Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು, ಮಾ.20: ಶಿವಮೊಗ್ಗದ ತಾವರೆಕೊಪ್ಪ ಮೃಗಾಲಯದಲ್ಲಿ ವನ್ಯಜೀವಿಗೆ ಚಿಕಿತ್ಸೆ ನೀಡಲು ತೆರಳಿದ್ದ ಪಶುವೈದ್ಯೆ ನೀರಾನೆ ದಾಳಿಯಿಂದ ಮೃತಪಟ್ಟಿದ್ದು, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸಂತಾಪ ಸೂಚಿಸಿದ್ದಾರೆ. ಇದೊಂದು ದುರದೃಷ್ಟಕರ ಘಟನೆ ಎಂದು ಶೋಕ ವ್ಯಕ್ತಪಡಿಸಿರುವ ಅವರು, ಈ ದುಃಖದ ಸಂದರ್ಭದಲ್ಲಿ ಮೃತ ವೈದ್ಯರ ಕುಟುಂಬದೊಂದಿಗೆ ಸರ್ಕಾರ ನಿಲ್ಲುತ್ತದೆ. ಪ್ರತಿಯೊಂದು ಜೀವವೂ ಅಮೂಲ್ಯ. ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ. ಮೃತ ಯುವ ವೈದ್ಯೆಯ ಕುಟುಂಬದವರಿಗೆ ನಿಯಮಾನುಸಾರ ಕೂಡಲೇ ಪರಿಹಾರ ನೀಡುವಂತೆ ಸೂಚಿಸಿರುವ ಅವರು, ರಾಜ್ಯದ ಎಲ್ಲ ಮೃಗಾಲಯಗಳಲ್ಲಿರುವ ಪಶುವೈದ್ಯರು ಯಾವುದೇ ವನ್ಯಜೀವಿಗೆ ಚಿಕಿತ್ಸೆ ನೀಡುವಾಗ ಪ್ರಮಾಣಿತ ಮಾನದಂಡ (ಎಸ್.ಓ.ಪಿ.) ಪಾಲಿಸಬೇಕು ಎಂದೂ ಸ್ಪಷ್ಟ ಸೂಚನೆ ನೀಡಿದ್ದಾರೆ. ಈ ದುರಂತದ ಬಗ್ಗೆ ಹಿರಿಯ ಪಶುವೈದ್ಯರು ಹಾಗೂ ಅರಣ್ಯಾಧಿಕಾರಿಗಳನ್ನು ಒಳಗೊಂಡ ತಂಡದಿಂದ ತನಿಖೆ ಮಾಡಿಸಿ, 7 ದಿನಗಳ ಒಳಗಾಗಿ ವರದಿ ನೀಡುವಂತೆಯೂ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ. ಇತ್ತೀಚೆಗಷ್ಟೇ ಗುತ್ತಿಗೆ ಆಧಾರದಲ್ಲಿ…
ಶಿವಮೊಗ್ಗ : ನೀರಾನೆ ದಾಳಿಯಿಂದ ಗಾಯಗೊಂಡಿದ್ದ ವೈದ್ಯೆ ಚಿಕಿತ್ಸೆ ಫಲಕಾರಿ ಆಗದೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಶಿವಮೊಗ್ಗದ ಹುಲಿ ಮತ್ತು ಸಿಂಹಾ ಸಫಾರಿಯಲ್ಲಿ ಈ ಒಂದು ಘಟನೆ ನಡೆದಿತ್ತು. ಬೆಂಗಳೂರು ಮೂಲದ ಡಾ. ಸಮೀಕ್ಷಾ ರೆಡ್ಡಿ (27) ಇದೀಗ ಚಿಕಿತ್ಸೆ ಫಲಕಾರಿ ಆಗದೆ ಸಾವನಪ್ಪಿದ್ದಾರೆ. ಸಫಾರಿಯಲ್ಲಿ ಪಶುವೈದ್ಯಾಧಿಕಾರಿ ಸಮೀಕ್ಷೆ ತರಬೇತಿ ಪಡೆಯುತ್ತಿದ್ದರು. ಗುರುವಾರ ರಾತ್ರಿ 10:30ಕ್ಕೆ ಮೃಗಾಲಯದ ಆಸ್ಪತ್ರೆಗೆ ಸಮೀಕ್ಷಾ ತೆರಳಿದ್ದಾರೆ. ಸನ್ ಕಾನರ್ ಹಕ್ಕಿಯ ಚಿಕಿತ್ಸೆಗಾಗಿ ಮೃಗಾಲಯದ ಆಸ್ಪತ್ರೆಗೆ ತೆರಳಿದ್ದರು. ರಾತ್ರಿ 11:45 ರ ಸುಮಾರಿಗೆ ನಿರಾನೆ ವೈದ್ಯೆ ಮೇಲೆ ದಾಳಿ ಮಾಡಿದೆ. ಗರ್ಭಿಣಿ ನಿರಾಣಿ ದೇಹದ ಉಷ್ಣತೆಯನ್ನು ಪರೀಕ್ಷಿಸಲು ಥರ್ಮಲ್ ಕ್ಯಾಮೆರಾ ಮೂಲಕ ವೈದ್ಯ ಆವರಣದ ಒಳಗಡೆ ಹೋಗಿದ್ದರು. ಇವಳೇ ನಿರಾಣಿ ದಾಳಿಯಿಂದ ಸಮಕ್ಷ ಗಂಭೀರವಾಗಿ ಗಾಯಗೊಂಡಿದ್ದರು. ಖಾಸಗಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಶಾಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಇಂದು ಬೆಳಗ್ಗೆ 6:30 ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಸಮೀಕ್ಷಾ ಸಾವನಪ್ಪಿದ್ದಾರೆ.
ದಾವಣಗೆರೆ : ಕರ್ನಾಟಕದಲ್ಲಿ ಏಪ್ರಿಲ್ 9 ರಂದು ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಉಪಚುನಾವಣೆಗೆ ಮತದಾನ ನಡೆಯಲಿದ್ದು ಈಗಾಗಲೇ ಬಿಜೆಪಿ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಆದರೆ ಕಾಂಗ್ರೆಸ್ ಮಾತ್ರ ಇನ್ನು ಅಭ್ಯರ್ಥಿಗಳ ಹೆಸರು ಘೋಷಣೆಯಲ್ಲಿ ಗೊಂದಲದಲ್ಲಿ ಇದೆ ಆದರೆ ಟಿಕೆಟ್ ಘೋಷಣೆ ಮೊದಲೇ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಇಂದು ಸಚಿವ ಮಲ್ಲಿಕಾರ್ಜುನ ಪುತ್ರ ಸಮರ್ಥ್ ನಾಮಪತ್ರ ಸಲ್ಲಿಸಲಿದ್ದಾರೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ನಾಮಪತ್ರ ಸಲ್ಲಿಕೆ ಮುನ್ನ ನಿಟ್ಟುವಳ್ಳಿ ದುರ್ಗಾಂಬಿಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಕಾರ್ಯಕರ್ತರಿಗೆ ಟಿಕೆಟ್ ಕೊಡಿ ಇನ್ನು ಕಳೆದ ಮಂಗಳವಾರ ಸಭೆ ನಡೆಯಿತು. ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಅಭಿಪ್ರಾಯ ಸಂಗ್ರಹ ಸಭೆ ನಡೆಯಿತಿ. ಈ ವೇಳೆ ಮಾತನಾಡಿದ ಜಿಲ್ಲಾಉಸ್ತುವಾರಿ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ ಮಾತನಾಡಿ, ”ಅವರಿವರು ಅಂತಿಲ್ಲ, ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಿ. ಎಲ್ಲರೂ ಸೇರಿ ಗೆಲ್ಲಿಸಿಕೊಂಡು ಬರುತ್ತೇವೆ ” ಎಂದರು. ಚುನಾವಣೆ ಹೊತ್ತಿನಲ್ಲಿ ಬರುವವರ ಬಗ್ಗೆ…
ಬೆಂಗಳೂರು : ಬೆಂಗಳೂರಿನಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕನ ನಿರ್ಲಕ್ಷದಿಂದ ಪೀಣ್ಯ 2ನೇ ಹಂತ ಬಿಎಂಟಿಸಿ ಡಿಪೋಗೆ ಎಲೆಕ್ಟ್ರಿಕ್ ಬಸ್ ನುಗ್ಗಿದೆ. ಬಿಎಂಟಿಸಿ ಬಸ್ ನುಗ್ಗಿದ ಪರಿಣಾಮ ನಾಲ್ಕು ಬೈಕುಗಳು ಜಖಂಗೊಂಡಿವೆ. ಡಿಪೋದ ಸಂಚಾರ ನಿಯಂತ್ರಿಕರ ಕೊಠಡಿಗೆ ಬಿಎಂಟಿಸಿ ಬಸ್ ನುಗ್ಗಿದೆ. ಹ್ಯಾಂಡ್ ಬ್ರೇಕ್ ಹಾಕದೆ ಚಾಲಕ ಬಸ್ ನಿಲ್ಲಿಸಿ ಹೋಗಿದ್ದ. KA 51 AK 4169 ನಂಬರ್ ನ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬೆಂಗಳೂರು : ಅರ್ಚಕರನ್ನು ಪರಿಚಯಿಸಿಕೊಂಡು ಬಳಿಕ ಪೂಜೆ ನೆಪದಲ್ಲಿ ಅವರ ಪತ್ನಿಯರನ್ನು ಕರೆದೋಯ್ದು ಚಿನ್ನಾಭರಣ, ಬೆಳ್ಳಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಗಳನ್ನು ಇದೀಗ ಬೆಂಗಳೂರಿನ ರಾಜಾಜಿನಗರ ಠಾಣೆ ಪೋಲೀಸರು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನಲ್ಲಿ ಕಳ್ಳ ಪ್ರವೀಣ್ ಭಟನನ್ನು ಪೊಲೀಸರು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 15 ಲಕ್ಷ ರೂಪಾಯಿ ಮೌಲ್ಯದ 116 ಗ್ರಾಂ ಚಿನ್ನ 409 ಗ್ರಾಂ ಬೆಳ್ಳಿ ಜಪ್ತಿ ಮಾಡಿಕೊಂಡಿದ್ದಾರೆ. ದೇವಸ್ಥಾನದ ಅರ್ಚಕರೇ ಈ ಖತರ್ನಾಕ್ ವಂಚಕ ಕಳ್ಳನ ಟಾರ್ಗೆಟ್ ಆಗಿದ್ದಾರೆ. ಮುತ್ತೈದೆಯರಿಗೆ ಬಾಗಿನ ಕೊಡುವ ನೆಪದಲ್ಲಿ ಕೈಚಳಕ ತೋರಿಸಿದ್ದ ಪ್ರವೀಣ ಭಟ್ಟನನ್ನು ಸದ್ಯ ರಾಜಾಜಿನಗರ ಪೊಲೀಸ್ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೊದಲು ಏರಿಯಾದ ಪ್ರಸಿದ್ಧ ದೇವಸ್ಥಾನಗಳಿಗೆ ಆರೋಪಿ ಪ್ರವೀಣ್ ಹೋಗುತ್ತಿದ್ದ ತಾನು ಶ್ರೀಮಂತ ದೊಡ್ಡ ಉದ್ಯಮಿ ಅಂತ ಹೇಳಿಕೊಳ್ಳುತ್ತಿದ್ದ ಅರ್ಚಕರನ್ನು ಪರಿಚಯ ಮಾಡಿಕೊಂಡು ಆಗಾಗ ಪೂಜೆ ಮಾಡಿಸುತ್ತಿದ್ದ. ನಂತರ ದೇಗುಲಕ್ಕೆ ಸಾವಿರಾರು ರೂಪಾಯಿ ದೇಣಿಗೆ ಕಾಣಿಕೆ ಕೊಡುತ್ತಿದ್ದ. ಈ ಮೂಲಕ ಅಲ್ಲಿರುವ ಅರ್ಚಕರಿಗೆ ಹತ್ತಿರವಾಗಿ ವಂಚನೆಗೆ ಪ್ಲಾನ್…
ರೈಲುಗಳ ರದ್ದುಪಡಿಸುವಿಕೆ : ರೈಲು ಸಂಖ್ಯೆ 56629 ಮಂಗಳೂರು ಸೆಂಟ್ರಲ್–ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲು 23.03.2026 ರಿಂದ 14.04.2026 ರವರೆಗೆ ಹಾಗೂ 10.06.2026 ರಿಂದ 21.06.2026 ರವರೆಗೆ ರದ್ದುಪಡಿಸಲಾಗುತ್ತದೆ. ರೈಲು ಸಂಖ್ಯೆ 56630 ಸುಬ್ರಹ್ಮಣ್ಯ ರೋಡ್ –ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲು 23.03.2026 ರಿಂದ 14.04.2026 ರವರೆಗೆ ಹಾಗೂ 10.06.2026 ರಿಂದ 21.06.2026 ರವರೆಗೆ ರದ್ದುಪಡಿಸಲಾಗಿದೆ. ರೈಲುಗಳ ನಿಯಂತ್ರಣ: ರೈಲು ಸಂಖ್ಯೆ 16515 ಯಶವಂತಪುರ ಜಂಕ್ಷನ್–ಕಾರವಾರ ಎಕ್ಸ್‌ಪ್ರೆಸ್ ರೈಲು 15.04.2026, 17.04.2026 ಮತ್ತು 20.04.2026 ರಂದು ಮಾರ್ಗ ಮಧ್ಯದಲ್ಲಿ 20 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ. ರೈಲು ಸಂಖ್ಯೆ 16575 ಯಶವಂತಪುರ ಜಂಕ್ಷನ್–ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ರೈಲು 16.04.2026 ಮತ್ತು 19.04.2026 ರಂದು ಮಾರ್ಗ ಮಧ್ಯದಲ್ಲಿ 20 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ. ರೈಲು ಸಂಖ್ಯೆ 16539 ಯಶವಂತಪುರ–ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ರೈಲು 18.04.2026 ರಂದು ಮಾರ್ಗ ಮಧ್ಯದಲ್ಲಿ 20 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ. ರೈಲು ಸಂಖ್ಯೆ 56229 ಮಂಗಳೂರು ಸೆಂಟ್ರಲ್–ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್…
ಪಂಚಮುಖಿ ಹನುಮನ ಬಗ್ಗೆ ನಿಮಗೆಷ್ಟು ಗೊತ್ತು.? ವಾಸ್ತು ದೋಷವೇ ಇರದು ಪಂಚಮುಖಿ ಹನುಮನೆಂದರೆ ಹನುಮಂತನ 5 ವಿವಿಧ ರೂಪಗಳು. ಪಂಚಮುಖಿ ಹನುಮನ ಪ್ರಾಮುಖ್ಯತೆಯೇನು ಗೊತ್ತಾ..? ಪಂಚಮುಖಿ ಹನುಮಂತನನ್ನು ಪೂಜಿಸುವುದರ ಪ್ರಯೋಜನವೇನು ತಿಳಿದಿದೆಯೇ..? ಪಂಚಮುಖಿ ಹನುಮನನ್ನು ಪೂಜಿಸುವುದು ಹೇಗೆ ಎಂದು ತಿಳಿಯೋಣ ಬನ್ನಿ.. ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ವಿದ್ವಾನ್ ವಿದ್ಯಾಧರ್ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9686268564 ರಾಮನ ಭಕ್ತ ಹನುಮನನ್ನು ಕಲಿಯುಗದ…
ಬೆಂಗಳೂರು : ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಭೂಮಿಯಲ್ಲೇ ಮನೆ ನಿರ್ಮಿಸಿಕೊಂಡು ‘ಇ-ಸ್ವತ್ತು’ ಅಥವಾ ಖಾತಾ ದಾಖಲೆಗಳಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದ ಲಕ್ಷಾಂತರ ಜನರಿಗೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕೃಷಿ ಭೂಮಿಯಲ್ಲಿರುವ ಮನೆಗಳಿಗೂ ಈಗ ಅಧಿಕೃತ ಇ-ಸ್ವತ್ತು ದಾಖಲೆ ನೀಡಲು ಸರ್ಕಾರ ಹಸಿರು ನಿಶಾನೆ ತೋರಿದೆ. ಹೊಸ ನಿಯಮಗಳ ಪ್ರಕಾರ, 2025ರ ಏಪ್ರಿಲ್ 7ರೊಳಗೆ ನಿರ್ಮಿಸಲಾದ ಮನೆಗಳಿಗೆ ‘ನಮೂನೆ 11ಬಿ’ ಮೂಲಕ ದಾಖಲೆ ಪಡೆಯಲು ಅವಕಾಶ ನೀಡಲಾಗಿದೆ. ಆದರೆ, ನಂತರ ನಿರ್ಮಿಸಲಾದ ಮನೆಗಳಿಗೆ ಭೂ ಪರಿವರ್ತನೆ ಹಾಗೂ ಪ್ಲಾನ್ ಅನುಮೋದನೆ ಕಡ್ಡಾಯವಾಗಲಿದೆ. ಸರ್ಕಾರದ ಈ ನಿರ್ಧಾರದಿಂದ ಗ್ರಾಮೀಣ ಭಾಗದಲ್ಲಿ ಮನೆಗಳ ಮಾಲೀಕತ್ವದ ಗೊಂದಲ ಕಡಿಮೆಯಾಗುವ ಜೊತೆಗೆ ಅನಧಿಕೃತ ಬಡಾವಣೆಗಳ ನಿಯಂತ್ರಣಕ್ಕೂ ಸಹಾಯವಾಗಲಿದೆ. ಇನ್ನು ಮುಂದೆ ಗ್ರಾಮ ಪಂಚಾಯಿತಿ ಕಚೇರಿಗಳ ಮೂಲಕ ಅರ್ಜಿ ಸಲ್ಲಿಸಿ ಇ-ಸ್ವತ್ತು ದಾಖಲೆ ಪಡೆಯಬಹುದಾಗಿದೆ. ಇ-ಸ್ವತ್ತು ತಂತ್ರಾಂಶದ ಮೂಲಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳ ವಿವರಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲಾಗುತ್ತದೆ. ಇದರಿಂದ ಆಸ್ತಿ ಮಾಲೀಕತ್ವಕ್ಕೆ ಕಾನೂನು ಮಾನ್ಯತೆ…
ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಯುಗಾದಿ ಹಬ್ಬದ ಸಂಭ್ರಮದ ಬೆನ್ನಲ್ಲೇ ಇಂದು ‘ಹೊಸ ತೊಡಕು’ ಅದ್ದೂರಿಯಾಗಿ ನಡೆಯುತ್ತಿದೆ. ಬೆಳ್ಳಂಬೆಳಿಗ್ಗೆಯೇ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹಾಗೂ ಮಾಂಸದ ಅಂಗಡಿಗಳ ಮುಂದೆ ಜನವೋ ಜನ. ವಿಶೇಷವಾಗಿ ಹಳೆ ಮೈಸೂರು ಭಾಗದ ಸಂಪ್ರದಾಯದಂತೆ ಬೆಂಗಳೂರಿನಲ್ಲಿ ಗುಡ್ಡೆ ಮಾಂಸಕ್ಕೆ ಭಾರಿ ಬೇಡಿಕೆ ಕಂಡುಬಂದಿದೆ. ಹೌದು ಯುಗಾದಿ ಹೊಸ ತೊಡಕು ಹಿನ್ನೆಲೆ ಗುಡ್ಡೆ ಮಾಂಸ ವ್ಯಾಪಾರ ಇದೀಗ ಜೋರಾಗಿದೆ ಬೆಳ್ಳಂಬೆಳಗ್ಗೆ ಗ್ರಾಮೀಣ ಸೊಗಡು ಗುಡ್ಡೆ ವಂಶಕ್ಕೆ ಜನರು ಮುಗಿ ಬಿದ್ದಿದ್ದಾರೆ ದೇವನಹಳ್ಳಿ ತಾಲೂಕಿನ ಎಲ್ಲಿ ಊರಿನಲ್ಲಿ ಗುಡ್ಡೆ ಮಾಂಸ ಮಾರಾಟ ಜೋರಾಗಿದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಯಲಿಯೂರಿನಲ್ಲಿ ವಿವಿಧ ಕಡೆಯಿಂದ ಬಂದು ಜನರು ಗುಡ್ಡೆ ಮಾಂಸ ಖರೀದಿ ಮಾಡುತ್ತಿದ್ದಾರೆ. ಏನಿದು ಹೊಸ ತೊಡಕು? ಹೊಸ ವರ್ಷದ (ಯುಗಾದಿ) ಮೊದಲ ದಿನದಂದು ಬೇವು-ಬೆಲ್ಲ ಸವಿದು, ಹೊಸ ಬಟ್ಟೆ ಧರಿಸಿ ಪೂಜೆ ಸಲ್ಲಿಸಿದರೆ, ಅದರ ಮರುದಿನವನ್ನು ‘ವರ್ಷದ ತೊಡಕು’ ಅಥವಾ ಜನಜನಿತವಾಗಿ ‘ಹೊಸ ತೊಡಕು’ ಎಂದು ಆಚರಿಸಲಾಗುತ್ತದೆ. ಈ…
ತುಮಕೂರು : ಠಾಣೆಗೆ ಕರೆತಂದಿದ ವ್ಯಕ್ತಿ ಅನುಮಾನಾಸ್ಪದ ರೀತಿ ಸಾವನ್ನಪ್ಪಿರುವ ಘಟನೆ ತುಮಕೂರಲ್ಲಿ ನಡೆದಿದೆ. ವ್ಯಕ್ತಿಯ ಸಾವಿಗೆ ಪೊಲೀಸರೇ ಕಾರಣ ಎಂದು ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದು, ಪೊಲೀಸ್ ಠಾಣೆ ಒಳಗೆ ಶವ ತಂದಿಟ್ಟು ಪ್ರತಿಭಟನೆ ನಡೆಸಲಾಗಿದೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಜನರು ಪ್ರತಿಭಟನೆ ಮಾಡುತ್ತಿದ್ದಾರೆ. ಯಳನಾಡು ಗ್ರಾಮದ ಕಾಂತರಾಜು ಎಂಬಾತ ಸಾವನಪ್ಪಿದ್ದು, ಠಾಣೆ ಎದರು ಊರಿನ ಜನರು ಜಮಾಯಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಠಾಣೆಗೆ ಕರೆ ಬಂದಾಗ ಕಾಂತರಾಜು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದ. ಹಾಗಾಗಿ ಗ್ರಾಮಸ್ಥರು ಪೊಲೀಸರೇ ಕಾಂತರಾಜ್ ಸಾವಿಗೆ ಕಾರಣ ಎಂದು ಶವ ಪೊಲೀಸ್ ಠಾಣೆಯಲ್ಲಿ ಇಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ. ಜೂಜಾಟ ಕೇಸ್ನಲ್ಲಿ ಪೊಲೀಸರು ಸಂಜೆ ಕಾಂತರಾಜು ಸೇರಿದಂತೆ ಆರು ಜನರನ್ನು ಠಾಣೆಗೆ ಕರೆತಂದಿದ್ದಾರೆ. ರಾತ್ರಿ 8 ಗಂಟೆಯವರೆಗೂ ಠಾಣೆಯಲ್ಲಿ ಇರಿಸಿಕೊಂಡಿದ್ದಾರೆ ಈ ವೇಳೆ ಕಾಂತರಾಜ್ ಠಾಣೆಯಲ್ಲಿಯೇ ಮೃತಪಟ್ಟಿದ್ದಾರೆ. ಕಾಂತರಾಜ್ ಸಾವಿಗೆ ನೇರವಾಗಿ ಪೊಲೀಸರೇ ಕಾರಣ ಎಂದು ಕಿಡಿ ಕಾರಿದ್ದಾರೆ. ರಾತ್ರಿ 8 ಗಂಟೆ ಬಳಿಕ…














