕ ವಿಭಾಗದಲ್ಲಿ ಕೆರಿಯರ್ ರೂಪಿಸಿಕೊಳ್ಳಲು ಬಯಸುವವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಒಟ್ಟು 6,565 ಹುದ್ದೆಗಳ ಭರ್ತಿ: ಯಾವ್ಯಾವ ಹುದ್ದೆಗಳಿವೆ? ರೈಲ್ವೇ ಮಂಡಳಿಯು ಸದ್ಯಕ್ಕೆ ಶಾರ್ಟ್ ನೋಟಿಫಿಕೇಷನ್ (ಕಿರು ಅಧಿಸೂಚನೆ) ಹೊರಡಿಸಿದ್ದು, ಒಟ್ಟು 6,565 ಟೆಕ್ನಿಷಿಯನ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಇವುಗಳನ್ನು ಎರಡು ಮುಖ್ಯ ವಿಭಾಗಗಳಾಗಿ ವಿಂಗಡಿಸಲಾಗಿದೆ: ಟೆಕ್ನಿಷಿಯನ್ ಗ್ರೇಡ್-1 (ಸಿಗ್ನಲ್): 323 ಹುದ್ದೆಗಳು ಟೆಕ್ನಿಷಿಯನ್ ಗ್ರೇಡ್-3: 6,242 ಹುದ್ದೆಗಳು ಪ್ರಮುಖ ದಿನಾಂಕಗಳು (Important Dates) ಈ ಬೃಹತ್ ನೇಮಕಾತಿಯ ಸಂಪೂರ್ಣ ವಿವರಗಳನ್ನೊಳಗೊಂಡ ಅಧಿಕೃತ ಅಧಿಸೂಚನೆಯು ಜೂನ್ 30, 2026 ರಂದು ಪ್ರಕಟವಾಗಲಿದೆ. ಅರ್ಜಿ ಸಲ್ಲಿಕೆ ಆರಂಭ: ಜೂನ್ 30, 2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:…
ಬೆಂಗಳೂರು: ರಾಜ್ಯದ ಜನಸಾಮಾನ್ಯರಿಗೆ ನೆಮ್ಮದಿಯ ಸುದ್ದಿ ಸಿಕ್ಕಿದೆ. ಅಟಲ್ ಜೀ ಜನಸ್ನೇಹಿ ಕೇಂದ್ರಗಳ (AJSK) ಮೂಲಕ ನೀಡಲಾಗುವ ವಿವಿಧ ಸಾರ್ವಜನಿಕ ಸೇವೆಗಳನ್ನು ಇನ್ನಷ್ಟು ಪಾರದರ್ಶಕ ಹಾಗೂ ವೇಗಗೊಳಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆಯು ತನ್ನ ಸಾಫ್ಟ್ವೇರ್ನಲ್ಲಿ (AJSK NK5) ಮಹತ್ವದ ಬದಲಾವಣೆಗಳನ್ನು ತಂದಿದೆ. ಈ ಕುರಿತು ಅಟಲ್ ಜೀ ಜನಸ್ನೇಹಿ ನಿರ್ದೇಶನಾಲಯವು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಜ್ಞಾಪನ ಪತ್ರದ ಮೂಲಕ ಆದೇಶ ಹೊರಡಿಸಿದೆ. ಮೇ 21, 2026 ರಿಂದಲೇ ಜಾರಿಗೆ ಬಂದಿರುವ ಈ ಹೊಸ ವ್ಯವಸ್ಥೆಯ ಪ್ರಮುಖ ಮುಖ್ಯಾಂಶಗಳು ಈ ಕೆಳಗಿನಂತಿವೆ: 1. ‘ಫಿಫೋ’ (First In First Out) ಕಡ್ಡಾಯ ವ್ಯವಸ್ಥೆ: ಅರ್ಜಿಗಳ ವಿಲೇವಾರಿಯಲ್ಲಿ ತಾರತಮ್ಯ ತಪ್ಪಿಸಲು ‘ಮೊದಲು ಬಂದವರಿಗೆ ಮೊದಲ ಆದ್ಯತೆ’ (FIFO) ನಿಯಮವನ್ನು ಕಡ್ಡಾಯಗೊಳಿಸಲಾಗಿದೆ. ನಿಯಮ ಹೇಗೆ ಕೆಲಸ ಮಾಡುತ್ತದೆ?: ಉದಾಹರಣೆಗೆ, ಗ್ರಾಮ ಆಡಳಿತ ಅಧಿಕಾರಿ (VAO) ಲಾಗಿನ್ಗೆ ಮೇ 18 ರಂದು ಒಂದು ಜಾತಿ ಪ್ರಮಾಣ ಪತ್ರದ ಅರ್ಜಿ ಬಂದಿದ್ದು, ಅದೇ ಗ್ರಾಮದ ಮತ್ತೊಂದು ಅರ್ಜಿ ಮೇ…
ಬೆಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಭಾರಿ ವರ್ಗಾವಣೆ ಪ್ರಕ್ರಿಯೆ ನಡೆದಿದ್ದು, ಹಲವಾರು ASI ಹಾಗೂ PSI ಆಡಳಿತಾತ್ಮಕ ಕಾರಣಗಳಿಗಾಗಿ ತಕ್ಷಣದಿಂದ ಜಾರಿಗೆ ಬರುವಂತೆ ವಿವಿಧ ಪೊಲೀಸ್ ಠಾಣೆಗಳಿಗೆ ಸ್ಥಳ ನಿಯುಕ್ತಿಗೊಳಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಆದೇಶ ಹೊರಡಿಸಿದೆ. ವರ್ಗಾವಣೆಗೊಂಡ ಅಧಿಕಾರಿಗಳ ಸಂಪೂರ್ಣ ವಿವರ ಈ ಕೆಳಗಿನಂತಿದೆ: ಒಟ್ಟು 26 ಎಎಸ್‌ಐ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು, ವಿವರಗಳು ಹೀಗಿವೆ: ಕ್ರ.ಸಂ. ಅಧಿಕಾರಿಯ ಹೆಸರು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳ ವರ್ಗಾವಣೆಯಾದ ಸ್ಥಳ 1 ಮುನಿಕೃಷ್ಣಪ್ಪ ಹಲಸೂರು ಪಿ.ಎಸ್ ಕಾಡುಗೋಡಿ ಪಿ.ಎಸ್ 2 ನಂಜೇಗೌಡ ಕೋರಮಂಗಲ ಪಿ.ಎಸ್ ಯಲಹಂಕ ಸಂಚಾರಿ ಪಿ.ಎಸ್ 3 ರಮೇಶ್ ಬೆಳ್ಳಂದೂರು ಪಿ.ಎಸ್ ಮರತಹಳ್ಳಿ ಪಿ.ಎಸ್ 4 ನಟರಾಜ್ ಮರತಹಳ್ಳಿ ಪಿ.ಎಸ್ ಬೆಳ್ಳಂದೂರು ಪಿ.ಎಸ್ 5 ಸುರೇಶ್ ಹೆಚ್. ಕಾಮಾಕ್ಷಿಪಾಳ್ಯ ಸಂಚಾರಿ ಪಿ.ಎಸ್ ಆರ್.ಆರ್. ನಗರ ಪಿ.ಎಸ್ 6 ಬಿ.ಸಿ. ರವಿಕುಮಾರ್ ಆರ್.ಆರ್. ನಗರ ಪಿ.ಎಸ್ ಕಾಮಾಕ್ಷಿಪಾಳ್ಯ ಸಂಚಾರಿ ಪಿ.ಎಸ್ 7 ಹೆಚ್ ಪಿ ಅಕ್ರಮ್ ಎಸ್…














