ವಿಜಯಪುರ : ವಿಜಯಪುರದಲ್ಲಿ ಬೀದಿ ನಾಯಿಗಳ ಅಟ್ಟಹಾಸ ಮಿತಿಮೀರಿದ್ದು, ನಡು ರಸ್ತೆಯಲ್ಲಿಯೇ ಪುಟ್ಟ ಮಗುವಿನ ಮೇಲೆ ಎರಡು ಬೀದಿ ನಾಯಿಗಳು ಭೀಕರವಾದ ದಾಳಿ ಮಾಡಿದ್ದು, ರಸ್ತೆಯಿಂದಲೇ ಬಾಲಕನನ್ನು ಎಳೆದೊಯ್ದಿರುವ ಘಟನೆ ವರದಿಯಾಗಿದೆ. ಕೇವಲ ಒಂದೇ ವಾರದಲ್ಲಿ ಹಲವು ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ.
ವಿಜಯಪುರ ನಗರದಲ್ಲಿ ಈ ಒಂದು ಘಟನೆ ನಡೆದಿದ್ದು, ನಿನ್ನೆ ರಾಜಕುಮಾರ್ ಲೇಔಟ್ ನಲ್ಲಿ ಈ ಒಂದು ಘಟನೆ ನಡೆದಿದೆ. ಬಾಲಕನ ಬೆನ್ನಿನಲ್ಲಿ ಎರಡು ಇಂಚಿನಷ್ಟು ಆಳವಾದ ಗಾಯವಾಗಿದ್ದು ಸದ್ಯ ಐಸಿಯುನಲ್ಲಿ ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ ರಸ್ತೆಯ ಮೇಲೆ ದಾಳಿ ಮಾಡಿದ ನಾಯಿಗಳು ರಸ್ತೆಯ ಪಕ್ಕದಲ್ಲಿ ಮಗುವನ್ನು ಎಳೆದುಕೊಂಡು ಹೋಗಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಬೆಚ್ಚಿ ಬೀಳಿಸುವ ವಿಡಿಯೋ ಸೆರೆಯಾಗಿದೆ.








