Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸೆಲೂನ್, ಸ್ಪಾ, ಮಸಾಜ್ ಕೇಂದ್ರಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕಾನೂನು: ಕರ್ನಾಟಕ ಕಾನೂನು ಆಯೋಗದಿಂದ ಸರ್ಕಾರಕ್ಕೆ ಮಹತ್ವದ ಶಿಫಾರಸು

ಪಾರಂಪರಿಕ ಕಟ್ಟಡ ‘ಕುಮಾರಕೃಪ’ ಉಳಿಸಿ: ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ವಕ್ತಾರ ಪ್ರಕಾಶ್ ಬಹಿರಂಗ ಪತ್ರ

BIG NEWS: ಪ್ರೊಬೇಟ್ ರದ್ದತಿ ಅರ್ಜಿಗೆ ‘ಲಿಮಿಟೇಷನ್ ಆಕ್ಟ್’ನ ಆರ್ಟಿಕಲ್ 137 ಅನ್ವಯ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪಾರಂಪರಿಕ ಕಟ್ಟಡ ‘ಕುಮಾರಕೃಪ’ ಉಳಿಸಿ: ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ವಕ್ತಾರ ಪ್ರಕಾಶ್ ಬಹಿರಂಗ ಪತ್ರ
KARNATAKA

ಪಾರಂಪರಿಕ ಕಟ್ಟಡ ‘ಕುಮಾರಕೃಪ’ ಉಳಿಸಿ: ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ವಕ್ತಾರ ಪ್ರಕಾಶ್ ಬಹಿರಂಗ ಪತ್ರ

By ವಸಂತ ಬಿ ಈಶ್ವರಗೆರೆ
ಬೆಂಗಳೂರು: ರಾಜಧಾನಿಯ ಐತಿಹಾಸಿಕ ಹಾಗೂ ಪಾರಂಪರಿಕ ಕಟ್ಟಡವಾದ ‘ಕುಮಾರಕೃಪ’ ಅತಿಥಿಗೃಹವನ್ನು ಉಳಿಸುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದಾರತೆ ತೋರಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಪ್ರಕಾಶ್ ಶೇಷರಾಘವಾಚಾರ್ ಮನವಿ ಮಾಡಿದ್ದಾರೆ. ಈ ಕುರಿತು ಅವರು ಸಿದ್ದರಾಮಯ್ಯನವರಿಗೆ ಸುದೀರ್ಘ ಬಹಿರಂಗ ಪತ್ರವೊಂದನ್ನು ಬರೆದಿದ್ದು, ಉದ್ಭವಿಸಬಹುದಾದ ಹಲವು ಪ್ರಾಯೋಗಿಕ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದಾರೆ.

ಅಧಿಕಾರ ಹಸ್ತಾಂತರದ ಶ್ಲಾಘನೆ

ಪತ್ರದ ಆರಂಭದಲ್ಲಿ ಸಿದ್ದರಾಮಯ್ಯನವರ ರಾಜಕೀಯ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರಕಾಶ್ ಶೇಷರಾಘವಾಚಾರ್, “ಕಳೆದ ಮೂರು ವರ್ಷಗಳಿಂದ ಯಶಸ್ವಿಯಾಗಿ ರಾಜ್ಯದ ಚುಕ್ಕಾಣಿ ಹಿಡಿದು, ತಮ್ಮ ಪಕ್ಷದ ಹೈಕಮಾಂಡ್ ಕೋರಿಕೆಯ ಮೇರೆಗೆ ಮುಖ್ಯಮಂತ್ರಿ ಸ್ಥಾನವನ್ನು ಅತ್ಯಂತ ಗೌರವಯುತವಾಗಿ ಹಾಗೂ ಇತರರಿಗೆ ಮಾದರಿಯಾಗುವಂತೆ ಡಿ.ಕೆ.ಶಿವಕುಮಾರ್ ಅವರಿಗೆ ಹಸ್ತಾಂತರಿಸಿದ ಕೀರ್ತಿ ನಿಮ್ಮದು,” ಎಂದು ಶ್ಲಾಘಿಸಿದ್ದಾರೆ.

‘ಕಾವೇರಿ’ ನಿವಾಸದ ಸುತ್ತ ರಾಜಕೀಯ ಚರ್ಚೆ

“ಕಾವೇರಿ ನಿವಾಸವು ಅಧಿಕೃತವಾಗಿ ಮುಖ್ಯಮಂತ್ರಿಗಳ ನಿವಾಸ ಎಂದು ಘೋಷಣೆಯಾಗದಿದ್ದರೂ, ಅನಧಿಕೃತವಾಗಿ ಬಹುತೇಕ ಮುಖ್ಯಮಂತ್ರಿಗಳು ಅದನ್ನೇ ತಮ್ಮ ಅಧಿಕೃತ ನಿವಾಸ ಮಾಡಿಕೊಂಡಿದ್ದರು. ತಾವು ಸಹ 2013 ಮತ್ತು 2023 ರಲ್ಲಿ ಅದೇ ನಿವಾಸದಲ್ಲಿದ್ದವರು ಮತ್ತು ಇಂದಿಗೂ ಅಲ್ಲೇ ಮುಂದುವರಿದಿದ್ದೀರಿ. ಆದರೆ, ಪ್ರಸಕ್ತ ಸಂದರ್ಭದಲ್ಲೂ ತಾವು ಅದೇ ನಿವಾಸದಲ್ಲಿ ಮುಂದುವರಿಯುವ ನಿರ್ಧಾರ ಕೈಗೊಂಡಿದ್ದೀರಿ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನು ಪುಷ್ಟೀಕರಿಸುವಂತೆ ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕುಮಾರಕೃಪ ಅತಿಥಿಗೃಹವನ್ನು ತಮ್ಮ ಅಧಿಕೃತ ನಿವಾಸ ಮಾಡಿಕೊಳ್ಳಲು ಮುಂದಾಗಿದ್ದಾರೆ,” ಎಂದು ಪ್ರಕಾಶ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕುಮಾರಕೃಪ ನಿವಾಸವಾದರೆ ಎದುರಾಗುವ ಸಮಸ್ಯೆಗಳು:

ಹಾಲಿ ಮುಖ್ಯಮಂತ್ರಿಗಳು ಕುಮಾರಕೃಪವನ್ನು ತಮ್ಮ ನಿವಾಸವನ್ನಾಗಿ ಮಾಡಿಕೊಂಡರೆ ಸಾರ್ವಜನಿಕರಿಗೆ ಹಾಗೂ ಇಲಾಖೆಗೆ ಆಗುವ ತೊಂದರೆಗಳನ್ನು ಅವರು ಪಟ್ಟಿ ಮಾಡಿದ್ದಾರೆ:

  • ಪಾರಂಪರಿಕ ಸೊಬಗಿಗೆ ಧಕ್ಕೆ: ಕುಮಾರಕೃಪ ಅತ್ಯಂತ ಹಳೆಯ ಮತ್ತು ಪಾರಂಪರಿಕ ಕಟ್ಟಡವಾಗಿದೆ. ಮುಖ್ಯಮಂತ್ರಿಗಳ ಭದ್ರತೆಯ ದೃಷ್ಟಿಯಿಂದ ಇಲ್ಲಿ ಅನೇಕ ಅನಗತ್ಯ ಬದಲಾವಣೆಗಳನ್ನು ಮಾಡಬೇಕಾಗುತ್ತದೆ.

  • ವೆಚ್ಚದ ಹೊರೆ: ಅತಿಥಿಗೃಹದಲ್ಲಿ ಹೊಸದಾಗಿ ಬದಲಾವಣೆಗಳನ್ನು ಮಾಡಲು ಸರ್ಕಾರದ ಬೊಕ್ಕಸದಿಂದ ಅಪಾರ ವೆಚ್ಚವಾಗುತ್ತದೆ.

  • ಸಾರ್ವಜನಿಕರಿಗೆ ನಿಷೇಧ: ಕುಮಾರಕೃಪದ ಹಸಿರು ವಾತಾವರಣದಲ್ಲಿ ಪ್ರತಿದಿನ ನೂರಾರು ನಾಗರಿಕರು ಬೆಳಿಗ್ಗೆ ಮತ್ತು ಸಂಜೆ ವಾಸಿ ಮಾಡುತ್ತಾರೆ (ವಾಕಿಂಗ್ ಮಾಡುತ್ತಾರೆ). ಮುಖ್ಯಮಂತ್ರಿಗಳ ಭದ್ರತೆಯ ಕಾರಣದಿಂದ ಮುಂದೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗುವುದು.

  • ಪ್ರವಾಸೋದ್ಯಮಕ್ಕೆ ಹಿನ್ನಡೆ: ಕುಮಾರಕೃಪ ಆವರಣದಲ್ಲಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬರುವ ಸರ್ಕಾರಿ ನೌಕರರು, ಗಣ್ಯ ವ್ಯಕ್ತಿಗಳ ವಾಸ್ತವ್ಯಕ್ಕೆ ಕೊಠಡಿಗಳಿವೆ. ಇತ್ತೀಚೆಗಷ್ಟೇ ಇದರ ಹಿಂಭಾಗದಲ್ಲಿ ಬೃಹತ್ ಅತಿಥಿಗೃಹ ನಿರ್ಮಿಸಲಾಗಿದ್ದು, ಇದನ್ನು ಕೆಎಸ್‌ಟಿಡಿಸಿ (KSTDC) ನಿರ್ವಹಿಸುತ್ತಿದೆ. ಮುಖ್ಯಮಂತ್ರಿಗಳ ವಾಸ್ತವ್ಯದಿಂದಾಗಿ ಈ ಮುಕ್ತ ಅವಕಾಶ ಇರದೆ ಕೆಎಸ್‌ಟಿಡಿಸಿ ಹೋಟೆಲ್ ನಷ್ಟ ಅನುಭವಿಸುವ ಆತಂಕವಿದೆ. ನೂರಾರು ಸರ್ಕಾರಿ ಕಾರುಗಳ ಪಾರ್ಕಿಂಗ್‌ಗೂ ತೊಂದರೆಯಾಗಲಿದೆ.

ಸಮಸ್ಯೆಗೆ ಸರಳ ಪರಿಹಾರ ಸೂಚಿಸಿದ ಪ್ರಕಾಶ್:

“ಈ ಎಲ್ಲಾ ಸಮಸ್ಯೆಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೈಯಲ್ಲೇ ಸರಳ ಪರಿಹಾರವಿದೆ. ಸಿದ್ದರಾಮಯ್ಯನವರು ಸದ್ಯ ತಾವು ಇರುವ ‘ಕಾವೇರಿ’ ಗೃಹದಿಂದ, ಈ ಮೊದಲು ವಾಸವಿದ್ದ ಗಾಂಧಿಭವನ ರಸ್ತೆಯ ಸರ್ಕಾರಿ ನಿವಾಸಕ್ಕೆ ಶಿಫ್ಟ್ ಆಗಬೇಕು. ಆಗ ಅಲ್ಲಿ ವಾಸವಾಗಿರುವ ಡಿ.ಕೆ.ಶಿವಕುಮಾರ್ ಅವರು ‘ಕಾವೇರಿ’ ನಿವಾಸವನ್ನು ತಮ್ಮ ಅಧಿಕೃತ ಮುಖ್ಯಮಂತ್ರಿ ನಿವಾಸವನ್ನಾಗಿ ಮಾಡಿಕೊಳ್ಳಬಹುದು. ಇದರಿಂದ ಕುಮಾರಕೃಪವನ್ನು ಬದಲಾಯಿಸುವ ವೆಚ್ಚವೂ ಉಳಿಯುತ್ತದೆ, ಪಾರಂಪರಿಕ ಕಟ್ಟಡವೂ ಉಳಿಯುತ್ತದೆ.” – ಪ್ರಕಾಶ್ ಶೇಷರಾಘವಾಚಾರ್, ಬಿಜೆಪಿ ರಾಜ್ಯ ವಕ್ತಾರ.

ಹಿರಿಯರಾದ ಸಿದ್ದರಾಮಯ್ಯನವರು ತಮ್ಮ ಈ ಕಳಕಳಿಯ ಸಲಹೆಯನ್ನು ಒಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ದಯಮಾಡಿ ತಾವು ಹಳೆಯ ಮನೆಗೆ ಹೋಗಲು ಸಿದ್ಧರಾಗಿ, ಮುಖ್ಯಮಂತ್ರಿಗಳಿಗೆ ‘ಕಾವೇರಿ’ ಅಥವಾ ‘ಕೃಷ್ಣಾ’ ನಿವಾಸದಲ್ಲಿ ಇರಲು ವಿನಂತಿಸಬೇಕು. ನಿಮ್ಮ ಈ ಉದಾರತೆಯು ಬೆಂಗಳೂರಿನ ಒಂದು ಪಾರಂಪರಿಕ ಕಟ್ಟಡದ ಸೊಬಗು ಹಾಗೂ ಸಾರ್ವಜನಿಕರ ಹಿತಾಸಕ್ತಿಯನ್ನು ಕಾಪಾಡಲು ನೆರವಾಗುತ್ತದೆ ಎಂದು ಪ್ರಕಾಶ್ ಶೇಷರಾಘವಾಚಾರ್ ತಮ್ಮ ಬಹಿರಂಗ ಪತ್ರದಲ್ಲಿ ವಿನಂತಿಸಿದ್ದಾರೆ.

Share. Facebook Twitter LinkedIn WhatsApp Email

Related Posts

ಸೆಲೂನ್, ಸ್ಪಾ, ಮಸಾಜ್ ಕೇಂದ್ರಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕಾನೂನು: ಕರ್ನಾಟಕ ಕಾನೂನು ಆಯೋಗದಿಂದ ಸರ್ಕಾರಕ್ಕೆ ಮಹತ್ವದ ಶಿಫಾರಸು

3 Mins Read

ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಸಿಎಂ ಡಿ.ಕೆ ಶಿವಕುಮಾರ್; ಕರ್ನಾಟಕದ ಪೊಲೀಸ್ ಸಾಮರ್ಥ್ಯ ಸುಧಾರಣೆ ನೆರವಿಗೆ ಮನವಿ

3 Mins Read

ಮ್ಯಾಗಿ, ಕೆಎಫ್‌ಸಿ ಉತ್ಪನ್ನಗಳಲ್ಲಿ ಗುಣಮಟ್ಟದ ಕೊರತೆ ಆರೋಪ: ನೆಸ್ಲೆ ಇಂಡಿಯಾ ಸೇರಿದಂತೆ ಪ್ರಮುಖ ಸಂಸ್ಥೆಗಳಿಗೆ FSSAI ನೋಟಿಸ್

3 Mins Read
Recent News

ಸೆಲೂನ್, ಸ್ಪಾ, ಮಸಾಜ್ ಕೇಂದ್ರಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕಾನೂನು: ಕರ್ನಾಟಕ ಕಾನೂನು ಆಯೋಗದಿಂದ ಸರ್ಕಾರಕ್ಕೆ ಮಹತ್ವದ ಶಿಫಾರಸು

ಪಾರಂಪರಿಕ ಕಟ್ಟಡ ‘ಕುಮಾರಕೃಪ’ ಉಳಿಸಿ: ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ವಕ್ತಾರ ಪ್ರಕಾಶ್ ಬಹಿರಂಗ ಪತ್ರ

BIG NEWS: ಪ್ರೊಬೇಟ್ ರದ್ದತಿ ಅರ್ಜಿಗೆ ‘ಲಿಮಿಟೇಷನ್ ಆಕ್ಟ್’ನ ಆರ್ಟಿಕಲ್ 137 ಅನ್ವಯ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಮಹಿಳೆಯರು ದಿನಾಲು ಏಕೆ ಮೊಟ್ಟೆ ತಿನ್ನಬೇಕು? ಇಲ್ಲಿದೆ ಪ್ರಮುಖ ಕಾರಣಗಳು

State News
KARNATAKA

ಸೆಲೂನ್, ಸ್ಪಾ, ಮಸಾಜ್ ಕೇಂದ್ರಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕಾನೂನು: ಕರ್ನಾಟಕ ಕಾನೂನು ಆಯೋಗದಿಂದ ಸರ್ಕಾರಕ್ಕೆ ಮಹತ್ವದ ಶಿಫಾರಸು

By ವಸಂತ ಬಿ ಈಶ್ವರಗೆರೆ KARNATAKA 3 Mins Read

ಬೆಂಗಳೂರು: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಅಣಬೆಗಳಂತೆ ತಲೆಯೆತ್ತುತ್ತಿರುವ ಸೆಲೂನ್‌ಗಳು, ಸ್ಪಾ/ಮಸಾಜ್ ಕೇಂದ್ರಗಳು, ಬ್ಯೂಟಿ ಪಾರ್ಲರ್‌ಗಳು ಹಾಗೂ ಜಿಮ್ನೇಷಿಯಂಗಳನ್ನು ನಿಯಂತ್ರಿಸಲು ಮತ್ತು…

ಪಾರಂಪರಿಕ ಕಟ್ಟಡ ‘ಕುಮಾರಕೃಪ’ ಉಳಿಸಿ: ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ವಕ್ತಾರ ಪ್ರಕಾಶ್ ಬಹಿರಂಗ ಪತ್ರ

ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಸಿಎಂ ಡಿ.ಕೆ ಶಿವಕುಮಾರ್; ಕರ್ನಾಟಕದ ಪೊಲೀಸ್ ಸಾಮರ್ಥ್ಯ ಸುಧಾರಣೆ ನೆರವಿಗೆ ಮನವಿ

ಮ್ಯಾಗಿ, ಕೆಎಫ್‌ಸಿ ಉತ್ಪನ್ನಗಳಲ್ಲಿ ಗುಣಮಟ್ಟದ ಕೊರತೆ ಆರೋಪ: ನೆಸ್ಲೆ ಇಂಡಿಯಾ ಸೇರಿದಂತೆ ಪ್ರಮುಖ ಸಂಸ್ಥೆಗಳಿಗೆ FSSAI ನೋಟಿಸ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.