Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಪ್ರಧಾನಿ ಮೋದಿ ಐತಿಹಾಸಿಕ ಸಾಧನೆ: ದಾಖಲೆ ಮುರಿದ ಖುಷಿಯಲ್ಲಿ ಎನ್‌ಡಿಎ ನಾಯಕರೊಂದಿಗೆ ‘ಜಾಲ್ಮುರಿ’ ಸವಿದ PM!

LPG ಬಿಟ್ಟು ಪೈಪ್ಡ್ ನ್ಯಾಚುರಲ್ ಗ್ಯಾಸ್ ಗೆ ಶಿಫ್ಟ್ ಆಗಿ: ದೇಶಾದ್ಯಂತ ಸರ್ಕಾರದಿಂದ ಹೊಸ ಅಭಿಯಾನ !

ಜನರ ಪ್ರೀತಿ, ವಿಶ್ವಾಸಕ್ಕೆ ಎಂದಿಗೂ ಚಿರಋಣಿ: ಮದ್ದೂರು ಶಾಸಕ ಕೆ.ಎಂ.ಉದಯ್

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ರೈತರೇ ಕೃಷಿ ಹೊಂಡ, ಕೆರೆ ಹೂಳು ತೆಗೆಯುವ ಮುನ್ನ ಗಮನಿಸಿ: `ಮಣ್ಣು’ ಬಳಕೆಗೆ ಸರ್ಕಾರದ ಹೊಸ ರೂಲ್ಸ್!
KARNATAKA

BIG NEWS : ರಾಜ್ಯದ ರೈತರೇ ಕೃಷಿ ಹೊಂಡ, ಕೆರೆ ಹೂಳು ತೆಗೆಯುವ ಮುನ್ನ ಗಮನಿಸಿ: `ಮಣ್ಣು’ ಬಳಕೆಗೆ ಸರ್ಕಾರದ ಹೊಸ ರೂಲ್ಸ್!

By kannadanewsnow57

ಬೆಂಗಳೂರು: ರಾಜ್ಯದಲ್ಲಿ ಕೃಷಿ ಉದ್ದೇಶಗಳಿಗಾಗಿ ಮಣ್ಣು ಸಾಗಾಟ ಮಾಡುವ ಹಾಗೂ ಜಮೀನು ಅಭಿವೃದ್ಧಿ ಪಡಿಸುವ ರೈತರಿಗೆ ಸರ್ಕಾರ ಮಹತ್ವದ ಮಾಹಿತಿ ನೀಡಿದೆ. ಕೃಷಿ ಭೂಮಿಯ ಕೆಲಸಗಳಿಗೆ ಇಲಾಖೆಯಿಂದ ಯಾವುದೇ ಕಠಿಣ ನಿರ್ಬಂಧಗಳಿಲ್ಲದೆ, ನಿಯಮಾನುಸಾರ ಅನುಮತಿ ಪಡೆಯಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು-2025ರ ನಿಯಮ 3-A(a) ಪ್ರಕಾರ, ರೈತರು ಮತ್ತು ಭೂಮಾಲೀಕರು ತಮ್ಮ ಸ್ವಂತ ಕೃಷಿ ಚಟುವಟಿಕೆಗಳಿಗಾಗಿ ಮಣ್ಣನ್ನು ಬಳಸಿಕೊಳ್ಳಲು ಇದ್ದ ಗೊಂದಲಗಳಿಗೆ ತೆರೆ ಬಿದ್ದಿದೆ.

ಯಾವೆಲ್ಲಾ ಚಟುವಟಿಕೆಗಳಿಗೆ ಅನುಮತಿ ಸಿಗಲಿದೆ?
ಹೊಸ ನಿಯಮಾವಳಿಗಳ ಪ್ರಕಾರ ಈ ಕೆಳಗಿನ ಕೆಲಸಗಳ ಸಮಯದಲ್ಲಿ ಸಿಗುವ ಮಣ್ಣನ್ನು ಬಳಸಿಕೊಳ್ಳಲು ಅವಕಾಶವಿರುತ್ತದೆ:

ಪಟ್ಟಾ ಜಮೀನನ್ನು ಸಮತಟ್ಟು ಮಾಡುವುದು (Levelling).

ಜಮೀನನ್ನು ಬೇಸಾಯಕ್ಕೆ ಯೋಗ್ಯವಾಗಿ ಅಭಿವೃದ್ಧಿಪಡಿಸುವುದು.

ಕಟ್ಟಡ ನಿರ್ಮಾಣಕ್ಕಾಗಿ ಅಡಿಪಾಯ ತೆಗೆಯುವುದು.

ನೀರಾವರಿ ಉದ್ದೇಶಕ್ಕಾಗಿ ಬಾವಿ ತೋಡುವುದು.

ಮಳೆನೀರು ಕೊಯ್ಲು ಹಾಗೂ ಕೃಷಿ ಹೊಂಡ (Farm Pond) ನಿರ್ಮಾಣ ಮಾಡುವುದು.

ಕೆರೆಗಳಲ್ಲಿ ಹೂಳು ತೆಗೆಯುವುದು ಹಾಗೂ ಮೀನುಗಾರಿಕೆ ಹೊಂಡಗಳನ್ನು ನಿರ್ಮಿಸುವುದು.

ಅನುಮತಿ ಪಡೆಯುವುದು ಹೇಗೆ?
ಮೇಲಿನ ಚಟುವಟಿಕೆಗಳ ಸಂದರ್ಭದಲ್ಲಿ ದೊರೆಯುವ ಮಣ್ಣನ್ನು ನಿಯಮಬದ್ಧವಾಗಿ ಬಳಸಿಕೊಳ್ಳಲು ಅಥವಾ ಸಾಗಿಸಲು ರೈತರು ಸಂಬಂಧಪಟ್ಟ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕರು ಅಥವಾ ಹಿರಿಯ ಭೂವಿಜ್ಞಾನಿಗಳಿಗೆ ನಿಗದಿತ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು. ಸೂಕ್ತ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಇಲಾಖೆಯಿಂದ ಕಾರ್ಯಾನುಮತಿ (ಅನುಮೋದನೆ) ಪಡೆಯಬಹುದಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಈ ನಿಯಮವು ಕೃಷಿ ಮತ್ತು ಭೂ ಅಭಿವೃದ್ಧಿ ಉದ್ದೇಶಗಳಿಗೆ ಪೂರಕವಾಗಿದ್ದು, ರೈತರು ನಿಯಮಾವಳಿಗಳನ್ನು ಪಾಲಿಸಿ ಇಲಾಖೆಯಿಂದ ಅಧಿಕೃತ ಅನುಮತಿ ಪತ್ರ ಪಡೆದುಕೊಂಡೇ ಮಣ್ಣಿನ ಸಾಗಾಟ ಅಥವಾ ಬಳಕೆಯನ್ನು ಮಾಡಬೇಕಾಗುತ್ತದೆ.

BIG NEWS: Farmers in the state should be careful before removing silt from agricultural ponds and lakes: Government's new rules for soil use!
Share. Facebook Twitter LinkedIn WhatsApp Email

Related Posts

ಜನರ ಪ್ರೀತಿ, ವಿಶ್ವಾಸಕ್ಕೆ ಎಂದಿಗೂ ಚಿರಋಣಿ: ಮದ್ದೂರು ಶಾಸಕ ಕೆ.ಎಂ.ಉದಯ್

2 Mins Read

BIG NEWS: ಮೇಲುಕೋಟೆ ಯೋಗನರಸಿಂಹಸ್ವಾಮಿ ದೇವಸ್ಥಾನದ ಖಜಾನೆಗೆ ಕನ್ನ: ಅರ್ಚಕರು, ಸಿಬ್ಬಂದಿ ವಿರುದ್ಧ ದೂರು!

2 Mins Read

ಮಕ್ಕಳ ಪೋಷಕರ ಗಮನಕ್ಕೆ: ಜೂನ್.28ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ, ತಪ್ಪದೇ ಹಾಕಿಸಿ

1 Min Read
Recent News

​ಪ್ರಧಾನಿ ಮೋದಿ ಐತಿಹಾಸಿಕ ಸಾಧನೆ: ದಾಖಲೆ ಮುರಿದ ಖುಷಿಯಲ್ಲಿ ಎನ್‌ಡಿಎ ನಾಯಕರೊಂದಿಗೆ ‘ಜಾಲ್ಮುರಿ’ ಸವಿದ PM!

LPG ಬಿಟ್ಟು ಪೈಪ್ಡ್ ನ್ಯಾಚುರಲ್ ಗ್ಯಾಸ್ ಗೆ ಶಿಫ್ಟ್ ಆಗಿ: ದೇಶಾದ್ಯಂತ ಸರ್ಕಾರದಿಂದ ಹೊಸ ಅಭಿಯಾನ !

ಜನರ ಪ್ರೀತಿ, ವಿಶ್ವಾಸಕ್ಕೆ ಎಂದಿಗೂ ಚಿರಋಣಿ: ಮದ್ದೂರು ಶಾಸಕ ಕೆ.ಎಂ.ಉದಯ್

​’ನಿಮ್ಮ ಮಕ್ಕಳನ್ನು ಪ್ರತಿಭಟಿಸಲು ಬಿಡಿ’: ಪುಣೆಯಲ್ಲಿ ನಾಳೆ ಸಿಜೆಪಿ ಅಭಿಯತ್ ದಿಪ್ಕೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

State News
KARNATAKA

ಜನರ ಪ್ರೀತಿ, ವಿಶ್ವಾಸಕ್ಕೆ ಎಂದಿಗೂ ಚಿರಋಣಿ: ಮದ್ದೂರು ಶಾಸಕ ಕೆ.ಎಂ.ಉದಯ್

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಮಂಡ್ಯ : ಕ್ಷೇತ್ರದ ಜನರ ಪ್ರೀತಿ, ವಿಶ್ವಾಸಕ್ಕೆ ನಾನು ಎಂದೆದಿಗೂ ಚಿರಋಣಿಯಾಗಿರುತ್ತೇನೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು. ಮದ್ದೂರು ತಾಲೂಕಿನ…

BIG NEWS: ಮೇಲುಕೋಟೆ ಯೋಗನರಸಿಂಹಸ್ವಾಮಿ ದೇವಸ್ಥಾನದ ಖಜಾನೆಗೆ ಕನ್ನ: ಅರ್ಚಕರು, ಸಿಬ್ಬಂದಿ ವಿರುದ್ಧ ದೂರು!

ಮಕ್ಕಳ ಪೋಷಕರ ಗಮನಕ್ಕೆ: ಜೂನ್.28ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ, ತಪ್ಪದೇ ಹಾಕಿಸಿ

12 ವರ್ಷಗಳ ಸಾರ್ಥಕ ಸೇವೆ: ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ ಹೆಚ್.ಡಿ. ಕುಮಾರಸ್ವಾಮಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.