ಬೆಂಗಳೂರು : ನೀಟ್ ಪರೀಕ್ಷೆವಾಗಿ 10 ನಿಮಿಷ ತಡವಾಗಿ ಬಂದಿದ್ದಕ್ಕೆ ಸಿಬ್ಬಂದಿಗಳು ವಿದ್ಯಾರ್ಥಿನಿಯರಿಗೆ ನೀಟ್ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿರುವ ಘಟನೆ ಬೆಂಗಳೂರಿನ ಯಲಹಂಕದ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ. ಇಬ್ಬರು ವಿದ್ಯಾರ್ಥಿನಿಯರು ಪರೀಕ್ಷಾ ಕೇಂದ್ರಕ್ಕೆ 10 ನಿಮಿಷ ತಡವಾಗಿ ಬಂದಿದ್ದರು. ಈ ವೇಳೆ ಸಿಬ್ಬಂದಿಗಳು 10 ನಿಮಿಷ ತಡವಾಗಿದೆ ಎಂದು ನೀಟ್ ಎಕ್ಸಾಮ್ ಪರೀಕ್ಷೆ ಬರೆಯಲು ನಿರಾಕರಿಸಿದ್ದಾರೆ.
ಬೆಂಗಳೂರಿನ ಆರ್ ಸಿ ಕಾಲೇಜಿಗೆ ವಿದ್ಯಾರ್ಥಿನಿ 20 ನಿಮಿಷ ತಡವಾಗಿ ಬಂದಿದ್ದಾಳೆ. ಮಧ್ಯಾಹ್ನ 2 ಗಂಟೆಗೆ ನೀಟ್ ಎಕ್ಸಾಮ್ ಆರಂಭವಾಗಿದ್ದು, ಮಧ್ಯಾಹ್ನ 1:30ರ ವರೆಗೆ ಎಕ್ಸಾಮ್ ಸೆಂಟರ್ನ ಗೇಟ್ ಓಪನ್ ಆಗಿತ್ತು. ಟ್ರಾಫಿಕ್ ಜಾಮ್ ನಿಂದ ಯುವತಿ 20 ನಿಮಿಷಗಳ ಕಾಲ ತಡವಾಗಿ ಬಂದಿದ್ದಾಳೆ. ಗೇಟ್ ಕ್ಲೋಸ್ ಆಗಿದೆ ಎಂದು ಸಿಬ್ಬಂದಿಗಳು ಅವಕಾಶ ನಿರಾಕರಿಸಿದ್ದಾರೆ. ಎಕ್ಸಾಮ್ ಬರೆಯಲು ಆಗದೆ ಯುವತಿ ಕಣ್ಣೀರು ಹಾಕಿದ್ದಾಳೆ. ಚಾಲುಕ್ಯ ಸರ್ಕಲ್ ಬಳಿಯ ಆರ್ ಸಿ ಕಾಲೇಜಿನ ಎಕ್ಸಾಮ್ ಸೆಂಟರ್ನಲ್ಲಿ ಈ ಒಂದು ಘಟನೆ ನಡೆದಿದೆ. ಅತ್ತಿಬೆಲೆಯಿಂದ ವಿದ್ಯಾರ್ಥಿನಿ ಬಂದು ಪರೀಕ್ಷೆ ಬರೆಯದೆ ಕಣ್ಣೀರು ಹಾಕಿದ್ದಾಳೆ.








