Author: ಸುರೇಶ್‌

"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು

ತಿರುಪತಿ: ದಕ್ಷಿಣ ಭಾರತದ ಖ್ಯಾತ ನಟಿ, ‘ದಕ್ಷಿಣದ ಸುಂದರಿ’ ಎಂದೇ ಕರೆಯಲ್ಪಡುವ ತ್ರಿಷಾ ಕೃಷ್ಣನ್ ಅವರು ಇಂದು (ಮೇ 4) ಆಂಧ್ರಪ್ರದೇಶದ ಪವಿತ್ರ ಯಾತ್ರಾಸ್ಥಳವಾದ ತಿರುಪತಿಗೆ ಭೇಟಿ ನೀಡಿದ್ದಾರೆ. ಇಂದು ಅವರ ಜನ್ಮದಿನವಾಗಿದ್ದು, ಈ ವಿಶೇಷ ದಿನದಂದು ತಿರುಮಲ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ಆಶೀರ್ವಾದ ಪಡೆದಿದ್ದಾರೆ. ಮುಂಜಾನೆಯೇ ದೇವಸ್ಥಾನಕ್ಕೆ ಆಗಮಿಸಿದ ನಟಿ, ವಿಐಪಿ ದರ್ಶನದ ಮೂಲಕ ದೇವರ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕಾಕತಾಳೀಯವಾಗಿ ಚುನಾವಣಾ ಫಲಿತಾಂಶದ ದಿನ: ಇಂದು ಕೇವಲ ತ್ರಿಷಾ ಅವರ ಹುಟ್ಟುಹಬ್ಬ ಮಾತ್ರವಲ್ಲದೆ, ರಾಜಕೀಯವಾಗಿಯೂ ಅತ್ಯಂತ ಮಹತ್ವದ ದಿನವಾಗಿದೆ. ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆಯುತ್ತಿದ್ದು, ಫಲಿತಾಂಶಕ್ಕಾಗಿ ಇಡೀ ದೇಶವೇ ಕಾತರದಿಂದ ಕಾಯುತ್ತಿದೆ. ಇಂತಹ ಬಿರುಸಿನ ರಾಜಕೀಯ ಬೆಳವಣಿಗೆಗಳ ನಡುವೆಯೇ ತ್ರಿಷಾ ಅವರು ಆಧ್ಯಾತ್ಮದ ಕಡೆ ಮುಖ ಮಾಡಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ಅವರು ಈ ಭೇಟಿಯನ್ನು ಕೇವಲ ವೈಯಕ್ತಿಕ ಪ್ರಾರ್ಥನೆಗಾಗಿ ಮಾಡಿದ್ದಾರೋ ಅಥವಾ ಈ ದಿನದ ಮಹತ್ವದ ಹಿನ್ನೆಲೆಯಲ್ಲಿ…

Read More

ಗದಗ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ ಸಂಭ್ರಮದ ನಡುವೆಯೇ ಭಾನುವಾರ ಸಂಜೆ ಭೀಕರ ಅಪಘಾತವೊಂದು ಸಂಭವಿಸಿದೆ. ಮಠದ ಆವರಣದಲ್ಲಿ ಅಳವಡಿಸಲಾಗಿದ್ದ ‘ಡ್ಯಾನ್ಸಿಂಗ್ ಫ್ಲೈ’ (Dancing Fly) ದೈತ್ಯ ಜೋಕಾಲಿಯ ಸುಮಾರು 10ಕ್ಕೂ ಹೆಚ್ಚು ತೊಟ್ಟಿಲುಗಳು ಅಕಸ್ಮಾತ್ತಾಗಿ ಕಳಚಿ ಬಿದ್ದ ಪರಿಣಾಮ 8 ಮಂದಿ ಭಕ್ತರು ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆಯ ವಿವರ: ಜಾತ್ರೆಯ ಹಿನ್ನೆಲೆಯಲ್ಲಿ ಭಾನುವಾರ ರಜೆ ಇದ್ದಿದ್ದರಿಂದ ಮಠದ ಆವರಣದಲ್ಲಿ ಭಕ್ತರ ಹಾಗೂ ಸಾರ್ವಜನಿಕರ ದಂಡೇ ಹರಿದುಬಂದಿತ್ತು. ಮಕ್ಕಳು ಮತ್ತು ಯುವಕರು ಸೇರಿದಂತೆ ಹಲವರು ಉತ್ಸಾಹದಿಂದ ಡ್ಯಾನ್ಸಿಂಗ್ ಫ್ಲೈ ಜೋಕಾಲಿಯಲ್ಲಿ ಕುಳಿತು ಆನಂದಿಸುತ್ತಿದ್ದರು. ಆದರೆ, ಜೋಕಾಲಿ ವೇಗವಾಗಿ ತಿರುಗುತ್ತಿದ್ದಾಗ ತಾಂತ್ರಿಕ ದೋಷ ಅಥವಾ ಅತಿಯಾದ ಒತ್ತಡದ ಕಾರಣದಿಂದ ತೊಟ್ಟಿಲುಗಳ ಕೊಂಡಿಗಳು ಒಂದೊಂದಾಗಿ ಕಳಚಲು ಆರಂಭಿಸಿವೆ. ಕ್ಷಣಾರ್ಧದಲ್ಲಿ ಹತ್ತಕ್ಕೂ ಹೆಚ್ಚು ತೊಟ್ಟಿಲುಗಳು ನೆಲಕ್ಕೆ ಅಪ್ಪಳಿಸಿದ್ದು, ಅಲ್ಲಿದ್ದ ಜನರಲ್ಲಿ ಆತಂಕ ಮತ್ತು ಚೀರಾಟ ಉಂಟಾಯಿತು. ಆಸ್ಪತ್ರೆಗೆ ದಾಖಲು: ಈ ಭೀಕರ ಅಪಘಾತದಲ್ಲಿ ಗಾಯಗೊಂಡ…

Read More

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯು ಅಂತಿಮ ಹಂತದತ್ತ ಸಾಗುತ್ತಿದ್ದು, ಇಡೀ ದೇಶದ ಗಮನ ಸೆಳೆದಿದ್ದ ‘ದಳಪತಿ’ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಅಭೂತಪೂರ್ವ ಸಾಧನೆ ಮಾಡಿದೆ. ಆರಂಭಿಕ ಹಂತದಿಂದಲೇ ಮುನ್ನಡೆ ಕಾಯ್ದುಕೊಂಡಿದ್ದ ವಿಜಯ್ ಅವರ ಪಕ್ಷ, ಇದೀಗ 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ‘ಸೆಂಚೂರಿ’ ಬಾರಿಸಿದೆ. ಈ ಬೆಳವಣಿಗೆಯು ದ್ರಾವಿಡ ರಾಜಕಾರಣದ ದಿಗ್ಗಜ ಪಕ್ಷಗಳಾದ ಡಿಎಂಕೆ ಮತ್ತು ಎಐಡಿಎಂಕೆಗೆ ಭಾರಿ ಆಘಾತ ನೀಡಿದೆ. ಸ್ತಬ್ದವಾದ ಡಿಎಂಕೆ ಪಾಳಯ; ಸ್ಟಾಲಿನ್‌ಗೆ ಮುಖಭಂಗ ಕಳೆದ ಐದು ವರ್ಷಗಳಿಂದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಸಿಎಂ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಮೈತ್ರಿಕೂಟಕ್ಕೆ ಈ ಫಲಿತಾಂಶ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಸದ್ಯದ ಮಾಹಿತಿ ಪ್ರಕಾರ ಡಿಎಂಕೆ 52 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದ್ದು, ಆಡಳಿತ ವಿರೋಧಿ ಅಲೆ ಮತ್ತು ವಿಜಯ್ ಅವರ ಜನಪ್ರಿಯತೆ ಸ್ಟಾಲಿನ್ ಅವರ ಲೆಕ್ಕಾಚಾರವನ್ನು ಉಲ್ಟಾ ಮಾಡಿದೆ. ಪ್ರಬಲ ಸಂಘಟನೆ ಹೊಂದಿದ್ದರೂ ಸಹ,…

Read More

ನವದೆಹಲಿ: ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಆರಂಭವಾಗಿದ್ದು, 823 ಕ್ಷೇತ್ರಗಳ ಅಭ್ಯರ್ಥಿಗಳ ಹಣೆಬರಹ ಇಂದು ಮಧ್ಯಾಹ್ನದ ವೇಳೆಗೆ ಬಹುತೇಕ ಸ್ಪಷ್ಟವಾಗಲಿದೆ. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಬಿಜೆಪಿ 124 ಕ್ಷೇತ್ರಗಳಲ್ಲಿ ಮುನ್ನಡ ಸಾಧಿಸಿದ್ದರೆ, ಟಿಎಂಸಿ 118 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ತಮಿಳುನಾಡು ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಎಐಡಿಎಂಕೆ 42 ಕ್ಷೇತ್ರಗಳಲ್ಲಿ, ಡಿಎಂಕೆ 52 ಕ್ಷೇತ್ರಗಳಲ್ಲಿ, ಟಿವಿಕೆ ಶತಕದ ಅಂಚಿನಲ್ಲಿ ಇದ್ದು ಮುನ್ನಡೆ ಸಾಧಿಸಿದೆ. ಅಸ್ಸಾಂ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಬಿಜೆಪಿ 69 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 15 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.ಕೇರಳ ವಿಧಾನಸಭೆ ಚುನಾವಣೆ ಮತ ಎಣಿಕೆಯಲ್ಲಿ ಯುಡಿಪಿಎಫ್ 71 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಮ್ಯಾಜಿಕ್ ನಂಬರ್ ದಾಟಿದೆ.

Read More

ಬೆಂಗಳೂರು : ನೀಟ್ ಪರೀಕ್ಷೆವಾಗಿ 10 ನಿಮಿಷ ತಡವಾಗಿ ಬಂದಿದ್ದಕ್ಕೆ ಸಿಬ್ಬಂದಿಗಳು ವಿದ್ಯಾರ್ಥಿನಿಯರಿಗೆ ನೀಟ್ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿರುವ ಘಟನೆ ಬೆಂಗಳೂರಿನ ಯಲಹಂಕದ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ. ಇಬ್ಬರು ವಿದ್ಯಾರ್ಥಿನಿಯರು ಪರೀಕ್ಷಾ ಕೇಂದ್ರಕ್ಕೆ 10 ನಿಮಿಷ ತಡವಾಗಿ ಬಂದಿದ್ದರು. ಈ ವೇಳೆ ಸಿಬ್ಬಂದಿಗಳು 10 ನಿಮಿಷ ತಡವಾಗಿದೆ ಎಂದು ನೀಟ್ ಎಕ್ಸಾಮ್ ಪರೀಕ್ಷೆ ಬರೆಯಲು ನಿರಾಕರಿಸಿದ್ದಾರೆ. ಬೆಂಗಳೂರಿನ ಆರ್ ಸಿ ಕಾಲೇಜಿಗೆ ವಿದ್ಯಾರ್ಥಿನಿ 20 ನಿಮಿಷ ತಡವಾಗಿ ಬಂದಿದ್ದಾಳೆ. ಮಧ್ಯಾಹ್ನ 2 ಗಂಟೆಗೆ ನೀಟ್ ಎಕ್ಸಾಮ್ ಆರಂಭವಾಗಿದ್ದು, ಮಧ್ಯಾಹ್ನ 1:30ರ ವರೆಗೆ ಎಕ್ಸಾಮ್ ಸೆಂಟರ್ನ ಗೇಟ್ ಓಪನ್ ಆಗಿತ್ತು. ಟ್ರಾಫಿಕ್ ಜಾಮ್ ನಿಂದ ಯುವತಿ 20 ನಿಮಿಷಗಳ ಕಾಲ ತಡವಾಗಿ ಬಂದಿದ್ದಾಳೆ. ಗೇಟ್ ಕ್ಲೋಸ್ ಆಗಿದೆ ಎಂದು ಸಿಬ್ಬಂದಿಗಳು ಅವಕಾಶ ನಿರಾಕರಿಸಿದ್ದಾರೆ. ಎಕ್ಸಾಮ್ ಬರೆಯಲು ಆಗದೆ ಯುವತಿ ಕಣ್ಣೀರು ಹಾಕಿದ್ದಾಳೆ. ಚಾಲುಕ್ಯ ಸರ್ಕಲ್ ಬಳಿಯ ಆರ್ ಸಿ ಕಾಲೇಜಿನ ಎಕ್ಸಾಮ್ ಸೆಂಟರ್ನಲ್ಲಿ ಈ ಒಂದು ಘಟನೆ ನಡೆದಿದೆ. ಅತ್ತಿಬೆಲೆಯಿಂದ…

Read More

ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್ ಅವರು ಸುಪ್ರೀಂ ಕೋರ್ಟ್ ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಒಂದು ಅರ್ಜಿಯ ವಿಚಾರಣೆ ನಾಳೆ ಸುಪ್ರೀಂ ಕೋರ್ಟಲ್ಲಿ ನಡೆಯಲಿದೆ. ಇದೀಗ ಜಾಮೀನು ಅರ್ಜಿಯಲ್ಲಿ ನಟ ದರ್ಶನ್ ತಮ್ಮ ಅಹವಾಲು ಹೇಳಿಕೊಂಡಿದ್ದಾರೆ. ಅರ್ಜಿಯಲ್ಲಿ ನಟ ದರ್ಶನ್ ಅವರು ಜೈಲಿನಲ್ಲಿ ಸಹ ಕೈದಿಗಳಿಂದ ಬೆದರಿಕೆ ಮತ್ತು ನಿಂದನೆ ಬರುತ್ತಿದೆ. ಜೈಲಿನಲ್ಲಿ ನನ್ನನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ನಿಯಮ ಮೀರಿ ಕ್ವಾರನ್ಟೈನ್ ಸೆಲ್ ನಲ್ಲಿ ಇಡಲಾಗಿದೆ. ವೃತ್ತಿ ಜೀವನದ ಬಗ್ಗೆಯೂ ನಟ ದರ್ಶನ್ ಆತಂಕ ತೋಡಿಕೊಂಡಿದ್ದಾರೆ. ಜೈಲುವಾಸದಿಂದ ನನ್ನ ಜೀವನೋಪಾಯಕ್ಕೆ ಸಮಸ್ಯೆ ಆಗಿದೆ. ಸುದೀರ್ಘ ಜೈಲುವಾಸ ಪೂರ್ತಿ ಜೀವನಕ್ಕೆ ಮರಣ ಗಂಟೆಯಾಗಲಿದೆ ಎಂದು ಜಾಮೀನು ಅರ್ಜಿಯಲ್ಲಿ ನಟ ದರ್ಶನ್ ಅಳಲು ತೋಡಿಕೊಂಡಿದ್ದಾರೆ. ಪ್ರತಿ ವರ್ಷ ಎರಡು ಅಥವಾ ಮೂರು ಚಿತ್ರಗಳಿಗೆ ಸಹಿ ಮಾಡುತ್ತಿದ್ದರು. ಜಾಮೀನು ರದ್ದು ಪಡಿಸುವ ಬೆಳೆಯು ಕೂಡ ನಟ ದರ್ಶನ್ ಮೂರು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ, KVN…

Read More

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಇಂದು ಆಯೋಜಿಸಲಾಗಿದ್ದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಅಲ್ಪಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾರ್ಯಕ್ರಮ ಮುಗಿಸಿ ವೇದಿಕೆಯಿಂದ ನಿರ್ಗಮಿಸುತ್ತಿದ್ದಂತೆಯೇ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಜನರಲ್ಲಿ ನಡುಕ ಹುಟ್ಟಿಸಿತು. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ: ವೇದಿಕೆಯ ಮೇಲಿದ್ದ ವಿದ್ಯುತ್ ವೈಯರ್‌ಗಳಲ್ಲಿ ದಿಢೀರನೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ಕಿಡಿ ಕಾಣಿಸಿಕೊಂಡ ಬೆನ್ನಲ್ಲೇ ಬೆಂಕಿ ಹತ್ತಿಕೊಂಡಿದೆ. ಡಿ.ಕೆ. ಶಿವಕುಮಾರ್ ಅವರು ವೇದಿಕೆಯಿಂದ ಕೆಳಗಿಳಿದು ತೆರಳುತ್ತಿದ್ದ ಕ್ಷಣಗಳಲ್ಲೇ ಈ ಘಟನೆ ನಡೆದಿದೆ. ವೇದಿಕೆಯ ಅಲಂಕಾರಿಕ ವಸ್ತುಗಳಿಗೆ ಬೆಂಕಿ ತಗುಲುವ ಭೀತಿ ಎದುರಾದ ಕಾರಣ ಕಾರ್ಯಕ್ರಮದಲ್ಲಿದ್ದವರು ಗಾಬರಿಗೊಂಡರು. ಸಚಿವ ಈಶ್ವರ್ ಖಂಡ್ರೆ ರಕ್ಷಣೆ: ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಇನ್ನೂ ವೇದಿಕೆಯ ಮೇಲೆಯೇ ಇದ್ದರು. ಬೆಂಕಿಯ ಕಿಡಿಗಳನ್ನು ಗಮನಿಸಿದ ತಕ್ಷಣ ಎಚ್ಚೆತ್ತ ಭದ್ರತಾ ಸಿಬ್ಬಂದಿ ಮತ್ತು ಸ್ಥಳೀಯ ಕಾರ್ಯಕರ್ತರು ಸಚಿವರನ್ನು ಕೂಡಲೇ ವೇದಿಕೆಯಿಂದ ಸುರಕ್ಷಿತವಾಗಿ ಕೆಳಗಿಳಿಸಿ ಪಾರು ಮಾಡಿದರು. ಸಮಯ ಪ್ರಜ್ಞೆಯಿಂದಾಗಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು…

Read More

ಬೆಂಗಳೂರು : ರಾಜ್ಯದಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು, ಒಂದು ರಾತ್ರಿ ಬೆತ್ತಲೆ ಪೂಜೆಗೆ ಕುಳಿತರೆ 30 ಲಕ್ಷ ನೀಡುವುದಾಗಿ ಯುವತಿಗೆ ಪಕ್ಕದ ಮನೆಯ ಕಾಮುಕನೊಬ್ಬ ಆಫರ್ ಕೊಟ್ಟಿದ್ದಾನೆ. ಚೈತ್ರ ಎನ್ನುವ ಯುವತಿಗೆ ಪಕ್ಕದ ಮನೆಯ ಕಾಮುಕ ಕಿರಣ್ ಎಂಬಾತ ಬರೋಬ್ಬರಿ 30 ಲಕ್ಷ ಆಫರ್ ಕೊಟ್ಟಿದ್ದಾನೆ. ಕಿರಣ್ ವಿರುದ್ಧ ಯುವತಿ ಚೈತ್ರ ಗಂಭೀರ ಆರೋಪ ಮಾಡಿದ್ದಾಳೆ. ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದ ದೊಡ್ಡಮಣ್ಣಗುಡ್ಡೆ ದೊಡ್ಡಿಯಲ್ಲಿ ಈ ಒಂದು ಘಟನೆ ನಡೆದಿದೆ. ಘಟನೆಯ ವಿವರ: ಬೆಂಗಳೂರು ದಕ್ಷಿಣ ಜಿಲ್ಲೆಯ ವ್ಯಾಪ್ತಿಗೆ ಬರುವ ರಾಮನಗರದ ದೊಡ್ಡಮಣ್ಣಗುಡ್ಡೆ ದೊಡ್ಡಿ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಚೈತ್ರ ಎಂಬ ಯುವತಿಗೆ ಆಕೆಯ ಪಕ್ಕದ ಮನೆಯಲ್ಲೇ ವಾಸವಾಗಿರುವ ಕಿರಣ್ ಎಂಬಾತ ಈ ರೀತಿಯ ಅಸಭ್ಯ ಆಫರ್ ನೀಡಿದ್ದಾನೆ ಎನ್ನಲಾಗಿದೆ. ಆರೋಪಿ ಕಿರಣ್ ಕಳೆದ ಕೆಲವು ದಿನಗಳಿಂದ ಯುವತಿಗೆ ಕಿರುಕುಳ ನೀಡುತ್ತಿದ್ದು, ವಿಕೃತ ಬೇಡಿಕೆಗಳನ್ನು ಮುಂದಿಟ್ಟಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. 30 ಲಕ್ಷದ ಆಮಿಷ ಮತ್ತು ಬೆದರಿಕೆ:…

Read More

ಹಾಸನ : ಕಳೆದ 2023 ಡಿಸೆಂಬರ್ 4ರಂದು ಹಾಸನ ಜಿಲ್ಲೆಯ ಯಸಳೂರು ವಲಯದಲ್ಲಿ ಆನೆ ಸೆರೆ ಕಾರ್ಯಾಚರಣೆ ವೇಳೆ ವೀರಾವೇಶದಿಂದ ಹೋರಾಡಿ, ಪಶುವೈದ್ಯರು, ಸಿಬ್ಬಂದಿ ಜೀವ ಉಳಿಸಿ ಹುತಾತ್ಮನಾದ ಅರ್ಜುನ ಆನೆಯ ಸಮಾಧಿ ಸ್ಥಳದಲ್ಲಿ ನಿರ್ಮಿಸಿರುವ ಸ್ಮಾರಕವನ್ನು ಮೇ 6ರ ಬುಧವಾರ ಉದ್ಘಾಟಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ್​ ಖಂಡ್ರೆ ತಿಳಿಸಿದ್ದಾರೆ. ಕಳೆದ 2023ರ ಡಿಸೆಂಬರ್ 4ರಂದು ನಡೆದ ಕಾರ್ಯಾಚರಣೆಯಲ್ಲಿ ಅರ್ಜುನ ಮೃತಪಟ್ಟ ಸ್ಥಳದಲ್ಲೇ ಈ ಸ್ಮಾರಕವನ್ನು ನಿರ್ಮಿಸಲಾಗಿದೆ. ದಬಳ್ಳಡ್ಕ ಎಂಬಲ್ಲಿ ಅರ್ಜುನನ ಸಮಾಧಿ ಇದ್ದು, ಅಲ್ಲಿಯೇ ಒಂದು ಸುಂದರ ಸ್ಮಾರಕವನ್ನು ನಿರ್ಮಿಸುವ ಮೂಲಕ ಸರ್ಕಾರವು ನಾಡಿನ ಹೆಮ್ಮೆಯ ಆನೆಗೆ ಗೌರವ ಸಲ್ಲಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ. ವೀರಾವೇಶದ ಹೋರಾಟ: ಕಳೆದ ಡಿಸೆಂಬರ್‌ನಲ್ಲಿ ಯಸಳೂರು ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿದ್ದ ಕಾಡಾನೆಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಅರ್ಜುನ ಭಾಗಿಯಾಗಿದ್ದ. ಈ ವೇಳೆ ಕಾಡಾನೆಯೊಂದು ಎದುರಾದಾಗ, ಅರ್ಜುನ ಎದೆಗುಂದದೆ ಹೋರಾಡಿದ್ದ. ಪಶುವೈದ್ಯರು ಮತ್ತು ಅರಣ್ಯ ಸಿಬ್ಬಂದಿಯ…

Read More

ಹಾಸನ: ಲೈಂಗಿಕ ಕ್ರಿಯೆಗೆ ನಿರಾಕರಿಸಿದ್ದಕ್ಕೆ ಮಹಿಳೆಯೊಬ್ಬಳ ಮೇಲೆ ತೀವ್ರ ಹಲ್ಲೆ ನಡೆಸಿ ಕೊಲೆಗೈದಿರುವ ಘಟನೆ ಸಕಲೇಶಪುರ ತಾಲ್ಲೂಕಿನ ಅತ್ತಿಹಳ್ಳಿ ಗ್ರಾಮದಲ್ಲಿ ನಡೆದಿದೆ. ರಮ್ಯಾ.ಎ.ಆರ್ (35) ಕೊಲೆಯಾದ ಮಹಿಳೆಯಾಗಿದ್ದು, ಅದೇ ಗ್ರಾಮದ ಚಂದ್ರ (41) ಹತ್ಯೆಗೈದ ಆರೋಪಿ ಎಂದು ತಿಳಿದುಬಂದಿದೆ. ವಿಧವೆಯಾಗಿದ್ದ ರಮ್ಯಾ ಬೆಂಗಳೂರಿನಲ್ಲಿ ನರ್ಸಿಂಗ್‌ ಕೆಲಸ ಮಾಡಿಕೊಂಡಿದ್ದು, ಆರೋಪಿ ಚಂದ್ರನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಏ.28ರಂದು ಅತ್ತೆಯ ಅಂತ್ಯಸಂಸ್ಕಾರಕ್ಕೆಂದು ಸ್ವಗ್ರಾಮ ಅತ್ತಿಹಳ್ಳಿಗೆ ಬಂದಿದ್ದಾಗ, ರಾತ್ರಿ ಮನೆಗೆ ಬಂದ ಚಂದ್ರ ಲೈಂ*ಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ. ಇದಕ್ಕೆ ರಮ್ಯಾ ನಿರಾಕರಿಸಿದ್ದರಿಂದ ಸಿಟ್ಟಿಗೆದ್ದ ಆರೋಪಿ, ಆಕೆಯ ಮೇಲೆ ಮನಬಂದಂತೆ ಹ*ಲ್ಲೆ ನಡೆಸಿ ಮರ್ಮಾಂಗಕ್ಕೆ ಒದ್ದಿದ್ದಾನೆ. ಏ.30ರಂದು ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ರಮ್ಯಾ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

Read More