ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್ ಅವರು ಸುಪ್ರೀಂ ಕೋರ್ಟ್ ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಒಂದು ಅರ್ಜಿಯ ವಿಚಾರಣೆ ನಾಳೆ ಸುಪ್ರೀಂ ಕೋರ್ಟಲ್ಲಿ ನಡೆಯಲಿದೆ. ಇದೀಗ ಜಾಮೀನು ಅರ್ಜಿಯಲ್ಲಿ ನಟ ದರ್ಶನ್ ತಮ್ಮ ಅಹವಾಲು ಹೇಳಿಕೊಂಡಿದ್ದಾರೆ.
ಅರ್ಜಿಯಲ್ಲಿ ನಟ ದರ್ಶನ್ ಅವರು ಜೈಲಿನಲ್ಲಿ ಸಹ ಕೈದಿಗಳಿಂದ ಬೆದರಿಕೆ ಮತ್ತು ನಿಂದನೆ ಬರುತ್ತಿದೆ. ಜೈಲಿನಲ್ಲಿ ನನ್ನನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ನಿಯಮ ಮೀರಿ ಕ್ವಾರನ್ಟೈನ್ ಸೆಲ್ ನಲ್ಲಿ ಇಡಲಾಗಿದೆ. ವೃತ್ತಿ ಜೀವನದ ಬಗ್ಗೆಯೂ ನಟ ದರ್ಶನ್ ಆತಂಕ ತೋಡಿಕೊಂಡಿದ್ದಾರೆ. ಜೈಲುವಾಸದಿಂದ ನನ್ನ ಜೀವನೋಪಾಯಕ್ಕೆ ಸಮಸ್ಯೆ ಆಗಿದೆ. ಸುದೀರ್ಘ ಜೈಲುವಾಸ ಪೂರ್ತಿ ಜೀವನಕ್ಕೆ ಮರಣ ಗಂಟೆಯಾಗಲಿದೆ ಎಂದು ಜಾಮೀನು ಅರ್ಜಿಯಲ್ಲಿ ನಟ ದರ್ಶನ್ ಅಳಲು ತೋಡಿಕೊಂಡಿದ್ದಾರೆ.
ಪ್ರತಿ ವರ್ಷ ಎರಡು ಅಥವಾ ಮೂರು ಚಿತ್ರಗಳಿಗೆ ಸಹಿ ಮಾಡುತ್ತಿದ್ದರು. ಜಾಮೀನು ರದ್ದು ಪಡಿಸುವ ಬೆಳೆಯು ಕೂಡ ನಟ ದರ್ಶನ್ ಮೂರು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ, KVN ಪ್ರೊಡಕ್ಷನ್, ಮೀಡಿಯಾ ಹೌಸ್ ಸ್ಟುಡಿಯೋಸ್ ಗೆ ಸಹಿ ಮಾಡಿದ್ದ ನಿರ್ಮಾಪಕರು ಆರು ಕೋಟಿ ರೂಪಾಯಿ ಬಂಡವಾಳ ಹೂಡಿದ್ದಾರೆ. ಜೈಲು ಸೇರಿದ್ದರಿಂದ ಇದೀಗ ಸಿನಿಮಾಗಳು ನಿಂತು ಹೋಗಿವೆ. ಹೊಸ ಚಿತ್ರಗಳನ್ನು ಕಳೆದುಕೊಂಡಿದ್ದರಿಂದ ನಷ್ಟ ಅನುಭವಿಸುತ್ತಿದ್ದಾರೆ ಎಂದು ದರ್ಶನ್ ಅರ್ಜಿಯಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.








