ತಮಿಳುನಾಡು : ತಮಿಳುನಾಡಲ್ಲಿ ಟಿವಿಕೆ ಪಕ್ಷಕ್ಕೆ ಬೆಂಬಲ ಸೂಚಿಸಲು ಮುಂದಾಗಿದ್ದ ಕಾಂಗ್ರೆಸ್ ಗೆ ಇದೀಗ ಬಿಗ್ ಶಾಕ್ ಎದುರಾಗಿದೆ. AIADMK ಜೊತೆಗೆ ಟಿವಿಕೆ ಮಾತುಕತೆ ನಡೆಸಿದ್ದರಿಂದ ಕಾಂಗ್ರೆಸ್ ಗೆ ಹಿನ್ನಡೆ ಆಗಿದೆ. ಟಿವಿಕೆ ಬೆಂಬಲಿಸೋ ಸಲುವಾಗಿ ಸಭೆ ನಡೆಸಲು ಮುಂದಾಗಿತ್ತು. ಆದರೆ ಇದೀಗ ಕಾಂಗ್ರೆಸ್ ಗೆ ಶಾಕ್ ಎದುರಾಗಿದೆ.
ಟಿವಿಕೆ ಬೆಂಬಲಿಸೋ ವಿಚಾರವಾಗಿ ಕಾಂಗ್ರೆಸ್ ಸುದ್ದಿಗೋಷ್ಠಿ ಕರೆದಿತ್ತು. ಏಕಾಏಕಿ ಸುದ್ದಿಗೋಷ್ಠಿ ವಿಳಂಬ ಮಾಡಿದೆ. ಕಾದು ನೋಡುವ ತಂತ್ರಕ್ಕೆ ಮುಂದಾಗಿದೆ. ಇನ್ನೊಂದು ಕಡೆ ಡಿಎಂಕೆ ಮತ್ತು ಕಾಂಗ್ರೆಸ್ ಮೈತ್ರಿಯಲ್ಲಿ ಬಿರುಕು ಮೂಡಿದೆ. ಎಂ.ಕೆ ಸ್ಟಾಲಿನ್ ಅಸಮಾಧಾನ ಹೊರ ಹಾಕಿದ್ದು ಸುಧೀರ್ಘಕಾಲದ ಮೈತ್ರಿಗೆ ಮಾಡಿದ ದ್ರೋಹ ಎಂದು ಕಿಡಿ ಕರೆದಿದ್ದಾರೆ ಕಾಂಗ್ರೆಸ್ ಬೆನ್ನಿಗೆ ಚೂರಿ ಹಾಕುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ ಟಿ ವಿ ಕೆ ಜೊತೆ ಹೋದರೆ ಬಿಎಂಟಿ ಜೊತೆ ಯಾವುದೇ ಸಂಬಂಧ ಇರಲ್ಲ ಅಂತ ಸ್ಪಷ್ಟವಾಗಿ ಹೇಳಿದ್ದಾರೆ.








