Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS :`ಅಂಗವಿಕಲರ ಮಾಸಾಶನ ಯೋಜನೆಯಡಿ’ ವಿಕಲಚೇತನರಿಗೆ ಸಿಗಲಿದೆ ಮಾಸಿಕ 2000 ರೂ. ಪಿಂಚಣಿ : ಹೀಗೆ ಅರ್ಜಿ ಸಲ್ಲಿಸಿ

SHOCKING : ಬೀದರ್ ನ ಬ್ರಿಮ್ಸ್ ಆಸ್ಪತ್ರೆಯಲ್ಲೇ ವೈದ್ಯ ಡಾ.ತುಕಾರಂ ಮೇಲೆ 4-5 ಜನರಿಂದ ಹಲ್ಲೆ.!

bengaluru-rain-damages-rajajinagar-tree-fall

ಬೆಂಗಳೂರಿನಲ್ಲಿ ಹತ್ತಾರು ಮಳೆ ಅವಾಂತರ : ಹಲವೆಡೆ ಮರಗಳು ಧರೆಗೆ, ವಾಹನಗಳು ಜಖಂ !

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಬೀದರ್ ನ ಬ್ರಿಮ್ಸ್ ಆಸ್ಪತ್ರೆಯಲ್ಲೇ ವೈದ್ಯ ಡಾ.ತುಕಾರಂ ಮೇಲೆ 4-5 ಜನರಿಂದ ಹಲ್ಲೆ.!
KARNATAKA

SHOCKING : ಬೀದರ್ ನ ಬ್ರಿಮ್ಸ್ ಆಸ್ಪತ್ರೆಯಲ್ಲೇ ವೈದ್ಯ ಡಾ.ತುಕಾರಂ ಮೇಲೆ 4-5 ಜನರಿಂದ ಹಲ್ಲೆ.!

By kannadanewsnow57

ಬೀದರ್: ಜಿಲ್ಲೆಯ ಪ್ರತಿಷ್ಠಿತ ಬ್ರಿಮ್ಸ್ (BRIMS) ಸರ್ಕಾರಿ ಆಸ್ಪತ್ರೆಯಲ್ಲಿ ತಡರಾತ್ರಿ ತಲ್ಲಣ ಉಂಟುಮಾಡುವ ಘಟನೆಯೊಂದು ನಡೆದಿದೆ. ಸಾರ್ವಜನಿಕರಿಗೆ ಜೀವ ನೀಡುವ ವೈದ್ಯರ ಮೇಲೆಯೇ ಕಿಡಿಗೇಡಿಗಳ ಗುಂಪೊಂದು ಧಾಂದಲೆ ನಡೆಸಿ, ಮನಸೋಇಚ್ಛೆ ಹಲ್ಲೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ತಡರಾತ್ರಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ಕರ್ತವ್ಯದಲ್ಲಿದ್ದ ಡಾ. ತುಕಾರಾಂ ಅವರು ಗಾಯಾಳಿಗೆ ಪ್ರಥಮ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಆದರೆ, ಚಿಕಿತ್ಸೆ ನೀಡುವ ವಿಚಾರದಲ್ಲಿ ರೋಗಿ ಜೊತೆ ಬಂದಿದ್ದ ಯುವಕರ ಗುಂಪು ವೈದ್ಯರೊಂದಿಗೆ ವಾಗ್ವಾದಕ್ಕೆ ಇಳಿದಿದೆ.

ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ, ನಾಲ್ಕೈದು ಜನರಿದ್ದ ಯುವಕರ ದಂಡು ಡಾ. ತುಕಾರಾಂ ಅವರ ಮೇಲೆ ಮುಗಿಬಿದ್ದಿದೆ. ತೀರ ಕ್ಷುಲ್ಲಕ ಕಾರಣಕ್ಕಾಗಿ ವೈದ್ಯರನ್ನು ಹಿಗ್ಗಾಮುಗ್ಗಾ ಥಳಿಸಿ ಆಸ್ಪತ್ರೆಯ ಆವರಣದಲ್ಲೇ ರಂಪಾಟ ಸೃಷ್ಟಿಸಿದ್ದಾರೆ.

ಕಿಡಿಗೇಡಿಗಳ ವರ್ತನೆಯಿಂದ ತೀವ್ರವಾಗಿ ಗಾಯಗೊಂಡಿರುವ ಡಾ. ತುಕಾರಾಂ ಅವರು ಸದ್ಯ ಅದೇ ಬ್ರಿಮ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ರಕ್ಷಣೆ ನೀಡಬೇಕಾದ ಆಸ್ಪತ್ರೆಯಲ್ಲೇ ವೈದ್ಯರ ಮೇಲೆ ನಡೆದಿರುವ ಈ ಹಲ್ಲೆ ಸಹೋದ್ಯೋಗಿಗಳು ಹಾಗೂ ವೈದ್ಯಕೀಯ ಸಿಬ್ಬಂದಿಯ ಆಕ್ರೋಶಕ್ಕೆ ಕಾರಣವಾಗಿದೆ.

ಈ ಪುಂಡಾಟಿಕೆಗೆ ಸಂಬಂಧಿಸಿದಂತೆ ಬೀದರ್‌ನ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿದೆ.

SHOCKING: Doctor Dr. Tukaram was attacked by 4-5 people at BRIMS Hospital in Bidar!
Share. Facebook Twitter LinkedIn WhatsApp Email

Related Posts

BIG NEWS :`ಅಂಗವಿಕಲರ ಮಾಸಾಶನ ಯೋಜನೆಯಡಿ’ ವಿಕಲಚೇತನರಿಗೆ ಸಿಗಲಿದೆ ಮಾಸಿಕ 2000 ರೂ. ಪಿಂಚಣಿ : ಹೀಗೆ ಅರ್ಜಿ ಸಲ್ಲಿಸಿ

1 Min Read
bengaluru-rain-damages-rajajinagar-tree-fall

ಬೆಂಗಳೂರಿನಲ್ಲಿ ಹತ್ತಾರು ಮಳೆ ಅವಾಂತರ : ಹಲವೆಡೆ ಮರಗಳು ಧರೆಗೆ, ವಾಹನಗಳು ಜಖಂ !

4 Mins Read

BIG NEWS : ರಾಜ್ಯದ ರೈತರೇ ಕೃಷಿ ಹೊಂಡ, ಕೆರೆ ಹೂಳು ತೆಗೆಯುವ ಮುನ್ನ ಗಮನಿಸಿ: `ಮಣ್ಣು’ ಬಳಕೆಗೆ ಸರ್ಕಾರದ ಹೊಸ ರೂಲ್ಸ್!

1 Min Read
Recent News

BIG NEWS :`ಅಂಗವಿಕಲರ ಮಾಸಾಶನ ಯೋಜನೆಯಡಿ’ ವಿಕಲಚೇತನರಿಗೆ ಸಿಗಲಿದೆ ಮಾಸಿಕ 2000 ರೂ. ಪಿಂಚಣಿ : ಹೀಗೆ ಅರ್ಜಿ ಸಲ್ಲಿಸಿ

SHOCKING : ಬೀದರ್ ನ ಬ್ರಿಮ್ಸ್ ಆಸ್ಪತ್ರೆಯಲ್ಲೇ ವೈದ್ಯ ಡಾ.ತುಕಾರಂ ಮೇಲೆ 4-5 ಜನರಿಂದ ಹಲ್ಲೆ.!

bengaluru-rain-damages-rajajinagar-tree-fall

ಬೆಂಗಳೂರಿನಲ್ಲಿ ಹತ್ತಾರು ಮಳೆ ಅವಾಂತರ : ಹಲವೆಡೆ ಮರಗಳು ಧರೆಗೆ, ವಾಹನಗಳು ಜಖಂ !

ಪದವೀಧರರಿಗೆ ಸುವರ್ಣಾವಕಾಶ: 7,150 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ SBI ಬೃಹತ್ ನೇಮಕಾತಿ; ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ!

State News
KARNATAKA

BIG NEWS :`ಅಂಗವಿಕಲರ ಮಾಸಾಶನ ಯೋಜನೆಯಡಿ’ ವಿಕಲಚೇತನರಿಗೆ ಸಿಗಲಿದೆ ಮಾಸಿಕ 2000 ರೂ. ಪಿಂಚಣಿ : ಹೀಗೆ ಅರ್ಜಿ ಸಲ್ಲಿಸಿ

By kannadanewsnow57 KARNATAKA 1 Min Read

ಬೆಂಗಳೂರು: ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹಾಗೂ ಅವರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಸರ್ಕಾರವು ‘ಅಂಗವಿಕಲರ ಮಾಸಾಶನ ಯೋಜನೆ’ಯನ್ನು…

SHOCKING : ಬೀದರ್ ನ ಬ್ರಿಮ್ಸ್ ಆಸ್ಪತ್ರೆಯಲ್ಲೇ ವೈದ್ಯ ಡಾ.ತುಕಾರಂ ಮೇಲೆ 4-5 ಜನರಿಂದ ಹಲ್ಲೆ.!

bengaluru-rain-damages-rajajinagar-tree-fall

ಬೆಂಗಳೂರಿನಲ್ಲಿ ಹತ್ತಾರು ಮಳೆ ಅವಾಂತರ : ಹಲವೆಡೆ ಮರಗಳು ಧರೆಗೆ, ವಾಹನಗಳು ಜಖಂ !

BIG NEWS : ರಾಜ್ಯದ ರೈತರೇ ಕೃಷಿ ಹೊಂಡ, ಕೆರೆ ಹೂಳು ತೆಗೆಯುವ ಮುನ್ನ ಗಮನಿಸಿ: `ಮಣ್ಣು’ ಬಳಕೆಗೆ ಸರ್ಕಾರದ ಹೊಸ ರೂಲ್ಸ್!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.